Homeಮುಖಪುಟರಂಗಕಲೆಯನ್ನು ಕಲಿಯಲು ಆಸಕ್ತರಿರುವ ಪುಟಾಣಿಗಳಿಗೆ ಸಮ್ಮತ ರಂಗಸಂಸ್ಥೆಯಿಂದ ವಾರಾಂತ್ಯ ತರಗತಿಗಳು

ರಂಗಕಲೆಯನ್ನು ಕಲಿಯಲು ಆಸಕ್ತರಿರುವ ಪುಟಾಣಿಗಳಿಗೆ ಸಮ್ಮತ ರಂಗಸಂಸ್ಥೆಯಿಂದ ವಾರಾಂತ್ಯ ತರಗತಿಗಳು

- Advertisement -
- Advertisement -

ರಂಗಭೂಮಿ ಕಲಿಕೆ ವಿವಿಧ ಪಾತ್ರಗಳ ಮೂಲಕ ತಮ್ಮನ್ನು ತಾವು ಕಂಡುಕೊಳ್ಳಲು ಉತ್ತಮವಾದಂತಹ ಕಲೆಯಾಗಿದೆ. ಇದು ಬಾಲ್ಯದಿಂದಲೇ ಮಕ್ಕಳಿಗೆ ರಂಗಭೂಮಿಯನ್ನು ಕಲಿಸುವುದರಿಂದ ಅವರಿಗೆ ಮುಂದೆ ಜೀವನದಲ್ಲಿ ಸಮಾಜದಲ್ಲಿ ಧೈರ್ಯವಾಗಿ ಬದುಕುವುದನ್ನು ಕಲಿಸುತ್ತದೆ. ಹಾಗಾಗಿ ಮಕ್ಕಳ ರಂಗಭೂಮಿಯ ಅವಶ್ಯಕತೆ ಇಂದೆಂದಿಗಿಂತಲೂ ಹೆಚ್ಚಿದೆ. ಕಲುಷಿತ ಗೊಂಡ ಮನಸ್ಸುಗಳನ್ನು ಪ್ರೀತಿ, ವಿಶ್ವಾಸ, ನಂಬಿಕೆಯ ಮೂಲಕ ಸರಿಪಡಿಸುವ ಚಿಕಿತ್ಸಕ ಗುಣವನ್ನು ರಂಗಭೂಮಿ ಹೊಂದಿದೆ. ಸಾಕಷ್ಟು ಜನ ರಂಗಕರ್ಮಿಗಳು ಮಕ್ಕಳ ರಂಗಭೂಮಿಯನ್ನು ವಿಶೇಷವಾಗಿ ಕೆಲಸ ಮಾಡುತ್ತಿದ್ದಾರೆ ತುಮಕೂರಿನಲ್ಲೂ ಇಂತಹ ಪ್ರಯೋಗವೊಂದು ನಡೆಯುತ್ತಿದೆ.
ಈ ಸೆಲೆಬ್ರೆಟಿ ಯುಗದಲ್ಲಿ ತಮ್ಮ ಮಕ್ಕಳು ಕಲೆಯ ಮೂಲಕ ಸಮಾಜದಲ್ಲಿ ಹೆಚ್ಚು ಗುರ್ತಿಸಿಕೊಳ್ಳಬೇಕೆಂಬ ಆಸೆ ಪೋಷಕರಲ್ಲಿ ಹೆಚ್ಚುತ್ತಿದೆ. ಇದಕ್ಕೆ ಪ್ರೇರಕವಾಗಿ ರಿಯಾಲಿಟಿ ಶೋಗಳು ಪೋಷಕರನ್ನು ಪ್ರೇರೇಪಿಸುತ್ತಿವೆ. ಅದಕ್ಕಾಗಿ ಸಾಕಷ್ಟು ಜನ ನಾಯಿಕೊಡೆಗಳಂತೆ ಹೆಚ್ಚುತ್ತಿರುವ ಹವ್ಯಾಸಿ ರಂಗಶಿಬಿರಗಳು, ಅಭಿನಯ ಶಿಬಿರಗಳಿಗೆ ಸಾಕಷ್ಟು ವ್ಯಯ ಮಾಡುತ್ತಿದ್ದಾರೆ. ಇದು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇಂತಹ ಸಂಧರ್ಭದಲ್ಲಿ ವಿಶೇಷವಾಗಿ ಮಕ್ಕಳ ಜೊತೆ ಕೆಲಸಮಾಡುವ ಮತ್ತು ರಂಗಭೂಮಿಯನ್ನು ಒಂದು ಕೋರ್ಸ್ ಆಗಿ ಕಲಿತು ಅಧ್ಯಯನ ಮಾಡಿದ ಮತ್ತು ಸಾಕಷ್ಟು ಶಿಬಿರಗಳನ್ನು ಮಾಡಿ ನೈಜರಂಗಭೂಮಿಯ ಪಾಠಗಳನ್ನು ಕಲಿಸುವ ಶಿಬಿರಗಳು ಕಡಿಮೆಯಾಗಿವೆ. ಇದೇ ವೇಳೆ ಕೆಲವು ಕಡೆ ಮಾತ್ರ ನಿಜವಾಗಲೂ ರಂಗಭೂಮಿ ಮತ್ತು ನಟನೆಯನ್ನು ಕಲಿಸುವಂತಹ ಪ್ರಯತ್ನಗಳು ನಡೆಯುತ್ತಿವೆ. ಅಂತಹದ್ದೆ ಪ್ರಯತ್ನವನ್ನು ತುಮಕೂರಿನ ಸಮ್ಮತ ರಂಗ ಸಂಸ್ಥೆ ಪ್ರಯತ್ನಪಡುತ್ತಿದೆ. ತುಮಕೂರಿನಲ್ಲಿ ಸಾಕಷ್ಟು ರಂಗಭೂಮಿಯ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿವೆ. ಆದರೆ ಮಕ್ಕಳ ರಂಗಭೂಮಿಯ ಬಗ್ಗೆ ಬೇಸಿಗೆ ಶಿಬಿರವಲ್ಲದೇ ಈ ರೀತಿ ಅದಿಕ್ಕೆ ವಿಶೇಷ ಶಾಲೆಯ ರೀತಿಯ ಪ್ರಯತ್ನ ನಡೆದಿಲ್ಲ . ಸಮ್ಮತ ಸಂಸ್ಥೆ ಈಗ ಮಕ್ಕಳಿಗಾಗಿ ವಾರಾಂತ್ಯ ರಂಗ ಶಾಲೆಯನ್ನು ತೆರೆದಿದ್ದಾರೆ.
ಶಾಲಾ ರಜೆಯ ಸಂಧರ್ಭದಲ್ಲಿ ಶಿಬಿರಗಳನ್ನು ನಡೆಸುತ್ತಾ, ರಂಗ ಚಟುವಟಿಕೆಗಳನ್ನು ನಡೆಸುತ್ತಾ ಬಂದಿರುವ ರಂಗಭೂಮಿ ಹಿನ್ನಲೆಯ ಚೇತನ್ ಮತ್ತು ಸುನೀಲ ಯುವದಂಪತಿಗಳು ತಮ್ಮ ಕ್ರಿಯಾಶೀಲ ಯುವತಂಡದೊಂದಿಗೆ ವಾರಂತ್ಯದ ರಜೆಯ ಸಮಯದಲ್ಲಿ ರಂಗಭೂಮಿಯ ಬಗ್ಗೆ ಮಕ್ಕಳಿಗೆ ಕಲಿಸುವ ಒಂದು ವಿಶೇಷ ಪ್ರಯತ್ನವನ್ನು ಪ್ರಾರಂಭಿಸಿದೆ. ನಟನೆ, ನಿರ್ಧೇಶನ, ಮೇಕಪ್ ಮುಂತಾದ ವಿಭಾಗಗಳನ್ನು ಮಕ್ಕಳಿಗೆ ಪರಿಚಯಿಸಲಿದೆ. ಮಗುವಿನ ಕಲ್ಪನಾಶಕ್ತಿ, ದೇಹಭಾಷೆ, ವಾಚಿಕದ ಮೇಲೆ ನಿರಂತರವಾಗಿ ಅಭ್ಯಾಸ ಮಾಡಿಸಲಿದ್ದಾರೆ. ಮಕ್ಕಳಿಗೆ ಆಸಕ್ತಿಯಿಂದ ಕಲಿಯಲು ರಂಗಾಟಗಳ ಮುಖೇನ ಕಲಿಸಲಿದ್ದಾರೆ. ಮಕ್ಕಳ ಸಿನೆಮಾ ತೋರಿಸುವುದು, ಜನಪದ ಕಲೆಗಳ ಕಲಿಕೆಯ ಮೂಲಕ ಸ್ಥಳೀಯ ಕಲೆಗಳ ಪರಿಚಯ ಈ ರೀತಿಯ ಯೋಜನೆಗಳನ್ನು ಸಂಸ್ಥೆಯ ನಿರ್ದೇಶಕರಾದ ಚೇತನ್ ಮತ್ತು ಸುನೀಲ ಅವರು ರೂಪಿಸಿದ್ದಾರೆ. ಈ ತರಗತಿಗಳು ಪ್ರತಿ ಭಾನುವಾರ ನಡೆಯಲಿವೆ. ಕೇವಲ 25 ರಿಂದ 30 ಮಕ್ಕಳಿಗೆ ಮಾತ್ರ ಅವಕಾಶವಿದೆ. ಬೆಳಿಗ್ಗೆ 9 ರಿಂದ 12ರವೆರೆಗೆ ತರಗತಿಗಳು ನಡೆಯಲಿವೆ.
ಈ ಸಮ್ಮತ ರಂಗಸಂಸ್ಥೆಯ ಆ ವಾರಂತ್ಯಾ ಶಾಲೆಯ ಹೊಸ ಪ್ರಯತ್ನಕ್ಕೆ ಹರಿಕಥಾ ವಿದ್ವಾನ್ ಹಾಗೂ ಕಲಾವಿದರಾದ ಲಕ್ಷ್ಮಣ್‍ದಾಸ್, ಕ.ಸಾ.ಪ ಜಿಲ್ಲಾಧ್ಯಕ್ಷರಾದ ಬಾ.ಹಾ.ರಮಾಕುಮಾರಿ, ರಂಗಸಂಘಟಕರಾದ ಉಗಮಶ್ರೀನಿವಾಸ್, ರಂಗಕರ್ಮಿಗಳಾದ ಎಚ್.ಎಂ.ರಂಗಯ್ಯ, ಸಿಧ್ದಾರ್ಥ ಕಾಲೇಜಿನ ಪ್ರಾಂಶುಪಾ¯ರಾದ ಕೆ.ಸಿ.ಕುಮಾರ್ ಬೆಂಬಲನೀಡಿ ಉದ್ಘಾಟಿಸಿದ್ದಾರೆ. ರಂಗಕರ್ಮಿಗಳಾದ ನಟರಾಜ್ ಹೊನ್ನವಳ್ಳಿ, ಮಂಜು ಬಡಿಗೇರ್, ನೀನಾಸಂ ಚಂದ್ರು, ರವಿಶಂಕರ್, ಶೋಧನ್ ಬಸ್ರೂರು, ಸಂಧ್ಯಾ ಅಲ್ಲದೇ ಹಲವು ಮಕ್ಕಳ ರಂಗಭೂಮಿಯ ಪರಿಣಿತರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ. ಹೆಚ್ಚಿನಮಾಹಿತಿಗಾಗಿ 9901848170, 8105515256 ಸಂಖ್ಯೆಗೆ ಕರೆಮಾಡಿ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೆರಿಕದ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಬಗ್ಗೆ ಸ್ಯಾಮ್ ಪಿತ್ರೋಡಾ ಕೊಟ್ಟಿದ್ದ ವಿವರಣೆಯನ್ನು ‘ರಾಜಕೀಯ ಅಸ್ತ್ರ’...

0
ಲೋಕಸಭೆ ಚುನಾವಣೆ ಹಿನ್ನೆಲೆ ಪ್ರಧಾನಿ ಮೋದಿ ಹಾದಿಯಾಗಿ ಬಿಜೆಪಿ ನಾಯಕರು ವಿವಾದಾತ್ಮಕ ಹೇಳಿಕೆ ಮೂಲಕ ಕಾಂಗ್ರೆಸ್‌ ಪಕ್ಷವನ್ನು ಮತ್ತು ಕಾಂಗ್ರೆಸ್‌ನ ಪ್ರಣಾಳಿಕೆ ವಿರುದ್ಧ ವಾಗ್ಧಾಳಿ ನಡೆಸುತ್ತಾ ಬಂದಿದ್ದಾರೆ. ಈ ಮಧ್ಯೆ ಭಾರತೀಯ ಸಾಗರೋತ್ತರ...