Homeಕರ್ನಾಟಕರಾಜ್ಯದಲ್ಲಿ ಹವಾಮಾನ ವೈಪರೀತ್ಯ ತಡೆಗೆ 2030 ರ ವೇಳೆಗೆ 52 ಲಕ್ಷ ಕೋಟಿ ಅಗತ್ಯವಿದೆ- EMPRI

ರಾಜ್ಯದಲ್ಲಿ ಹವಾಮಾನ ವೈಪರೀತ್ಯ ತಡೆಗೆ 2030 ರ ವೇಳೆಗೆ 52 ಲಕ್ಷ ಕೋಟಿ ಅಗತ್ಯವಿದೆ- EMPRI

- Advertisement -
- Advertisement -

ರಾಜ್ಯಕ್ಕೆ ಹವಾಮಾನ ಬದಲಾವಣೆಯ ಹೊಂದಾಣಿಕೆ ಮತ್ತು ವೈಪರೀತ್ಯ ತಡೆಯುವ ಕಾರ್ಯಗಳಿಗಾಗಿ 2025 ರ ವೇಳೆಗೆ 20,88,041.23 ಕೋಟಿ ರೂಪಾಯಿ ಬೇಕಾಗುತ್ತದೆ. 2030 ರ ವೇಳೆಗೆ 52,82,744.32 ಕೋಟಿ ರೂಪಾಯಿಗಳ ಅಗತ್ಯವಿದೆ. ಈ ಹಣವನ್ನು ಬಜೆಟ್‌ನಲ್ಲಿ ಹಂಚಿಕೆ ಮಾಡಬೇಕಾಗುತ್ತದೆ ಎಂದು ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (EMPRI) ಅಂದಾಜಿಸಿದೆ.

ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ ಸಿದ್ಧಪಡಿಸಿದ 2015ರ ವರದಿಯ ಎರಡನೇ ಆವೃತ್ತಿಯಾದ ಹವಾಮಾನ ಬದಲಾವಣೆಯ ಕರ್ನಾಟಕ ರಾಜ್ಯ ಕ್ರಿಯಾ ಯೋಜನೆ – ಆವೃತ್ತಿ-2 ರಲ್ಲಿ ಈ ವೆಚ್ಚದ ಅಂದಾಜು ರಚಿಸಲಾಗಿದೆ. ವರದಿಯ ಅನುಮೋದನೆ ಮತ್ತು ಅನುಷ್ಠಾನಕ್ಕಾಗಿ ಕೇಂದ್ರ ಸರ್ಕಾರದ ಮುಂದೆ ಇಡಲಾಗಿದೆ.

ಇದನ್ನು ತಯಾರಿಸಲು 15 ಹವಾಮಾನ ಮಾದರಿಗಳನ್ನು ಬಳಸಲಾಗಿದೆ. 2015ರ ವರದಿಯಲ್ಲಿ ಮಾಡಿದ ಶಿಫಾರಸುಗಳ ಮೇಲೆ ಮಾಡಲಾಗಿರುವ ಸಾಧನೆಗಳು ಮತ್ತು ಕಾರ್ಯಗಳನ್ನು ಮೌಲ್ಯಮಾಪನವನ್ನು ಪರಿಸರ ಮತ್ತು ಶಿಕ್ಷಣ ಕೇಂದ್ರವು ನಡೆಸುತ್ತಿದೆ ಎಂದು EMPRI ಮಹಾನಿರ್ದೇಶಕ ಜಗಮೋಹನ್ ಶರ್ಮಾ ಮಂಗಳವಾರ ಹೇಳಿದ್ದಾರೆ.

ಇದನ್ನೂ ಓದಿ: ನ.19 ರಿಂದ ’ಸಲಗ’ದಲ್ಲಿ ಸಿದ್ಧಿ ಬುಡಕಟ್ಟಿನ ಟಿಣಿಂಗ ಮಿಣಿಂಗ ಟಿಶ್ಯಾ ಹಾಡು ಸೇರ್ಪಡೆ

ಬೆಂಗಳೂರು ಹವಾಮಾನ ಬದಲಾವಣೆ ಉಪಕ್ರಮ-ಕರ್ನಾಟಕ ಆಯೋಜಿಸಿದ್ದ “COP-26 ಗ್ಲಾಸ್ಗೋ, ಹವಾಮಾನ ಬದಲಾವಣೆ ಶಿಫಾರಸುಗಳು ಮತ್ತು ಕರ್ನಾಟಕದ ಮೇಲೆ ಪರಿಣಾಮ” ಕುರಿತ ಚರ್ಚೆಯಲ್ಲಿ ಮಾತನಾಡಿದ ಶರ್ಮಾ ಅವರು, ಬೇಸಿಗೆ ಮತ್ತು ಚಳಿಗಾಲದ ತಾಪಮಾನವು 0.5 ರಿಂದ 2.5 ಡಿಗ್ರಿ ಸೆಲ್ಸಿಯಸ್‌ಗೆ ಬದಲಾಗುತ್ತದೆ ಮತ್ತು ಮಳೆಯ ದಿನಗಳು ಹೆಚ್ಚಾಗುತ್ತದೆ. ಇದು ರಬಿ ಮತ್ತು ಖಾರಿಫ್ ಬೆಳೆಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ವರದಿ ಅಂದಾಜಿಸಿದೆ ಎಂದು ಹೇಳಿದ್ದಾರೆ.

“ಹವಾಮಾನ ಬದಲಾವಣೆಯನ್ನು ಪರಿಹರಿಸುವ ಯೋಜನೆಗಳಿಗೆ ಹಣವನ್ನು ನೀಡಲಾಗುವುದು ಎಂದು ವಿಶ್ವಬ್ಯಾಂಕ್ ಹೇಳಿದೆ. ಹೀಗಾಗಿ, ಕರ್ನಾಟಕ ಮತ್ತು ಭಾರತ ಅಂತಹ ಯೋಜನೆಗಳನ್ನು ಸಿದ್ಧಪಡಿಸಲು ಪ್ರಾರಂಭಿಸಬೇಕು. ಆಗ ಮಾತ್ರ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಪರಿಸರ ಪ್ರಭಾವವನ್ನು ಪರಿಹರಿಸಲು ಹಣ ಬರುತ್ತದೆ” ಎಂದು ವಿಶ್ವಸಂಸ್ಥೆ ಸಮಿತಿಯ ಸದಸ್ಯ ಡಾ.ಎಚ್.ಎನ್.ರವೀಂದ್ರನಾಥ್ ಹೇಳಿದ್ದಾರೆ.

ರಾಜ್ಯ ಸರ್ಕಾರವು ಕಾರ್ಯಗತಗೊಳಿಸುವ ಸಣ್ಣ ಯೋಜನೆಗಳು ಪ್ರಮುಖವಾಗಿ ಪರಿಸರ ಮತ್ತು ಪರಿಸರ ಸಂಬಂಧಿತ ವಲಯದ ಮೇಲೆ ಪರಿಣಾಮ ಬೀರುತ್ತವೆ. ಸೌರಶಕ್ತಿಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದರೂ ಶೇ.80ರಷ್ಟು ಸೌರ ಫಲಕಗಳು ಚೀನಾದಲ್ಲಿ ತಯಾರಾಗಿರುವುದು ಅನೇಕರಿಗೆ ತಿಳಿದಿಲ್ಲ. ಒಮ್ಮೆ ಅವುಗಳನ್ನು ಭಾರತದಲ್ಲಿ ತಯಾರಿಸಿದರೆ, ಡೈನಾಮಿಕ್ಸ್ ಬದಲಾಗುತ್ತದೆ ಎಂದು ರವೀಂದ್ರನಾಥ್ ಹೇಳಿದ್ದಾರೆ.

ಹವಾಮಾನ ಬದಲಾವಣೆ ಸಮ್ಮೇಳನ (COP-26) ದಲ್ಲಿ ಭಾರತವು ದ್ವೀಪ ರಾಷ್ಟ್ರಗಳಿಗೆ ಸಹಾಯ ಮಾಡಲು ಬದ್ಧವಾಗಿದೆ. ಆದರೆ, ಕರ್ನಾಟಕದಲ್ಲಿ 94 ದ್ವೀಪಗಳು ಮತ್ತು ಕರಾವಳಿ ಪ್ರದೇಶಗಳು ಈಗಾಗಲೇ ಮಣ್ಣಿನ ಸವೆತಕ್ಕೆ ಸಾಕ್ಷಿಯಾಗುತ್ತಿವೆ, ಅದರ ಬಗ್ಗೆ ಚರ್ಚಿಸಲಾಗಿಲ್ಲ ಎಂಬುದನ್ನು ಗುರುತಿಸಿದ್ದಾರೆ.


ಇದನ್ನೂ ಓದಿ: ನ.19 ರಿಂದ ’ಸಲಗ’ದಲ್ಲಿ ಸಿದ್ಧಿ ಬುಡಕಟ್ಟಿನ ಟಿಣಿಂಗ ಮಿಣಿಂಗ ಟಿಶ್ಯಾ ಹಾಡು ಸೇರ್ಪಡೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...