HomeಮುಖಪುಟWFI ಮುಖ್ಯಸ್ಥ ಬ್ರಿಜ್ ಭೂಷಣ್ ವಿರುದ್ಧ 'ತಾಂತ್ರಿಕ ಸಾಕ್ಷ್ಯ'ವಾಗಿ ಫೋಟೋ, ಮೊಬೈಲ್ ಲೊಕೇಶನ್ ಸಲ್ಲಿಕೆ

WFI ಮುಖ್ಯಸ್ಥ ಬ್ರಿಜ್ ಭೂಷಣ್ ವಿರುದ್ಧ ‘ತಾಂತ್ರಿಕ ಸಾಕ್ಷ್ಯ’ವಾಗಿ ಫೋಟೋ, ಮೊಬೈಲ್ ಲೊಕೇಶನ್ ಸಲ್ಲಿಕೆ

- Advertisement -
- Advertisement -

ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ದೆಹಲಿ ಪೋಲೀಸರು ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ‘ತಾಂತ್ರಿಕ ಸಾಕ್ಷ್ಯ’ವು ದೂರುದಾರರ ಪರವಾಗಿಯೇ ಇವೆ. ಛಾಯಾಚಿತ್ರಗಳು, ಸಾಕ್ಷಿಯ ಸಾಕ್ಷ್ಯವನ್ನು ದೃಢೀಕರಿಸುವ ಅವರ ಮೊಬೈಲ್ ಲೊಕೇಶನ್ ಮತ್ತು ಲೈಂಗಿಕ ಕಿರುಕುಳದ ಘಟನೆ ಸಂಭವಿಸಿದ ಸ್ಥಳದಲ್ಲಿ ಆರೋಪಿ ಇರುವುದನ್ನು ದೃಢೀಕರಿಸುವ ಚಿತ್ರಗಳನ್ನು ಚಾರ್ಜ್‌ಶೀಟ್‌ನಲ್ಲಿ ಒದಗಿಸಲಾಗಿದೆ.

ದಿ ಇಂಡಿಯನ್ ಎಕ್ಸ್‌ಪ್ರೆಸ್ ಉಲ್ಲೇಖಿಸಿರುವ ದೂರುಗಳ ಪ್ರಕಾರ, ”ರಾಜಧಾನಿಯ ಅಶೋಕ ರಸ್ತೆಯಲ್ಲಿರುವ ಡಬ್ಲ್ಯುಎಫ್‌ಐ ಕಚೇರಿ ಮತ್ತು ಸಿಂಗ್ ಅವರ ಮನೆಯಲ್ಲಿ ಕನಿಷ್ಠ ಎರಡು ಲೈಂಗಿಕ ಕಿರುಕುಳದ ಘಟನೆಗಳ ನಡೆಸಿದ್ದು, ಆ ಜಾಗದಲ್ಲಿ ವಿಸಿಟರ್ಸ್ ರಿಜಿಸ್ಟರ್ ಅಥವಾ ಯಾವುದೇ ಸಿಸಿಟಿವಿ ಇರಲಿಲ್ಲ ಎಂದು ಹೇಳಲಾಗಿದೆ.

ಡಬ್ಲ್ಯುಎಫ್‌ಐನ ಮಾಜಿ ಮುಖ್ಯಸ್ಥ ಮತ್ತು ಬಿಜೆಪಿ ಸಂಸದನಾಗಿರುವ ಸಿಂಗ್ ವಿರುದ್ಧ ಆರು ಮಹಿಳಾ ಕುಸ್ತಿಪಟುಗಳು ದಾಖಲಿಸಿದ ದೂರುಗಳ ಪೊಲೀಸ್ ತನಿಖೆಯನ್ನು ಆಧರಿಸಿ ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಾಗಿದೆ. ಬ್ರಿಜ್ ಭೂಷಣ್ ಅವರು ಹಿಂಬಾಲಿಸುವುದು ಮತ್ತು ಕಿರುಕುಳದ ಅಪರಾಧಗಳಿಗೆ “ವಿಚಾರಣೆ ಮತ್ತು ಶಿಕ್ಷೆಗೆ ಗುರಿಯಾಗುತ್ತಾರೆ” ಎಂದು ಅದು ಹೇಳಿದೆ.

”ವಿದೇಶದಲ್ಲಿನ (ಕಜಕಿಸ್ತಾನ್) ನಾಲ್ಕು ಛಾಯಾಚಿತ್ರಗಳನ್ನು ಒದಗಿಸಲಾಗಿದೆ. ಅದರಲ್ಲಿ  ಎರಡು ಛಾಯಾಚಿತ್ರಗಳು ಅವರು ದೂರುದಾರರ ಕಡೆಗೆ ಮುನ್ನಡೆಯುತ್ತಿರುವುದನ್ನು ಕಾಣಬಹುದು” ಎಂದು ಆರೋಪಪಟ್ಟಿ ಹೇಳುತ್ತದೆ.

ಸಿಂಗ್ ವಿರುದ್ಧ ಒಟ್ಟು 21 ಸಾಕ್ಷಿಗಳು ಹೇಳಿಕೆ ನೀಡಿದ್ದಾರೆ. ಇವರಲ್ಲಿ ಆರು ಮಂದಿ ಸಿಆರ್‌ಪಿಸಿ 164ರ ಅಡಿಯಲ್ಲಿ ಹೇಳಿಕೆ ನೀಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ: ರೇವಣ್ಣ ನಿವಾಸದಲ್ಲಿ ಎಸ್‌ಐಟಿ ತಂಡದಿಂದ ಸ್ಥಳ ಮಹಜರು

0
ಸಂಸದ ಪ್ರಜ್ವಲ್ ರೇವಣ್ಣ ವಿರುದ್ದ ಮಹಿಳೆಯೊಬ್ಬರು ದಾಖಲಿಸಿರುವ ಲೈಂಗಿಕ ದೌರ್ಜನ್ಯ ದೂರಿಗೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿರುವ ಎಸ್‌ಐಟಿ ತಂಡ, ಇಂದು (ಮೇ 4) ಹಾಸನದ ಹೆಚ್‌.ಡಿ ರೇವಣ್ಣ ಅವರ ನಿವಾಸದಲ್ಲಿ ಮಹಜರು ನಡೆಸಿದೆ. ಡಿವೈಎಸ್‌ಪಿ...