Homeರಾಷ್ಟ್ರೀಯರಸ್ತೆ ಗಲಾಟೆಯಲ್ಲಿ ಕೊಲೆ: 1 ವರ್ಷ ಜೈಲು ಶಿಕ್ಷೆ ವಿಧಿಸಿದ ಸುಪ್ರೀಂಕೋರ್ಟ್; ನವಜೋತ್‌ ಸಿಂಗ್‌...

ರಸ್ತೆ ಗಲಾಟೆಯಲ್ಲಿ ಕೊಲೆ: 1 ವರ್ಷ ಜೈಲು ಶಿಕ್ಷೆ ವಿಧಿಸಿದ ಸುಪ್ರೀಂಕೋರ್ಟ್; ನವಜೋತ್‌ ಸಿಂಗ್‌ ಸಿಧು ಶರಣು

- Advertisement -
- Advertisement -

34 ವರ್ಷಗಳ ಹಿಂದೆ ರಸ್ತೆಯಲ್ಲಿ ವ್ಯಕ್ತಿಯೊಬ್ಬನನ್ನು ಥಳಿಸಿ ಕೊಂದ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದ ಒಂದು ದಿನದ ನಂತರ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಶುಕ್ರವಾರ ಪಂಜಾಬ್‌ನ ಪಟಿಯಾಲಾ ನ್ಯಾಯಾಲಯದಲ್ಲಿ ಶರಣಾಗಿದ್ದಾರೆ. ಅನಾರೋಗ್ಯದ ಕಾರಣ ನೀಡಿದ ಅವರು ಶರಣಾಗಲು ಇನ್ನೂ ಕೆಲವು ವಾರಗಳ ಕಾಲಾವಕಾಶ ಕೋರಿದ್ದರು.

ಸಮಯಾವಕಾಶಕ್ಕಾಗಿ ಸುಪ್ರೀಂ ಕೋರ್ಟ್‌ನಲ್ಲಿ ನವಜೋತ್ ಸಿಧು ಪರ ಹಾಜರಾದ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರಿಗೆ ನ್ಯಾಯಮೂರ್ತಿ ಎಎಂ ಖಾನ್ವಿಲ್ಕರ್ ಅವರು ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಅವರನ್ನು ಸಂಪರ್ಕಿಸಲು ಹೇಳಿದರು. ಆದರೆ ಇದನ್ನು ಮುಖ್ಯ ನ್ಯಾಯಮೂರ್ತಿಯ ಮುಂದೆ ಪ್ರಸ್ತಾಪಿಸಲು ಸಾಧ್ಯವಿಲ್ಲ ಎಂದು ಸಿದ್ದು ಅವರ ತಂಡ ಹೇಳಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಸುಪ್ರೀಂ ಆದೇಶದ ನಂತರ ಸಿಧು ಅವರು, ‘ಕಾನೂನಿಗೆ ತಲೆ ಬಾಗುತ್ತೇನೆ’ ಎಂದು ಟ್ವೀಟ್ ಮಾಡಿದ್ದಾರೆ. ಪ್ರಕರಣದಲ್ಲಿ ಗುರುವಾರದಂದು ಸುಪ್ರೀಂ ಕೋರ್ಟ್ ಅವರಿಗೆ ಒಂದು ವರ್ಷದ ‘ಕಠಿಣ ಜೈಲು ಶಿಕ್ಷೆ’ ವಿಧಿಸಿದೆ.

ಸಿಧು ಅವರ ಸಮಯ ಕೋರಿಕೆಯನ್ನು ಪಂಜಾಬ್‌ ಸರ್ಕಾರವನ್ನು ಪ್ರತಿನಿಧಿಸುವ ವಕೀಲರು ವಿರೋಧಿಸಿದ್ದರೆ. ಇದಕ್ಕೆ ಪ್ರತಿಕ್ರಿಯಿಸಿದ ಸಿಧು ಪರ ವಕೀಲ ಅಭಿಷೇಕ್‌ ಸಿಂಘ್ವಿ, “ನಾನು ಶರಣಾಗುತ್ತೇನೆ ಎಂದು ಹೇಳುತ್ತಿದ್ದೇನೆ. ಸಮಯಾವಕಾಶ ನೀಡುವ ಮನವಿಯನ್ನು ಪರಿಗಣಿಸುವುದು ನಿಮ್ಮ ವಿವೇಚನೆಗೆ ಬಿಟ್ಟ ವಿಷಯವಾಗಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ತ್ರಿಶೂಲವನ್ನು ನೀಡುತ್ತೇವೆ, ಪಡೆಯುತ್ತೇವೆ, ಬಳಸುತ್ತೇವೆ: ಪೊಲೀಸರ ಎದುರೇ ಬಜರಂಗದಳ ಕಾರ್ಯಕರ್ತರ ಘೋಷಣೆ 

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಖಾನ್ವಿಲ್ಕರ್, “ಔಪಚಾರಿಕ ಅರ್ಜಿಯನ್ನು ಇರಿಸಿ. ಈ ಬಗ್ಗೆ ನಾವು ನೋಡುತ್ತೇವೆ. ಅರ್ಜಿಯನ್ನು ಸಲ್ಲಿಸಿ ಮುಖ್ಯ ನ್ಯಾಯಮೂರ್ತಿಯ ಮುಂದೆ ಅದನ್ನು ನಮೂದಿಸಿ, ನಂತರ ನಾವು ನೋಡೋಣ” ಎಂದು ಹೇಳಿದ್ದಾರೆ.

ಪ್ರಕರಣದ ಹಿನ್ನೆಲೆ

1988ರಲ್ಲಿ ನಡೆದ ರಸ್ತೆ ಗಲಾಟೆಯೊಂದರಲ್ಲಿ ಗುರುನಾಮ್ ಸಿಂಗ್ ಅವರನ್ನು ಮಾಜಿ ಕ್ರಿಕೆಟಿಗ ಸಿಧು ಮತ್ತು ಅವರ ಸ್ನೇಹಿತ ರೂಪಿಂದರ್ ಸಿಂಗ್ ಸಂಧು ಥಳಿಸಿದ್ದರು. ಗಂಭೀರ ಸ್ಥಿತಿಯಲ್ಲಿದ್ದ ಗುರುನಾಮ್ ಸಿಂಗ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಸಾವಿಗೀಡಾಗಿದ್ದರು.

ಪ್ರಕರಣದ ವಿಚಾರಣೆ ನಡೆಸಿದ್ದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್, ಸಿಧು ಅವರನ್ನು ಅಪರಾಧಿ ಎಂದು ತೀರ್ಪು ನೀಡಿ, 3 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಶಿಕ್ಷೆಯ ಪ್ರಮಾಣ ಮರು ಪರಿಶೀಲಿಸುವಂತೆ ಕೋರಿ ಸಿಧು ಅವರು ಸುಪ್ರೀಂ ಮೆಟ್ಟಿಲೇರಿದ್ದರು.

ಸಿಧು ಅವರ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಸ್ವಯಂ ಪ್ರೇರಣೆಯಿಂದ ನೋವುಂಟು ಮಾಡಿದ ಪ್ರಕರಣ ಎಂದು ಪರಿಗಣಿಸಿ ಸಿಧು ಅವರಿಗೆ 3 ವರ್ಷಗಳ ಜೈಲು ಶಿಕ್ಷೆಯ ಬದಲಾಗಿ 1000 ರೂ. ದಂಡ ವಿಧಿಸಿ ಮೇ 2018ರಲ್ಲಿ ತೀರ್ಪು ನೀಡಿತ್ತು.

ಇದನ್ನೂ ಓದಿ: ‘ಕರ್ನಾಟಕ ಹೈಕೋರ್ಟ್‌ನಲ್ಲೇ ನಮಾಜ್’ ಎಂಬ ದ್ವೇಷ ಹರಡುವ ವಿಡಿಯೋ ಪ್ರಸಾರ: ಬಲಪಂಥೀಯ ಸಂವಾದ ಯೂಟ್ಯೂಬ್ ಚಾನೆಲ್‌ ಮೇಲೆ FIR

ಸುಪ್ರೀಂ ಕೋರ್ಟ್‌ನ ಈ ತೀರ್ಪಿನ ವಿರುದ್ಧ ಮೃತ ಗುರುನಾಮ್ ಸಿಂಗ್ ಅವರ ಪುತ್ರ ಸೆಪ್ಟೆಂಬರ್ 2018ರಲ್ಲಿ ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ಮರುಪರಿಶೀಲೀಸಿದ ಸುಪ್ರೀಂ ಕೋರ್ಟ್‌, 1 ವರ್ಷದ ಜೈಲು ಶಿಕ್ಷೆ ವಿಧಿಸಿ ಗುರುವಾರು ತೀರ್ಪು ನೀಡಿದೆ.

ಪಂಜಾಬ್‌ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲನುಭವಿಸಿದ ನಂತರ ಸಿಧು ಅವರು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕುಡಿದ ಮತ್ತಿನಲ್ಲಿ ಕಾರು ಚಾಲನೆ: ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ 19ವರ್ಷದ ಯುವಕ ಸಾವು 

ಬೆಂಗಳೂರು: ಕುಡಿದ ಮತ್ತಿನಲ್ಲಿ ಹದಿಹರೆಯದ ಯುವಕನೊಬ್ಬ ಚಲಾಯಿಸುತ್ತಿದ್ದ ಕಾರು, 19 ವರ್ಷದ ಯುವಕನ ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಆತ ಸಾವನ್ನಪ್ಪಿದ್ದಾನೆ. ಮಲ್ಲೇಶಪಾಳ್ಯದ ಮಾರುತಿನಗರದ 10 ನೇ ಮುಖ್ಯ ರಸ್ತೆಯಲ್ಲಿ ಶುಕ್ರವಾರ ತಡರಾತ್ರಿ...

ಏಳು ವರ್ಷಗಳಲ್ಲಿ ಮೊದಲ ಬಾರಿಗೆ ಇರಾನ್‌ನಿಂದ ತೈಲ ಖರೀದಿಸಿದ ಭಾರತ

ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ಹಾರ್ಮುಜ್ ಜಲಸಂಧಿಯ ಮೂಲಕ ಸರಬರಾಜಿನಲ್ಲಿ ಅಡ್ಡಿ ಉಂಟಾಗಿರುವ ಮಧ್ಯೆ, ಭಾರತೀಯ ಸಂಸ್ಕರಣಾಗಾರರು ಇರಾನ್ ತೈಲವನ್ನು ಖರೀದಿಸಿದ್ದಾರೆ ಎಂದು ತೈಲ ಸಚಿವಾಲಯ ಶನಿವಾರ (ಏ.4) ತಿಳಿಸಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ. ವಿಶ್ವದ...

ಉತ್ತರ ಪ್ರದೇಶ: ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಇಬ್ಬರು ಮದರಸಾ ಶಿಕ್ಷಕರ ಬಂಧನ

ಹತ್ತು ವರ್ಷದ ವಿದ್ಯಾರ್ಥಿಯೊಬ್ಬನನ್ನು ಥಳಿಸಿದ ಆರೋಪದ ಮೇಲೆ ಇಬ್ಬರು ಮದರಸಾ ಶಿಕ್ಷಕರನ್ನು ಬಂಧಿಸಿರುವುದಾಗಿ ಉತ್ತರ ಪ್ರದೇಶ ಪೊಲೀಸರು ಶನಿವಾರ ತಿಳಿಸಿದ್ದಾರೆ.  ಈ ಸಂಬಂಧ ವೀಡಿಯೊ ಅಂತರ್ಜಾಲದಲ್ಲಿ ವೈರಲ್ ಆಗಿದ್ದು, ದಿನಾಂಕವಿಲ್ಲದ ವೀಡಿಯೊದಲ್ಲಿ ಒಬ್ಬ ಮದರಸಾ...

ಕೊಡಗು | ಚಾರಣಕ್ಕೆ ತೆರಳಿದ್ದ ಯುವತಿ ನಾಪತ್ತೆ ಪ್ರಕರಣ : 3 ದಿನ ಕಳೆದರೂ ಸಿಗದ ಸುಳಿವು, ಎಎನ್‌ಎಫ್‌ನಿಂದ ತೀವ್ರ ಶೋಧ

ಕೊಡಗು ಜಿಲ್ಲೆಯ ಕಕ್ಕಬ್ಬೆ ಸಮೀಪದ ತಡಿಯಂಡಮೋಳ್ ಬೆಟ್ಟಕ್ಕೆ ಚಾರಣಕ್ಕೆ ತೆರಳಿದ್ದ ಕೇರಳ ಮೂಲದ ಯುವತಿಯೊಬ್ಬರು ಮೂರು ದಿನಗಳಿಂದ ನಾಪತ್ತೆಯಾಗಿದ್ದಾರೆ. ಅವರಿಗಾಗಿ ಶೋಧ ಕಾರ್ಯ ನಡೆಯುತ್ತಿದ್ದು, ಇನ್ನೂ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ. ನಾಪತ್ತೆಯಾಗಿರುವ ಯುವತಿಯನ್ನು ಕೇರಳದ...

ಭವಿಷ್ಯದ ಸಂಘರ್ಷದಲ್ಲಿ ಪಾಕಿಸ್ತಾನ ಕೋಲ್ಕತ್ತಾ ಮೇಲೆ ದಾಳಿ ಮಾಡುತ್ತದೆ: ಪಾಕ್ ರಕ್ಷಣಾ ಸಚಿವ ಖವಾಜಾ ಆಸಿಫ್

 ಲಾಹೋರ್: ಭವಿಷ್ಯದಲ್ಲಿ ಯಾವುದೇ ದುಸ್ಸಾಹಸಗಳು ನಡೆದರೆ ಕೋಲ್ಕತ್ತಾದಲ್ಲಿ ದಾಳಿ ನಡೆಸುವ ಮೂಲಕ ಭಾರತಕ್ಕೆ ಪ್ರತ್ಯುತ್ತರ ನೀಡುವುದಾಗಿ ಪಾಕಿಸ್ತಾನ ರಕ್ಷಣಾ ಸಚಿವ ಖವಾಜಾ ಆಸಿಫ್ ಶನಿವಾರ ಎಚ್ಚರಿಕೆ ನೀಡಿದ್ದಾರೆ. "ಈ ಬಾರಿ ಭಾರತ ಯಾವುದೇ ಸುಳ್ಳು...

ಮಾಗಡಿ ಕಾಂಗ್ರೆಸ್ ಶಾಸಕ ಬಾಲಕೃಷ್ಣ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ

2018ರ ವಿಧಾನಸಭಾ ಚುನಾವಣೆಯ ವೇಳೆ ದಾಖಲಾಗಿದ್ದ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಲ್ಲಿ ಮಾಗಡಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಹೆಚ್.ಸಿ ಬಾಲಕೃಷ್ಣ ವಿರುದ್ಧ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ (42ನೇ ಎಸಿಎಂಎಂ ಕೋರ್ಟ್) ಜಾಮೀನು...

ಪ್ಯಾಲೆಸ್ತೀನ್ ಜನರೊಂದಿಗೆ ಒಗ್ಗಟ್ಟು ಪ್ರದರ್ಶನ: ದೆಹಲಿಯ ಮೆಕ್‌ಡೊನಾಲ್ಡ್ಸ್ ಹೊರಗೆ ಪ್ರತಿಭಟನೆ

ಪ್ಯಾಲೆಸ್ಟೈನ್ ಜೊತೆ ಒಗ್ಗಟ್ಟಿನ ಭಾರತೀಯ ಜನರು (ಐಪಿಎಸ್‌ಪಿ) ಗುಂಪಿನ ಸದಸ್ಯರು (ಏ.3) ಜನಪಥ್ ಪ್ರದೇಶದ ಮೆಕ್‌ಡೊನಾಲ್ಡ್ಸ್ ಔಟ್‌ಲೆಟ್‌ನ ಹೊರಗೆ ದಿಢೀರ್ ಪ್ರತಿಭಟನೆಯನ್ನು ಆಯೋಜಿಸಿದ್ದರು. ಪ್ಯಾಲೆಸ್ತೀನಿಯನ್ನರನ್ನು ಒಳಗೊಂಡ ನಡೆಯುತ್ತಿರುವ ಸಂಘರ್ಷದಲ್ಲಿ ಮೆಕ್‌ಡೊನಾಲ್ಡ್ಸ್ ಮತ್ತು ಕೋಕಾ-ಕೋಲಾದಂತಹ ಬಹುರಾಷ್ಟ್ರೀಯ...

‘ಇರಾನಿಯನ್ನರು ಸ್ಮಾರ್ಟ್ ಚೆಸ್ ಆಡುತ್ತಿದ್ದು, ಟ್ರಂಪ್ ಭ್ರಮಾಲೋಕದಲ್ಲಿದ್ದಾರೆ..’; ಮಾಜಿ ರಾಜತಾಂತ್ರಿಕ ಅಧಿಕಾರಿ ಕೆ.ಪಿ. ಫ್ಯಾಬಿಯನ್

ಪ್ರಸ್ತುತ ನಡೆಯುತ್ತಿರುವ ಪಶ್ಚಿಮ ಏಷ್ಯಾ ಸಂಘರ್ಷದ ಬಗ್ಗೆ ಮಾತನಾಡಿದ ಭಾರತದ ಮಾಜಿ ರಾಯಭಾರಿ ಕೆ.ಪಿ. ಫ್ಯಾಬಿಯನ್, "ಇರಾನಿಯನ್ನರು ಸ್ಮಾರ್ಟ್ ಚೆಸ್ ಆಟವನ್ನು ಆಡುತ್ತಿದ್ದಾರೆ. ಆದರೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗಳು...

‘ನಾನು ಸಂಸತ್ತಿಗೆ ಹೋಗುವುದು ಗದ್ದಲ ಸೃಷ್ಟಿಸಲು ಅಲ್ಲ’ : ಎಎಪಿ ಆರೋಪಗಳನ್ನು ತಳ್ಳಿ ಹಾಕಿದ ರಾಘವ್ ಚಡ್ಡಾ

ತನ್ನ ವಿರುದ್ದ ಆಮ್‌ ಆದ್ಮಿ ಪಕ್ಷ (ಎಎಪಿ) ಮಾಡಿರುವ ಎಲ್ಲಾ ಆರೋಪಗಳನ್ನು ರಾಘವ್ ಚಡ್ಡಾ ಶನಿವಾರ (ಏ.4) ಅಲ್ಲಗಳೆದಿದ್ದು, "ಅವೆಲ್ಲವೂ ಸುಳ್ಳು ಮತ್ತು ಸಂಘಟಿತ ಅಭಿಯಾನದ ಭಾಗ" ಎಂದಿದ್ದಾರೆ. "ಸಂಸತ್ತಿನಲ್ಲಿ ನನ್ನ ಉದ್ದೇಶ...

ಎಡರಂಗದಲ್ಲಿ ಎಡಪಂಥೀಯರೇ ಇಲ್ಲ; ದ್ವೇಷ ಹರಡುವ ಜನರೊಂದಿಗೆ ಪಿಣರಾಯಿ ಪಾಲುದಾರಿಕೆ ಹೊಂದಿದ್ದಾರೆ: ರಾಹುಲ್ ಗಾಂಧಿ

ಕೇರಳ ವಿಧಾನಸಭಾ ಚುನಾವಣೆ ಪ್ರಚಾರವು ಅಂತಿಮ ಹಂತಕ್ಕೆ ತಲುಪುತ್ತಿದ್ದಂತೆ ತೀಕ್ಷ್ಣವಾದ ರಾಜಕೀಯ ದಾಳಿಯನ್ನು ಆರಂಭಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, "ಸಿಪಿಐ-ಎಂ ನೇತೃತ್ವದ ಎಡಪಕ್ಷವು ತನ್ನ ಸೈದ್ಧಾಂತಿಕ ತಿರುಳನ್ನು ಕಳೆದುಕೊಳ್ಳುತ್ತಿದೆ" ಎಂದು ಆರೋಪಿಸಿದ್ದಾರೆ. "ಎಲ್‌ಡಿಎಫ್...