Homeಮುಖಪುಟಗಾಂಧಿ ಹಂತಕ ಗೋಡ್ಸೆ ಹೆಸರಿನಲ್ಲಿ ಗ್ರಂಥಾಲಯ ನಿರ್ಮಿಸಿದ ಹಿಂದೂ ಮಹಾಸಭಾ!

ಗಾಂಧಿ ಹಂತಕ ಗೋಡ್ಸೆ ಹೆಸರಿನಲ್ಲಿ ಗ್ರಂಥಾಲಯ ನಿರ್ಮಿಸಿದ ಹಿಂದೂ ಮಹಾಸಭಾ!

'ಗೋಡ್ಸೆ ಜ್ಞಾನ ಶಾಲೆ'ಯನ್ನು ದೌಲತ್ ಗಂಜ್‌ನಲ್ಲಿರುವ ಮಹಾಸಭಾ ಕಚೇರಿಯಲ್ಲಿ ಉದ್ಘಾಟಿಸಲಾಗಿದ್ದು, ಇಲ್ಲಿ ಮಹಾತ್ಮ ಗಾಂಧಿಯವರ ಹತ್ಯೆಯನ್ನು ಗೋಡ್ಸೆ ಹೇಗೆ ರೂಪಿಸಿದರು ಎನ್ನುವ ವಿವರ, ಅವರ ಲೇಖನಗಳು ಮತ್ತು ಅವರ ಭಾಷಣಗಳ ಕುರಿತ ಸಾಹಿತ್ಯವಿದೆ

- Advertisement -
- Advertisement -

ಅಖಿಲ ಭಾರತೀಯ ಹಿಂದೂ ಮಹಾಸಭಾ, ಮಹಾತ್ಮಾ ಗಾಂಧಿಯ ಹಂತಕ ನಾಥೂರಾಂ ಗೋಡ್ಸೆಯ ಹೆಸರಿನಲ್ಲಿ ಗ್ರಂಥಾಲಯವೊಂದನ್ನು ತೆರೆದಿದ್ದು, ಇದನ್ನು ಗೋಡ್ಸೆಯ ಜೀವನ ಮತ್ತು ಸಿದ್ಧಾಂತಕ್ಕೆ ಮೀಸಲಾಗಿರಿಸಿದೆ.

‘ವಿಶ್ವ ಹಿಂದಿ ದಿವಸ್’ ದಿನದ ಅಂಗವಾಗಿ ಗ್ವಾಲಿಯರ್‌ನಲ್ಲಿ ಈ ಗ್ರಂಥಾಲಯವನ್ನು ತೆರೆಯಲಾಗಿದ್ದು, ಗೋಡ್ಸೆ ಜ್ಞಾನ ಶಾಲೆ ಎಂದು ಹೆಸರಿಡಲಾಗಿದೆ.

‘ಗೋಡ್ಸೆ ಜ್ಞಾನ ಶಾಲೆ’ಯನ್ನು ದೌಲತ್ ಗಂಜ್‌ನಲ್ಲಿರುವ ಮಹಾಸಭಾ ಕಚೇರಿಯಲ್ಲಿ ಉದ್ಘಾಟಿಸಲಾಗಿದ್ದು, ಇಲ್ಲಿ ಮಹಾತ್ಮ ಗಾಂಧಿಯವರ ಹತ್ಯೆಯನ್ನು ಗೋಡ್ಸೆ ಹೇಗೆ ರೂಪಿಸಿದರು ಎನ್ನುವ ವಿವರ, ಅವರ ಲೇಖನಗಳು ಮತ್ತು ಅವರ ಭಾಷಣಗಳ ಕುರಿತ ಸಾಹಿತ್ಯವಿದೆ.

ಇದನ್ನೂ ಓದಿ: ಹೊಸ ಚರಿತ್ರೆ ಬರಿಯಲಿರುವ ಜನವರಿ 26ರ ರೈತ ಹೋರಾಟ: ಇದರಲ್ಲಿ ನಿಮ್ಮ ಪಾತ್ರವೇನು?

ಮಹಾಸಭಾದ ಉಪಾಧ್ಯಕ್ಷ ಜೈವೀರ್ ಭಾರದ್ವಾಜ್ ಮಾತನಾಡಿ, “ಗೋಡ್ಸೆ ಎಂಬ ನಿಜವಾದ ರಾಷ್ಟ್ರೀಯತಾವಾದಿಯನ್ನು ಜಗತ್ತಿಗೆ ಪರಿಚಯಿಸಲು ಈ ಗ್ರಂಥಾಲಯವನ್ನು ತೆರೆಯಲಾಗಿದೆ. ಅವಿಭಜಿತ ಭಾರತಕ್ಕಾಗಿ ಅವರು ಹೋರಾಡಿ ಸತ್ತರು. ಗೋಡ್ಸೆಯ ನಿಜವಾದ ರಾಷ್ಟ್ರೀಯತೆಯನ್ನು ಇಂದಿನ ಅಜ್ಞಾನಿ ಯುವಕರಲ್ಲಿ ಹುಟ್ಟುಹಾಕುವುದು ಗ್ರಂಥಾಲಯದ ಉದ್ದೇಶ” ಎಂದು ಹೇಳಿದರು.

“ಜವಾಹರಲಾಲ್ ನೆಹರು ಮತ್ತು ಮೊಹಮ್ಮದ್ ಅಲಿ ಜಿನ್ನಾ ಅವರ ಆಕಾಂಕ್ಷೆಗಳನ್ನು ಈಡೇರಿಸಲು ಭಾರತವನ್ನು ವಿಭಜಿಸಲಾಗಿದೆ. ಇಬ್ಬರೂ ರಾಷ್ಟ್ರವನ್ನು ಆಳಲು ಬಯಸಿದ್ದರು, ಆದರೆ ಗೋಡ್ಸೆ ಅದನ್ನು ವಿರೋಧಿಸಿದರು” ಎಂದು ಭಾರದ್ವಾಜ್ ಹೇಳಿದರು.

ಇದನ್ನೂ ಓದಿ: ಮೋದಿಯವರು ಫಾಲೋ ಮಾಡುವ ಟ್ವಿಟ್ಟರ್‌ ಖಾತೆಗಳಿಂದ ‘ನಾಥೂರಾಮ್ ಗೋಡ್ಸೆ ಜಿಂದಾಬಾದ್’ ಟ್ರೆಂಡಿಂಗ್

“ಗಾಂಧಿಯ ಹತ್ಯೆ ಮಾಡಲು ಇಲ್ಲಿ ಸಂಚು ರೂಪಿಸಲಾಗಿದ್ದರಿಂದ ಗ್ವಾಲಿಯರ್‌ನಲ್ಲಿ ಗೋಡ್ಸೆಗೆ ಮೀಸಲಾಗಿರುವ ಗ್ರಂಥಾಲಯದ ನಿರ್ಮಿಸಲು ನಿರ್ಧರಿಸಲಾಗಿದೆ. ಅಲ್ಲಿ ಪಿಸ್ತೂಲ್ ಸಹ ಖರೀದಿಸಿಡಲಾಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಮಧ್ಯಪ್ರದೇಶದ ಮಾಜಿ ಮುಖ್ಯಂತ್ರಿ ಕಮಲನಾಥ್, “ಬಿಜೆಪಿಯು ಗಾಂಧಿ ಸಿದ್ಧಾಂತದೊಂದಿಗಿದೆಯೋ ಅಥವಾ ಗೋಡ್ಸೆ ಸಿದ್ಧಾಂತದೊಂದೊಗಿದೆಯೋ ಎಂಬುದನ್ನು ಸ್ಪಷ್ಟಪಡಿಸಬೇಕು. ಗಾಂಧಿಯ ಹಂತಕರನ್ನು ಬಹಿರಂಗವಾಗಿ ಪೂಜಿಸಲಾಗುತ್ತಿದೆ. ವೀರರೆಂಬಂತೆ ಬಡ್ತಿ ನೀಡಲಾಗುತ್ತಿದೆ. ಆದರೆ ಬಿಜೆಪಿ ಸರ್ಕಾರ ಜಾಣ ಮೌನಕ್ಕೆ ಜಾರಿದೆ. ಇದು ನಾಚಿಕೆಗೇಡಿನ ವಿಷಯ. ಬಿಜೆಪಿ ಗಾಂಧಿಯ ಸಿದ್ಧಾಂತದೊಟ್ಟಿಗಿದ್ದರೆ, ಈ ಕೂಡಲೇ ಹಿಂದೂ ಮಹಾಸಭಾದ ಈ ಕೃತ್ಯವನ್ನು ತಡೆಗಟ್ಟಬೇಕು. ಇಲ್ಲದಿದ್ದರೆ ಬಿಜೆಪಿಯು ಗೋಡ್ಸೆ ಮತ್ತು ಅವನ ಸಿದ್ಧಾಂತವನ್ನು ಮುಕ್ತವಾಗಿ ರಕ್ಷಿಸುತ್ತಿದೆ ಎಂದು ಒಪ್ಪಿಕೊಳ್ಳಬೇಕು” ಎಂದು ಟ್ವೀಟ್ ಮಾಡಿದ್ದಾರೆ.

ಈ ಹಿಂದೆ ಮಹಾಸಭಾದ ಗ್ವಾಲಿಯರ್ ಕಚೇರಿಯಲ್ಲಿ ಗೋಡ್ಸೆಗೆ ದೇವಾಲಯವನ್ನು ಸ್ಥಾಪಿಸಲಾಗಿತ್ತು. ಕಾಂಗ್ರೆಸ್ ಇದಕ್ಕೆ ವ್ಯಾಪಕ ವಿರೋಧ ವ್ಯಕ್ತಪಡಿಸಿದ ನಂತರ ಇದನ್ನು ತೆಗೆದುಹಾಕಲಾಗಿತ್ತು.


ಇದನ್ನೂ ಓದಿ: ಗೋಡ್ಸೆ ಮತ್ತು ಮೋದಿಯವರು ಒಂದೇ ಸಿದ್ಧಾಂತವನ್ನು ನಂಬುತ್ತಾರೆ : ರಾಹುಲ್‌ ಗಾಂಧಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಗಾಂಧಿ ಹಂತಕನನ್ನು ಅವರು ಅಂತ ಏಕೆ ಬರೆಯುವಿರಿ ಅವನು ಅಂತ ಬರೆಯಬೇಕು

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣೆ ಬಹಿಷ್ಕರಿಸಬೇಡಿ: ಜಮ್ಮು-ಕಾಶ್ಮೀರದ ಜನತೆಗೆ ಮೆಹಬೂಬಾ ಮುಫ್ತಿ ಮನವಿ

0
'ದಕ್ಷಿಣ ಕಾಶ್ಮೀರದಲ್ಲಿ ಚುನಾವಣೆಯನ್ನು ಬಹಿಷ್ಕರಿಸಲು, ಜಮ್ಮು ಮತ್ತು ಕಾಶ್ಮೀರದ ನಿವಾಸಿಗಳನ್ನು ಬಂಧಿತ ಕಾರ್ಮಿಕರನ್ನಾಗಿ ಮಾಡಲು ಅನಾಮಧೇಯ ಶಕ್ತಿಗಳು ಪ್ರಯತ್ನಿಸುತ್ತಿವೆ' ಎಂದು ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಆತಂಕ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಕಾಶ್ಮೀರದ ಅನಂತನಾಗ್ ರಜೌರಿ...