Homeಚಳವಳಿಹೊಸ ಚರಿತ್ರೆ ಬರಿಯಲಿರುವ ಜನವರಿ 26ರ ರೈತ ಹೋರಾಟ: ಇದರಲ್ಲಿ ನಿಮ್ಮ ಪಾತ್ರವೇನು?

ಹೊಸ ಚರಿತ್ರೆ ಬರಿಯಲಿರುವ ಜನವರಿ 26ರ ರೈತ ಹೋರಾಟ: ಇದರಲ್ಲಿ ನಿಮ್ಮ ಪಾತ್ರವೇನು?

ಈಗ ದೆಹಲಿಯಲ್ಲಿ ಬೀಡುಬಿಟ್ಟಿರುವ ಲಕ್ಷಾಂತರ ರೈತರು ಮಾತ್ರವಲ್ಲದೆ ಇದಕ್ಕಿಂತಲೂ ಕನಿಷ್ಟ ಮೂರು ಪಟ್ಟು ಜನರು 26 ರ ಹೊತ್ತಿಗೆ ಬಂದು ಕೂಡಿಕೊಳ್ಳಲಿದ್ದಾರೆ. ಭಾರತದ ಧ್ವಜವನ್ನು ಕೈಯಲ್ಲಿಡಿದು ಕೆಂಪು ಕೋಟೆಯತ್ತ ಹೆಜ್ಜೆ ಹಾಕಲಿದ್ದಾರೆ. ಅರ್ಧ ಪಂಜಾಬ್ ದೆಹಲಿಯಲ್ಲಿರಲಿದೆ.

- Advertisement -
- Advertisement -

ನಿನ್ನೆ ಪ್ರಶಾಂತ್ ಭೂಷಣ್, ಯೋಗೇಂದ್ರ ಯಾದವ್, ಸೀತಾರಾಂ ಯಚೂರಿ ಒಳಗೊಂಡಂತೆ ಅನೇಕ ಮುಂದಾಳುಗಳು ಸಿಕ್ಕಿದ್ದರು. ಎಲ್ಲರ ಮಾತಿನ ಸಾರವನ್ನು ಒಂದು ವಾಕ್ಯದಲ್ಲಿ ಹೇಳಬೇಕೆಂದರೆ: “ಈ ಬಾರಿಯ ಗಣರಾಜ್ಯೋತ್ಸವ ಹೊಸ ಇತಿಹಾಸ ಬರಿಯಲಿದೆ”. ಇದರಲ್ಲಿ ಯಾವ ಸಂಶಯವೂ ಇಲ್ಲ. ಈಗ ದೆಹಲಿಯಲ್ಲಿ ಬೀಡುಬಿಟ್ಟಿರುವ ಲಕ್ಷಾಂತರ ರೈತರು ಮಾತ್ರವಲ್ಲದೆ ಇದಕ್ಕಿಂತಲೂ ಕನಿಷ್ಟ ಮೂರು ಪಟ್ಟು ಜನರು 26 ರ ಹೊತ್ತಿಗೆ ಬಂದು ಕೂಡಿಕೊಳ್ಳಲಿದ್ದಾರೆ. ಭಾರತದ ಧ್ವಜವನ್ನು ಕೈಯಲ್ಲಿಡಿದು ಕೆಂಪು ಕೋಟೆಯತ್ತ ಹೆಜ್ಜೆ ಹಾಕಲಿದ್ದಾರೆ. ಅರ್ಧ ಪಂಜಾಬ್ ದೆಹಲಿಯಲ್ಲಿರಲಿದೆ. ಹರಿಯಾಣಾದ ಪ್ರತಿ ಮನೆಯಿಂದ ಒಬ್ಬರು, ಪ್ರತಿ ಹಳ್ಳಿಯಿಂದ 10 ಟ್ರಾಕ್ಟರ್ ಹೊರಟು ಬರಬೇಕೆಂದು ಖಾಪ್ ಪಂಚಾಯಿತಿಗಳೇ ಘೋಷಿಸಿಯಾಗಿವೆ. ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ, ಮಹರಾಷ್ಟ್ರ ಎಲ್ಲಾ ಕಡೆಯಿಂದ ಜನರು ಬಂದು ಸೇರುವುದು ಈಗಾಗಲೇ ಪ್ರಾರಂಭವಾಗಿದೆ. ಈ ಜನಸಾಗರವನ್ನು [ಗುಂಡು ಹಾರಿಸದೆ] ತಡಿಯುವುದು ಸೈನ್ಯದಿಂದಲೂ ಸಾಧ್ಯವಿಲ್ಲ. ರೈತರು ಶಪಥ ಗೈದಿದ್ದಾರೆ. ಸಾಯುತ್ತೇವೆ – ಆದರೆ ಹಿಂಸೆಗೆ ಇಳಿಯುವುದಿಲ್ಲ. ಈ ಅಹಿಂಸಾತ್ಮಕ ಜನಸಾಗರವನ್ನು ಎದುರಿಸುವ ನೈತಿಕ ಶಕ್ತಿ ಸರ್ಕಾರಕ್ಕಿಲ್ಲ. ಅದರ ಯಾವ ಚಾಣಕ್ಯ ನೀತಿಗಳೂ ಫಲಿಸುತ್ತಿಲ್ಲ. ಅದರೆ ಅದಾನಿ ಅಂಬಾನಿಗಳ ಸೇವೆ ಬಿಡಲು ಸಿದ್ಧವಿಲ್ಲ. ಪರಿಣಾಮ ಹಸ್ತಿನಾಪುರದಲ್ಲಿ ಇತಿಹಾಸ ಮರುಕಳಿಸಲಿದೆ. ಜನವರಿ 26ರಂದು ದೆಹಲಿಯಲ್ಲಿ ಶಾಂತಿಯುತ ಕುರುಕ್ಷೇತ್ರ ನಡೆಯಲಿದೆ. ಫಲಿತಾಂಶವನ್ನು ಸಧ್ಯಕ್ಕೆ ವರ್ತಮಾನಕ್ಕೆ ಬಿಡೋಣ. ಈಗ ನಮ್ಮ ಮುಂದಿನ ಚರ್ಚೆ ಅಂದಿಗಾಗಿ ಇಂದು ಮತ್ತು ಇಲ್ಲಿ ನಾವೇನು ಮಾಡೋಣ?

ದೆಹಲಿ ಹತ್ತಿರವಿದ್ದಿದ್ದರೆ, ಮೊದಲಿನಂತೆ ಸರಾಗವಾಗಿ ರೈಲು ಹತ್ತಿ ಟಿಕೆಟ್ ಇಲ್ಲದೆ ದೆಹಲಿಗೆ ಪಯಣಿಸುವಂತಿದ್ದರೆ, ನಾವೂ ಸಹ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಕುರುಕ್ಷೇತ್ರದಲ್ಲಿ ಪಾಲ್ಗೊಳ್ಳಲು ಹೊರಡಬಹುದಿತ್ತು. ಆದರೆ ಅದು ಸಾಧ್ಯವಿಲ್ಲ. ಸಾಧ್ಯವಿರುವವರು ಅದಕ್ಕೂ ಹೊರಟರೆ ಒಳ್ಳೆಯದೆ. ಆದರೆ ನಾವೆಲ್ಲರೂ ಸೇರಿ ಅದೇ ದಿನ ಕರ್ನಾಟಕದಲ್ಲಿ ದುಡಿವವರ ದನಿ ಮೊಳಗುವಂತೆ ಮಾಡಲೇಬೇಕು. ಇದಕ್ಕಾಗಿಯೇ ಜನವರಿ 26ರಂದು ಬೆಂಗಳೂರಿನಲ್ಲಿ ರೈತ ಮತ್ತು ಸಮಸ್ತ ದುಡಿವ ಜನರ ಗಣರಾಜ್ಯೋತ್ಸವ ಪೆರೇಡಿಗೆ ಕರೆ ನೀಡಲಾಗಿದೆ. ಇದನ್ನು ಯಶಸ್ವಿಗೊಳಿಸಲು ನಮ್ಮಿಂದ ಸಾಧ್ಯವಿರುವುದನ್ನೆಲ್ಲಾ ಮಾಡಬೇಕು. ವೈಯಕ್ತಿಕವಾಗಿ ನಾನೇನು ಮಾಡಲಿದ್ದೇನೆ ಎಂಬ ಪ್ರಶ್ನೆಯನ್ನು ನಾವೆಲ್ಲರೂ ಹಾಕಿಕೊಳ್ಳಬೇಕು.

ಕೆಲವು ಸಲಹೆಗಳು:

1. ಜನವರಿ 25-26ನ್ನು ಈ ದೇಶದ ದುಡಿವ ಜನರಿಗೆಂದು ತೆಗೆದಿಡಲು ಸಾಧ್ಯವೆ? ನಿಮ್ಮ ಬಳಿ ಇರುವ ವಾಹನದ ಜೊತೆ, [ಕಾರು, ಟ್ರಾಕ್ಟರ್, ಜೀಪು, ಮೋಟಾರ್ ಬೈಕ್, ಸೈಕಲ್ ಯಾವುದಾದರೂ ಸರಿ] ಸಾಧ್ಯವಿರುವ ಮಿತ್ರರನ್ನು, ಕುಟುಂಬದ ಸದಸ್ಯರನ್ನು, ಜೊತೆಗೂಡಿಸಿಕೊಂಡು ಬೆಂಗಳೂರಿಗೆ ಬಂದು ಸೇರಲು ಸಿದ್ಧತೆ ಮಾಡಿಕೊಳ್ಳಬಹುದೆ?

2. ನಿಮ್ಮ ಊರಿನಲ್ಲಿ ಈಗಿನಿಂದಲೇ ನಿಮ್ಮದೇ ರೀತಿಯಲ್ಲಿ ಈ ಸಂದೇಶ ಎಲ್ಲರಿಗೂ ತಲುಪಿಸುವ ಕೆಲಸವನ್ನು ತಾವು ಮಾಡಬಹುದೆ? ನಾಳೆಯಿಂದ ಬರಲು ಪ್ರಾರಂಭವಾಗುವ ಪೋಸ್ಟರುಗಳನ್ನು ಶೇರ್ ಮಾಡಬಹುದೆ? ಕರಪತ್ರಗಳನ್ನು ಮಿತ್ರರಿಗೆ, ನೆರೆಹೊರೆಯವರಿಗೆ, ಏರಿಯಾಗಳಿಗೆ, ಸಾಧ್ಯವಾದರೆ ಹಳ್ಳಿಗಳಿಗೆ ತಲುಪಿಸಲು ಪ್ರಯತ್ನಿಸಬಹುದೆ?

3. ನಿಮ್ಮ ಸುತ್ತಮುತ್ತ ಇರುವ ಸಂಘಟನೆಗಳ ಸಭೆ ಕರೆದು ಎಲ್ಲರೂ ಸೇರಿ ಏನು ಮಾಡಬಹುದು ಎಂದು ಚರ್ಚಿಸಬಹುದೆ? ನಿಮ್ಮ ಪ್ರದೇಶದಲ್ಲಿ ನಿಮ್ಮದೇ ರೀತಿಯಲ್ಲಿ ಪ್ರಚಾರ ಜಾಥ ಹಮ್ಮಿಕೊಳ್ಳಬಹುದೆ?

4. ಬೆಂಗಳೂರಿನಲ್ಲಿ ಸುಮಾರು ಸಿದ್ಧತೆಯ ಕೆಲಸಗಳಿದ್ದು ವಾಲಂಟೀರ್ ಆಗಿ ಕೆಲಸ ಮಾಡಲು ಕೆಲವು ದಿನ ಮೊದಲು ಬೆಂಗಳೂರಿಗೆ ಬರಬಹುದೆ? ನಿಮ್ಮ ಮಿತ್ರರನ್ನು ಅಥವ ಸಂಘಟನೆಯ ಕಾರ್ಯಕರ್ತರನ್ನೂ ಈ ಪುಣ್ಯ ಕಾರ್ಯದಲ್ಲಿ ತೊಡಗಿಸಬಹುದೆ?

4. ದೂರದಿಂದ ಬರುತ್ತಿರುವ ಟ್ರಾಕ್ಟರುಗಳಿಗೆ ಡೀಸಲ್ ಹಾಕಿಸಲು, ಊಟದ ವ್ಯವಸ್ಥೆ ಮಾಡಲು, ಪ್ರಚಾರ ಸಾಮಗ್ರಿಯನ್ನು ಸಿದ್ಧಗೊಳಿಸಲು ಹಣ ಸಂಗ್ರಹ ಮಾಡಿಕೊಡಬಹುದೆ?

5. ಅಂದಿನ ಮೆರವಣಿಗೆಯನ್ನು ದೇಶಪ್ರೇಮದ ಸಂಕೇತವಾಗಿಸಲು ಒಂದಿಷ್ಟು ರಾಷ್ಟ್ರ ಧ್ವಜಗಳನ್ನು ಮಾಡಿಸಿ ಅಥವ ಕೊಂಡು 26ಕ್ಕೆ ತರಬಹುದೆ?

6. ನೀವು ಈ ಹೋರಾಟವನ್ನು ಬೆಂಬಲಿಸಿ ಮತ್ತು 26ಕ್ಕೆ ಬೆಂಗಳೂರು ಬರುವಂತೆ ಆಹ್ವಾನಿಸಿ, ನಿಮ್ಮದೇ ರೀತಿಯಲ್ಲಿ ಪುಟ್ಟ ವಿಡಿಯೋ ಅಥವ ಬರವಣಿಗೆಯ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ಮಾಡಬಹುದೆ?
ನಿಮಗೆ ಸಂಪರ್ಕದಲ್ಲಿರುವ ಪರ್ಯಾಯ ಮೀಡಿಯಾ ಅಥವ ಮುಖ್ಯವಾಹಿನಿ ಮೀಡಿಯಾಗಳಲ್ಲಿ ಇರುವ ಜನಪರ ಗೆಳೆಯ, ಗೆಳತಿಯರಿಗೆ ಕರೆ ಮಾಡಿ ಇದನ್ನು ತಮ್ಮದೇ ರೀತಿಯಲ್ಲಿ ಸುದ್ದಿ ಮಾಡುವಂತೆ ಕೇಳಿಕೊಳ್ಳಬಹುದೆ?

7. ಜನವರಿ 16ರಂದು ಇದರ ಕರ್ಟನ್ ರೈಸರ್ ಕಾರ್ಯಕ್ರಮ ಬೆಂಗಳೂರಿನ ಸ್ಕೌಟ್ಸ್ ಅಂಡ್ ಗೈಡ್ಸ್ ಸಭಾಂಗಣದಲ್ಲಿ ನಡೆಯಲಿದ್ದು, ಅದಕ್ಕೆ ದೆಹಲಿ ಹೋರಾಟಕ್ಕೆ ಮುಂದಾಳತ್ವ ನೀಡುತ್ತಿರುವ “ಸಂಯುಕ್ತ ಕಿಸಾನ್ ಮೋರ್ಚಾದ” ತಂಡ ಆಗಮಿಸಲಿದೆ. ಯೋಗೇಂದ್ರ ಯಾದವ್, ಮನ್ಜೀತ್ ಸಿಂಗ್ ಮತ್ತು ಯಧುವೀರ್ ಸಿಂಗ್ ಸಮಾಜದಲ್ಲಿ ಹರಿಬಿಡಲಾಗಿರುವ ಸುಳ್ಳು ಪ್ರಚಾರವನ್ನು ಮುಕ್ತ ಸಂವಾದದಲ್ಲಿ ಬಯಲುಗೊಳಿಸಲಿದ್ದಾರೆ. ಇದರಲ್ಲಿ ತಾವೂ ಭಾಗವಹಿಸಬಹುದೆ?

8. ನೇರವಾಗಿ ಕರ್ನಾಟಕವನ್ನು ಪ್ರತಿನಿಧಿಸಿ ಭಾಗವಹಿಸಿಸಲು ಹೋರಾಟಗಾರರ ತಂಡವೊಂದು 14ರಂದು ದೆಹಲಿಗೆ ಹೊರಟಿದ್ದು ಅದರ ಜೊತೆ ತಾವೂ ದೆಹಲಿಗೆ ಹೊರಡಬಹುದೆ?

ಆಯ್ಕೆಯ ಸ್ವಾತಂತ್ರ್ಯ ತಮ್ಮದು, ಮೇಲೆ ನಾನು ಸೂಚಿಸಿರುವ ವಿಧಾನವನ್ನೂ ಬಿಟ್ಟು ಬೇರೆಯದೇ ರೀತಿಯಲ್ಲಿ ನೀವು ಕೈಗೂಡಿಸಬಹುದು. ಕೈಗೂಡಿಸುತ್ತೀರಿ ಎಂಬ ಪೂರ್ಣ ವಿಶ್ವಾಸವೂ ಇದೆ. ಇದರ ಮಹತ್ವವನ್ನು ಒತ್ತಿ ಹೇಳಲು ಮತ್ತು ಸಾಧ್ಯತೆಗಳನ್ನು
ತೆರೆದಿಡಲು ಮಾತ್ರ ಇದನ್ನು ಬರೆದಿದ್ದೇನೆ. ಜನವರಿ 26 ರಂದು ತಪ್ಪದೇ ಬೆಂಗಳೂರಿನಲ್ಲಿ ಭೇಟಿಯಾಗೋಣ. ಒಂದು ವೇಳೆ ನೀವು ದೆಹಲಿ ಕುರುಕ್ಷೇತ್ರಕ್ಕೇ ಹೋಗುವುದಾದರೆ ಬಂದ ನಂತರ ಭೇಟಿಯಾಗೋಣ.

  • ನೂರ್ ಶ್ರೀಧರ್

ಇದರಲ್ಲಿ ಭಾಗಿಯಾಗುವವರು ಅಥವಾ ಹೆಚ್ಚಿನ ಮಾಹಿತಿ ಬೇಕಾದವರು ಸರೋವರ್‍ ಬೆಂಕಿಕೆರೆ (9686842196) ರವರನ್ನು ಸಂಪರ್ಕಿಸಬಹುದು.


ಇದನ್ನೂ ಓದಿ: ಸದ್ಯಕ್ಕೆ ಕೃಷಿ ಕಾಯ್ದೆ ಜಾರಿ ತಡೆಹಿಡಿಯಿರಿ, ಇಲ್ಲದಿದ್ದರೆ ನಾವು ತಡೆಯುತ್ತೇವೆ: ಕೇಂದ್ರಕ್ಕೆ ಸುಪ್ರೀಂ ತರಾಟೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಈ ರೀತಿಯ ಕಾರ್ಯಕ್ರಮಗಳಿಂದ ಭಾರತಕ್ಕೆ ಈಗ ಅನಿವಾರ್ಯವಾಗಿರುವ ಪರ್ಯಾಯ ನಾಯಕತ್ವ ರೂಪುಗೊಳ್ಳಲಿ , ಡ್ಜ್ರುವೀಕರಣ ಗೊಳ್ಳುತ್ತಿರುವ ಜನಾಂಗಗಳ ನಡುವೆ ಸಾಮರಸ್ಯ ಮೂಡಿಸಲು ಹಾಗು ವಾಸ್ತವತೆಯನ್ನು ಸರಿಯಾಗಿ ಪ್ರತಿಬಿಂಬಿಸದ ಮಾಧ್ಯಮಗಳ ನಡವಳಿಕೆಯನ್ನು ಚರ್ಚಿಸಲು ಒಂದು ವೇದಿಕೆಯಾಗಲಿ.
    MSP ರೈತರ ಹಕ್ಕಾಗುವಂತೆ ,ನೈಜ ಸುದ್ದಿ ನಾಗರಿಕರ ಕನಿಷ್ಟ ಹಕ್ಕು ಆಗುವಂತೆ ನಾವು ಸಮಾಜವನ್ನು ರೂಪಿಸಬಹುದೇ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...