ಕೇಂದ್ರೀಯ ಸಂಸ್ಥೆಯ ಮುಖ್ಯಸ್ಥರ ಮೇಲೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ”ಪ್ರಜಾಪ್ರಭುತ್ವದ ಹಡಗಿನ ಸಣ್ಣ ವಿಜಯ” ಇದು ಎಂದು ಮೊಯಿತ್ರಾ ಬಣ್ಣಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ”ED ಯ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ನನ್ನ ವಕೀಲರು – ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್ ಮತ್ತು ಅವರ ತಂಡಕ್ಕೆ ಧನ್ಯವಾದಗಳು. ಇದು ಪ್ರಜಾಪ್ರಭುತ್ವದ ಹಡಗಿನ ಸಣ್ಣ ವಿಜಯಗಳು” ಎಂದಿದ್ದಾರೆ.
A big thank you to my lawyers – senior counsel Gopal Sankaranarayanan & his team for battling for the independence of the ED. These are small victories for the ship of democracy. pic.twitter.com/o8ggdua8SS
— Mahua Moitra (@MahuaMoitra) July 11, 2023
ಮತ್ತೊಂದು ಟ್ವೀಟ್‌ನಲ್ಲಿ, ”ಇಡಿ ನಿರ್ದೇಶಕರ ವಿಸ್ತರಣೆಯ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ನನ್ನ ಮನವಿಗೆ ಜಯ ಸಿಕ್ಕಿದೆ. ಕಾನೂನುಬಾಹಿರ ವಿಸ್ತರಣೆ ಎಂದಿರುವ ಸುಪ್ರೀಂ ಕೋರ್ಟ್‌ಗೆ ಧನ್ಯವಾದಗಳು” ಎಂದಿದ್ದಾರೆ.
”ಬಿಜೆಪಿಗರೇ, ನಾವು ನಿಮ್ಮೊಂದಿಗೆ ಚುನಾವಣೆಯಲ್ಲಿ ಹೋರಾಡುತ್ತೇವೆ, ನಾವು ನಿಮ್ಮೊಂದಿಗೆ ನ್ಯಾಯಾಲಯದಲ್ಲಿ ಹೋರಾಡುತ್ತೇವೆ. ನಾವು ಹೊಲಗಳಲ್ಲಿ ಮತ್ತು ಬೀದಿಗಳಲ್ಲಿ ಹೋರಾಡುತ್ತೇವೆ, ನಾವು ಎಂದಿಗೂ ಶರಣಾಗುವುದಿಲ್ಲ” ಎಂದು ಹೇಳಿದ್ದಾರೆ.
Victory in my plea in SC against extension of ED Director. Thank you SC for ruling extension invalid.
BJP – we shall fight you in the polls, we shall fight you in the courts. we shall fight in the fields & in the streets, we shall never surrender.
— Mahua Moitra (@MahuaMoitra) July 11, 2023
ಜಾರಿ ನಿರ್ದೇಶನಾಲಯವು ಎಲ್ಲಾ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ ಮತ್ತು ಬಿಜೆಪಿಯು ತನ್ನ ವೈಯಕ್ತಿಕ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಬಳಸುವ ‘ಕೈಗೊಂಬೆ’ಯಾಗಿದೆ ಎಂದು ಕಾಂಗ್ರೆಸ್ ಸಂಸದ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಮಂಗಳವಾರ ಕೇಂದ್ರೀಯ ಸಂಸ್ಥೆಯ ಮುಖ್ಯಸ್ಥರ ಮೇಲೆ ಸುಪ್ರೀಂ ಕೋರ್ಟ್ ಆದೇಶ ನೀಡಿದ ಗಂಟೆಗಳ ನಂತರ ವಾಗ್ದಾಳಿ ನಡೆಸಿದ್ದಾರೆ.
ಜಾರಿ ನಿರ್ದೇಶನಾಲಯದ ಮುಖ್ಯಸ್ಥರಾಗಿದ್ದ ಸಂಜಯ್ ಕುಮಾರ್ ಮಿಶ್ರಾ ಅವರಿಗೆ ನವೆಂಬರ್ 2021 ಮತ್ತು ನವೆಂಬರ್ 2022ರಲ್ಲಿ ಅವರಿಗೆ ಹುದ್ದೆಯಲ್ಲಿ ಮುಂದುವರೆಯಲು ಅವಕಾಶ ಮಾಡಿಕೊಟ್ಟಿದ್ದು ಕಾನೂನುಬಾಹಿರ ಎಂದು ಮಂಗಳವಾರ ಸುಪ್ರೀಂ ಕೋರ್ಟ್ ತೀರ್ಪು ನೀಡಿತು. ಆದಾಗ್ಯೂ, ಹೊಸ ಮುಖ್ಯಸ್ಥರನ್ನು ಹುಡುಕುವ ಬಗ್ಗೆ ಕೇಂದ್ರವು ಕಳವಳ ವ್ಯಕ್ತಪಡಿಸಿದ ನಂತರ ಜುಲೈ 31ರವರೆಗೆ ಕುಮಾರ್ ಅವರ ಸ್ಥಾನದಲ್ಲಿ ಮುಂದುವರಿಯಲು ನ್ಯಾಯಾಲಯ ಅನುಮತಿ ನೀಡಿದೆ.
ವಿಸ್ತರಣೆಗಳು ಸುಪ್ರೀಂ ಕೋರ್ಟ್‌ನ 2021 ರ ತೀರ್ಪಿನ ಉಲ್ಲಂಘನೆಯಾಗಿದೆ ಎಂದು ಪೀಠವು ಗಮನಿಸಿದೆ. ಇದರಲ್ಲಿ ಮಿಶ್ರಾ ಅವರ ಅಧಿಕಾರಾವಧಿಯನ್ನು ಇನ್ನು ಮುಂದೆ ವಿಸ್ತರಿಸದಂತೆ ಸರ್ಕಾರಕ್ಕೆ ನಿರ್ದೇಶಿಸಿದೆ.
ನವೆಂಬರ್ 2021ರಲ್ಲಿ, ಸುಪ್ರೀಂ ಕೋರ್ಟ್ ತೀರ್ಪಿನ ಹೊರತಾಗಿಯೂ ಕೇಂದ್ರ ಸರ್ಕಾರವು ಜಾರಿ ನಿರ್ದೇಶನಾಲಯ ಮತ್ತು ಕೇಂದ್ರೀಯ ತನಿಖಾ ದಳದ ನಿರ್ದೇಶಕರು ಐದು ವರ್ಷಗಳವರೆಗೆ ಅಧಿಕಾರಾವಧಿಯನ್ನು ಹೊಂದಿರಬಹುದು ಎಂದು ಎರಡು ಸುಗ್ರೀವಾಜ್ಞೆಗಳನ್ನು ಹೊರಡಿಸಿತು.
ನವೆಂಬರ್ 17, 2021 ಮತ್ತು ನವೆಂಬರ್ 17, 2022 ರಂದು ಮಿಶ್ರಾ ಅವರಿಗೆ ನೀಡಲಾದ ವಿಸ್ತರಣೆಗಳನ್ನು ಪ್ರಶ್ನಿಸಿ ಅನೇಕ ಅರ್ಜಿಗಳು ಬಂದವು ಅವರಲ್ಲಿ ಕಾಂಗ್ರೆಸ್ ನಾಯಕ ಸುರ್ಜೆವಾಲಾ ಮತ್ತು ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಕೂಡ ಇದ್ದಾರೆ.
”ಸುಪ್ರೀಂ ಕೋರ್ಟ್ ತೀರ್ಪಿನ ದೃಷ್ಟಿಯಿಂದ, 2021ರ ವಿಸ್ತರಣೆಯ ನಂತರ ಮಿಶ್ರಾ ಕೈಗೊಂಡ ಎಲ್ಲಾ ಕ್ರಮಗಳನ್ನು “ಕಾನೂನುಬಾಹಿರ ಮತ್ತು ಕಳಂಕಿತ” ಎಂದು ಪರಿಗಣಿಸಬಹುದು” ಎಂದು ಮಂಗಳವಾರ ಸುರ್ಜೆವಾಲಾ ಅವರು ಹೇಳಿದರು.
On a Petition instituted by me, the Supreme Court today pronounced its judgment striking down the extensions given to the ED Chief as illegal. ED Director will have to vacate office by the end of the month.
This is a victory of justice. This is a vindication of our stand on… pic.twitter.com/XTLCO7RdxW
— Randeep Singh Surjewala (@rssurjewala) July 11, 2023
”ನವೆಂಬರ್ 17, 2021 ಮತ್ತು 17 ನೇ ನವೆಂಬರ್, 2022 ರಂದು ಇಡಿ ನಿರ್ದೇಶಕರಿಗೆ ಎರಡು ಕಾನೂನುಬಾಹಿರ ವಿಸ್ತರಣೆ ನೀಡಿರುವುದಕ್ಕೆ ರಾಜಕೀಯ ನಾಯಕರು ಮತ್ತು ಅಧಿಕಾರಿಗಳು ಜವಾಬ್ದಾರರಲ್ಲ. ಅವರ ವಿಸ್ತರಣೆ ಜವಾಬ್ದಾರಿಯನ್ನು ಸ್ವತಃ ಪ್ರಧಾನಿಯೇ ಹೊರಬೇಕು. ಹಾಗಾಗಿ ಪ್ರಧಾನಿ ಮೋದಿ ಅವರು ಕ್ಷಮೆ ಯಾಚಿಸಬೇಕು” ಎಂದು ಸುರ್ಜೆವಾಲಾ ಆಗ್ರಹಿಸಿದರು.
ಸುಪ್ರೀಂ ಕೋರ್ಟ್ ತೀರ್ಪನ್ನು ನ್ಯಾಯದ ಗೆಲುವು ಎಂದು ಸುರ್ಜೇವಾಲಾ ಬಣ್ಣಿಸಿದ್ದು, ”ರಾಜಕೀಯ ವಿರೋಧಿಗಳನ್ನು ಮತ್ತು ಉದ್ಯಮಿಗಳನ್ನು ಗುರಿಯಾಗಿಸಿ ಭಯೋತ್ಪಾದನೆಯನ್ನು ಹರಡಲು ಮೋದಿ ಸರ್ಕಾರವು ರಾಜಕೀಯ ಸೇಡಿಗಾಗಿ ಇಡಿ ಯ ದುರುಪಯೋಗ ಮಾಡಿಕೊಂಡಿದೆ” ಎಂದು ಅವರು ಹೇಳಿದರು.
ಈ ಮಧ್ಯೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನ್ಯಾಯಾಲಯದ ತೀರ್ಪಿನ ಬಗ್ಗೆ ಸಂತೋಷವಾಗಿರುವವರು ವಿವಿಧ ಕಾರಣಗಳಿಗಾಗಿ ಭ್ರಮೆಯಲ್ಲಿದ್ದಾರೆ ಎಂದು ಹೇಳಿದ್ದಾರೆ. ”ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಮುಖ್ಯಸ್ಥರ ಅಧಿಕಾರಾವಧಿಯನ್ನು ಐದು ವರ್ಷಗಳವರೆಗೆ ವಿಸ್ತರಿಸಲು ತಂದ ತಿದ್ದುಪಡಿಗಳನ್ನು ನ್ಯಾಯಾಲಯ ಎತ್ತಿಹಿಡಿದಿದೆ” ಎಂದು ಅವರು ಹೇಳಿದರು.
ಇದನ್ನೂ ಓದಿ: ಇಡಿ ಮುಖ್ಯಸ್ಥ ಮಿಶ್ರಾಗೆ 3ನೇ ಅವಧಿಗೆ ಅಧಿಕಾರ ವಿಸ್ತರಣೆ ಕಾನೂನು ಬಾಹಿರ: ಸುಪ್ರೀಂ ಕೋರ್ಟ್


