Homeಮುಖಪುಟತಮಿಳುನಾಡು: ಕೊರೊನಾಗೆ ಕಾಂಗ್ರೆಸ್ ಅಭ್ಯರ್ಥಿ ಮಾಧವ ರಾವ್ ಬಲಿ, ಸ್ಟಾಲಿನ್ ಸಂತಾಪ

ತಮಿಳುನಾಡು: ಕೊರೊನಾಗೆ ಕಾಂಗ್ರೆಸ್ ಅಭ್ಯರ್ಥಿ ಮಾಧವ ರಾವ್ ಬಲಿ, ಸ್ಟಾಲಿನ್ ಸಂತಾಪ

- Advertisement -
- Advertisement -

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಶ್ರೀವಿಲ್ಲಿಪುಥೂರು ಕ್ಷೇತ್ರದಿಂದ ಸ್ಪರ್ಧಿಸಿದ ತಮಿಳುನಾಡಿನ ಕಾಂಗ್ರೆಸ್ ಅಭ್ಯರ್ಥಿ ಪಿ.ಎಸ್.ಡಬ್ಲ್ಯೂ ಮಾಧವ ರಾವ್ ಕೊರೊನಾ ಸೋಂಕಿನಿಂದ ಮೃತ ಪಟ್ಟಿದ್ದಾರೆ. ಮಾಧವ ರಾವ್ ಅವರು ಕಳೆದ ತಿಂಗಳು ಕೊರೊನಾ ಸೋಂಕಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು (ಭಾನುವಾರ) ನಿಧನರಾಗಿದ್ದಾರೆ.

ಏಪ್ರಿಲ್ 6 ರಂದು ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ನಡೆದಿದೆ. ಪಿ.ಎಸ್.ಡಬ್ಲ್ಯೂ ಮಾಧವ ರಾವ್, ಚುನಾವಣೆಯ ನಂತರ ನಿಧನರಾಗಿರುವುದರಿಂದ ಯಾವುದೇ ಮರು-ಮತದಾನ ಇರುವುದಿಲ್ಲ. ಆದರೆ, ವಿರುಧುನಗರ ಜಿಲ್ಲೆಯ ತಮ್ಮ ಶ್ರೀವಿಲ್ಲಿಪುಥೂರು ಕ್ಷೇತ್ರದಿಂದ ಅವರು ಗೆಲುವು ಪಡೆದರೆ ಉಪಚುನಾವಣೆ ನಡೆಯಲಿದೆ.

ಇದನ್ನೂ ಓದಿ: ತೆಲಂಗಾಣ: ಹೊಸ ಪಕ್ಷ ಪ್ರಾರಂಭಿಸಲಿರುವ ಆಂಧ್ರ ಸಿಎಂ ಜಗನ್ ಸಹೋದರಿ ಶರ್ಮಿಳಾ

ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ತಮಿಳುನಾಡು ಮತ್ತು ಪುದುಚೇರಿಯ ಉಸ್ತುವಾರಿ ಕಾರ್ಯದರ್ಶಿ ಸಂಜಯ್ ದತ್ ತಮ್ಮ ಟ್ವಿಟ್ಟರ್‌ನಲ್ಲಿ “ಕೊರೊನಾ ಸೋಂಕಿನಿಂದ ತಮಿಳುನಾಡಿನ ಕಾಂಗ್ರೆಸ್ ನಾಯಕ ಮತ್ತು ಶ್ರೀವಿಲ್ಲಿಪುಥೂರ್ ವಿಧಾನಸಭಾದ ಕಾಂಗ್ರೆಸ್ ಅಭ್ಯರ್ಥಿ ಮಾಧವ ರಾವ್ ಅವರ ನಿಧನರಾದ ಸುದ್ದಿ ತಿಳಿದುಬಂದಿದೆ. ಅವರ ಕುಟುಂಬಕ್ಕೆ ನಮ್ಮ ಸಂತಾಪಗಳು. ಈ ದುಃಖದ ಸಮಯದಲ್ಲಿ ನಾವು ಅವರೊಂದಿಗೆ ನಿಲ್ಲುತ್ತೇವೆ. ಮಾಧವ್ ರಾವ್ ಅವರ ಆತ್ಮವು ಶಾಂತಿಯಿಂದ ವಿಶ್ರಾಂತಿ ಪಡೆಯಲಿ ಎಂದು ಪ್ರಾರ್ಥಿಸುತ್ತೇವೆ” ಎಂದಿದ್ದಾರೆ.

ಡಿಎಂಕೆ ನಾಯಕ ಸ್ಟಾಲಿನ್ ಕೂಡ ಮಾಧವ ರಾವ್ ಸಾವಿಗೆ ಸಂತಾಪ ಸೂಚಿಸಿದ್ದಾರೆ. ‘ಶ್ರೀವಿಲ್ಲಿಪುಥೂರ್ ಕಾಂಗ್ರೆಸ್ ಅಭ್ಯರ್ಥಿ ಮಾಧವ ರಾವ್ ಕೊರೊನಾದಿಂದ  ಮೃತಪಟ್ಟಿದ್ದಾರೆ ಎಂಬ ದುರಂತ ಸುದ್ದಿ ತಿಳಿದು ನಾನು ತುಂಬಾ ಆಘಾತಕ್ಕೊಳಗಾಗಿದ್ದೇನೆ ಮತ್ತು ದುಃಖಿತನಾಗಿದ್ದೇನೆ’ ಎಂದಿದ್ದಾರೆ. “ತಮಿಳುನಾಡು ವಿಧಾನಸಭೆಗೆ ವಿಧಾನಸಭೆಯ ಸದಸ್ಯರಾಗಿ ಪ್ರವೇಶಿಸಬೇಕಿದ್ದ ವ್ಯಕ್ತಿಯ ಹಠಾತ್ ನಿಧನವು ಆ ಕ್ಷೇತ್ರದ ಜನರಿಗೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟ” ಎಂದು ಹೇಳಿದ್ದಾರೆ.

ತಮಿಳುನಾಡಿನ 38 ಜಿಲ್ಲೆಗಳಲ್ಲಿ 234 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಏಪ್ರಿಲ್ 6 ರಂದು ನಡೆಯಿತು. ಮೇ 2 ರಂದು ಮತ ಎಣಿಕೆ ನಡೆಯಲಿದೆ. ಶ್ರೀವಿಲ್ಲಿಪುಥೂರು ಕ್ಷೇತ್ರದಿಂದ ಮೃತ ಮಾಧವ ರಾವ್ ಅವರು ಗೆಲುವು ಪಡೆದರೆ ಆ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯಲಿದೆ.


ಇದನ್ನೂ ಓದಿ: ಬೀದಿಬದಿ ವಾಸಿಸುವ ಬಾಲಕಿಯರಿಗೆ ಸಿಎಎ, ಎನ್‌ಆರ್‌ಸಿ ಪಾಠ ಮಾಡಿದ್ದಕ್ಕೆ ದೇಶದ್ರೋಹ ಪ್ರಕರಣ ದಾಖಲು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಧಾನಿ ಮೋದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ನಾಗರಿಕ ಸಂಸ್ಥೆಗಳು, ಕಾಳಜಿಯುಳ್ಳ ನಾಗರಿಕರಿಂದ ಚುನಾವಣಾ ಆಯೋಗಕ್ಕೆ...

0
ರಾಜಸ್ಥಾನದಲ್ಲಿ ಭಾನುವಾರ (ಏ.21) ನಡೆದ ಚುನಾವಣಾ ರ‍್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸುಳ್ಳು ಸುದ್ದಿ ಮತ್ತು ದ್ವೇಷ ಹರಡಿದ್ದಾರೆ. ಈ ಹಿನ್ನೆಲೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ನಾಗರಿಕ ಸಂಸ್ಥೆಗಳು...