Homeರಾಷ್ಟ್ರೀಯ‘CSpace’-ತನ್ನದೇ ಆದ OTT ಪ್ಲಾಟ್‌ಫಾರ್ಮ್‌ ಪ್ರಾರಂಭಿಸಲಿರುವ ಕೇರಳ; ನವೆಂಬರ್ 1 ರಿಂದ ಪ್ರಾರಂಭ

‘CSpace’-ತನ್ನದೇ ಆದ OTT ಪ್ಲಾಟ್‌ಫಾರ್ಮ್‌ ಪ್ರಾರಂಭಿಸಲಿರುವ ಕೇರಳ; ನವೆಂಬರ್ 1 ರಿಂದ ಪ್ರಾರಂಭ

- Advertisement -
- Advertisement -

ಈ ವರ್ಷದ ನವೆಂಬರ್ 1 ರಂದು ಕೇರಳವು ‘CSpace’ ಎಂಬ OTT ಪ್ರಾರಂಭಿಸುವುದರೊಂದಿಗೆ ದೇಶದ ಮೊದಲ ಸರ್ಕಾರಿ ಒಟಿಟಿ ವೇದಿಕೆ ಪ್ರಾರಂಭಿಸಿದ ರಾಜ್ಯವಾಗಿ ಹೊರಹೊಮ್ಮಲಿದೆ. ರಾಜ್ಯ ರಾಜಧಾನಿಯ ಕಲಾಭವನ ರಂಗಮಂದಿರದಲ್ಲಿ ಬುಧವಾರ ನಡೆದ ಒಟಿಟಿ ವೇದಿಕೆಯ ನಾಮಕರಣ ಸಮಾರಂಭದಲ್ಲಿ ಸಂಸ್ಕೃತಿ ಮತ್ತು ಸಿನಿಮಾ ಸಚಿವ ಸಾಜಿ ಚೆರಿಯನ್ ಈ ಯೋಜನೆಯ ಬಗ್ಗೆ ಹೇಳಿದ್ದಾರೆ.

“ನಮ್ಮ OTT ಪ್ಲಾಟ್‌ಫಾರ್ಮ್ ಅನ್ನು CSpace ಎಂದು ಕರೆಯಲಾಗುತ್ತದೆ. ಇದು ಸಾಂಸ್ಕೃತಿಕ ವ್ಯವಹಾರಗಳ ಇಲಾಖೆಯ ಅಡಿಯಲ್ಲಿರುತ್ತದೆ. ರಾಜ್ಯ ಸರ್ಕಾರದಿಂದ ಇಂತಹ ಉಪಕ್ರಮ ಇದು ಮೊದಲ ಬಾರಿಯಾಗಿದೆ” ಎಂದು ಚೆರಿಯನ್ ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಈ ಸೌಲಭ್ಯವನ್ನು ಕೇರಳ ರಾಜ್ಯ ಚಲನಚಿತ್ರ ಅಭಿವೃದ್ಧಿ ನಿಗಮ (KSFDC) ನಿರ್ವಹಿಸುತ್ತದೆ. ಚಲನಚಿತ್ರ ರಸಿಕರು ಇದರಲ್ಲಿ ಸ್ಥಳೀಯ ಚಲನಚಿತ್ರಗಳನ್ನು ಮಾತ್ರವಲ್ಲದೆ ವಿಶ್ವದರ್ಜೆಯ ಚಲನಚಿತ್ರಗಳನ್ನು ವೀಕ್ಷಿಸಲು ಅನುಕೂಲವಾಗುವಂತೆ ಉದ್ದೇಶಿಸಲಾಗಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮುಸ್ಲಿಮರ ವಿರುದ್ದ ದ್ವೇಷ ಭಾಷಣ: ಕೇರಳದ ಮಾಜಿ ಶಾಸಕನ ಬಂಧನ, ಜಾಮೀನು

OTT ವೇದಿಕೆಯು ಚಿತ್ರಗಳನ್ನು ಥಿಯೇಟರ್ ಅಲ್ಲಿ ಬಿಡುಗಡೆ ಆದ ನಂತರ ಮಾತ್ರ ಪ್ರದರ್ಶಿಸುತ್ತದೆ. ಹೀಗಾಗಿ ಥಿಯೇಟರ್ ಮಾಲೀಕರು ಮತ್ತು ನಿರ್ಮಾಪಕರಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಚೆರಿಯನ್ ಹೇಳಿದ್ದಾರೆ. ಈ OTT ವೇದಿಕೆಯು ಸಿನಿಮಾಗಳು ಮಾತ್ರವಲ್ಲದೆ ಕಿರುಚಿತ್ರಗಳು ಮತ್ತು ಸಾಕ್ಷ್ಯಚಿತ್ರಗಳನ್ನು ಸಹ ತೋರಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

ಕೊರೊನಾ ಸಾಂಕ್ರಾಮಿಕ ರೋಗವು ಮಲಯಾಳಂ ಚಲನಚಿತ್ರೋದ್ಯಮದ ಮೇಲೆ ಭಾರಿ ಹಾನಿಯನ್ನುಂಟುಮಾಡಿತು. 2021 ರಲ್ಲಿ ಸುಮಾರು 70 ಚಲನಚಿತ್ರಗಳು ಮಾತ್ರ ಥಿಯೇಟರ್‌ಗಳಿಗೆ ಬಂದಿದ್ದವು. ಸುಮಾರು 85 ಚಲನಚಿತ್ರಗಳಿಗೆ ಯಾವುದೇ OTT ವೇದಿಕೆ ಸಿಕ್ಕಿರಲಿಲ್ಲ.

OTT ಪ್ಲಾಟ್‌ಫಾರ್ಮ್ ನವೆಂಬರ್ 1 ರಂದು ಲೈವ್ ಆಗಲಿದೆ ಎಂದು ಚೆರಿಯನ್ ಘೋಷಿಸುವುದರೊಂದಿಗೆ, ಕೇರಳ ರಾಜ್ಯ ಚಲನಚಿತ್ರ ಅಭಿವೃದ್ಧಿ ನಿಗಮ OTT ಪ್ಲಾಟ್‌ಫಾರ್ಮ್‌ಗಾಗಿ ಆಸಕ್ತ ಬಿಡ್ಡರ್‌ಗಳೊಂದಿಗೆ ಮಾತನಾಡಲು ನಿರತವಾಗಿದೆ.

ಇದನ್ನೂ ಓದಿ:  ಕೇರಳ ಬಜೆಟ್‌: ಉಕ್ರೇನ್‌ನಿಂದ ಮರಳಿದ ವಿದ್ಯಾರ್ಥಿಗಳಿಗೆ 10 ಕೋಟಿ ರೂ. ಮೀಸಲಿಟ್ಟ ಸರ್ಕಾರ

ಆಸಕ್ತ ನಿರ್ಮಾಪಕರು ತಮ್ಮ ಚಲನಚಿತ್ರಗಳೊಂದಿಗೆ ಜೂನ್ 1 ರಿಂದ ಕೇರಳ ರಾಜ್ಯ ಚಲನಚಿತ್ರ ಅಭಿವೃದ್ಧಿ ನಿಗಮದಲ್ಲಿ ನೋಂದಾಯಿಸಿಕೊಳ್ಳಬಹುದು ಎಂದು ಚೆರಿಯನ್ ಸೂಚಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ರನ್ನು ಗುಂಡಿಕ್ಕಿ ಕೊಲ್ಲಿ: ಪಬ್ಲಿಕ್‌ ಟಿವಿಯಲ್ಲಿ ಮಾಡಲಾದ ಪ್ರಚೋದನೆಗೆ ಖಂಡನೆ

“ಮಾಜಿ ಮುಖ್ಯಮಂತ್ರಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರನ್ನು ಗುಂಡಿಕ್ಕಿ ಕೊಲ್ಲಿ”- ಹೀಗೆ ಪ್ರಚೋದನಾತ್ಮಕವಾಗಿ ವ್ಯಕ್ತಿಯೊಬ್ಬರು ಪಬ್ಲಿಕ್‌ ಟಿ.ವಿ. ಜೊತೆ ಮಾತನಾಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಇಬ್ಬರು ಧಾರ್ಮಿಕ...