Homeಕರ್ನಾಟಕಸಂಘಪರಿವಾರ ಅಡ್ಡಿಪಡಿಸಿದ ‘ಜೊತೆಗಿರುವನು ಚಂದಿರ’ ನಾಟಕ ಕೈದಿಗಳ ಬಾಳಿಗೆ ಬೆಳಕಾಗಿದ್ದು ಹೀಗೆ...

ಸಂಘಪರಿವಾರ ಅಡ್ಡಿಪಡಿಸಿದ ‘ಜೊತೆಗಿರುವನು ಚಂದಿರ’ ನಾಟಕ ಕೈದಿಗಳ ಬಾಳಿಗೆ ಬೆಳಕಾಗಿದ್ದು ಹೀಗೆ…

ಜಯಂತ್ ಕಾಯ್ಕಿಣಿಯವರ ‘ಜೊತೆಗಿರುವನು ಚಂದಿರ’ ನಾಟಕ ಪ್ರದರ್ಶನಕ್ಕೆ ಸಂಘಪರಿವಾರದವರು ಅಡ್ಡಿಪಡಿಸಿ ವಿವಾದ ಎಬ್ಬಿಸಿದ್ದಾರೆ. ಆದರೆ ಈ ನಾಟಕ ಅನೇಕ ಕೈದಿಗಳ ಮನ ಪರಿವರ್ತನೆಗೆ ಕಾರಣವಾಗಿತ್ತು... (ಮುಂದೆ ಓದಿರಿ)

- Advertisement -
- Advertisement -

ಚಾಮರಾಜನಗರ ಜಿಲ್ಲೆಯ ನಂಜುಂಡಸ್ವಾಮಿ ಕೆರೆಹಳ್ಳಿಯವರು ಒಂದು ಕಾಲಕ್ಕೆ ‘ಮೂರೂವರೆ’ ಮರ್ಡರ್‌ ಎಂದೇ ಕುಖ್ಯಾತಿ ಪಡೆದವರು. ಅತ್ತೆ, ಭಾವ, ಭಾಮೈದ, ಹೆಂಡತಿ ವಿಚಾರವಾಗಿ ಗಲಾಟೆ ನಡೆದು, ತನಗೆ ಹೊಡೆಯಲು ಬಂದವನಿಂದ ಮಚ್ಚು ಕಿತ್ತುಕೊಂಡು ನಂಜುಂಡಸ್ವಾಮಿ ಪ್ರತಿದಾಳಿ ನಡೆಸಿದಾಗ ಅತಾಚುರ್ಯ ನಡೆದೇ ಬಿಟ್ಟಿತ್ತು. ‘ಮೂರೂವರೆ ಮರ್ಡರ್‌’ ಎಂಬ ಅಪಖ್ಯಾತಿ ಅವರ ತಲೆಗೆ ಕಟ್ಟಿತು. ಹೀಗೆ ಜೈಲು ಸೇರಿದ ನಂಜುಂಡಸ್ವಾಮಿ ಸನ್ನಡತೆಯ ಆಧಾರದಲ್ಲಿ ಹೊರಗಡೆ ಬಂದಾಗ ಮಾತ್ರ ಸಂಪೂರ್ಣ ಬದಲಾಗಿದ್ದರು. ರಂಗಭೂಮಿ ಹಾಗೂ ಟೆರ್‍ರಾಕೋಟ ಕಲಾಕೃತಿಗಳ ಕಲಾವಿದರಾಗಿ ಹೊಮ್ಮಿದ್ದರು.

ರಂಗಭೂಮಿ ಮೂಲಕ ಅನೇಕ ಕೈದಿಗಳ ಮನಪರಿವರ್ತನೆ ಮಾಡಿದ ಹೆಗ್ಗಳಿಕೆ ಮೈಸೂರು ರಂಗಾಯಣದ ಹಿರಿಯ ಕಲಾವಿದ ಹುಲುಗಪ್ಪ ಕಟ್ಟೀಮನಿಯವರಿಗೆ ಸಲ್ಲುತ್ತದೆ. 1999ರಿಂದ 2017ರವರೆಗೆ ಸುಮಾರು ಹದಿನೇಳು ವರ್ಷಗಳ ಕಾಲ ಮೈಸೂರು ಕೇಂದ್ರ ಕಾರಾಗೃಹದಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದ ನಂಜುಂಡಸ್ವಾಮಿ, ಸನ್ನಡತೆಯ ಆಧಾರದಲ್ಲಿ ಹೊರಬಂದಿದ್ದರ ಹಿಂದೆ ರಂಗಭೂಮಿ ಎಂಬ ದಾರಿದೀಪ, ಹುಲುಗಪ್ಪ ಕಟ್ಟೀಮನಿ ಎಂಬ ಮಹಾನ್‌ ಗುರು ಇದ್ದರು. ಹಲವಾರು ನಾಟಕಗಳನ್ನು ಕೈದಿಗಳಿಗೆ ಕಲಿಸಿದ್ದ ಹುಲುಗಪ್ಪ ಅವರು, ಈಗ ವಿವಾದದ ಕೇಂದ್ರ ಬಿಂದುವಾಗಿರುವ ‘ಜೊತೆಗಿರುವನು ಚಂದಿರ’ ನಾಟಕವನ್ನೂ ಕೈದಿಗಳಿಂದ ಪ್ರದರ್ಶನ ಮಾಡಿಸಿ ಯಶಸ್ಸಿಯಾಗಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಮೂರೂವರೆ ಮರ್ಡರ್‌ ಎಂದೇ ಕುಖ್ಯಾತಿ ಪಡೆದಿದ್ದ ನಂಜುಂಡಸ್ವಾಮಿ ಕೆರೆಹಳ್ಳಿ ಅವರು ರಂಗಭೂಮಿ ಹಾಗೂ ಟೆರ್‍ರಾಕೋಟ ಕಲಾಕೃತಿಯ ಕಲಾವಿದರಾಗಿ ಹೊರಹೊಮ್ಮಿ ಜೈಲಿನಿಂದ ಹೊರಬಂದಿದ್ದಾರೆ.

ಜೋಸೆಫ್‌ ಸ್ಟೀನ್‌ ಅವರ ‘ಪಿಡ್ಲರ್‌ ಆನ್‌ ದಿ ರೂಫ್‌’ ನಾಟಕವನ್ನು ಸಾಹಿತಿ, ಕಥೆಗಾರ ಜಯಂತ ಕಾಯ್ಕಿಣಿ ಅವರು ಕನ್ನಡಕ್ಕೆ ‘ಜೊತೆಗಿರುವನು ಚಂದಿರ’ ಎಂಬ ಹೆಸರಲ್ಲಿ ರೂಪಾಂತರ ಮಾಡಿದ್ದಾರೆ. ಆ ನಾಟಕ ಹಲವು ವರ್ಷಗಳಿಂದ ರಂಗಪ್ರದರ್ಶನಗೊಳ್ಳುತ್ತಲೇ ಇದೆ. ಕಳೆದ ಭಾನುವಾರ ಶಿವಮೊಗ್ಗದ ರಂಗಬೆಳಕು ತಂಡವು ಆನವಟ್ಟಿಯಲ್ಲಿ ಈ ನಾಟಕದ ಪ್ರದರ್ಶನ ಹಮ್ಮಿಕೊಂಡಿತ್ತು. ಈ ವೇಳೆ ಆರ್‌ಎಸ್‌ಎಸ್‌ ಮತ್ತು ಬಜರಂಗದಳದ ಮುಖಂಡರು (ಸಂಘ ಪರಿವಾರದ ಫ್ರಿಂಜ್‌ ಎಲಿಮೆಂಟ್‌ಗಳು) ಬಂದು ಗಲಾಟೆ ಮಾಡಿ ನಾಟಕವನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ. “ದೇಶದಲ್ಲಿ ಹಿಂದೂ- ಮುಸ್ಲಿಂ ಗಲಾಟೆ ನಡೆಯುತ್ತಿರುವಾಗ ಮುಸ್ಲಿಮರೇ ಪ್ರಧಾನವಾಗಿರುವ ಕಥಾವಸ್ತು ಇಟ್ಟುಕೊಂಡು ನಾಟಕ ಮಾಡಿರುವುದು ಬೇಸರದ ಸಂಗತಿ” ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಯಾವುದನ್ನೂ ಇವರು ಆಕ್ಷೇಪಾರ್ಹ ನಾಟಕ ಎನ್ನುತ್ತಿದ್ದಾರೋ ಅದೇ ನಾಟಕ ಅನೇಕ ಕೈದಿಗಳ ಬದುಕಿನಲ್ಲಿ ಬೆಳಕಾಗಿದೆ. ಹೊಸ ದಿಕ್ಕನ್ನು ತೋರಿದೆ.

‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ಕಲಾವಿದ ನಂಜುಂಡಸ್ವಾಮಿ ಕೆರೆಹಳ್ಳಿ,  “ರಂಗಭೂಮಿ ನನ್ನ ಬದುಕಿನಲ್ಲಿ ತಂದ ಬದಲಾವಣೆಯನ್ನು ನಾನೆಂದೂ ಮರೆಯುವುದಿಲ್ಲ. ಜೊತೆಗಿರುವನು ಚಂದಿರ ನಾಟಕದ- ಕಾಣದಿರದ ಹಾದಿಗಳಲಿ, ದೀಪವಿರದ ರಾತ್ರಿಗಳಲಿ, ಚಂದಿರ ನಮ್ಮ ಕೈಬಿಡದಿರಲಿ- ಹಾಡನ್ನು ಕೇಳುತ್ತಿದ್ದರೆ ನಾವು ಅತ್ತುಬಿಡುತ್ತಿದ್ದೆವು. ಕಿಡಿಗೇಡಿಗಳು ಈ ನಾಟಕದ ಬಗ್ಗೆ ಏನೋ ಹೇಳಿಬಿಡಬಹುದು. ಈ ನಾಟಕದ ಸಾಲುಗಳೇನು? ಆ ಮಾತಿನ ಅರ್ಥಗಳೇನು? ಎಂಬುದನ್ನು ತಿಳಿಯಬೇಕು. ಜಯಂತ ಕಾಯ್ಕಿಣಿಯವರು ಬರೆದಿರುವ ಮಾತುಗಳಂತೂ ಅದ್ಭುತವಾಗಿವೆ. ಹೊರ ಜಿಲ್ಲೆ, ಹೊರ ರಾಜ್ಯಗಳಿಗೆ ಹೋಗಿ ನಾಟಕ ಮಾಡಿದ್ದೆವು. ಕಾಯ್ಕಿಣಿಯವರೂ ಈ ನಾಟಕವನ್ನು ನೋಡಲು ಬಂದು ನಮ್ಮನ್ನು ಪ್ರೋತ್ಸಾಹಿಸಿದ್ದರು” ಎಂದು ನೆನೆದರು.

ಮಾಜಿ ಕೈದಿ ನಂಜುಂಡಸ್ವಾಮಿ

ವೀರಪ್ಪನ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು ಇಪ್ಪತ್ತು ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದವರು ಅಂಬುರಾಜ್‌. ‘ಮಾಜಿ ಜೀವಾವಧಿ ಕೈದಿ’ಯಾಗಿರುವ ಅವರು, ‘ರಂಗಭೂಮಿಯ ಸ್ಪರ್ಶ ಸಿಗದಿದ್ದರೆ ನಾನು ಟೆರರಿಸ್ಟ್‌ ಆಗುತ್ತಿದ್ದೆ’ ಎಂದು ಭಾವುಕವಾಗಿ ನುಡಿಯುತ್ತಾರೆ.

“ಯಾವುದೇ ಧರ್ಮದವರಾದರೂ ಈ ದೇಶದ ಮಣ್ಣಿನ ಬಗ್ಗೆ ಇರುವ ವಿಶ್ವಾಸವನ್ನು ತೋರಿಸುವ ನಾಟಕ- ಜೊತೆಗಿರುವನು ಚಂದಿರ. ಕೋಮು ಆಧಾರದಲ್ಲಿ ದೇಶ ವಿಭಜನೆಯಾದಾಗ ಸಾಮಾನ್ಯರ ಭಾವನೆಗಳು ಹೇಗಿದ್ದವು, ಈ ಮಣ್ಣಿನ ಬಗ್ಗೆ ಇರುವ ಪ್ರೀತಿ ಎಂಥದ್ದು ಎಂಬುದನ್ನು ಬಹಳ ಭಾವನಾತ್ಮಕವಾಗಿ ಕಟ್ಟಿಕೊಟ್ಟ ನಾಟಕವಿದು. ಇದು ಧರ್ಮಕ್ಕಿಂತ ಮನಸ್ಸುಗಳ ವಿಚಾರವನ್ನು ತೆರೆದಿಡುವ ನಾಟಕ” ಎನ್ನುತ್ತಾರೆ ಅಂಬುರಾಜ್.

ಮಾಜಿ ಜೀವಾವಧಿ ಕೈದಿ ಅಂಬುರಾಜ್‌

“ನಾಟಕದ ಮುಖ್ಯ ಪಾತ್ರವಾದ ಬಡೇಮಿಯನ ಮಗಳು ಹಿಂದೂ ಹುಡುಗನನ್ನು ಕರೆದುಕೊಂಡು ಹೋಗಿಬಿಡುತ್ತಾಳೆ. ಹಿಂದೂ ಮುಸ್ಲಿಂ ಮದುವೆಯಾಗುತ್ತಾರೆ. ಇದೇ ಭಾರತದ ಸಂಸ್ಕೃತಿ ಎಂದು ಹೇಳುವ ನಾಟಕವಿದು. ಕೋಮು ದೃಷ್ಟಿಕೋನ ಇಟ್ಟುಕೊಂಡು ಸಮಾಜವನ್ನು ನೋಡಿದರೆ, ಎಲ್ಲವೂ ಕೇಸರಿಯಾಗಿಯೇ ಕಾಣುತ್ತದೆ” ಎಂದು ವಿಷಾದಿಸಿದರು.

“ನನಗೆ ರಂಗಭೂಮಿಯ ನಂಟು ಸಿಗದೇ ಹೋಗಿದ್ದರೆ, ಕಟ್ಟೀಮನಿ ಥರದ ವ್ಯಕ್ತಿಗಳು ಪರಿಚಯವಾಗದೇ ಹೋಗಿದ್ದರೆ ನಾನು ಜೈಲಲ್ಲಿ ದೊಡ್ಡ ಟೆರರಿಸ್ಟ್‌ ಆಗ್ತಾ ಇದ್ದೆ. ನನ್ನ ಬದುಕನ್ನು ಸುಧಾರಿಸಿದ್ದು ರಂಗಭೂಮಿ. ವೀರಪ್ಪನ್‌ ಕೇಸ್‌ ಕಾರಣಕ್ಕೆ ನನಗೆ ಚಿತ್ರಹಿಂಸೆಯನ್ನೂ ನೀಡಿದರು. ಹೀಗಾಗಿ ಅಧಿಕಾರಿಗಳ ಮೇಲೆ, ಸಮಾಜದ ಮೇಲೆ ನನಗೆ ಸಿಟ್ಟಿತ್ತು. ಅದೆಲ್ಲವೂ ಕರಗಿಹೋಗಿ, ನನ್ನನ್ನು ಮನುಷ್ಯನನ್ನಾಗಿ ಮಾಡಿದ್ದು ರಂಗಭೂಮಿ” ಎಂದರು.

ರಂಗಕರ್ಮಿ, ಕೈದಿಗಳಿಗೆ ನಾಟಕಗಳನ್ನು ಕಲಿಸಿದ ಗುರು ಹುಲುಗಪ್ಪ ಕಟ್ಟೀಮನಿ

“ಜೊತೆಗಿರುವನು ಚಂದಿರ – ಮಾನವ ಮೌಲ್ಯಗಳನ್ನು ಬೆಳೆಸುವಂತಹ ನಾಟಕ. ಜೈಲಿನಲ್ಲಿ ಹಿಂದೂ ಮುಸ್ಲಿಂ ಹಬ್ಬಗಳನ್ನು ಒಟ್ಟಾಗಿ ಕೈದಿಗಳು ಆಚರಿಸುತ್ತಾರೆ. ಈ ನಾಟಕ ಹಿಂದೂ- ಮುಸ್ಲಿಂ ನಡುವೆ ಭೇದ ತರುವಂತಿದ್ದರೆ ಕೈದಿಗಳು ಈ ನಾಟಕವನ್ನು ಮಾಡಲು ಸಾಧ್ಯವಾಗುತ್ತಿತ್ತೇ?” ಎಂದು ಪ್ರಶ್ನಿಸಿದರು.

‘ಜೊತೆಗಿರುವನು ಚಂದಿರ’ ನಾಟಕದಲ್ಲಿ ಬಡೇಮಿಯ ಪಾತ್ರದಲ್ಲಿ ಅಭಿನಯಿಸಿದ್ದ ರಮೇಶ್‌ ಆಡುವಳ್ಳಿ ಅವರು ಸುಮಾರು ಹದಿನೈದು ವರ್ಷಗಳ ಕಾಲ ಜೈಲಿನಲ್ಲಿದ್ದವರು. ರಾಜಕೀಯ ಪ್ರಕರಣವೊಂದರಲ್ಲಿ ನನ್ನ ಹೆಸರು ಸಿಕ್ಕಿಕೊಂಡಿತು. ತಪ್ಪು ಮಾಡದೆಯೇ ಶಿಕ್ಷೆ ಅನುಭವಿಸಿದೆ ಎನ್ನುವ ರಮೇಶ್ ಅವರು, ಕಟ್ಟೀಮನಿಯವರ ತಂಡದೊಂದಿಗೆ ಕೆಲಸ ಮಾಡಿದವರು. “‘ತಲೆದಂಡ’ ನಾಟಕದಲ್ಲಿ ಬಸವಣ್ಣ ಪಾತ್ರದಲ್ಲಿ, ‘ಕಸ್ತೂರಬಾ ಗಾಂಧಿ’ ನಾಟಕದಲ್ಲಿ ಗಾಂಧಿಯಾಗಿ ಅಭಿನಯಿಸಿದ್ದಾರೆ. ‘ಮಾಧವಿ’ ನಾಟಕದಲ್ಲಿ ‘ಗಾಲವ’ನಾಗಿ ಅಭಿನಯಿಸಿದ್ದೇನೆ. ನನಗೆ ತುಂಬಾ ಇಷ್ಟವಾದ ನಾಟಕವೆಂದರೆ ಜಯಂತ್‌ ಕಾಯ್ಕಿಣಿಯವರು ಬರೆದ- ಜೊತೆಗಿರುವನು ಚಂದಿರ ನಾಟಕ. ಅದ್ಭುತವಾದ ಕಥೆ ಇದು. ಇದನ್ನು ನೋಡಿದವರು ಹಿಂದೂ- ಮುಸ್ಲಿಂ ವಿವಾದವನ್ನು ಮಾಡಲೇಬಾರದು” ಎಂದು ಅಭಿಪ್ರಾಯಪಟ್ಟರು.

‘ಕಸ್ತೂರ ಬಾ ಗಾಂಧಿ ನಾಟಕ’ದಲ್ಲಿ ಗಾಂಧಿ ಪಾತ್ರದಲ್ಲಿ ರಮೇಶ್‌ ಆಡುವಳ್ಳಿ ಅಭಿನಯಿಸಿದ್ದರು.

“ಕೈದಿಗಳ ಮೇಲೆ ತಪ್ಪು ಅಭಿಪ್ರಾಯ ಹೊಂದಿದ್ದ ಕಾರಾಗೃಹ ಇಲಾಖೆಯ ಮೇಲಧಿಕಾರಿಗಳೇ ನಮ್ಮ ನಾಟಕ ನೋಡಿ ಅಚ್ಚರಿ ಪಟ್ಟರು. ನಮ್ಮ ನಾಟಕ ನೋಡಿ ಅಧಿಕಾರಿಗಳ ಮನಸ್ಸೇ ಪರಿವರ್ತನೆಯಾಗಿತ್ತು” ಎಂದು ತಿಳಿಸಿದರು.

ಇದನ್ನೂ ಓದಿರಿ: ಮುಸ್ಲಿಂ ಪ್ರಧಾನ ಕಥೆ ಹೊಂದಿದೆ ಎಂದು ನಾಟಕಕ್ಕೆ ಅಡ್ಡಿಪಡಿಸಿದ RSS-ಬಜರಂಗದಳದ ದುಷ್ಕರ್ಮಿಗಳು

ರಂಗಕರ್ಮಿ ಹುಲುಗಪ್ಪ ಕಟ್ಟೀಮನಿಯವರನ್ನು ಈ ಕುರಿತು ಮಾತನಾಡಿಸಲು ‘ನಾನುಗೌರಿ.ಕಾಂ’ ತಂಡ ಪ್ರಯತ್ನಿಸಿತು. ನಾಟಕದ ಹೆಸರು ಹಾಗೂ ವಿವಾದದ ಕುರಿತು ಕೇಳಿದ ತಕ್ಷಣ ಕಟ್ಟೀಮನಿಯವರು ಭಾವುಕರಾದರು. “ನನ್ನದೇ ಭಾವನೆಗಳನ್ನು ಹಂಚಿಕೊಳ್ಳುತ್ತೇನೆ, ಈ ಕುರಿತು ಬರೆಯುತ್ತೇನೆ” ಎಂದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾನಪದ ಕಲಾವಿದ ಡಿಂಗ್ರಿ ನರಸಪ್ಪ, ಬೆಂಗಳೂರಿನ ಚಂದ್ರಮ್ಮ ಸೇರಿದಂತೆ ಐದು ಜನರಿಗೆ ಬಾಬು ಜಗಜೀವನ್‌ ರಾಮ್‌ ಪ್ರಶಸ್ತಿ

ಹಿರಿಯ ಜಾನಪದ ಕಲಾವಿದ ಡಿಂಗ್ರಿ ನರಸಪ್ಪ, ಬೆಂಗಳೂರಿನ ಚಂದ್ರಮ್ಮ ಸೇರಿದಂತೆ ಐದು ಜನ ಹಿರಿಯ ಸಾಧಕರು 2026ನೇ ಸಾಲಿನ ಬಾಬು ಜಗಜೀವನ್‌ ರಾಮ್‌ ಪ್ರಶಸ್ತಿಗೆ ಭಾಜನರಾಗಿದ್ದಾರೆ. ರಾಯಚೂರು ಜಿಲ್ಲೆಯ ಹಿರಿಯ ದಲಿತ ಹೋರಾಟಗಾರ...

ಗಾಜಾ; ಗೊಂಬೆಯೊಂದಿಗೆ ‘ಅಂತ್ಯಕ್ರಿಯೆ’ ಆಟ ಆಡುವ ಎಳೆಯ ಮಕ್ಕಳ ವಿಡಿಯೋ ವೈರಲ್; ಸುತ್ತಲಿನ ಘಟನೆಯನ್ನು ಪುನರಾವರ್ತಿಸುವ ಮಕ್ಕಳು

ಅಕ್ಟೋಬರ್ 2023 ರಲ್ಲಿ ಇಸ್ರೇಲಿ ಮಿಲಿಟರಿ ದಾಳಿಯನ್ನು ಪ್ರಾರಂಭಿಸಿದ ನಂತರ ಗಾಜಾದಿಂದ ದುಃಖಕರ ದೃಶ್ಯಗಳು ಹೊರಹೊಮ್ಮುತ್ತಿವೆ. ಇತ್ತೀಚಿನ ಒಂದು ಘಟನೆಯಲ್ಲಿ, ಚಿಕ್ಕ ಮಕ್ಕಳು ಅಂತ್ಯಕ್ರಿಯೆಗಾಗಿ ಗೊಂಬೆಯನ್ನು ಹೊತ್ತುಕೊಂಡು ಹೋಗುವುದನ್ನು ಕಾಣಬಹುದು - ಇದು ಅವರು...

ದೆಹಲಿ| ಆಳವಾದ ಚರಂಡಿಗೆ ಬಿದ್ದು ನೈರ್ಮಲ್ಯ ಕಾರ್ಮಿಕ ಸಾವು; ನ್ಯಾಯಕ್ಕೆ ಆಗ್ರಹಿಸಿದ ಮೃತನ ಕುಟುಂಬ

ಮಾರ್ಚ್ 30 ರಂದು ಪೂರ್ವ ದೆಹಲಿಯ ದಿಲ್ಶಾದ್ ಗಾರ್ಡನ್ ಪ್ರದೇಶದಲ್ಲಿ ಸುರಕ್ಷತಾ ಸಾಧನಗಳಿಲ್ಲದೆ ಆಳವಾದ ಚರಂಡಿ ಸ್ವಚ್ಛಗೊಳಿಸುವ ಸಮಯದಲ್ಲಿ ಯುವ ನೈರ್ಮಲ್ಯ ಕಾರ್ಮಿಕ ರಾಹುಲ್ ಎಂಬುವವರು ಸಾವನ್ನಪ್ಪಿದ್ದಾರೆ. ಮಧ್ಯಾಹ್ನ 2:00 ರ ಸುಮಾರಿಗೆ...

ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಆಸ್ಪತ್ರೆಗೆ ದಾಖಲು; ಕಾರ್ಯಕ್ರಮದಲ್ಲಿ ಏಕಾಏಕಿ ಕುಸಿದು ಬಿದ್ದು ಅಸ್ವಸ್ಥ

ಬೆಂಗಳೂರು: ಕರ್ನಾಟಕದ ನಿವೃತ್ತ ಲೋಕಾಯುಕ್ತ ಎನ್‌.ಸಂತೋಷ್‌ ಹೆಗ್ಡೆ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಭಾಷಣದ ವೇಳೆ ಕುಸಿದು ಬಿದ್ದು ಅಸ್ವಸ್ಥರಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಏಪ್ರಿಲ್ 4ರ, ಶುಕ್ರವಾರ ಬೆಂಗಳೂರಿನ ಕೊಂಡಜಿ ಬಸಪ್ಪ ಸಭಾಂಗಣದಲ್ಲಿ...

ಎಸ್‌ಎಸ್‌ಎಲ್‌ಸಿಯಲ್ಲಿ ತೃತೀಯ ಭಾಷೆಗೆ ಗ್ರೇಡ್: ನಿರ್ಧಾರ ಪರಿಶೀಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದ ರಾಜ್ಯಪಾಲ ಗೆಹ್ಲೋಟ್ 

ಬೆಂಗಳೂರು: 10ನೇ ತರಗತಿ ಪರೀಕ್ಷೆಯಲ್ಲಿ ತೃತೀಯ ಭಾಷೆಯ ವಿಷಯಕ್ಕೆ ಅಂಕಗಳನ್ನು ಬದಲಿಸುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ರಾಜ್ಯ ಸರ್ಕಾರವನ್ನು ಕೇಳಿದ್ದಾರೆ. ಸರ್ಕಾರವು ಈ ನಿರ್ಧಾರವನ್ನು "ಸಮಗ್ರವಾಗಿ ಪರಿಶೀಲಿಸಬೇಕು" ಎಂದು ಲೋಕಭವನವು...

ತಿರುಚ್ಚಿ ಪೂರ್ವದ ಪೆರಂಬೂರಿನಲ್ಲಿ ಟಿವಿಕೆ ಸಂಸ್ಥಾಪಕ ವಿಜಯ್ ಸಲ್ಲಿಸಿದ ಅಫಿಡವಿಟ್‌ಗಳಲ್ಲಿ ಹಲವು ವ್ಯತ್ಯಾಸಗಳಿರುವುದಾಗಿ ವರದಿ  

ಚೆನ್ನೈ: ನಟ ಮತ್ತು ಟಿವಿಕೆ ಸಂಸ್ಥಾಪಕ ವಿಜಯ್ ಸಲ್ಲಿಸಿದ ಎರಡು ಪ್ರತ್ಯೇಕ ಚುನಾವಣಾ ಅಫಿಡವಿಟ್‌ಗಳಲ್ಲಿ ವ್ಯತ್ಯಾಸಗಳು ಕಾಣಿಸಿಕೊಂಡಿದ್ದು, ವಿಧಾನಸಭಾ ಚುನಾವಣೆಗೆ ಮುನ್ನ ಕಾನೂನು ಮತ್ತು ರಾಜಕೀಯ ಪರಿಶೀಲನೆಗೆ ಅವಕಾಶ ನೀಡುವ ಸಾಧ್ಯತೆಯಿದೆ. ಪೆರಂಬೂರು ಮತ್ತು...

ಉತ್ತಮ್ ನಗರದಲ್ಲಿ ಶಾಂತಿ ಕಾಪಾಡುವಲ್ಲಿ ದೆಹಲಿ ಪೊಲೀಸರ ಪ್ರಯತ್ನಗಳನ್ನು ಶ್ಲಾಘಿಸಿದ ಎಪಿಸಿಆರ್

ಈದ್ ಅಲ್-ಫಿತರ್, ರಾಮ ನವಮಿ ಮತ್ತು ಹನುಮಾನ್ ಜಯಂತಿ ಸೇರಿದಂತೆ ಧಾರ್ಮಿಕ ಹಬ್ಬಗಳ ಆಚರಣೆಯ ಸಂದರ್ಭದಲ್ಲಿ ರಾಷ್ಟ್ರ ರಾಜಧಾನಿಯ ಉತ್ತಮ್ ನಗರ ಪ್ರದೇಶದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಕಾಪಾಡಿದ್ದಕ್ಕಾಗಿ ನಾಗರಿಕ ಹಕ್ಕುಗಳ ರಕ್ಷಣಾ...

ದಲಿತ ಸಮುದಾಯಕ್ಕೆ ಕ್ಷಮೆಯಾಚಿಸಿದ ನೇಪಾಳದ ಹೊಸ ಸರ್ಕಾರ

ಪ್ರಧಾನಿ ಬಾಲೇಂದ್ರ ಶಾ ಅವರ ನೇಪಾಳದ ಹೊಸ ಸರ್ಕಾರದ 100 ಅಂಶಗಳ ಸುಧಾರಣಾ ಕಾರ್ಯಸೂಚಿಯಡಿಯಲ್ಲಿ, ಮುಂದಿನ 15 ದಿನಗಳ ಒಳಗೆ ದಲಿತರು ಮತ್ತು ಐತಿಹಾಸಿಕವಾಗಿ ಹೊರಗಿಡಲ್ಪಟ್ಟ ಇತರೆ ಸಮುದಾಯಗಳಿಗೆ 'ಔಪಚಾರಿಕ ಕ್ಷಮೆಯಾಚನೆ' ಕೇಳುವುದಾಗಿ...

‘ಯಾರು ಹೆದರುತ್ತಾನೋ ಅವನು ಸತ್ತಂತೆ’: ರಾಘವ್ ಛಡ್ಡಾಗೆ ತೀವ್ರವಾಗಿ ಪ್ರತಿಕ್ರಿಯೆ ನೀಡಿದ ಎಎಪಿ ನಾಯಕ ಸೌರಭ್ ಭಾರದ್ವಾಜ್ 

ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಮತ್ತು ದೆಹಲಿ ಘಟಕದ ಮುಖ್ಯಸ್ಥ ಸೌರಭ್ ಭಾರದ್ವಾಜ್ ಅವರು ವೀಡಿಯೊ ಸಂದೇಶದಲ್ಲಿ ಆಪ್ ಸಂಸದ ರಾಘವ್ ಛಡ್ಡಾ ಅವರು ಸಂಸತ್ತಿನಲ್ಲಿ "ಸಾಫ್ಟ್ ಪಿಆರ್" ನಲ್ಲಿ ತೊಡಗಿದ್ದಾರೆ...

ಚಂಡೀಗಢ ಬಿಜೆಪಿ ಕಚೇರಿ ಸ್ಫೋಟ: ಪಂಜಾಬ್ ಕೌಂಟರ್ ಇಂಟೆಲಿಜೆನ್ಸ್ ಪಡೆಯಿಂದ ಇಬ್ಬರು ಶಂಕಿತರ ಮನೆಗಳ ಮೇಲೆ ದಾಳಿ

ಚಂಡೀಗಢದಲ್ಲಿರುವ ಪಂಜಾಬ್ ಬಿಜೆಪಿ ಕಚೇರಿಯ ಹೊರಗೆ ಸ್ಫೋಟ ನಡೆಸಿದ ಆರೋಪದ ಮೇಲೆ ಇಬ್ಬರು ಶಂಕಿತರ ಮನೆಗಳ ಮೇಲೆ  ಪಂಜಾಬ್ ಪೊಲೀಸರ ಗುಪ್ತಚರ ನಿಗ್ರಹ ದಳವು ಇಂದು ಮುಂಜಾನೆ ದಾಳಿ ನಡೆಸಿದೆ.  ರೋಪರ್ ಜಿಲ್ಲೆಯ ಮೊರಿಂಡಾ ಪ್ರದೇಶದ...