Homeಮುಖಪುಟತಿರುಚ್ಚಿ: ಮಂಗಳಮುಖಿಗೆ ಪ್ರವೇಶಾತಿ ನೀಡಿ ಲಿಂಗಾಧಾರಿತ ಕಳಂಕ ಬದಿಗೊತ್ತಿದ 'ಶಿವಾನಂದ' ಶಾಲೆ

ತಿರುಚ್ಚಿ: ಮಂಗಳಮುಖಿಗೆ ಪ್ರವೇಶಾತಿ ನೀಡಿ ಲಿಂಗಾಧಾರಿತ ಕಳಂಕ ಬದಿಗೊತ್ತಿದ ‘ಶಿವಾನಂದ’ ಶಾಲೆ

ನಾವು ಹರಿಣಿಗೆ ಮೊದಲ ಪ್ರವೇಶವನ್ನು ನೀಡಿದ್ದೇವೆ. ಆಕೆಯ ಪೋಷಕರು ಅವಳನ್ನು ಮನೆಯಿಂದ ಹೊರಹಾಕಿದ್ದಾರೆ. ನಿರ್ದಿಷ್ಟವಾಗಿ ಇಂತಹ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಕಾರಣಕ್ಕೆ ಈ ಹಾಸ್ಟಲ್‌ ಅನ್ನು ಸ್ಥಾಪಿಸಿದ್ದೇವೆ"

- Advertisement -
- Advertisement -

ಮಂಗಳಮುಖಿ ಅಥವಾ ಲೈಂಗಿಕ ಅಲ್ಪಸಂಖ್ಯಾತರು ಇಂದಿಗೂ ಮುಖ್ಯವಾಹಿನಿಗೆ ಬಂದು ಎಲ್ಲರಂತೆ ಬದುಕಲು ಹೆಣಗಾಡುತ್ತಿದ್ದಾರೆ. ಆದರೆ ನಮ್ಮ ಸಮಾಜ ಇನ್ನೂ ಈ ಪ್ರಕ್ರಿಯೆಗೆ ಮುಕ್ತವಾಗಿಲ್ಲ. ಆದರೆ ತಮಿಳುನಾಡಿನ ತಿರುಚ್ಚಿ ಯಲ್ಲಿ ಆಶಾದಾಯಕ ಬೆಳವಣಿಗೆಯೊಂದು ನಡೆದಿದ್ದು, ಯುವ ಮಂಗಳಮುಖಿಯನ್ನು ಶಾಲೆಯೊಂದರಲ್ಲಿ ದಾಖಲು ಮಾಡಿಕೊಳ್ಳಲಾಗಿದೆ.

ತನ್ನ ದೇಹದಲ್ಲಾದ ಬದಲಾವಣೆಗಳು ಬೆಳಕಿಗೆ ಬಂದಾಗ ಹರಿಹರನ್‌ಗೆ 10 ವರ್ಷ. 5 ನೇ ತರಗತಿಯಲ್ಲಿ ಓದುತ್ತಿದ್ದ ಹುಡುಗನಲ್ಲಿನ ಬದಲಾವಣೆಗಳನ್ನು ಕುಟುಂಬ ಸ್ವೀಕರಿಸಿರಲಿಲ್ಲ. ಹಾಗಾಗಿ ಪೋಷಕರು ತೀವ್ರ ಹಿಂಸೆ ನೀಡುತ್ತಿದ್ದರು. ನಂತರ ಪೊಲೀಸರಿಂದ ರಕ್ಷಿಸಲ್ಪಟ್ಟ ಹರಿಹರನ್‌ ಭವಿಷ್ಯದಲ್ಲಿ ತಾನೂ ಪೊಲೀಸ್ ಆಗಬೇಕು ಎಂದು ನಿರ್ಧರಿಸಿ, ತನ್ನ ನೆರೆಯಲ್ಲಿದ್ದ ಮಂಗಳಮುಖಿಯ ಆಶ್ರಯದಲ್ಲಿ ಬೆಳೆದು ಈಗ 11 ನೇ ತರಗತಿಯ ವ್ಯಾಸಾಂಗಕ್ಕೆಂದು ಶ್ರೀ ಶಿವಾನಂದ ಶಾಲೆಗೆ ದಾಖಲಾಗಿದ್ದಾ’ಳೆ’. ಅಂದಹಾಗೆ ಈಗ ಹರಿಹರನ್ ‘ಹರಿಣಿ’ಯಾಗಿದ್ದಾಳೆ.

ಇದನ್ನೂ ಓದಿ: ‘She Man’: ನೋಯ್ಡಾ ಮೆಟ್ರೋ ಸ್ಟೇಷನ್ ಹೆಸರಿಗೆ ಟ್ರಾನ್ಸ್‌ಜೆಂಡರ್ ಸಮುದಾಯದ ವಿರೋಧ

“ನಾನು ನನ್ನ ತಾಯಿಯ ಸೀರೆ ಧರಿಸುತ್ತಿದ್ದೆ. ಮಸ್ಕರಾ, ಲಿಪ್‌ಸ್ಟಿಕ್ ಹಾಕಿಕೊಳ್ಳುತ್ತಿದ್ದೆ. ನೃತ್ಯವನ್ನು ತುಂಬಾ ಇಷ್ಟಪಡುತ್ತಿದ್ದೆ. ಹೀಗಿರುವಾಗ ನಾನು ನನ್ನನ್ನು ಹೆಚ್ಚಾಗಿ ಇಷ್ಟಪಡುತ್ತಿದ್ದೆ. ಜೊತೆಗೆ ವಾಸ್ತವಿಕವಾಗಿ ಇದು ‘ನಾನು’ ಎಂದು ತಿಳಿದಿದ್ದೆ. ಕ್ರಮೇಣ ನನ್ನ ದೇಹ ಮತ್ತು ಭಾವನೆಗಳು ಬದಲಾಗಲಾರಂಭಿಸಿತು. ಆದರೆ ನನ್ನ ಕುಟುಂಬ ಅದನ್ನು ಗಮನಿಸಲಿಲ್ಲ. ಕಳೆದ ಎರಡು ವರ್ಷಗಳಲ್ಲಿ ನಾನು ಟ್ರಾನ್ಸ್‌ಜೆಂಡರ್ ಎಂದು ಅರಿತುಕೊಂಡೆ. ಆದರೆ ನನ್ನ ಕುಟುಂಬ ಇದನ್ನು ಸ್ವೀಕರಿಸಲಿಲ್ಲ. ನನ್ನ ಹಿರಿಯ ಸಹೋದರ ಮತ್ತು ಇತರ ಕುಟುಂಬ ಸದಸ್ಯರು ನನ್ನನ್ನು ಹಿಂಸಿಸುತ್ತಿದ್ದರು. ನಾನು ಹುಡುಗನಂತೆ ಇರಬೇಕು ಎಂದು ಬಲವಂತ ಮಾಡುತ್ತಿದ್ದರು” ಎಂದು ಹರಿಣಿ ಹೇಳುತ್ತಾಳೆ.

ಮನೆಯಲ್ಲಿ ಹಿಂಸೆ ಹೆಚ್ಚಾದಾಗ, ಹತ್ತಿರದಲ್ಲಿಯೇ ವಾಸಿಸುತ್ತಿದ್ದ ಮತ್ತೊಬ್ಬ ಮಂಗಳಮುಖಿ ಏಂಜಲ್ ಎಂಬುವವರು‌ ಹರಿಣಿಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡರು. ಹರಿಣಿಯ ಜೀವನವು ತನ್ನ ಜೀವನದಂತೆ ಆಗಬಾರದು ಎಂದು ನಿರ್ಧರಿಸಿ ಆಕೆಗೆ ಶಿಕ್ಷಣ ನೀಡಲು ಮುಂದಾದರು. ಈ ಸಂದರ್ಭದಲ್ಲಿ ಶಿವಾನಂದ ರೆಸಿಡೆನ್ಶಿಯಲ್ ಶಾಲೆಯ ಬಗ್ಗೆ ತಿಳಿದ ಏಂಜೆಲ್ ಹರಿಣಿಯನ್ನು ನಿನ್ನೆ ಶಾಲೆಗೆ ಸೇರಿಸಿದ್ದಾರೆ.

ಇದನ್ನೂ ಓದಿ: ಟ್ರಾನ್ಸ್‌ಜೆಂಡರ್ ಸಮುದಾಯದ ಅರಿವಿನ ಲೋಕ ವಿಸ್ತರಿಸುತ್ತಿರುವ ಉಮಾ

ನಿವೃತ್ತ ಮೇಜರ್ ಜನರಲ್ ಎನ್‌ಆರ್‌ಕೆ ಬಾಬು ಅವರ ಕನಸಿನ ಕೂಸಾಗಿದ್ದ ಈ ಶಾಲೆಯ ಹಾಸ್ಟಲ್‌ನಲ್ಲಿ ಹರಿಣಿಗೆ ಮೊದಲ ಪ್ರವೇಶಾತಿಯನ್ನು ನೀಡಲಾಗಿದೆ. ಇದನ್ನು ಕಳೆದ ವರ್ಷವಷ್ಟೆ ನಿರ್ಮಿಸಲಾಗಿತ್ತು.

“ನಾವು ಹರಿಣಿಗೆ ಮೊದಲ ಪ್ರವೇಶವನ್ನು ನೀಡಿದ್ದೇವೆ. ಆಕೆಯ ಪೋಷಕರು ಅವಳನ್ನು ಮನೆಯಿಂದ ಹೊರಹಾಕಿದ್ದಾರೆ. ನಿರ್ದಿಷ್ಟವಾಗಿ ಇಂತಹ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಕಾರಣಕ್ಕೆ ಈ ಹಾಸ್ಟಲ್‌ ಅನ್ನು ಸ್ಥಾಪಿಸಿದ್ದೇವೆ. ಶೀಘ್ರದಲ್ಲೇ ಹೆಚ್ಚಿನ ಮಕ್ಕಳು ಇಲ್ಲಿಗೆ ಸೇರಬೇಕೆಂದು ಬಯಸುತ್ತೇವೆ” ಎಂದು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಹೇಳಿದ್ದಾರೆ.

ಇದನ್ನೂ ಓದಿ: ಸ್ಥಳೀಯ ಚುನಾವಣೆಯಲ್ಲಿ ಸ್ಪರ್ಧೆ; ಇತರೆ ಅಭ್ಯರ್ಥಿಗಳಿಗೆ ಸವಾಲು ಹಾಕಿದ ಮಂಗಳಮುಖಿಯರು!

ಹರಿಣಿಗೆ ಸರಿಯಾದ ಜೀವನವನ್ನು ರೂಪಿಸಿಕೊಡಲು ಶ್ರಮಪಡುತ್ತಿರುವ ಏಂಜೆಲ್, “ನನಗೆ 9 ನೇ ತರಗತಿಯ ನಂತರ ಓದಲು ಸಾಧ್ಯವಾಗಲಿಲ್ಲ. ನನ್ನ ಕುಟುಂಬ ನನ್ನನ್ನು ನಿರಾಕರಿಸಿತು. ಕೊನೆಗೆ ನಾನು ಭಿಕ್ಷೆ ಬೇಡಿ ಜೀವನ ಸಾಗಿಸಬೇಕಾಯಿತು. ಹಾಗಾಗಿ ಹರಿಣಿಯ ಜೀವನ ನನ್ನಂತಾಗಬಾರದು ಎಂದು ನಿರ್ಧರಿಸಿದೆ. ನಂತರ ಈ ಶಿವಾನಂದ ಬಾಲಾಲಯದ ಬಗ್ಗೆ ತಿಳಿದುಕೊಂಡು ಬಾಬು ಸರ್ ಅವರನ್ನು ಸಂಪರ್ಕಿಸಿದೆ” ಎಂದು ಹೇಳಿದರು.

ಹರಿಣಿಯು ಸಬ್‌ ಇನ್ಸ್‌ಪೆಕ್ಟರ್ ಆಗಬೇಕೆಂದು ಬಯಸಿದ್ದು, ತನಗೆ 18 ವರ್ಷ ತುಂಬಿದ ನಂತರ ಶಸ್ತ್ರ ಚಿಕಿತ್ಸೆಯ ಮೂಲಕ ಲಿಂಗಪರಿವರ್ತನೆ ಮಾಡಿಸಿಕೊಳ್ಳುವುದಾಗಿ ಹೇಳಿದ್ದಾಳೆ.


ಇದನ್ನೂ ಓದಿ: ಕೇರಳ: ಸಾಕ್ಷರತಾ ಮಿಷನ್ ಅಡಿಯಲ್ಲಿ 18 ಮಂಗಳಮುಖಿಯರು ಉನ್ನತ ವ್ಯಾಸಾಂಗಕ್ಕೆ ಆಯ್ಕೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೆಹಲಿ ಗಲಭೆ ಪ್ರಕರಣದಿಂದ ಒಂಬತ್ತು ಜನರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಒಂಬತ್ತು ಜನರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ. ಸಾಕ್ಷ್ಯಗಳು ನಿರ್ದಿಷ್ಟತೆಯ ಕೊರತೆ ಮತ್ತು ಸಾಮಾನ್ಯ ಸ್ವರೂಪದ್ದಾಗಿರುವುದರಿಂದ ಪ್ರಕರಣದಲ್ಲಿ ಅವುಗಳನ್ನು ನಂಬಲಾಗುವುದಿಲ್ಲ ಎಂ ನ್ಯಾಯಾಲಯ ಹೇಳಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ...

ಚುನಾವಣಾ ಕಾರ್ಯಕ್ಕೆ ಅರಣ್ಯ ಸಿಬ್ಬಂದಿ : ಅಸ್ಸಾಂ ಸರ್ಕಾರದ ಆದೇಶಕ್ಕೆ ಎನ್‌ಜಿಟಿ ತಡೆ

ವಿಧಾನಸಭೆ ಚುನಾವಣೆಗೆ ಅಸ್ಸಾಂ ಅರಣ್ಯ ಸಂರಕ್ಷಣಾ ಪಡೆಯ 1,600 ಸಿಬ್ಬಂದಿಯನ್ನು ನಿಯೋಜಿಸಲು ಕೋರಿದ್ದ ಅಸ್ಸಾಂ ಸರ್ಕಾರದ ಆದೇಶವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪೂರ್ವ ವಲಯ ಪೀಠ ಗುರುವಾರ (ಮಾ.2) ತಡೆಹಿಡಿದಿದೆ. ಈ ಆದೇಶವನ್ನು...

‘ಕರೂರು ದುರಂತದಲ್ಲಿ ಪಿತೂರಿ ಇದೆ’ ಈ ಘಟನೆಯಲ್ಲಿ ನನಗೂ ನ್ಯಾಯ ಬೇಕು: ಟಿವಿಕೆ ಮುಖ್ಯಸ್ಥ ನಟ, ರಾಜಕಾರಣಿ ವಿಜಯ್ ಆರೋಪ  

ಕರೂರಿನಲ್ಲಿ ನಡೆದ ದುರಂತ ಕಾಲ್ತುಳಿತ ಮತ್ತು ಅವರ ಕೊನೆಯ ಚಿತ್ರ ಜನನಾಯಗನ್ ಬಿ ಡುಗಡೆಯ ಹಿಂದೆ ಜಂಟಿ ಕುತಂತ್ರ ಮತ್ತು ಪಿತೂರಿ ಇದೆ ಎಂದು ಟಿವಿಕೆ ಮುಖ್ಯಸ್ಥ ವಿಜಯ್ ಗುರುವಾರ ಆರೋಪಿಸಿದ್ದಾರೆ ಮತ್ತು...

ತೆಲಂಗಾಣ| ಗೋಮಾಂಸ ಮಾರಾಟ ಆರೋಪ; ಮುಸ್ಲಿಂ ಸಮುದಾಯದ ತಂದೆ-ಮಗನ ಮೇಲೆ ಹಲ್ಲೆ

ಹನುಮಾನ್ ಜಯಂತಿ ಸಂದರ್ಭದಲ್ಲಿ ಗೋಮಾಂಸ ಮಾರಾಟ ಮಾಡಿದ ಆರೋಪದ ಮೇಲೆ ಹಿಂದುತ್ವವಾದಿ ಗುಂಪೊಂದು 60 ವರ್ಷದ ಮುಸ್ಲಿಂ ವ್ಯಕ್ತಿ ಮತ್ತು ಆತನ ಹದಿಹರೆಯದ ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ತೆಲಂಗಾಣದ ಜಗ್ತಿಯಾಲ್...

‘ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ’..ಚುನಾವಣೆ ಗೆಲ್ಲಲು ಧರ್ಮ ಮುಂದಿಟ್ಟ ಗುರುವಾಯೂರು ಬಿಜೆಪಿ ಅಭ್ಯರ್ಥಿ

ಕೇರಳದ ಗುರುವಾಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಗೋಪಾಲಕೃಷ್ಣನ್ ಚುನಾವಣೆ ಗೆಲ್ಲಲು ಧರ್ಮವನ್ನೇ ಮುಖ್ಯ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು, ಕಳೆದ 50 ವರ್ಷಗಳಲ್ಲಿ ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ ಎಂಬುವುದನ್ನು ಪುನರುಚ್ಚರಿಸಿದ್ದಾರೆ. ಚುನಾವಣಾ ಪ್ರಚಾರದ ಭಾಗವಾಗಿ...

ಹೊಸ ಹಿಂದೂ ದೇವಾಲಯಕ್ಕೆ ಭೂಮಿ ಮಂಜೂರು ಮಾಡಿದ ಸಿಂಗಾಪುರ ಆಡಳಿತ

ಸಿಂಗಪುರದಲ್ಲಿ ಹೆಚ್ಚುತ್ತಿರುವ ಹಿಂದೂ ಸಮುದಾಯದ ಅಗತ್ಯಗಳನ್ನು ಪೂರೈಸಲು ಸಿಂಗಾಪುರ ಸರ್ಕಾರವು ನಗರ-ರಾಜ್ಯದ ಯಿಶುನ್ ಅವೆನ್ಯೂ 3 ರಲ್ಲಿ ಹೊಸ ಹಿಂದೂ ದೇವಾಲಯವನ್ನು ನಿರ್ಮಿಸಲು ಭೂಮಿ ಮಂಜೂರು ಮಾಡಿದೆ. ಏಪ್ರಿಲ್ 1 ರ ಬುಧವಾರದ ಮಾಧ್ಯಮ...

ಕೇರಳ ಚುನಾವಣೆಗೆ ಮುನ್ನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಬೆಂಬಲ ಘೋಷಿಸಿದ ‘ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ’

ಎಡ ಸರ್ಕಾರ ಕೈಗೊಂಡ ಅಭಿವೃದ್ಧಿ ಉಪಕ್ರಮಗಳು ಆದಿವಾಸಿ, ದಲಿತ ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳನ್ನು ಬದಿಗಿಟ್ಟಿವೆ ಎಂದು ಆರೋಪಿಸಿ, ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ (ಎಡಿಎಫ್) ಬುಧವಾರ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ...

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಪೂರ್ವಾನುಮತಿ ನೀಡಲು ಹೈಕೋರ್ಟ್ ನಿರ್ದೇಶನ

ಪರಿಸರ ಸ್ನೇಹಿ ಬಟ್ಟೆ ಚೀಲಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ....

ನ್ಯಾಯಾಂಗ ಅಧಿಕಾರಿಗಳನ್ನು ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಎಸ್‌ಐಆರ್ ಕಾರ್ಯದಲ್ಲಿ ತೊಡಗಿರುವ ನ್ಯಾಯಾಂಗ ಅಧಿಕಾರಿಗಳನ್ನು 'ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂಷಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಬುಧವಾರ ಪ್ರತಿಭಟನಾಕಾರರು ಹಲವಾರು...

ಎಎಪಿಯ ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾಗೆ ಕೋಕ್, ಅಶೋಕ್ ಮಿತ್ತಲ್ ಗೆ ಅಧಿಕಾರ: ವರದಿ

ಮಹತ್ವದ ಬೆಳವಣಿಗೆಯೊಂದರಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯಸಭೆಯಲ್ಲಿ ರಾಘವ್ ಚಡ್ಡಾ ಅವರನ್ನು ಉಪನಾಯಕ ಹುದ್ದೆಯಿಂದ ಬದಲಾಯಿಸಲು ಮುಂದಾಗಿದ್ದು, ಇದು ಪಕ್ಷದೊಳಗಿನ ಆಂತರಿಕ ಬಿರುಕು ಉಂಟಾಗಿರುವ ಲಕ್ಷಣಗಳನ್ನು ಸೂಚಿಸುತ್ತದೆ. ಮೇಲ್ಮನೆಯಲ್ಲಿ ಪಕ್ಷದ ಹೊಸ...