Homeದಲಿತ್ ಫೈಲ್ಸ್ಸುರಪುರ: ಬೌದ್ಧಧಮ್ಮಕ್ಕೆ ಮರಳುವ ಮುನ್ನ ಹಿಂದೂ ದೇವರುಗಳ ಫೋಟೋ ನದಿಗೆ ವಿಸರ್ಜನೆ

ಸುರಪುರ: ಬೌದ್ಧಧಮ್ಮಕ್ಕೆ ಮರಳುವ ಮುನ್ನ ಹಿಂದೂ ದೇವರುಗಳ ಫೋಟೋ ನದಿಗೆ ವಿಸರ್ಜನೆ

- Advertisement -
- Advertisement -

ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಮಾರ್ಗವನ್ನು ಅನುಸರಿಸಿ, ಬೌದ್ಧಧಮ್ಮಕ್ಕೆ ಮರಳಲು ಸಿದ್ಧವಾಗಿರುವ ಬುದ್ಧ ವಿಹಾರ ಟ್ರಸ್ಟ್ ಪದಾಧಿಕಾರಿಗಳು ಹಿಂದೂ ದೇವರುಗಳ ಫೋಟೋಗಳನ್ನು ನದಿಗೆ ವಿಸರ್ಜಿಸಿರುವ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ.

ಸುರಪುರ ನಗರದ ಗೋಲ್ಡರ್‌ ಕೇವ್‌ ಬುದ್ಧ ವಿಹಾರದಲ್ಲಿ ಅಕ್ಟೋಬರ್ 14ರಂದು ನಡೆಯುವ ಬೌದ್ಧ ಧಮ್ಮ ದೀಕ್ಷಾ ಕಾರ್ಯಕ್ರಮದಲ್ಲಿ ಬುದ್ಧ ವಿಹಾರ ಟ್ರಸ್ಟ್‌ನ ಪದಾಧಿಕಾರಿಗಳು ಸೇರಿ 500ಕ್ಕೂ ಹೆಚ್ಚು ಮಂದಿ ಬೌದ್ಧ ಧಮ್ಮವನ್ನು ಸ್ವೀಕರಿಸಲಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಹಿಂದೂ ಧರ್ಮ ತ್ಯಜಿಸುವ ಸಂಕೇತದ ರೂಪದಲ್ಲಿ ಸೋಮವಾರ ಟ್ರಸ್ಟ್‌ನ ಪದಾಧಿಕಾರಿಗಳು ಹಿಂದೂ ದೇವರ ಚಿತ್ರಗಳನ್ನು ಕೃಷ್ಣಾ ನದಿಯಲ್ಲಿ ವಿಸರ್ಜಿಸಿದ್ದಾರೆ.

‘ಪ್ರಜಾವಾಣಿ’ ಪತ್ರಿಕೆಗೆ ಪ್ರತಿಕ್ರಿಯೆ ನೀಡಿರುವ ಟ್ರಸ್ಟ್‌ನ ಅಧ್ಯಕ್ಷ ವೆಂಕಟೇಶ ಹೊಸಮನಿ, “ನಾನು ಮನೆಯಲ್ಲಿ ಪೂಜಿಸುತ್ತಿದ್ದ ವೆಂಕಟರಮಣ, ಸಾಯಿಬಾಬಾ ಮೂರ್ತಿ, ಲಕ್ಷ್ಮಿ, ಸರಸ್ವತಿ, ಗಣಪತಿ, ಕೃಷ್ಣ ರಾಧೆ ಮುಂತಾದ ದೇವರ ಚಿತ್ರಗಳನ್ನು ತಿಂಥಣಿ ಸೇತುವೆಗೆ ಒಯ್ದು, ಅಲ್ಲಿಂದ ನದಿಯಲ್ಲಿ ವಿಸರ್ಜಿಸಿರುವೆ” ಎಂದಿದ್ದಾರೆ.

“ಬೌದ್ಧ ಧರ್ಮ ಸ್ವೀಕಾರಕ್ಕೆ ನನ್ನ ಪತ್ನಿ ಶಿವಮೊಗ್ಗೆಮ್ಮ ಮತ್ತು ಮೂವರ ಮಕ್ಕಳ ಸಂಪೂರ್ಣ ಒಪ್ಪಿಗೆ ಇದೆ. ಎಲ್ಲರೂ ಸಂತೋಷದಿಂದ ನನ್ನ ನಿರ್ಧಾರ ಸಹಮತ ವ್ಯಕ್ತಪಡಿಸಿದ್ದಾರೆ. ಮಹಾರಾಷ್ಟ್ರದ ನಾಗಪುರದಲ್ಲಿ 1956ರ ಅಕ್ಟೋಬರ್ 14ರಂದು ಡಾ.ಅಂಬೇಡ್ಕರ್ ಅವರು ನಾಗಪುರದಲ್ಲಿ 5 ಲಕ್ಷ ಅನುಯಾಯಿಗಳ ಜೊತೆ ಬೌದ್ಧ ಧರ್ಮ ಸ್ವೀಕರಿಸಿದ್ದರು. ಈ ಪುಣ್ಯ ದಿನದಂದೇ ನಾವೆಲ್ಲರೂ ಬೌದ್ಧ ಧರ್ಮ ಸ್ವೀಕರಿಸುತ್ತೇವೆ” ಎಂದಿದ್ದಾರೆ.

ಹಿಂದೂ ದೇವರುಗಳ ಫೋಟೋವನ್ನು ನದಿಗೆ ವಿಸರ್ಜಿಸುವ ವೇಳೆ ಟ್ರಸ್ಟ್ ಉಪಾಧ್ಯಕ್ಷ ನಾಗಣ್ಣ ಕಲ್ಲದೇವನಹಳ್ಳಿ, ಪ್ರಮುಖರಾದ ಮಾಳಪ್ಪ ಕಿರದಳ್ಳಿ, ಭೀಮಣ್ಣ ಕಟ್ಟಿಮನಿ ಹಾಜರಿದ್ದರು.

ಬೌದ್ಧಧಮ್ಮ ಸ್ವೀಕಾರದ ಬಳಿಕ ದೆಹಲಿಯಲ್ಲಿ ವಿವಾದ

ದೆಹಲಿ ಕ್ಯಾಬಿನೆಟ್ ಸಚಿವ ರಾಜೇಂದ್ರ ಪಾಲ್ ಗೌತಮ್ ಅವರು ‘ಧಾರ್ಮಿಕ ಮತಾಂತರ’ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಉಂಟಾದ ವಿವಾದದ ನಡುವೆ ಭಾನುವಾರ ರಾಜೀನಾಮೆ ನೀಡಿದ್ದಾರೆ.

ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಮುಂಬರುವ ವಿಧಾನಸಭಾ ಚುನಾವಣೆಯ ಪ್ರಚಾರಕ್ಕಾಗಿ ಗುಜರಾತ್‌ನಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಆದರೆ ಕಾರ್ಯಕ್ರಮಕ್ಕೆ ಒಂದು ದಿನ ಮುಂಚಿತವಾಗಿ ಕೇಜ್ರಿವಾಲ್ ಅವರನ್ನು ‘ಹಿಂದೂ ವಿರೋಧಿ’ ಎಂದು ಪ್ರಚಾರ ಮಾಡಲಾಯಿತು. ಸ್ಕಲ್ ಕ್ಯಾಪ್ ಧರಿಸಿರುವ ಬ್ಯಾನರ್‌ಗಳನ್ನು ರಾಜ್ಯದ ಹಲವಾರು ನಗರಗಳಲ್ಲಿ ಹಾಕಲಾಗಿತ್ತು. ಕೇಜ್ರಿವಾಲ್ ಅವರ ಚಿತ್ರಗಳೊಂದಿಗೆ, “ನಾನು ಹಿಂದೂ ಧರ್ಮವನ್ನು ಹುಚ್ಚುತನವೆಂದು ಪರಿಗಣಿಸುತ್ತೇನೆ”, “ಹಿಂದೂ ವಿರೋಧಿ ಕೇಜ್ರಿವಾಲ್ ಗೋ ಬ್ಯಾಕ್” ಎಂಬ ಸಾಲುಗಳನ್ನು ಬರೆಯಲಾಗಿತ್ತು.

ಇದನ್ನೂ ಓದಿರಿ: ಕೋಲಾರ: ದೇಗುಲದಲ್ಲಿ ಪೂಜೆ ಸಲ್ಲಿಸಿದ್ದಕ್ಕೆ ದಲಿತನ ಮೇಲೆ ಹಲ್ಲೆ; ಎಫ್‌ಐಆರ್‌

ಅಕ್ಟೋಬರ್ 5ರಂದು ಸುಮಾರು 10,000 ಹಿಂದೂಗಳು ಬೌದ್ಧ ಧರ್ಮವನ್ನು ಸ್ವೀಕರಿಸಿದ್ದರು. ಅದರಲ್ಲಿ ರಾಜೇಂದ್ರ ಪಾಲ್‌ ಪಾಲ್ಗೊಂಡಿದ್ದರು. ವಿಷ್ಣು, ಶಿವ, ಬ್ರಹ್ಮ, ರಾಮ, ಕೃಷ್ಣ, ಗೌರಿ ಮತ್ತು ಗಣಪತಿಯಂತಹ ಹಿಂದೂ ದೇವತೆಗಳನ್ನು ಪ್ರಾರ್ಥಿಸುವುದಿಲ್ಲ ಎಂದು ಕಾರ್ಯಕ್ರಮದಲ್ಲಿದ್ದವರು ಪ್ರತಿಜ್ಞೆ ಮಾಡಿದ್ದರು. ರಾಜೇಂದ್ರ ಅವರು ಆ ವೇಳೆ ಹಾಜರಿದ್ದರು. ರಾಜೇಂದ್ರ ಅವರ ರಾಜೀನಾಮೆಯ ಬಳಿಕ ಬೌದ್ಧಧಮ್ಮಕ್ಕೆ ಮರಳುವ ಚರ್ಚೆಗಳು ಮುನ್ನೆಲೆಗೆ ಬಂದಿವೆ.

22 ಪ್ರತಿಜ್ಞೆಗಳು

1956ರಲ್ಲಿ ನಾಗ್ಪುರದ ದೀಕ್ಷಾ ಭೂಮಿಯಲ್ಲಿ ಡಾ.ಅಂಬೇಡ್ಕರ್ ಅವರು ತಮ್ಮ 3,65,000 ಅನುಯಾಯಿಗಳೊಂದಿಗೆ ಹಿಂದೂ ಧರ್ಮವನ್ನು ತೊರೆದರು. ಈ ಸಂದರ್ಭದಲ್ಲಿ ಅವರು 22 ಪ್ರತಿಜ್ಞೆಗಳನ್ನು ಸ್ವೀಕರಿಸಿದ್ದರು. ಅವುಗಳು ಹೀಗಿವೆ.

  1. ನನಗೆ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರಲ್ಲಿ ನಂಬಿಕೆ ಇಲ್ಲ ಅಥವಾ ನಾನು ಅವರನ್ನು ಪೂಜಿಸುವುದಿಲ್ಲ.
  2. ದೇವರ ಅವತಾರವೆಂದು ನಂಬಲಾದ ರಾಮ ಮತ್ತು ಕೃಷ್ಣರಲ್ಲಿ ನನಗೆ ನಂಬಿಕೆ ಇಲ್ಲ ಅಥವಾ ನಾನು ಅವರನ್ನು ಪೂಜಿಸುವುದಿಲ್ಲ.
  3. ಗೌರಿ, ಗಣಪತಿ ಮತ್ತು ಇತರ ಹಿಂದೂಗಳ ದೇವರುಗಳಲ್ಲಿ ನನಗೆ ನಂಬಿಕೆ ಇಲ್ಲ ಅಥವಾ ನಾನು ಅವರನ್ನು ಪೂಜಿಸುವುದಿಲ್ಲ.
  4. ನನಗೆ ದೇವರ ಅವತಾರದಲ್ಲಿ ನಂಬಿಕೆ ಇಲ್ಲ.
  5. ಭಗವಾನ್ ಬುದ್ಧ ವಿಷ್ಣುವಿನ ಅವತಾರ ಎಂದು ನಾನು ನಂಬುವುದಿಲ್ಲ. ಇದು ಸಂಪೂರ್ಣ ಹುಚ್ಚುತನ ಮತ್ತು ಸುಳ್ಳಿನ ಪ್ರಚಾರವೆಂದು ನಂಬುತ್ತೇನೆ.
  6. ನಾನು ‘ಶ್ರಾದ್ಧ’ವನ್ನು ಮಾಡುವುದಿಲ್ಲ ಅಥವಾ ‘ಪಿಂಡ-ದಾನ’ ನೀಡುವುದಿಲ್ಲ.
  7. ನಾನು ಬುದ್ಧನ ತತ್ವಗಳು ಮತ್ತು ಬೋಧನೆಗಳನ್ನು ಉಲ್ಲಂಘಿಸುವ ರೀತಿಯಲ್ಲಿ ವರ್ತಿಸುವುದಿಲ್ಲ.
  8. ನಾನು ಬ್ರಾಹ್ಮಣರಿಂದ ಯಾವುದೇ ಸಮಾರಂಭಗಳನ್ನು ಮಾಡಿಸುವುದಿಲ್ಲ.
  9. ನಾನು ಮನುಷ್ಯ ಸಮಾನತೆಯನ್ನು ನಂಬುತ್ತೇನೆ.
  10. ನಾನು ಸಮಾನತೆಯನ್ನು ತರಲು ಪ್ರಯತ್ನಿಸುತ್ತೇನೆ.
  11. ನಾನು ಬುದ್ಧನ ‘ಉದಾತ್ತವಾದ ಎಂಟು ಮಾರ್ಗಗಳನ್ನು’ ಅನುಸರಿಸುತ್ತೇನೆ.
  12. ನಾನು ಬುದ್ಧನು ಸೂಚಿಸಿದ ‘ಪರಮಿತಗಳನ್ನು’ ಅನುಸರಿಸುತ್ತೇನೆ.
  13. ನಾನು ಎಲ್ಲಾ ಜೀವಿಗಳ ಬಗ್ಗೆ ಸಹಾನುಭೂತಿ, ಪ್ರೀತಿ ಮತ್ತು ದಯೆಯನ್ನು ಹೊಂದಿದ್ದೇನೆ, ಅವುಗಳನ್ನು ರಕ್ಷಿಸುತ್ತೇನೆ.
  14. ನಾನು ಕದಿಯುವುದಿಲ್ಲ.
  15. ನಾನು ಸುಳ್ಳು ಹೇಳುವುದಿಲ್ಲ.
  16. ನಾನು ವಿಷಯಲೋಲುಪತೆಯ ಪಾಪಗಳನ್ನು ಮಾಡುವುದಿಲ್ಲ.
  17. ನಾನು ಮದ್ಯ, ಡ್ರಗ್ಸ್ ಮುಂತಾದ ಅಮಲು ಪದಾರ್ಥಗಳನ್ನು ತೆಗೆದುಕೊಳ್ಳುವುದಿಲ್ಲ.
  18. ನಾನು ಉದಾತ್ತವಾದ ಎಂಟು ಮಾರ್ಗಗಳನ್ನು ಅನುಸರಿಸಲು ಪ್ರಯತ್ನಿಸುತ್ತೇನೆ. ದೈನಂದಿನ ಜೀವನದಲ್ಲಿ ಸಹಾನುಭೂತಿ ಮತ್ತು ಪ್ರೀತಿಯ ದಯೆಯನ್ನು ಅಭ್ಯಾಸ ಮಾಡುತ್ತೇನೆ.
  19. ಮಾನವೀಯತೆಗೆ ಹಾನಿಕಾರಕವಾದ ಮತ್ತು ಮಾನವೀಯತೆಯ ಪ್ರಗತಿ ಮತ್ತು ಅಭಿವೃದ್ಧಿಗೆ ಅಡ್ಡಿಯುಂಟುಮಾಡುವ ಹಿಂದೂ ಧರ್ಮವನ್ನು ನಾನು ತ್ಯಜಿಸುತ್ತೇನೆ. ಏಕೆಂದರೆ ಅದು ಅಸಮಾನತೆಯನ್ನು ಆಧರಿಸಿದೆ. ಬೌದ್ಧ ಧರ್ಮವನ್ನು ನನ್ನ ಧರ್ಮವಾಗಿ ಸ್ವೀಕರಿಸುತ್ತೇನೆ.
  20. ಬುದ್ಧನ ಧಮ್ಮ ಒಂದೇ ನಿಜವಾದ ಧರ್ಮ ಎಂದು ನಾನು ದೃಢವಾಗಿ ನಂಬುತ್ತೇನೆ.
  21. ನನಗೆ ಪುನರ್ಜನ್ಮವಿದೆ ಎಂದು ನಾನು ನಂಬುತ್ತೇನೆ.
  22. ನಾನು ಇನ್ನು ಮುಂದೆ ಬುದ್ಧನ ತತ್ವಗಳು, ಬೋಧನೆಗಳ ಪ್ರಕಾರ ಮತ್ತು ಅವನ ಧಮ್ಮದ ಪ್ರಕಾರ ನನ್ನ ಜೀವನವನ್ನು ನಡೆಸುತ್ತೇನೆ ಎಂದು ನಾನು ಗಂಭೀರವಾಗಿ ಘೋಷಿಸುತ್ತೇನೆ ಮತ್ತು ದೃಢೀಕರಿಸುತ್ತೇನೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...