Homeಮುಖಪುಟತೆಲಂಗಾಣ: ಹೊಸ ಪಕ್ಷ ಪ್ರಾರಂಭಿಸಲಿರುವ ಆಂಧ್ರ ಸಿಎಂ ಜಗನ್ ಸಹೋದರಿ ಶರ್ಮಿಳಾ

ತೆಲಂಗಾಣ: ಹೊಸ ಪಕ್ಷ ಪ್ರಾರಂಭಿಸಲಿರುವ ಆಂಧ್ರ ಸಿಎಂ ಜಗನ್ ಸಹೋದರಿ ಶರ್ಮಿಳಾ

- Advertisement -
- Advertisement -

ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈ.ಎಸ್.ರಾಜಶೇಖರ ರೆಡ್ಡಿ ಅವರ ಪುತ್ರಿ ವೈ.ಎಸ್.ಶರ್ಮಿಳಾ ರೆಡ್ಡಿ ತೆಲಂಗಾಣದಲ್ಲಿ ತಮ್ಮ ರಾಜಕೀಯ ಪಕ್ಷವನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದಾರೆ. ತಮ್ಮ ತಂದೆಯ ಜನ್ಮ ದಿನವಾದ ಜುಲೈ 8 ರಂದು ತೆಲಂಗಾಣದಲ್ಲಿ ಅಧಿಕೃತವಾಗಿ ಪಕ್ಷ ಘೋಷಿಸುವುದಾಗಿ ತಿಳಿಸಿದ್ದಾರೆ.

ವೈ.ಎಸ್.ಶರ್ಮಿಳಾ ಅವರ ನಿರ್ಧಾರವನ್ನು ಅವರ ತಾಯಿ ವೈ.ಎಸ್.ವಿಜಯಲಕ್ಷ್ಮಿ ಬೆಂಬಲಿಸಿದ್ದು, ತಮ್ಮ ಮಗಳು ತೆಲಂಗಾಣದ ಜನರ ಸೇವೆ ಮಾಡಲು ರಾಜಕೀಯ ಆಯ್ಕೆ ಮಾಡಿಕೊಂಡಿರುವುದಕ್ಕೆ ಸಂತೋಷವಾಗಿದೆ ಎಂದು ಹೇಳಿದ್ದಾರೆ. ಜೊತೆಗೆ ತನ್ನ ಮಗಳಿಗೆ ಆಕೆಯ ತಂದೆಯಂತೆಯೇ ಧೈರ್ಯವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇನ್ನು, ತೆಲಂಗಾಣದವರೆಗೆ ತಮ್ಮ ಪಕ್ಷವನ್ನು ವಿಸ್ತರಿಸಲು ಯೋಚಿಸಿರುವ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ, ತೆಲಂಗಾಣದಲ್ಲಿ ತಮ್ಮ ತಂಗಿಯ ರಾಜಕೀಯ ಯೋಜನೆಗಳಿಂದ ದೂರವಾಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಆಪರೇಷನ್ ಕಮಲ ಭೀತಿ: ಕಾಂಗ್ರೆಸ್ ಮೈತ್ರಿಕೂಟದ 20 ಅಭ್ಯರ್ಥಿಗಳು ಜೈಪುರ ರೆಸಾರ್ಟ್‌ಗೆ!

ವೈ.ಎಸ್.ರಾಜಶೇಖರ ರೆಡ್ಡಿ ಅವರ ಪುತ್ರಿ ವೈ.ಎಸ್.ಶರ್ಮಿಳಾ ರೆಡ್ಡಿ, ಅವರ ಪಕ್ಷದ ಹೆಸರು, ಲೋಗೊ, ಧ್ವಜ ಮತ್ತು ಸಿದ್ಧಾಂತವನ್ನು ಜುಲೈ 8 ರಂದು ಅನಾವರಣಗೊಳಿಸಲಾಗುವುದು ಎಂದು ಮಾಹಿತಿ ನೀಡಲಾಗಿದೆ. ಇನ್ನು 2023 ರಲ್ಲಿ ತೆಲಂಗಾಣದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.

ತೆಲಂಗಾಣದ ಆಡಳಿತರೂಢ ಪಕ್ಷ ತೆಲಂಗಾಣ ರಾಷ್ಟ್ರ ಸಮಿತಿ ಸರ್ಕಾರ 1.91 ಲಕ್ಷ ಉದ್ಯೋಗ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ಒತ್ತಾಯಿಸಿ, ಏಪ್ರಿಲ್ 15 ರಂದು ಶರ್ಮಿಳಾ ನಿರುದ್ಯೋಗಿ ಯುವಕರ ಪರವಾಗಿ ಮೂರು ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ. ಇದು ಸದ್ಯ ತೆಲಂಗಾಣದಲ್ಲಿ ರಾಜಕೀಯ ಚರ್ಚೆಯ ವಿಷಯವಾಗಿದೆ.

“ತೆಲಂಗಾಣಕ್ಕೆ ಬರಬೇಕಾದ ಒಂದು ಹನಿ ನೀರನ್ನು ಸಹ ಬೇರೆ ರಾಜ್ಯಕ್ಕೆ ಹೋಗಲು ನಾನು ಬಿಡುವುದಿಲ್ಲ” ಎಂದು ಶರ್ಮಿಳಾ ಸಂಕಲ್ಪ ರ್‍ಯಾಲಿಯಲ್ಲಿ ಹೇಳಿದ್ದಾರೆ. ಹಿಂದಿನ ಆಂಧ್ರಪ್ರದೇಶದ ತೆಲಂಗಾಣ ಮತ್ತು ಆಂಧ್ರ ಪ್ರದೇಶಗಳ ನಡುವೆ ನೀರು ವಿವಾದದ ವಿಷಯವಾಗಿದೆ.

ತೆಲಂಗಾಣದಲ್ಲಿ ಟಿಆರ್‌ಎಸ್ ಪ್ರಬಲ ರಾಜಕೀಯ ಪಕ್ಷವಾಗಿದೆ. ಕಾಂಗ್ರೆಸ್ ದುರ್ಬಲಗೊಂಡಿದೆ, ಮತ್ತು ಬಿಜೆಪಿ ಪ್ರತಿಪಕ್ಷದ ಜಾಗದಲ್ಲಿ ಸ್ಥಾನ ಗಿಟ್ಟಿಸಲು ಪ್ರಯತ್ನಿಸುತ್ತಿದೆ. ಈ ನಡುವೆ ಶರ್ಮಿಳಾ ರೆಡ್ಡಿಯವರ ಹೊಸ ರಾಜಕೀಯ ಪಕ್ಷ ಹುಟ್ಟಿಕೊಳ್ಳುತ್ತಿದೆ.


ಇದನ್ನೂ ಓದಿ: ರೈತರ ಮೇಲೆ ರಸಗೊಬ್ಬರ ದರ ಹೆಚ್ಚಳದ ಬರೆ: ಸರ್ಕಾರದ ಕ್ರಮ ಖಂಡಿಸಿದ ಎಸ್‌ಕೆಎಂ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸಂದೇಶ್‌ಖಾಲಿ ಘಟನೆಗಳ ಬಗ್ಗೆ ಬಿಜೆಪಿ ಸುಳ್ಳು ಸುದ್ದಿ ಹರಡುತ್ತಿದೆ: ಟಿಎಂಸಿ

0
ಸ್ಥಳೀಯ ಬಿಜೆಪಿ ನಾಯಕಿಯೊಬ್ಬರು ಟಿಎಂಸಿ ನಾಯಕರ ವಿರುದ್ಧ ಲೈಂಗಿಕ ದೌರ್ಜನ್ಯದ ದೂರು ನೀಡಲು ಖಾಲಿ ಪೇಪರ್‌ಗಳ ಮೇಲೆ ಅನೇಕ ಮಹಿಳೆಯರ ಸಹಿ ಹಾಕಿಸಿಕೊಂಡಿದ್ದಾರೆ ಎಂದು ಹೊಸದಾಗಿ ಹೊರಬಂದ ಹಲವಾರು ವೀಡಿಯೊಗಳ ನಂತರ ತೃಣಮೂಲ...