ಈ ವರ್ಷವೂ GDP ಕುಸಿತ; ಸ್ವಾತಂತ್ರ್ಯಾನಂತರದಲ್ಲಿ ಇದು ಅತ್ಯಂತ ಕಳಪೆ ಅಭಿವೃದ್ಧಿ ದರ: IMF

ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದ ತೀವ್ರವಾಗಿ ತತ್ತರಿಸಿರುವ ಭಾರತದ ಆರ್ಥಿಕತೆಯು ಈ ವರ್ಷ ಶೇಕಡಾ 10.3 ರಷ್ಟು ಭಾರಿ ಪ್ರಮಾಣದಲ್ಲಿ ಸಂಕುಚಿತಗೊಳ್ಳುವ ನಿರೀಕ್ಷೆಯಿದ್ದು, ಸ್ವಾತಂತ್ರ್ಯಾ ನಂತರದ ಭಾರತದಲ್ಲಿ ಇದು ಅತ್ಯಂತ ಕೆಟ್ಟ ಅಭಿವೃದ್ಧಿ ದರ ಇದಾಗಲಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ಮಂಗಳವಾರ ತಿಳಿಸಿದೆ.

ಇದನ್ನೂ ಓದಿ: ಆರ್ಥಿಕತೆ ಮೇಲೆತ್ತಲು ಹರಸಾಹಸ: ಸರ್ಕಾರಿ ನೌಕರರಿಗೆ ಹಬ್ಬದ ಮುಂಗಡ ನೀಡಲು ಮುಂದಾದ ಕೇಂದ್ರ ಸರ್ಕಾರ

2021ರ ಮಾರ್ಚ್ 31ಕ್ಕೆ ಅಂತ್ಯವಾಗುವ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಶೇ 10.3ರಷ್ಟು ಕುಗ್ಗಲಿದ್ದು, ಅಭಿವೃದ್ಧಿಶೀಲ ರಾಷ್ಟ್ರಗಳ ಜಿಡಿಪಿಯಲ್ಲಿ ಇದು ಅತ್ಯಂತ ದೊಡ್ಡ ಇಳಿಕೆಯಾಗಲಿದೆ ಎಂದು ನ್ಯಾಷನಲ್ ಹೆರಾಲ್ಡ್‌ ವರದಿ ಮಾಡಿದೆ.

ಭಾರತ್ ಜಿಡಿಪಿ ಶೇ 1.9ರಷ್ಟು ಅಭಿವೃದ್ಧಿಯಾಗಲಿದೆ ಎಂದು ಏಪ್ರಿಲ್‌ನಲ್ಲಿ IMF ಅಂದಾಜಿಸಿತ್ತು. ಆದರೆ ಜೂನ್‌ನಲ್ಲಿ ಇದನ್ನು ಪರಿಷ್ಕರಿಸಿ, ಜಿಡಿಪಿಯಲ್ಲಿ 4.5ರಷ್ಟು ಕುಸಿತ ಕಾಣಲಿದೆ ಎಂದು ಹೇಳಿತ್ತು. ಆದರೆ ಈಗ 2021ರಲ್ಲಿ ಶೇ 5.2ಕ್ಕೆ ಏರುತ್ತದೆ ಎಂದು ವರದಿ ಹೇಳಿದೆ. 2019 ರಲ್ಲಿ ಭಾರತದ ಬೆಳವಣಿಗೆಯ ದರ ಶೇ 4.2 ರಷ್ಟಿತ್ತು. ಕಳೆದ ವಾರ, ವಿಶ್ವ ಬ್ಯಾಂಕ್ ಭಾರತದ ಜಿಡಿಪಿ ಈ ಹಣಕಾಸು ವರ್ಷದಲ್ಲಿ ಶೇ 9.6 ರಷ್ಟು ಕುಗ್ಗುವ ನಿರೀಕ್ಷೆಯಿದೆ ಎಂದು ಹೇಳಿತ್ತು.

ಇದನ್ನೂ ಓದಿ: ಭಾರತವು ವಿಶ್ವದ ಆರ್ಥಿಕತೆಯಲ್ಲಿ 3ನೇ ಸ್ಥಾನಕ್ಕೆ ಬರಲು ಇನ್ನೂ 30 ವರ್ಷ ಬೇಕು: ಅಧ್ಯಯನ

ಅಮೆರಿಕದ ಆರ್ಥಿಕತೆಯು 2020 ರಲ್ಲಿ ಶೇಕಡಾ 5.8 ರಷ್ಟು ಕುಗ್ಗುತ್ತದೆ ಮತ್ತು ಮುಂದಿನ ವರ್ಷ ಶೇಕಡಾ 3.9 ರಷ್ಟು ಏರಿಕೆಯಾಗಲಿದೆ. ಪ್ರಮುಖ ಆರ್ಥಿಕತೆ ಹೊಂದಿರುವ ದೇಶಗಳಲ್ಲಿ, 2020 ರಲ್ಲಿ ಶೇಕಡಾ 1.9 ರಷ್ಟು ಸಕಾರಾತ್ಮಕ ಬೆಳವಣಿಗೆಯನ್ನು ತೋರಿಸಿರುವ ಏಕೈಕ ದೇಶ ಚೀನಾ ಎಂದು IMF ತಿಳಿಸಿದೆ.

“ಭಾರತದ ಪರಿಸ್ಥಿತಿ ಹಿಂದೆಂದಿಗಿಂತಲೂ ತುಂಬಾ ಕೆಟ್ಟದಾಗಿದೆ” ಎಂದು ದಕ್ಷಿಣ ಏಷ್ಯಾದ ವಿಶ್ವಬ್ಯಾಂಕ್ ಮುಖ್ಯ ಅರ್ಥಶಾಸ್ತ್ರಜ್ಞ ಹ್ಯಾನ್ಸ್ ಟಿಮ್ಮರ್ ಕಳೆದ ವಾರ ಕಾನ್ಫರೆನ್ಸ್ ಕರೆಯೊಂದರಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಇದನ್ನೂ ಓದಿ: ಲಾಕ್‌ಡೌನ್‌ನಿಂದಾಗಿ ಆರ್ಥಿಕತೆ ನೆಲಕಚ್ಚಿದ್ದಾಗ ಅಂಬಾನಿ ಪ್ರತಿ ಗಂಟೆಗೆ ಸಂಪಾದಿಸಿದ್ದು ಎಷ್ಟು ಗೊತ್ತೇ?

ಅಭಿವೃದ್ಧಿಶೀಲ ರಾಷ್ಟ್ರಗಳಾದ ಇಟಲಿ ಮತ್ತು  ಸ್ಪೇನ್ ಬಳಿಕದ ಅತ್ಯಂತ ಬೃಹತ್ ಜಿಡಿಪಿ ಕುಸಿತವನ್ನು ಭಾರತ ದಾಖಲಿಸಲಿದೆ. ಬ್ರಿಕ್ಸ್‌ ಗುಂಪಿನ ರಾಷ್ಟ್ರಗಳಲ್ಲಿ ಬ್ರೆಜಿಲ್‌ನ ಜಿಡಿಪಿ ಶೇ. 5.8, ರಷ್ಯಾದ ಜಿಡಿಪಿ ಶೇ. 4.1, ದ.ಆಫ್ರಿಕಾದ ಜಿಡಿಪಿ ಶೇ. 8ರಷ್ಟು ಕುಸಿತ ಕಾಣಲಿದೆ.

ಪ್ರಸಕ್ತ ವರ್ಷದ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿಯು ಶೇ -23ಕ್ಕೆ ಕುಸಿದಿತ್ತು. ಕೇಂದ್ರ ಸರ್ಕಾರದ ಅಸಮರ್ಪಕ ನೀತಿಗಳಿಂದ ಹಿಡಿದು, ಕೊರೊನಾ ಕಾಲದಲ್ಲಿ ಸರಿಯಾದ ನಿರ್ವಹಣೆ ಮತ್ತು ಮುನ್ನೆಚ್ಚರಿಕೆಯಿಲ್ಲದಿರುವುದೇ ಇದಕ್ಕೆ ಕಾರಣ ಎಂದು ಆರೋಪಿಸಲಾಗಿದೆ.


ಇದನ್ನೂ ಓದಿ: ಕೊರೊನಾ ಪ್ಯಾಕೇಜ್‌ ಅಸಮರ್ಪಕ, ದೇಶದ ಆರ್ಥಿಕತೆ ಕುಸಿಯುತ್ತಿದೆ: ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಹ್ಮಣ್ಯನ್‌ ಸ್ವಾಮಿ

Donate

ಈ ಲೇಖನ, ಈ ವೆಬ್‌ಸೈಟ್ ನಿಮಗೆ ಇಷ್ಟವಾಯಿತೇ? ನಿಮ್ಮ ಬೆಂಬಲ ಇದಕ್ಕೆ ಅಗತ್ಯ.

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

+ posts

LEAVE A REPLY

Please enter your comment!
Please enter your name here