Homeಅಂತರಾಷ್ಟ್ರೀಯಬೃಹತ್ ಪ್ರತಿಭಟನೆಗಳ ನಡುವೆ ತುರ್ತು ಪರಿಸ್ಥಿತಿ ಹೇರಿದ ಥೈಲ್ಯಾಂಡ್!

ಬೃಹತ್ ಪ್ರತಿಭಟನೆಗಳ ನಡುವೆ ತುರ್ತು ಪರಿಸ್ಥಿತಿ ಹೇರಿದ ಥೈಲ್ಯಾಂಡ್!

ಥೈಲ್ಯಾಂಡ್ ರಾಜ ಜರ್ಮನಿಯಲ್ಲಿ ವಾಸಿಸುತ್ತಿದ್ದು, ಇತ್ತೀಚೆಗೆ ಕೆಲವು ತಿಂಗಳಿನಿಂದ ಕೇವಲ ಒಂದು ದಿನ ಮಾತ್ರ ದೇಶಕ್ಕೆ ಭೇಟಿ ನೀಡಿದ್ದರು. ಈಗ ಶನಿವಾರ ಬ್ಯಾಂಕಾಕ್‌ಗೆ ಭೇಟಿ ನೀಡಿದ್ದರು.

- Advertisement -
- Advertisement -

ಪ್ರತಿಭಟನಾಕಾರರು ಗುರುವಾರ ಥೈಲ್ಯಾಂಡ್ ಪ್ರಧಾನಮಂತ್ರಿ ಕಛೇರಿಯ ಹೊರಗೆ ಭಾರಿ ಪ್ರಮಾಣದಲ್ಲಿ ಗುಂಪು ಸೇರಿದ್ದರಿಂದ ಮತ್ತು ರಾಜರ ಬೆಂಗಾವಲು ಮೇಲೆ ಮುತ್ತಿಗೆ ಹಾಕಿದ್ದರರಿಂದ ಅಲ್ಲಿನ ಸರ್ಕಾರ ರಾಜ್ಯದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಿದೆ. ಪೊಲೀಸರು ಮತ್ತು ಸೈನಿಕರು ವಿದ್ಯಾರ್ಥಿಗಳ ನೇತೃತ್ವದ ಪ್ರತಿಭಟನಾ ಆಂದೋಲನವನ್ನು ದಮನಿಸಲು ಪ್ರತಿಭಟನಾಕಾರರನ್ನು ಚದುರಿಸಿದ್ದಾರೆ.

ಮಾಜಿ ಜುಂಟಾ ನಾಯಕ ಪ್ರಧಾನ ಮಂತ್ರಿ ಪ್ರಯುತ್ ಚಾನ್-ಓಚಾ ಮತ್ತು ಹೊಸ ಸಂವಿಧಾನವನ್ನು ಉಚ್ಚಾಟಿಸಲು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ರಾಜ ಮಹಾ ವಾಜಿರಲಾಂಗ್‌ಕಾರ್ನ್‌ನ ರಾಜಪ್ರಭುತ್ವಕ್ಕೆ ಸುಧಾರಣೆಗಳನ್ನೂ ತರಬೇಕೆಂದು ಅವರು ಒತ್ತಾಯಿಸಿದ್ದಾರೆ ಎಂದು ರಾಜ್ಯ ದೂರದರ್ಶನ ವರದಿ ಮಾಡಿದೆ.

ಇದನ್ನೂ ಓದಿ: ಪಕ್ಷಾಂತರದಿಂದ ಆರ್‌ಆರ್ ನಗರ ಉಪಚುನಾವಣೆ: ರಾಜಕೀಯ ದಿಕ್ಕು ಬದಲಿಸುತ್ತಾ?

ಥೈಲ್ಯಾಂಡ್‌ನ ರಾಯಲ್ ಗೆಜೆಟ್ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಪ್ರಕಟಣೆಯಲ್ಲಿ, ರಾಜ ಮಹಾ ವಾಜಿರಲಾಂಗ್‌ಕಾರ್ನ್ ಅವರ ಕುಟುಂಬದ ಸದಸ್ಯರು ಬರುತ್ತಿದ್ದಾಗ ಪ್ರತಿಭಟನಾಕಾರರು, ಮುತ್ತಿಗೆ ಹಾಕಿದ್ದರಿಂದ ರಾಷ್ಟ್ರೀಯ ಭದ್ರತೆ ಮತ್ತು ಆರ್ಥಿಕ ಪರಿಗಣನೆಗಳ ಕಾರಣದಿಂದಾಗಿ ಈ ತುರ್ತು ಪರಿಸ್ಥಿತಿಯ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರ ಹೇಳಿದೆ.

ಬುಧವಾರ, ಸುಮಾರು 10,000 ಸರ್ಕಾರಿ ವಿರೋಧಿ ಪ್ರತಿಭಟನಾಕಾರರು, ಥಾಯ್ ಸರ್ಕಾರದ ಸ್ಥಾನವಾದ ಸರ್ಕಾರಿ ಭವನಕ್ಕೆ ಮೆರವಣಿಗೆ ಹೊರಟಿದ್ದರು. ನಂತರ ಪ್ರಧಾನಿ ಪ್ರಯುತ್ ಚಾನ್-ಓಚಾ ತುರ್ತು ಪರಿಸ್ಥಿತಿಯನ್ನು ಘೋಷಿಸಿದರು. ಆದರೂ ಪ್ರತಿಭಟನಾಕಾರರು ಪೊಲೀಸ್ ಬ್ಯಾರಿಕೇಡ್‌ಗಳನ್ನು ಭೇದಿಸಿ ಕಟ್ಟಡವನ್ನು ಸುತ್ತುವರೆದು, ಪ್ರಯುತ್ ಚಾನ್-ಓಚಾ ರಾಜೀನಾಮೆ ನೀಡುವಂತೆ ಒತ್ತಾಯಿಸಿದರು.

ಇದನ್ನೂ ಓದಿ: ಆಂಧ್ರ ಮುಖ್ಯಮಂತ್ರಿಯನ್ನು ಹುದ್ದೆಯಿಂದ ಕೆಳಗಿಳಿಸುವಂತೆ ಸುಪ್ರೀಂನಲ್ಲಿ ಅರ್ಜಿ

ಈ ಕ್ರಮಕ್ಕೆ ಸಂಬಂಧಿಸಿದ ಎಲ್ಲಾ ಅಂತರರಾಷ್ಟ್ರೀಯ ಪ್ರಸಾರಗಳನ್ನು “ಟು ವಿಶನ್ಸ್” ಎಂದು ಕರೆಯಲ್ಪಡುವ ಥೈಲ್ಯಾಂಡ್‌ನ ಅತಿದೊಡ್ಡ ಕೇಬಲ್ ಆಪರೇಟರ್ ಸೆನ್ಸಾರ್ ಮಾಡಿರುವುದರಿಂದ ಅದಕ್ಕೆ ಸಂಬಂಧಿಸಿದ ಸುದ್ದಿಗಳು ಜನರಿಗೆ ತಲುಪುತ್ತಿಲ್ಲ.

“ಬ್ಯಾಂಕಾಕ್‌ನಲ್ಲಿ ಅನೇಕ ಗುಂಪುಗಳು ಅಕ್ರಮ ಸಾರ್ವಜನಿಕ ಸಭೆಗಳನ್ನು ಆಹ್ವಾನಿಸಿ ಪ್ರಚೋದನೆ ನೀಡಿವೆ. ರಾಜರ ವಾಹನದ ಮೇಲೆ ಪರಿಣಾಮ ಬೀರುವಂತೆ ವರ್ತಿಸಿದ್ದು, ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವಂತಹ ಕೆಲಸಗಳನ್ನು ಮಾಡಿದೆ. ಹಾಗಾಗಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಈ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ಮತ್ತು ತ್ವರಿತವಾಗಿ ಕೊನೆಗೊಳಿಸಲು ತುರ್ತು ಪರಿಸ್ಥಿತಿಯನ್ನು ಪರಿಚಯಿಸುವುದು ಅತ್ಯಂತ ಅವಶ್ಯಕವಾಗಿದೆ” ಎಂದು ರಾಜ್ಯ ದೂರದರ್ಶನದಲ್ಲಿ ಪ್ರಕಟಣೆ ಹೇಳಿದೆ.

ಇದನ್ನೂ ಓದಿ: ಗೌರಿ ಲಂಕೇಶ್ ಹತ್ಯೆ ಪ್ರಕರಣ ಸದ್ಯ ಯಾವ ಹಂತದಲ್ಲಿದೆ?

ಕಳೆದ 3 ತಿಂಗಳಿನಿಂದ ನಡೆಯುತ್ತಿರುವ ಸರ್ಕಾರದ ವಿರುದ್ಧದ ರ್ಯಾಲಿಗಳು ಉಲ್ಬಣಗೊಂಡನಂತರ ಸರ್ಕಾರ ಈ ಕ್ರಮವನ್ನು ಕೈಗೊಂಡು, ಕೆಲವು ಪ್ರತಿಭಟನಾ ನಾಯಕರನ್ನು ಇಂದು ಬಂಧಿಸಿದೆ.

ಥೈಲ್ಯಾಂಡ್ ರಾಜ ಜರ್ಮನಿಯಲ್ಲಿ ವಾಸಿಸುತ್ತಿದ್ದು, ಇತ್ತೀಚೆಗೆ ಕೆಲವು ತಿಂಗಳಿನಿಂದ ಕೇವಲ ಒಂದು ದಿನ ಮಾತ್ರ ದೇಶಕ್ಕೆ ಭೇಟಿ ನೀಡಿದ್ದರು. ಈಗ ಶನಿವಾರ ಬ್ಯಾಂಕಾಕ್‌ಗೆ ಭೇಟಿ ನೀಡಿದ್ದರು. ಆದರೆ ಅಲ್ಲಿನ ಪ್ರಜೆಗಳು ರಾಜ ಧೀರ್ಘಾವಧಿಯವರೆಗೆ ಇಲ್ಲಿಯೇ ಇರಬೇಕು ಎಂದು ಒತ್ತಾಯಿಸಿದ್ದಾರೆ.


ಇದನ್ನೂ ಓದಿ: ಉಪಚುನಾವಣೆ: 2 ವರ್ಷದಲ್ಲಿ BJP ಅಭ್ಯರ್ಥಿ ಮುನಿರತ್ನ ಆಸ್ತಿ ದುಪ್ಪಟ್ಟು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...