ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯಲ್ಲಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ 15 ವರ್ಷದ ಬಾಲಕಿಯನ್ನು ಗುಣಪಡಿಸುವ ನೆಪದಲ್ಲಿ ಓರ್ವ ನಕಲಿ ಸಾಧು ಕಿರುಕುಳ ನೀಡಿ, ಅತ್ಯಾಚಾರ ಮಾಡಿದ್ದಾನೆ ಎಂದು ಸ್ಥಳೀಯರು ಆತನನ್ನು ಥಳಿಸಿದ್ದಾರೆ.
ಉತ್ತರಪ್ರದೇಶದ ಹತ್ರಾಸ್ ಮೂಲದ 20 ವರ್ಷದ ಯುವತಿಯ ಮೇಲೆ ನಡೆದ ಕ್ರೂರ ಚಿತ್ರಹಿಂಸೆ ಮತ್ತು ಸಾಮೂಹಿಕ ಅತ್ಯಾಚಾರದ ಬಗ್ಗೆ ದೇಶದಾದ್ಯಂತ ಹೆಚ್ಚಿರುವ ಆಕ್ರೋಶದ ನಡುವೆ ಸಾರ್ವಜನಿಕರ ಕೋಪವು ಈ ರೀತಿ ಹೊರಬಂದಿದೆ.
ಇದನ್ನೂ ಓದಿ: ಯುಪಿ ಸಾಧುಗಳ ಹತ್ಯೆಯನ್ನು ಕೋಮುವಾದೀಕರಿಸಬೇಡಿ: ಯೋಗಿಗೆ ಉದ್ಧವ್ ಪಾಠ
ಮಾನಸಿಕ ಅಸ್ವತ್ತತೆಯಿಂದ ಬಾಲಕಿಯನ್ನು ಪೋಷಕರು ಆ ವ್ಯಕ್ತಿಯ ಬಳಿಗೆ ಕರೆದೊಯ್ದರು. ನಕಲಿ ಸಾಧು ಮಾಂತ್ರಿಕ ಶಕ್ತಿಯನ್ನು ಹೊಂದಿರುವುದಾಗಿ ನಟಿಸಿದ್ದು, ಅವಳನ್ನು ಗುಣಪಡಿಸುವುದಾಗಿ ಹೇಳಿಕೊಂಡಿದ್ದಾನೆ. ಬಾಲಕಿಯ ಮೇಲೆ ಈ ಶೋಷಣೆ ಕನಿಷ್ಠ ಮೂರು ತಿಂಗಳಿನಿಂದ ನಡೆಯುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ ಎಂಬುದಾಗಿ ಎನ್‌ಡಿಟಿವಿ ವರದಿ ಮಾಡಿದೆ.
ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಇಬ್ಬರು ಸಾಧುಗಳ ಹತ್ಯೆ: ಆರೋಪಿ ಬಂಧನ
ಬಾಲಕಿಯ ಇತ್ತೀಚೆಗೆ ಹೊಟ್ಟೆಯಲ್ಲಿ ನೋವು ಕಾಣಿಸಿಕೊಂಡಿದ್ದು, ನಂತರ ವೈದ್ಯರ ಬಳಿಗೆ ಕರೆದೊಯ್ಯಲಾಯಿತು. ಅಲ್ಲಿ, ಆಕೆ ಗರ್ಭಿಣಿ ಎಂದು ತಿಳಿದುಬಂದಿದೆ.
ಪ್ರತ್ಯೇಕವಾದ ಕೋಣೆಯೊಳಗೆ ಕರೆದುಕೊಂಡು ಹೋಗಿ ಧ್ಯಾನ ಮಾಡುವ ಹೆಸರಿನಲ್ಲಿ ಬಾಲಕಿಗೆ ಮಾದಕ ದ್ರವ್ಯ ನೀಡಿ ದುರ್ಬಳಕೆ ಮಾಡಿಕೊಂಡಿದ್ದಾನೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇದನ್ನೂ ಓದಿ: ಕೇದಾರನಾಥದಲ್ಲಿ ‘ಸಾಧು’ ಮೋದಿ : ಅಯ್ಯೋ ಶಿವನ ಗುಹೆಯೊಳಗೆ ಧ್ಯಾನ!
ಘಟನೆ ತಿಳಿದ ಮಹಿಳಾ ಕಾರ್ಯಕರ್ತರು ಮತ್ತು ಸ್ಥಳೀಯರು ಸಾಧುವಿನ ಮನೆಗೆ ತೆರಳಿ ಚೆನ್ನಾಗಿ ಥಳಿಸಿದ್ದಾರೆ. ಆತ ರಸ್ತೆಯಲ್ಲಿ ಓಡುತ್ತಿರುವುದು ಮತ್ತು ಜನರು ಬೆನ್ನಟ್ಟಿ ಅವನನ್ನು ಹೊಡೆಯುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ತರುವಾಯ ಪೊಲೀಸರು ಆತನನ್ನು ಬಂಧಿಸಿ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದರು. ಆ ನಕಲಿ ಸಾಧುವಿನ ವಿರುದ್ಧ ವಂಚನೆ ಮತ್ತು ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ: ಚಾನೆಲ್ ಚಿತ್ರಾನ್ನ ಕಾಶಿಯ ಕೊತ್ವಾಲ, ಪ್ರತ್ಯಕ್ಷರಾದ ಸಾಧುಗಳು, ಖಬರ್ ದಾರ್ ಮೆಸೇಜ್


