“ಉನ್ನತ ಗುರಿ ಸಾಧನೆಗೆ ಗಾಂಧಿ ಮಾರ್ಗಕ್ಕಿಂತ ಉತ್ತಮವಾದುದು ಮತ್ತೊಂದಿಲ್ಲ” ಎಂದು ತಮಿಳು ನಟ ಮತ್ತು ರಾಜಕಾರಣಿ ಕಮಲ ಹಾಸನ್ ಹೇಳಿದ್ದಾರೆ. ಮಹಾತ್ಮ ಗಾಂಧಿಯ ಹುತಾತ್ಮ ದಿನದಂದು (ಜನವರಿ 30) ಅವರನ್ನು ಸ್ಮರಿಸಿರುವ ಕಮಲ ಹಾಸನ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, “ನನ್ನ ಜೀವನವೇ ನನ್ನ ಸಂದೇಶ ಎಂದು ಬದುಕಿ, ಅದನ್ನು ಜಗತ್ತಿಗೆ ಸಾರಿದ ಗಾಂಧೀಜಿಯವರನ್ನು ಸ್ಮರಿಸೋಣ. ಉನ್ನತವಾದದನ್ನು ಸಾಧಿಸಲು ಗಾಂಧಿ ಮಾರ್ಗಕ್ಕಿಂತ ಬಲವಾದ ಮತ್ತೊಂದು ಪರ್ಯಾಯವಿಲ್ಲ” ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಮಹಾತ್ಮ ಗಾಂಧಿ ಬಗ್ಗೆ ಸಂಘಪರಿವಾರ ಮತ್ತು ಜರ್ಮನಿಯ ಗೊಬೆಲ್ಸ್‌ಗೆ ಒಂದೇ ತರಹದ ಅಸಹನೆ ಏಕಿತ್ತು?
'என் வாழ்க்கையே என் செய்தி' என வாழ்ந்து உலகிற்கு ஒளியூட்டிய காந்தியாரின் நினைவைப் போற்றுவோம். உயர்ந்த லட்சியங்களை எட்ட காந்திய வழியை விட பலம் மிக்க பிறிதொன்றில்லை.
— Kamal Haasan (@ikamalhaasan) January 30, 2021
ಗಾಂಧೀಜಿಯವರ ಹುತಾತ್ಮ ದಿನವನ್ನು ಸ್ಮರಿಸುತ್ತಾ ಹಲವು ನಾಯಕರು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಮಹಾತ್ಮ ಗಾಂಧಿ ವಿರುದ್ಧ ಕರಪತ್ರ ಹಂಚಿಲು ಹೋಗಿ ಸಿಕ್ಕಿಬಿದ್ದ ನಾಲ್ವರು ಹಿಂದೂ ಮಹಾಸಭಾದ ಕಾರ್ಯಕರ್ತರು.
ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ, “ಗಾಂಧೀಜಿಗೆ ಅವರ ಪುಣ್ಯತಿಥಿಯಂದು ನನ್ನ ನಮನಗಳು. ಅವರ ಆದರ್ಶಗಳು ಲಕ್ಷಾಂತರ ಜನರಿಗೆ ಸ್ಪೂರ್ತಿ. ಹುತಾತ್ಮರ ದಿನದಂದು, ಭಾರತದ ಸ್ವಾಂತಂತ್ರ್ಯಕ್ಕಾಗಿ ತ್ಯಾಗ ಮಾಡಿದ ಎಲ್ಲ ಮಹಿಳೆಯರು ಮತ್ತು ಪುರಷರನ್ನು ಸ್ಮರಿಸಬೇಕಿದೆ” ಎಂದು ಬರೆದಿದ್ದಾರೆ.
Tributes to the great Bapu on his Punya Tithi. His ideals continue to motivate millions.
On Martyrs’ Day we recall the heroic sacrifices of all those great women and men who devoted themselves towards India’s freedom and the well-being of every Indian.
— Narendra Modi (@narendramodi) January 30, 2021
ಇದನ್ನೂ ಓದಿ: ಗಾಂಧಿ ಹಂತಕ ಗೋಡ್ಸೆ ಹೆಸರಿನಲ್ಲಿ ಗ್ರಂಥಾಲಯ ನಿರ್ಮಿಸಿದ ಹಿಂದೂ ಮಹಾಸಭಾ!
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಟ್ವೀಟ್ ಮಾಡಿ, “ಜನರ ಬೆಂಬಲವಿಲ್ಲದೆ ಸತ್ಯ ಇನ್ನೂ ನಿಂತಿದೆ. ಈಗ ಅದು ಆತ್ಮನಿರ್ಭರವಾಗಿದೆ” ಎಂದು ಸಂಗೀತ ಸಾಮ್ರಾಜ್ಞೆ ಎಂ ಎಸ್ ಸುಬ್ಬಲಕ್ಷ್ಮಿಯವರ ಹಾಡಿನ ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
‘सत्य लोगों के समर्थन के बिना भी खड़ा रहता है, वह आत्मनिर्भर है।’
– महात्मा गाँधीबापू की पुण्यतिथि पर विनम्र श्रद्धांजलि। pic.twitter.com/41BW0XfGvF
— Rahul Gandhi (@RahulGandhi) January 30, 2021
ಇದನ್ನೂ ಓದಿ: ರೈತ ಹೋರಾಟದಲ್ಲಿ ಗಾಂಧಿ- ಅಂಬೇಡ್ಕರ್ ವಿಚಾರಗಳು
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿ, “ಕೋಮು ಸೌಹಾರ್ದತೆಗಾಗಿ ತನ್ನ ಜೀವವನ್ನು ಬಲಿದಾನಗೈದ ಮಹಾತ್ಮ ಗಾಂಧೀಜಿ ಬದುಕಿನಲ್ಲಿ ಮಾತ್ರವಲ್ಲ ಸಾವಿನಲ್ಲಿಯೂ ಹೇಳಿಹೋಗಿರುವ ಪಾಠವನ್ನು ಮರೆಯದಿರೋಣ. ಗಾಂಧೀಜಿ ಎಂಬ ಜಗದ್ಗರುವಿನ ತತ್ವಾದರ್ಶಗಳ ಅನುಷ್ಠಾನ ನಮ್ಮ ಗುರಿಯಾಗಿರಲಿ. ರಾಷ್ಟ್ರಪಿತನಿಗೆ ಗೌರವದ ಶ್ರದ್ಧಾಂಜಲಿ” ಎಂದು ನಮನ ಸಲ್ಲಿಸಿದ್ದಾರೆ.
ಕೋಮು ಸೌಹಾರ್ದತೆಗಾಗಿ ತನ್ನ ಜೀವವನ್ನು ಬಲಿದಾನಗೈದ
ಮಹಾತ್ಮ ಗಾಂಧೀಜಿ ಬದುಕಿನಲ್ಲಿ ಮಾತ್ರವಲ್ಲ ಸಾವಿನಲ್ಲಿಯೂ ಹೇಳಿಹೋಗಿರುವ ಪಾಠವನ್ನು ಮರೆಯದಿರೋಣ.ಗಾಂಧೀಜಿ ಎಂಬ ಜಗದ್ಗರುವಿನ
ತತ್ವಾದರ್ಶಗಳ ಅನುಷ್ಠಾನ ನಮ್ಮ ಗುರಿಯಾಗಿರಲಿ.ರಾಷ್ಟ್ರಪಿತನಿಗೆ ಗೌರವದ ಶ್ರದ್ಧಾಂಜಲಿ.#Gandhi pic.twitter.com/83m0JSaslT
— Siddaramaiah (@siddaramaiah) January 30, 2021
ಇದನ್ನೂ ಓದಿ: ಹೊಸ ತಲೆಮಾರು ಅಂಬೇಡ್ಕರ್–ಗಾಂಧಿ ಸಮನ್ವಯದ ಬಗ್ಗೆ ಚಿಂತಿಸಲಿ: ದೊರೆಸ್ವಾಮಿ
ಮುಖ್ಯಮಂತ್ರಿ ಯಡಿಯೂರಪ್ಪ ಟ್ವೀಟ್ ಮಾಡಿ, “ಸತ್ಯ, ಅಹಿಂಸೆಯ ಆದರ್ಶಗಳ ಸಾಕಾರ ಮೂರ್ತಿಯಂತಿದ್ದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ ಪುಣ್ಯತಿಥಿಯಂದು ಅವರಿಗೆ ಭಕ್ತಿಪೂರ್ವಕ ಪ್ರಣಾಮಗಳು. ನಮ್ಮನ್ನು ಸದಾ ಎಚ್ಚರಿಸುವ ಗಾಂಧೀಜಿಯವರ ಜೀವನ, ಅವರ ನಡೆ ಮತ್ತು ನುಡಿಗಳ ಬೆಳಕಿನಲ್ಲಿ ಸಮೃದ್ಧ, ಸಶಕ್ತ ಭಾರತ ನಿರ್ಮಾಣದ ಹಾದಿಯಲ್ಲಿ ಮುನ್ನಡೆಯೋಣ” ಎಂದು ಗೌರವ ಸಲ್ಲಿಸಿದ್ದಾರೆ.
ಸತ್ಯ, ಅಹಿಂಸೆಯ ಆದರ್ಶಗಳ ಸಾಕಾರ ಮೂರ್ತಿಯಂತಿದ್ದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ ಪುಣ್ಯತಿಥಿಯಂದು ಅವರಿಗೆ ಭಕ್ತಿಪೂರ್ವಕ ಪ್ರಣಾಮಗಳು. ನಮ್ಮನ್ನು ಸದಾ ಎಚ್ಚರಿಸುವ ಗಾಂಧೀಜಿಯವರ ಜೀವನ, ಅವರ ನಡೆ ಮತ್ತು ನುಡಿಗಳ ಬೆಳಕಿನಲ್ಲಿ ಸಮೃದ್ಧ, ಸಶಕ್ತ ಭಾರತ ನಿರ್ಮಾಣದ ಹಾದಿಯಲ್ಲಿ ಮುನ್ನಡೆಯೋಣ. pic.twitter.com/O9nO2xywP3
— B.S. Yediyurappa (@BSYBJP) January 30, 2021
ಇದನ್ನೂ ಓದಿ: ನೀವು ಯುದ್ಧದಲ್ಲಿ ಗೆದ್ದರೂ ಅದು ಸರಿಯೆಂದೇನೂ ಸಾಬೀತಾಗುವುದಿಲ್ಲ: ಹಿಟ್ಲರ್‌ಗೆ ಗಾಂಧಿ ಬರೆದಿದ್ದ ಪತ್ರ


