Homeರಾಷ್ಟ್ರೀಯಶಾರುಖ್, ಅಮಿತಾಬ್, ರಣವೀರ್ & ಅಜಯ್ ದೇವಗನ್‌ ವಿರುದ್ಧ ಬಿಹಾರ ಕೋರ್ಟ್‌ಗೆ ದೂರು!

ಶಾರುಖ್, ಅಮಿತಾಬ್, ರಣವೀರ್ & ಅಜಯ್ ದೇವಗನ್‌ ವಿರುದ್ಧ ಬಿಹಾರ ಕೋರ್ಟ್‌ಗೆ ದೂರು!

- Advertisement -
- Advertisement -

ಹಿಂದಿ ನಟರಾದ ಅಮಿತಾಬ್ ಬಚ್ಚನ್, ಶಾರುಖ್ ಖಾನ್ ಮತ್ತು ಅಜಯ್ ದೇವಗನ್ ಅವರ ವಿರುದ್ದ “ಗುಟ್ಕಾ ಮತ್ತು ತಂಬಾಕು ಸೇವನೆಯನ್ನು ಉತ್ತೇಜಿಸುತ್ತಿದ್ದಾರೆ” ಎಂದು ಆರೋಪಿಸಿ ಬಿಹಾರದ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ.

ಅಜಯ್ ದೇವಗನ್ ಕೆಲವು ವರ್ಷಗಳಿಂದ ತಂಬಾಕು ಬ್ರಾಂಡ್ ವಿಮಲ್‌ನ ರಾಯಭಾರಿಯಾಗಿದ್ದಾರೆ. ಈ ಬ್ರಾಂಡ್‌ಗೆ ಕಳೆದ ವರ್ಷ ಶಾರುಖ್ ಖಾನ್ ಕೂಡ ಬಂದಿದ್ದರು. ಅಮಿತಾಭ್ ಬಚ್ಚನ್ ಅವರು ಕಮಲ ಪಸಂದ್‌ ತಂಬಾಕು ಉತ್ಪನ್ನದ ಬ್ರಾಂಡ್‌‌ ಅಂಬಾಸಿಡರ್ ಆಗಿ ಸಹಿ ಹಾಕಿದ್ದರು, ಆದರೆ ನಂತರ ಅವರು ಒಪ್ಪಂದವನ್ನು ಕೊನೆಗೊಳಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಸಾಮಾಜಿಕ ಕಾರ್ಯಕರ್ತೆ ತಮನ್ನಾ ಹಶ್ಮಿ ಅವರು ಮುಜಾಫರ್‌ಪುರದ ಮುಖ್ಯ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಈ ಬಗ್ಗೆ ಅರ್ಜಿ ಸಲ್ಲಿಸಿದ್ದು, ಈ ನಟರನ್ನು ಒಳಗೊಂಡ ಜಾಹೀರಾತುಗಳು, ಜಾಹೀರಾತು ಮಾಡಲಾದ ವಸ್ತುಗಳನ್ನು ಸೇವಿಸಲು ಜನರನ್ನು ಉತ್ತೇಜಿಸುತ್ತವೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಸಕ್ಕರೆಯೆಂಬ ಹೊಸ ತಂಬಾಕು: ದಿನಕ್ಕೆ 25 ಗ್ರಾಂ ಗಿಂತ ಹೆಚ್ಚು ಸಕ್ಕರೆ ಬಳಸಿದರೆ ಅನಾರೋಗ್ಯಕ್ಕೆ ಆಹ್ವಾನ ಕೊಟ್ಟಂತೆ

ಗುಟ್ಕಾ ಮತ್ತು ಪಾನ್ ಮಸಾಲಾ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳಲು ಒಪ್ಪಿಕೊಳ್ಳುವ ಮೂಲಕ ‘ತಮ್ಮ ಸೆಲೆಬ್ರಿಟಿ ಸ್ಥಾನಮಾನವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ’ವರಲ್ಲಿ ನಟ ರಣವೀರ್ ಸಿಂಗ್ ಅವರನ್ನು ಸಹ ತಮನ್ನಾ ಹೆಸರಿಸಿದ್ದಾರೆ.

ನಟರ ವಿರುದ್ಧ ಐಪಿಸಿ ಸೆಕ್ಷನ್ 311 (ದರೋಡೆಕೋರನಿಗೆ ಶಿಕ್ಷೆ), 420 (ವಂಚನೆ) ಮತ್ತು 467 ಮತ್ತು 468 (ನಕಲಿ) ಅಡಿಯಲ್ಲಿ ಎಫ್‌ಐಆರ್ ದಾಖಲಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡುವಂತೆ ಅರ್ಜಿಯು ನ್ಯಾಯಾಲಯದಲ್ಲಿ ಕೋರಿದೆ. ಅರ್ಜಿಯನ್ನು ಮುಂದಿನ ದಿನಗಳಲ್ಲಿ ವಿಚಾರಣೆಗೆ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.

ಕಳೆದ ತಿಂಗಳು, ವಿಮಲ್ ಪಾನ್‌ ಮಸಾಲ ಜಾಹೀರಾತಿನಲ್ಲಿ ಕಾಣಿಸಿಕೊಂಡ ನಟ ಅಕ್ಷಯ್ ಕುಮಾರ್ ವಿರುದ್ದ ಜನರು ಆಕ್ರೋಶ ವ್ಯಕ್ತಪಡಿಸಿದ ನಂತರ ಕಂಪನಿಯಿಂದ ತನ್ನ ಸಂಬಂಧವನ್ನು ಕಡಿತಗೊಳಿಸಿದ್ದರು. ವಿಮಲ್ ಪಾನ್‌ ಮಸಾಲ ಜಾಹೀರಾತಿನಲ್ಲಿ ನಟರಾದ ಅಜಯ್ ದೇವಗನ್ ಮತ್ತು ಶಾರುಖ್ ಖಾನ್ ಕೂಡ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ಭೂಖಂಡಗಳನ್ನು ಭೇದಿಸಿದ ಕಾಲುವೆ; ಅಸಮಾನ ಆರ್ಥಿಕತೆ ಮತ್ತು ಲಾಭಕೋರತನದಿಂದಾಗಿ ಸ್ಥಗಿತ

ಅಕ್ಟೋಬರ್ 2021 ರಲ್ಲಿ, ಅಮಿತಾಬ್ ಬಚ್ಚನ್ ಅವರು ತಂಬಾಕು ಬ್ರ್ಯಾಂಡ್‌ ಕಮಲಾ ಪಸಂದ್ ಅವರೊಂದಿಗಿನ ಒಪ್ಪಂದವನ್ನು ಕೊನೆಗೊಳಿಸಿದ್ದರು. ಬ್ರಾಂಡ್‌ ಬಗ್ಗೆಗಿನ ಕೆಲವು ವಿವರಗಳು ಅಮಿತಾಬ್ ಅವರಿಗೆ ತಿಳಿದಿರಲಿಲ್ಲ ಎಂದು ಅವರ ಕಚೇರಿ ಹೇಳಿಕೆಯನ್ನು ಬಿಡುಗಡೆ ಮಾಡಿದೆ.

ಅಮಿತಾಬ್‌ ಅವರು ಬ್ರ್ಯಾಂಡ್‌ನೊಂದಿಗಿನ ಒಪ್ಪಂದವನ್ನು ಕೊನೆಗೊಳಿಸಿದ್ದು, ಅದರ ಬಗ್ಗೆ ಕಂಪೆನಿಗೆ ಪತ್ರ ಬರೆದಿದ್ದಾರೆ. ಜೊತೆಗೆ ಪ್ರಚಾರಕ್ಕಾಗಿ ಸ್ವೀಕರಿಸಿದ ಹಣವನ್ನು ಹಿಂದಿರುಗಿಸಿದ್ದಾರೆ ಎಂದು ಅವರ ಕಚೇರಿ ಬಿಡುಗಡೆ ಮಾಡಲಾಗಿರುವ ಹೇಳಿಕೆ ತಿಳಿಸಿದೆ. ಒಪ್ಪಂದ ಕೊನೆಗೊಳಿಸಿದ ನಂತರ ಕೂಡಾ ಅವರನ್ನು ಒಳಗೊಂಡ ಜಾಹಿರಾತುಗಳ ಪ್ರಸಾರ ಮಾಡುವುದನ್ನು ಮುಂದುವರೆಸಿದ ಕಂಪನಿಗೆ ಕಾನೂನು ನೋಟಿಸ್ ಕೂಡಾ ಕಳುಹಿಸಿದ್ದರು ಎಂದು ವರದಿಯಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಖಾಸಗೀಕರಣವನ್ನು ಉತ್ತೇಜಿಸುವ ಸರ್ಕಾರಿ ಶಾಲೆಗಳ ಬಗೆಗೆ ಕಾಳಜಿ ಇಲ್ಲದೆ ಬೈಜೂಸ್ ಮತ್ತಿತರ ಟ್ಯೂಷನ್ ಕೋಚಿಂಗ್ ವಿಷಯಗಳ ಬಗ್ಗೆ ಮಾತನಾಡುವವರ ಮೇಲೆಯೂ ಕೇಸು ದಾಖಲಿಸಬೇಕು

LEAVE A REPLY

Please enter your comment!
Please enter your name here

- Advertisment -

Must Read

ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ರನ್ನು ಗುಂಡಿಕ್ಕಿ ಕೊಲ್ಲಿ: ಪಬ್ಲಿಕ್‌ ಟಿವಿಯಲ್ಲಿ ಮಾಡಲಾದ ಪ್ರಚೋದನೆಗೆ ಖಂಡನೆ

“ಮಾಜಿ ಮುಖ್ಯಮಂತ್ರಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರನ್ನು ಗುಂಡಿಕ್ಕಿ ಕೊಲ್ಲಿ”- ಹೀಗೆ ಪ್ರಚೋದನಾತ್ಮಕವಾಗಿ ವ್ಯಕ್ತಿಯೊಬ್ಬರು ಪಬ್ಲಿಕ್‌ ಟಿ.ವಿ. ಜೊತೆ ಮಾತನಾಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಇಬ್ಬರು ಧಾರ್ಮಿಕ...