Homeಮುಖಪುಟರೈತಸಂಘ ಇಳಿಮುಖವಾದ ಘಟ್ಟ

ರೈತಸಂಘ ಇಳಿಮುಖವಾದ ಘಟ್ಟ

- Advertisement -
- Advertisement -

ಪ್ರೊ. ನಂಜುಂಡಸ್ವಾಮಿಯವರ ಬತ್ತಳಿಕೆಯಿಂದ ಒಂದೊಂದೇ ಬಾಣಗಳು ಹೊರಬಂದು ಯಶಸ್ವಿ ಹೋರಾಟಗಳನ್ನು ರೂಪಿಸಿದ ಪರಿಣಾಮವಾಗಿ ರೈತಸಂಘ ನಾಡಿನಲ್ಲಿ ಒಂದು ಪ್ರಬಲವಾದ ಶಕ್ತಿಯಾಗಿ ಬೆಳೆಯತೊಡಗಿತು. ಒಂದು ಘಟ್ಟದವರೆಗೆ ರೈತಸಂಘದ ಖರ್ಚುವೆಚ್ಚಗಳು ಕಬ್ಬುಬೆಳೆಗಾರರ ವಂತಿಕೆ ಹಣದಿಂದ ನಡೆಯುತ್ತಿತ್ತು. ನಂತರ ಹಣದ ಸಮಸ್ಯೆ ಎದುರಾದಾಗ ಮುಂದೇನು ಮಾಡುವುದೆಂಬ ಆಲೋಚನೆಗಿಳಿದ ರೈತನಾಯಕರು ಯೋಚನೆಯಲ್ಲಿ ಮುಳುಗಿದರು. ಆಗ ಫ್ರೊಫೆಸರ್ “ಕರ್ನಾಟಕದಲ್ಲಿ ನಾಲ್ಕು ಕೋಟಿಗೂ ಹೆಚ್ಚು ಜನರಿದ್ದಾರೆ. ಒಬ್ಬ ಒಂದು ರೂಪಾಯಿ ಕೊಟ್ಟರೆ ಸಾಕು ನಾಲ್ಕು ಕೋಟಿ ಆಗತ್ತೆ ಅಂದ್ರೆ, ಈಗಾಗ್ಲೆ ನಮ್ಮತ್ರ ಆರುಕೋಟಿ ಇದೆ” ಎಂದರು. ಇದು ತಮಾಷೆಯಂತಿದ್ದರೂ ಪ್ರೊಫೆಸರ್ ಕಾರ್ಯಸೂಚಿ ಯಾವಾಗಲೂ ಸಮಸ್ಯೆಯನ್ನು ದೊಡ್ಡದು ಮಾಡದೆ ಮುನ್ನುಗ್ಗುವ ಕಡೆಗಿರುತ್ತಿತ್ತು.

ಕಡಿದಾಳು ಶಾಮಣ್ಣ

ಆಗ ಕಡಿದಾಳು ಶಾಮಣ್ಣನವರು ’ನೋಡಿ ರೈತರು ಭತ್ತ, ರಾಗಿ, ಅಡಕೆ ಇಂಥವುನ್ನೆಲ್ಲ
ಕೊಡ್ತಾರೆ. ಅವನ್ನೆ ಸಂಗ್ರಹಿಸಿ ಮಾರಿದ ಖರ್ಚಿನಲ್ಲಿ ನಮ್ಮ ಪ್ರಯಾಣ, ಸಭೆಗಳ ಖರ್ಚನ್ನ ನಿಭಾಯಿಸಬಹುದು’ ಎಂದರು. ಇದನ್ನ ಒಲ್ಲದ ಮನಸ್ಸಿನಿಂದ ಎಲ್ಲ ಸಮ್ಮತಿಸಿದರು. ಅದರಂತೆ ಮೇಗರವಳ್ಳಿ ಹೆಗಡೆಯವರ ಮನೆಗೆ ಹೋಗಿ ಅಡಕೆ ಕೇಳುವುದೆಂದು ತೀರ್ಮಾನಿಸಿದ ಶಾಮಣ್ಣನವರು, ಸುಂದರೇಶರನ್ನು ಹೊರಡಿಸಿಕೊಂಡು ಸಿದ್ಧರಾಗಿಯೇಬಿಟ್ಟರು. ಅನಿರೀಕ್ಷಿತವಾಗಿ ದಾಳಿಯಿಟ್ಟ ರೈತನಾಯಕರನ್ನು ತುಂಬ ಗೌರವದಿಂದಲೇ ಬರಮಾಡಿಕೊಂಡ ಹೆಗಡೆ ’ಏನು ಸಮಾಚಾರ ಇಲ್ಲಿಗೆ ದಯಮಾಡಿಸಿದ್ದು’ ಎಂದರು. ಆಗ ಶಾಮಣ್ಣ, ’ನಾವು ರೈತರ ಪರವಾಗಿ ಹೋರಾಟಕ್ಕೆ ರೈತಸಂಘ ಕಟ್ಟಿದ್ದೀವಿ, ಚಳವಳಿ ಅಂದಮೇಲೆ ಖರ್ಚುವೆಚ್ಚ ಇರುತ್ತೆ. ಅದಕ್ಕಾಗಿ ರೈತರಿಂದ ದವಸ ಧಾನ್ಯ ಅಡಕೆ ಸಂಗ್ರಹಿಸ್ತಾ ಇದ್ದೀವಿ. ತಾವು ಒಂದೈದು ಕೆ.ಜಿ ಅಡಿಕೆ ಸಹಾಯ ಮಾಡಿ’ ಎಂದರು. ಆಗ ಹೆಗಡೆಯವರು ’ನಮ್ಮ ರೈತರ ಸಮಸ್ಯೆ ಮುಂದಿಟ್ಟುಕೊಂಡು ನೀವು ಹೋರಾಡುವುದೇನು ಬೇಡಿ, ನಮ್ಮ ಸಮಸ್ಯೆಗಳನ್ನು ನಾವೇ ಬಗೆಹರಿಸಿಕೊಳ್ತಿವಿ’ ಎಂದರು. ಅಲ್ಲಿಗೆ ಸಾರ್ವಜನಿಕ ದೇಣಿಗೆ ಎತ್ತುವ ಕೆಲಸ ನಿಲುಗಡೆಯಾಯ್ತು. ಆದರೇನು ರೈತಸಂಘ ತನ್ನ ಎಂದಿನ ಬಿರುಸಿನ ಹೋರಾಟವನ್ನ ಮುಂದುವರೆಸಿತು.

ತಮಿಳುನಾಡಿನ ನಾರಾಯಣಸ್ವಾಮಿ ನಾಯ್ಡು, ನಂಜುಂಡಸ್ವಾಮಿಯವರಷ್ಟೇ ಪ್ರಬಲರಾದ ಜನಪ್ರಿಯ ರೈತ ನಾಯಕ. ಕರ್ನಾಟಕ ಮತ್ತು ತಮಿಳುನಾಡಿನ ರೈತರು ಸಮಾನವಾದ ಸಂಕಷ್ಟ ಎದುರಿಸುವಂತಹ ಕಾವೇರಿ ವಿಷಯದಲ್ಲಿ ರೈತರನ್ನು ಬದಿಗೊತ್ತಿ ಬರೀ ರಾಜಕಾರಣಿಗಳೇ ರಾಜಕಾರಣ ಮಾಡುತ್ತಿದ್ದಾರೆ. ಆದರೆ ನಾರಾಯಣಸ್ವಾಮಿ ಬಗ್ಗೆ ಕರ್ನಾಟಕದ ರೈತರಿಗೆ ತುಂಬಾ ಗೌರವವಿದೆ. ಹಾಗೆಯೇ ನಂಜುಂಡಸ್ವಾಮಿಯವರ ವಿದ್ವತ್ತಿಗೆ ತಮಿಳುನಾಡು ರೈತರು ಅತೀವ ಗೌರವ ಕೊಡುತ್ತಾರೆ. ನಾರಾಯಣಸ್ವಾಮಿಯವರ ನೇತೃತ್ವದಲ್ಲಿ ಹೈದರಾಬಾದಿನಲ್ಲಿ ಕಿಸಾನ್ ಸಮ್ಮೇಳನ ನಡೆಯಿತು. ಅಲ್ಲಿ ರೈತ ಸಂಘಕ್ಕೆ ಒಂದು ಸಿಂಬಲ್ ಬೇಕು ಎಂಬ ಚರ್ಚೆ ಪ್ರಸ್ತಾಪಕ್ಕೆ ಬಂತು. ಜೋಡೆತ್ತು ಚೆನ್ನಾಗಿದೆ ಎಂದುಕೊಂಡರೂ, ಅದನ್ನಾಗಲೇ ಕಾಂಗ್ರೆಸ್‌ನವರು ಪಡೆದಿದ್ದರಿಂದ, ನೇಗಿಲ ಒಡೆಯ ರೈತನಿರಲಿ ಎಂಬ ತೀರ್ಮಾನವಾಯ್ತು. ಅದಾಗಲೇ ಹಸಿರುಶಾಲು ದೇಶವನ್ನು ವ್ಯಾಪಿಸಿತ್ತು. ಇಂತಹ ಮಹತ್ವದ ಸಭೆಗೆ ಕರ್ನಾಟಕದಿಂದಲೂ ರೈತ ದಂಡು ಹೋಗಿತ್ತು.

ನಾರಾಯಣಸ್ವಾಮಿ ನಾಯ್ಡು

ರೈತರು ತಮ್ಮ ವಾಹನವನ್ನು ಆಂಧ್ರದ ಟ್ರಾಫಿಕ್ ನಿಯಮವನ್ನು ಮೀರಿ ನಿಲ್ಲಿಸಿದ್ದರು. ಕೂಡಲೇ ಅಲ್ಲಿಗೆ ಬಂದ ಪೊಲೀಸನೊಬ್ಬ ರೈತರು ನಿಯಮ ಉಲ್ಲಂಘಿಸಿದ್ದಾರೆ ಎಂದು ಚೀಟಿ ಹರಿದುಕೊಟ್ಟ. ರೈತರು ಪ್ರೊಫೆಸರ್ ಮೊರೆ ಹೋದರು. ಸ್ಥಳಕ್ಕೆ ಬಂದ ಪ್ರೊಫೆಸರ್ ಪೊಲೀಸ್ ಕೊಟ್ಟ ನೋಟಿಸನ್ನು ಕೈಲಿಡಿದು, ಅಲ್ಲಿದ್ದ ಪೊಲೀಸ್ ಮುಂದೆಯೇ ಹರಿದುಹಾಕಿದರು. ತನ್ನ ಜೀವಮಾನದಲ್ಲಿ ಇಂತಹ ಪ್ರತಿಕ್ರಿಯೆ ನೋಡದ ಆತ “ಏಮಂಟಾ ಇದಿ” ಎಂದು ಗೊಣಗಿಕೊಂಡು ಹೊರಟುಹೋದ. ಅನ್ಯ ರಾಜ್ಯದಿಂದ ಬಂದ ರೈತರಿಗೆ ಇಲ್ಲಿನ ಟ್ರಾಫಿಕ್ ವ್ಯವಸ್ಥೆ ಗೊತ್ತಿರಲಾರದು, ಆದ್ದರಿಂದ ವಾಹನವನ್ನು ಸರಿಯಾದ ಜಾಗಕ್ಕೆ ನಿಲ್ಲಿಸುವಂತೆ ಸಹಾಯ ಮಾಡುವುದು ಪೊಲೀಸನ ಕರ್ತವ್ಯ ಎಂಬುದು ಪ್ರೊಫೆಸರ್ ಅವರ ನಿಲುವಾಗಿತ್ತು.

ಅದು ರೈತಸಂಘದ ಉತ್ತುಂಗ ಸ್ಥಿತಿ ತಲುಪಿದ ಕಾಲ. ಸರಕಾರ ರೈತ ಸಂಘಕ್ಕೆ ಹೆದರಿ ಮಾತುಕತೆಗೆ ಕರೆಯುತ್ತಿದ್ದ ಕಾಲ. ಆದರೇನು ರೈತ ಹೋರಾಟದಿಂದ ಅವಕಾಶ ಪಡೆದು ಅಧಿಕಾರಕ್ಕೆ ಏರಿದ್ದ ಜನತಾ ಪಕ್ಷದ ಸರಕಾರವೂ ಕೂಡ ಯಥಾಸ್ಥಿತಿವಾದದ ಪ್ರತಿಪಾದಕರಂತೆ, ಗೋಲಿಬಾರವೊಂದನ್ನ ಹೊರತುಪಡಿಸಿದರೆ, ಇದೂ ಕೂಡ ಗುಂಡೂರಾಯರ ಸರಕಾರ ಎಂಬಂತೆ ರೈತ ಮುಖಂಡರಿಗೆ ಕಾಣಿಸಿತು. ಆದ್ದರಿಂದ ರೈತ ಸಂಘವೇ ಏಕೆ ರಾಜಕೀಯ ಮಾಡಬಾರದೆಂಬ ಚರ್ಚೆಯಾಯ್ತು. ಅದಕ್ಕಾಗಿ ಬೆಂಗಳೂರಿನ ಲಾ ಕಾಲೇಜ್ ಪ್ರಿನ್ಸಿಪಾಲರಾಗಿದ್ದ ಪ್ರೊಫೆಸರ್ ಆ ಹುದ್ದೆಗೆ ರಾಜಿನಾಮೆ ನೀಡಿ, ರೈತಸಂಘದ ಮುಂದಾಳತ್ವವನ್ನು ಹೆಚ್.ಎಸ್ ರುದ್ರಪ್ಪನವರಿಗೆ ಬಿಟ್ಟು ಕನ್ನಡ ದೇಶ ಪಕ್ಷ ಸ್ಥಾಪಿಸಿದರು. ಅಲ್ಲಿಂದ ರೈತ ಸಂಘದ ಇಳಿಮುಖ ಆರಂಭವಾಯ್ತು ಎನ್ನಬಹುದು. ಈವರೆಗೆ ರೈತ ಸಂಘಕ್ಕೆ ಹೆದರುತ್ತಿದ್ದ ಜನತಾ ಪಕ್ಷದವರು ನೀವು ರಾಜಕೀಯಕ್ಕೆ ಬಂದ ಮೇಲೆ ನಿಮಗೆ ಹೆದರುವ ಅಗತ್ಯವೇನು ಎನ್ನವಂತಾದರು. ಅದಾಗಲೇ ರೈತ ಸಂಘದ ಚಳವಳಿಯಲ್ಲಿದ್ದ ಅನೇಕರು ಜನತಾಪಕ್ಷದಲ್ಲಿ ತಲೆ ಮರೆಸಿಕೊಂಡಿದ್ದರು.

ರಾಜಕಾರಣ ಮಾಡಬೇಕಾದರೆ ಹಣಕಾಸಿನ ಮೂಲ ಝರಿಯೊಂದರ ಅಗತ್ಯವಿದ್ದುದ್ದರಿಂದ,
ಪ್ರೊಫೆಸರ್ ’ಒಂದು ರೂಪಾಯಿ ಜೊತೆಗೆ ಒಂದು ಓಟುಕೊಡಿ’ ಎಂಬ ಘೋಷಣೆಯೊಂದಿಗೆ ರಾಜಕಾರಣ ಆರಂಭಿಸಿದರು. ರೈತ ಸಂಘದ ನೆಲೆಯಿದ್ದದ್ದು ಗ್ರಾಮೀಣ ಪ್ರದೇಶದಲ್ಲಿ. ಆದರೆ, ಮಂಡಲ ಪಂಚಾಯ್ತಿ ಚುನಾವಣೆ ಮನೆ ಬಾಗಿಲಿಗೆ ಬಂದಾಗ ಸುಮ್ಮನಿದ್ದ ರೈತ ನಾಯಕರು, ಮೊದಲು ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಹಾಕಿ ಸ್ಪರ್ಧಿಸಿ, ನಂತರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದರು. ಅದಾಗಲೇ ರೈತರು ಜನತಾ ಸರಕಾರದಲ್ಲಿ ಭಾಗಿಯಾಗಿದ್ದರಿಂದ, ರೈತ ಸಂಘ ಕೇವಲ ಒಂದೆರಡು ಅಭ್ಯರ್ಥಿಗಳನ್ನ ಮಾತ್ರ ಗೆಲ್ಲಿಸಿಕೊಂಡಿತು. ಬಾಬಾಗೌಡರು ಎರಡು ಕ್ಷೇತ್ರದಲ್ಲಿ ಗೆದ್ದಿದ್ದರಿಂದ ಒಂದನ್ನ ಪ್ರೊಫೆಸರ್‌ಗೆ ಬಿಟ್ಟುಕೊಟ್ಟು ಅವರು ವಿಧಾನಸೌಧ ಪ್ರವೇಶಿಸುವಂತೆ ಮಾಡಿದರು. ವಿಧಾನಸೌಧದ ಮೇಲೆ ಬಾವುಟ ಹಾರಿಸುತ್ತೇವೆಂದಿದ್ದ ಪ್ರೊಫೆಸರ್ ಎರಡು ಸ್ಥಾನಕ್ಕೆ ಸೀಮಿತವಾದರು. ಆ ನಂತರ ರೈತ ನಾಯಕರ ಉಚ್ಛಟನೆಗಳು ನಡೆದವು. ನಿಷ್ಕ್ರಿಯ ನಾಯಕರು ಒಳ ಜಗಳದಲ್ಲಿ ಮುಳುಗಿದರು. ಅಂತಹ ಒಂದು ಸನ್ನಿವೇಶದಲ್ಲಿ ಪ್ರೊಫೆಸರ್ ನಂಜುಂಡಸ್ವಾಮಿಯವರ ಭಾಗಕ್ಕೆ ಕರ್ಣನಂತಿದ್ದ ಸುಂದರೇಶ್ ಹೃದಯಾಘಾತದಿಂದ ನಿಧನರಾದರು. ಅದೊಂದು ರೀತಿ ರೈತ ಸಂಘದ ಹೃದಯ ಸ್ತಬ್ಧವಾದಂತಹ ಸ್ಥಿತಿ. ಅದಕ್ಕಾಗಿಯೆ ಪ್ರೊಫೆಸರ್ ಮಗುವಿನಂತೆ ಅತ್ತಿದ್ದರು. ಅವರ ಹೋರಾಟದ ಧನಸ್ಸಿನ ಬಿಲ್ಲು ಹುರಿಯೇ ಕಿತ್ತುಹೋದಂತಾಗಿತ್ತು.

ಸುಂದರೇಶ್

ಸುಂದರೇಶ್ ದೇಹವನ್ನು ಭೂಮಿಯೊಡಲು ಬಗೆದು ಮಡಗಿ ಬಂದ ಮೇಲೆ ಪ್ರೊಫೆಸರ್ ಆಗಲಿ ರೈತ ಸಂಘವಾಗಲಿ ಚೇತರಿಸಿಕೊಳ್ಳಲೇ ಇಲ್ಲ. ಸುಂದರೇಶ್ ಸಾವಿನ ನಂತರ ರೈತಸಂಘ ಬಿಡುವವರು ಮತ್ತು ಪ್ರೊಫೆಸರ್ ಅವರಿಗೇ ತಿರುಗಿಬಿದ್ದು ಬೇರೆ ಸಂಘ ಕಟ್ಟಿಕೊಳ್ಳುವವರು ಎಲ್ಲಾ ಹುಟ್ಟಿಕೊಂಡರು. ಇದರಿಂದ ಪ್ರೊಫೆಸರ್ ಕಿಂಚಿತ್ತೂ ಜಗ್ಗದೆ ’ಇವೆಲ್ಲಾ ಸಾಮಾನ್ಯ, ಹೋಗೋರೆಲ್ಲಾ ಬೇಗ ಹೋಗಬೇಕು’ ಎಂದರು. ಅದಾಗಲೇ ಪುಟ್ಟಣ್ಣಯ್ಯ ದೂರವಾಗಿದ್ದರು. ಪ್ರೊಫೆಸರ್ ಕ್ಯಾನ್ಸರ್‌ಗೆ ತುತ್ತಾಗಿ ಆಸ್ಪತ್ರೆಯಲ್ಲಿದ್ದಾಗ ನೋಡಲು ಹೋದ ಪುಟ್ಟಣ್ಣಯ್ಯನನ್ನು ಕುರಿತು ’ಡಾಕ್ಟರು ಮಾತನಾಡಬೇಡ ಅಂದಿದ್ದಾರೆ’ ಎಂದು ಮೌನ ವಹಿಸಿದರು. ಪ್ರೊಫೆಸರ್ ದೇಹಕ್ಕಂಟಿದ ಕಾಯಿಲೆ ರೈತಸಂಘದ ವಿಷಯದಲ್ಲಿ ಸಾಂಕೇತಿಕವಾಗಿತ್ತು. ಅವರ ಶಕ್ತಿಯೇನೆಂಬುದು ಈಗ ಎಲ್ಲರಿಗೂ ಅರಿವಾಗುತ್ತಿದೆ. ಪ್ರೊಫೆಸರ್ ಅವರ ತೀವ್ರ ನಿಯಂತ್ರಿಸುವ ಗುಣ, ರೈತ ಸಂಘದ ಬಹುದೊಡ್ಡ ನಾಯಕರು ನಿಷ್ಕ್ರಿಯರಾಗಿ ಉಳಿಯುವಂತೆ ಮಾಡಿತು ಎಂಬ ಆರೋಪ ಕೂಡ ಇದೆ. ಈ ಪೈಕಿ ಕಡಿದಾಳು ಶಾಮಣ್ಣನವರನ್ನು ರೈತ ಸಂಘದಿಂದ ತೆಗೆದು ಹಾಕಿದಾಗ, ಅವರೇ ’ಅದು ಹೇಗೆ ನನ್ನನ್ನ ತೆಗೀತಾರೆ’ ಎಂಬ ಪ್ರಶ್ನೆ ಹಾಕಿಕೊಂಡಿದ್ದರು. ಇನ್ನು ತೇಜಸ್ವಿಯವರಂತೂ ’ಕಡಿದಾಳು ಶಾಮಣ್ಣನಂತಹವರನ್ನೆ ರೈತ ಸಂಘ ಹೊರಹಾಕುತ್ತದೆ ಎಂದರೆ ಅದಕ್ಕೆ ಉಳಿಗಾಲವಿಲ್ಲ’ ಎಂಬಂತೆ ಪ್ರತಿಕ್ರಿಯಿಸಿದ್ದರು. ಇವೆಲ್ಲ ಸಂಗತಿಗಳಿದ್ದರೂ, ಪ್ರೊಫೆಸರ್ ಹಾಕಿಕೊಟ್ಟ ಮೂಲ ತತ್ತ್ವಗಳ ಮೇಲೆ ನಡೆದಿದ್ದರೆ ರೈತ ಸಂಘ ದೊಡ್ಡ ಫೋರ್ಸ್ ಆಗಿ ಬೆಳೆಯಬಹುದಿತ್ತು. ಆದರೆ ಅದು ಆಗಲಿಲ್ಲ. ಈಗ ಪ್ರೊಫೆಸರ್ ಇಲ್ಲ, ರೈತರ ಸಮಸ್ಯೆಗಳು ಹಾಗೆಯೇ ಮುಂದುವರಿದಿವೆ. ಅವರ ಸಮಸ್ಯೆಗಳ ಬಗ್ಗೆ ಕಿಂಚಿತ್ತೂ ಅರಿವಿಲ್ಲದವರು ದೇಶವನ್ನಾಳುತ್ತಿದ್ದಾರೆ. ಮುಂಬರುವ ದಿನಗಳು ರೈತರ ಪಾಲಿಗೆ ದುರ್ದಿನಗಳಾಗಬಹುದು.

ಬಿ. ಚಂದ್ರೇಗೌಡ

ಬಿ. ಚಂದ್ರೇಗೌಡ
ಲಂಕೇಶರ ಪತ್ರಿಕೆಯಲ್ಲಿ ಬಯಲುಸೀಮೆಯ ಕಟ್ಟೆ ಪುರಾಣದ ಮೂಲಕ ಕನ್ನಡಿಗರೆಲ್ಲರ ಗಮನಕ್ಕೆ ಬಂದ ಚಂದ್ರೇಗೌಡರು, ನಾಟಕಕಾರರು, ನಟರಷ್ಟೇ ಅಲ್ಲ ವಿಶಿಷ್ಟ ರಾಜಕೀಯ ನೋಟವುಳ್ಳವರೂ ಸಹಾ. ಕರ್ನಾಟಕದ ಸಾಂಸ್ಕೃತಿಕ ಹಾಗೂ ರಾಜಕೀಯ ಇತಿಹಾಸದ ಆಗುಹೋಗುಗಳು ಅವರಲ್ಲಿ ದಾಖಲಾಗಿರುವ ಬಗೆಯೂ ವಿಶಿಷ್ಟವೇ..


ಇದನ್ನೂ ಓದಿ: ಎಂಡಿಎನ್ ಸಂಸ್ಮರಣಾ ದಿನ; ರೈತರ ಬಾರುಕೋಲಾಗಿದ್ದ ಪ್ರೊಫೆಸರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...