Homeಮುಖಪುಟಬಿಜೆಪಿ ಪಕ್ಷ ಸಂಘಟನೆಗೆ ತಡೆ: ವೆಟ್ರಿವೇಲ್ ಯಾತ್ರೆ ಆರಂಭಿಸಿದ ಬಿಜೆಪಿ ಮುಖಂಡ ಸೇರಿ 100 ಕಾರ್ಯಕರ್ತರ...

ಬಿಜೆಪಿ ಪಕ್ಷ ಸಂಘಟನೆಗೆ ತಡೆ: ವೆಟ್ರಿವೇಲ್ ಯಾತ್ರೆ ಆರಂಭಿಸಿದ ಬಿಜೆಪಿ ಮುಖಂಡ ಸೇರಿ 100 ಕಾರ್ಯಕರ್ತರ ಬಂಧನ

ತಮಿಳುನಾಡಿನಲ್ಲಿ ಮಿತ್ರ ಪಕ್ಷಗಳಾಗಿದ್ದ AIADMK ಮತ್ತು ಬಿಜೆಪಿ ನಡುವೆ ಬಿರುಕು ಆರಂಭವಾಗಿದೆ. ಬಿಜೆಪಿ ಪಕ್ಷ ಸಂಘಟನೆ ತಡೆಯಲು ಈ ರ್ಯಾಲಿಗೆ ಅನುಮತಿ ನೀಡಿಲ್ಲ ಎನ್ನಲಾಗುತ್ತಿದೆ.

- Advertisement -
- Advertisement -

ತಮಿಳಿನಾಡಿನಲ್ಲಿ ಪೊಲೀಸ್ ಅನುಮತಿಯಿಲ್ಲದೆ “ವೆಟ್ರಿವೇಲ್ ಯಾತ್ರೆ” ಪ್ರಾರಂಭಿಸಿದ್ದಕ್ಕಾಗಿ ರಾಜ್ಯ ಬಿಜೆಪಿ ಮುಖ್ಯಸ್ಥ ಎಲ್.ಮುರುಗನ್ ಮತ್ತು ಸುಮಾರು 100 ಮಂದಿ ಬಿಜೆಪಿ ಕಾರ್ಯಕರ್ತರನ್ನು ತಿರುತ್ತಾನಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಇದು ರಾಜ್ಯದಲ್ಲಿ ಬಿಜೆಪಿ ಪಕ್ಷ ಸಂಘಟನೆಯನ್ನು ತಡೆಯುವ ಆಡಳಿತರೂಢ AIADMK ಸರ್ಕಾರದ ಕ್ರಮ ಎನ್ನಲಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ AIADMK ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡಿದ್ದವು.

ತಮಿಳುನಾಡಿನಲ್ಲಿ ನಡೆಯುವ ವೆಟ್ರಿವೇಲ್ ಯಾತ್ರೆಯನ್ನು ನಡೆಸಲು ಅನುಮತಿ ಕೋರಿ ರಾಜ್ಯ ಬಿಜೆಪಿ ಘಟಕವು ಮನವಿ ಸಲ್ಲಿಸಿತ್ತು. ಆದರೆ ಇದನ್ನು ತಿರಸ್ಕರಿಸಿದ ರಾಜ್ಯ ಸರ್ಕಾರ ಕೊರೊನಾ ಕಾರಣವನ್ನು ನೀಡಿತ್ತು. ಆದರೂ, ಬಿಜೆಪಿ ಚೆನ್ನೈನ ಪಕ್ಕದಲ್ಲಿರುವ ತಿರುವಳ್ಳೂರು ಜಿಲ್ಲೆಯ ತಿರುತ್ತಾನಿ ಮುರುಗನ್ ದೇವಸ್ಥಾನದಿಂದ ಯಾತ್ರೆ  ನಡೆಸಲು ಪ್ರಾರಂಭಿಸಿತ್ತು.

2021 ರಲ್ಲಿ ತಮಿಳುನಾಡಿನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ರಾಜ್ಯದಲ್ಲಿ ಹಿಂದೂ ಮತಗಳನ್ನು ಕ್ರೋಢಿಕರಿಸುವ ಪ್ರಯತ್ನವಾಗಿ ಬಿಜೆಪಿ ಈ ಯಾತ್ರೆಯನ್ನು ಆಯೋಜಿಸಿದೆ. ವೆಟ್ರಿವೇಲ್ ಯಾತ್ರೆ ಒಂದು ತಿಂಗಳ ಕಾಲ ನಡೆಯುವ ರ್‍ಯಾಲಿಯಾಗಿದ್ದು, ಮುರುಗನ್ ದೇವರ ಹೆಸರಲ್ಲಿ ರಥಯಾತ್ರೆಯ ಮಾದರಿಯಲ್ಲಿ ನವೆಂಬರ್ 6 ರಿಂದ ಡಿಸೆಂಬರ್ 6 ರವರೆಗೆ ತಮಿಳುನಾಡಿನ ಉತ್ತರದ ತಿರುತ್ತಾನಿ ದೇವಸ್ಥಾನದಿಂದ ತಿರುಚೆಂದೂರು ದೇವಸ್ಥಾನದವರೆಗೆ ನಡೆಸಲು ಯೋಜಿಸಲಾಗಿತ್ತು.

ಇದನ್ನೂ ಓದಿ: ವಿಧಾನಸಭಾ ಚುನಾವಣೆಯಲ್ಲಿ ರಜನಿಕಾಂತ್ ಬೆಂಬಲ ಕೇಳುತ್ತೇನೆ: ಕಮಲ್ ಹಾಸನ್

ಕೊರೊನಾವೈರಸ್ ಸಾಂಕ್ರಾಮಿಕ ಮತ್ತು ರಾಜ್ಯದ ಜನರ ಹಿತದೃಷ್ಟಿಯಿಂದ ನವೆಂಬರ್ 6 ರಿಂದ ಡಿಸೆಂಬರ್ 6 ರವರೆಗೆ ನಿಗದಿಯಾದ ಯಾತ್ರೆ ಅಥವಾ ಪ್ರಯಾಣವನ್ನು ಅನುಮತಿಸಲು ‘ಕಾನೂನುಬದ್ಧವಾಗಿ’ ಸಾಧ್ಯವಿಲ್ಲ ಎಂದು ಎಐಎಡಿಎಂಕೆ ಸರ್ಕಾರದ ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಹೇಳಿದರು.

“ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸುವ ಹಕ್ಕು ನನಗೆ ಇದೆ. ಪೂಜಿಸುವುದು ನನ್ನ ಸಾಂವಿಧಾನಿಕ ಹಕ್ಕು” ಎಂದು ರಾಜ್ಯ ಬಿಜೆಪಿ ಮುಖ್ಯಸ್ಥ ಮುರುಗನ್ ನಿನ್ನೆ ಹೇಳಿದ್ದರು.

ವೆಟ್ರಿವೇಲ್ ಯಾತ್ರೆ ಮುಗಿಯಬೇಕಿದ್ದ ಡಿಸೆಂಬರ್ 6, 1992 ರಲ್ಲಿ ಬಾಬರಿ ಮಸೀದಿ ಧ್ವಂಸಗೊಂಡ ದಿನದ ವಾರ್ಷಿಕೋತ್ಸವವನ್ನು ಸೂಚಿಸುತ್ತದೆ. ಈ ದುರಂತ ರಾಷ್ಟ್ರವ್ಯಾಪಿ ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ನೇತೃತ್ವದಲ್ಲಿ ಆಯೋಜಿಸಿದ ರಥಯಾತ್ರೆಯ ಕೊನೆಯ ದಿನ ನಡೆದಿತ್ತು.

ಬಿಜೆಪಿಯ ವೆಟ್ರಿವೇಲ್ ಯಾತ್ರೆ ವಿರುದ್ಧ ಮದ್ರಾಸ್ ಹೈಕೋರ್ಟ್‌ನಲ್ಲಿ ಹಲವಾರು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಲಾಗಿದೆ. ಅಡ್ವೊಕೇಟ್ ಜನರಲ್ ವಿಜಯ್ ನಾರಾಯಣ್ ಅವರು ನವೆಂಬರ್ 15 ರವರೆಗೆ ಧಾರ್ಮಿಕ, ರಾಜಕೀಯ ಮತ್ತು ಸಾಮಾಜಿಕ ಸಭೆಗಳನ್ನು ನಿಷೇಧಿಸುವ ಸರ್ಕಾರದ ಆದೇಶವನ್ನು ಉಲ್ಲೇಖಿಸಿ ಅರ್ಜಿ ಸಲ್ಲಿಸಿದ್ದಾರೆ.

ಮೆರವಣಿಗೆಗಳು ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳನ್ನು ಸೃಷ್ಟಿಸುವುದರ ಜೊತೆಗೆ ಕೊರೊನಾ ಹರಡುವಿಕೆಯನ್ನು ಹೆಚ್ಚಿಸುವ ಅಪಾಯವನ್ನುಂಟುಮಾಡುತ್ತದೆ ಎಂದು ಅನೇಕರು ಅರ್ಜಿಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಆಂಧ್ರ ಪ್ರದೇಶ: 262 ವಿದ್ಯಾರ್ಥಿಗಳಿಗೆ ಕೊರೊನಾ, ಆತಂಕ ಬೇಡ ಎಂದ ಇಲಾಖೆ!

ತಮಿಳುನಾಡಿನಲ್ಲಿ ಬಿಜೆಪಿ ಮತ್ತು ಆಡಳಿತಾರೂಢ ಎಐಎಡಿಎಂಕೆ ಪಕ್ಷದ ನಡುವೆ ಮುಂದಿನ ವರ್ಷದ ಚುನಾವಣೆಯಲ್ಲಿ ಅಧಿಕಾರಕ್ಕೆ ಬರಲು ಇಬ್ಬರ ನಡುವೆ ಪ್ರಬಲ ಪೈಪೋಟಿ ನಡೆಯುತ್ತಿದೆ. ಬಿಜೆಪಿ ತಮಿಳುನಾಡಿನಲ್ಲಿ ಅಧಿಕಾರಕ್ಕೆ ಬರಲು ಶತಪ್ರಯತ್ನ ಮಾಡುತ್ತಿದ್ದು, ಹಲವರನ್ನು ತನ್ನತ್ತ ಸೆಳೆಯುತ್ತಿದೆ. ಇದಕ್ಕೆ ಉದಾಹರಣೆಯಾಗಿ, ಐಪಿಎಸ್‌ ಅಧಿಕಾರಿ ಅಣ್ಣಾಮಲೈ ಬಿಜೆಪಿಗೆ ಸೇರ್ಪಡೆಯಾಗಿದ್ದು, ಮತ್ತು ಕಾಂಗ್ರೆಸ್ ತೊರೆದು ನಟಿ ಖುಷ್ಬೂ ಕೂಡ ಬಿಜೆಪಿಗೆ ಪಕ್ಷಾಂತರಗೊಂಡಿದ್ದಾರೆ.

1992 ರಲ್ಲಿ ರಥಯಾತ್ರೆ ಆರಂಭಿಸಿ ದೇಶಾದ್ಯಂತ ಯಾತ್ರೆ ಕೈಗೊಂಡು ದೇವರು, ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡಿ ಭಧ್ರ ಬುನಾದಿಗೆ ನಾಂದಿ ಹಾಡಿದ ಭಾರತೀಯ ಜನತಾ ಪಾರ್ಟಿ, ತಮಿಳುನಾಡಿನಲ್ಲಿಯೂ ವೆಟ್ರಿವೇಲ್ ಯಾತ್ರೆ ಮೂಲಕ ಮತ್ತೊಮ್ಮೆ ಅದೇ ಸಾಹಸಕ್ಕೆ ಕೈಹಾಕಲು ಹೊರಟಿದೆ. ಆದರೆ ಇದಕ್ಕೆ ಸೆಡ್ಡು ಹೊಡೆದು ತಮಿಳುನಾಡು ಸರ್ಕಾರ ಯಾತ್ರೆಗೆ ಅನುಮತಿ ನಿರಾಕರಿಸಿದೆ.

ಇಷ್ಟೇ ಅಲ್ಲದೆ  ಬಿಜೆಪಿ ತಾನು ನೇಮಕ ಮಾಡಿದ ರಾಜ್ಯಪಾಲರನ್ನು ಇಟ್ಟುಕೊಂಡು ಕೂಡ ತಮಿಳುನಾಡಿನಲ್ಲಿ ಹಲವು ಬಾರಿ ಆಡಳಿತದ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಿದೆ. ಆದರೆ ತಮಿಳುನಾಡು ಸರ್ಕಾರ ಮಾತ್ರ ಇದ್ಯಾವುದಕ್ಕೂ ಬಗ್ಗದೆ ತನ್ನ ಕೆಲಸ ಮಾಡುತ್ತಿದೆ. ನೆಟ್ ತೇರ್ಗಡೆ ಹೊಂದಿದ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ 7.5% ಮೀಸಲಾತಿ ನೀಡುವ ಮಸೂದೆಗೆ ಸಹಿ ಹಾಕಲು ರಾಜ್ಯಪಾಲರು ವಿಳಂಬಮಾಡಿದಾಗಲೂ, ತಮಿಳುನಾಡು ಸರ್ಕಾರ ಅದನ್ನು ಆದೇಶ ಮಾಡಿ ಹೊರಡಿಸಿತು.


ಇದನ್ನೂ ಓದಿ:  ವೆಟ್ರಿವೇಲ್ ಯಾತ್ರೆ ನಡೆಸಲು ಬಿಜೆಪಿ ಕೋರಿದ್ದ ಅನುಮತಿ ತಿರಸ್ಕರಿಸಿದ ತಮಿಳುನಾಡು ಸರ್ಕಾರ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಬಿಜೆಪಿಯ ಸಹವಾಸದಿಂದ AIADMKಗೆ ನಶ್ಟವೇ ಹೊರತು ಲಾಬ ಆಗುವುದಿಲ್ಲವಾದ್ದರಿಂದ ಅಣ್ಣಾ ಡಿಎಂಕೆ ಬಿಜೆಪಿಯ ಸಹವಾಸದಿಂದ ಹೊರಬರುವುದು ಒಳಿತು.

LEAVE A REPLY

Please enter your comment!
Please enter your name here

- Advertisment -

ಕಾಂಗ್ರೆಸ್ ನಿಂದ ಏಪ್ರಿಲ್ 12ರಂದು ‘ರನ್ ಫಾರ್ ಅಂಬೇಡ್ಕರ್, ರನ್ ಫಾರ್ ಕಾನ್ಸ್ಟಿಟ್ಯೂಷನ್’ ಮ್ಯಾರಥಾನ್ ಆಯೋಜನೆ

ನವದೆಹಲಿ: ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯ ಅಂಗವಾಗಿ ಕಾಂಗ್ರೆಸ್ ಭಾನುವಾರ 'ಅಂಬೇಡ್ಕರ್‌ಗಾಗಿ ಓಟ, ಸಂವಿಧಾನಕ್ಕಾಗಿ ಓಟ' ಮ್ಯಾರಥಾನ್ ಆಯೋಜಿಸಿದೆ. ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಇಲ್ಲಿನ ಮಂಡಿ ಹೌಸ್‌ನಿಂದ ಮ್ಯಾರಥಾನ್‌ಗೆ...

ಮುಖ್ಯವಾಹಿನಿಗೆ ಬಂದ 42 ಕೇಡರ್‌ಗಳು; ರಾಜ್ಯದಲ್ಲಿ’ಮಾವೋವಾದಿ ಕಾರ್ಯಾಚರಣೆ’ ಅಂತ್ಯವಾಗಿದೆ ಎಂದ ತೆಲಂಗಾಣ ಪೊಲೀಸರು

ರಾಜ್ಯದಲ್ಲಿ ಸಿಪಿಐ (ಮಾವೋವಾದಿ) ಸಂಘಟನೆಯ ಕಾರ್ಯಚರಣೆ ಅಂತಿಮವಾಗಿದೆ ಎಂದು ತೆಲಂಗಾಣ ಪೊಲೀಸರು ಘೋಷಣೆ ಮಾಡಿದ್ದಾರೆ. ಬೆಟಾಲಿಯನ್ ಕಮಾಂಡರ್ ಮತ್ತು ಎರಡು ಪ್ರಮುಖ ಗುಂಪುಗಳ ಹಿರಿಯ ನಾಯಕತ್ವ ಸೇರಿದಂತೆ ನಿಷೇಧಿತ ಸಂಘಟನೆಯ 42 ಕೇಡರ್‌ಗಳು...

‘ಹಿಂದಿ ನಿರ್ಮೂಲನೆ ಮಾಡುತ್ತೇವೆ’ ಎಂದು ಸಚಿವರು ಹೇಳಿಲ್ಲ; ಹಿಂದಿ ಪರ ಅರ್ಜಿ ವಜಾ; ₹1 ಲಕ್ಷ ದಂಡ ವಿಧಿಸಿದ ಹೈಕೋರ್ಟ್‌

ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷಾ ವಿಷಯಗಳ ಮೌಲ್ಯಮಾಪನ ಸಂಬಂಧ ರಾಜ್ಯ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ನೀಡಿದ ಹೇಳಿಕೆಯ ವಿರುದ್ಧ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು (ಪಿಐಎಲ್) ಕರ್ನಾಟಕ...

ದೆಹಲಿ| ಮುಸ್ಲಿಮರ ಮೇಲಿನ ದ್ವೇಷಕ್ಕೆ ಜೀವಂತ ಹಂದಿಗಳನ್ನು ಪೂಜಿಸುತ್ತಿರುವ ಹಿಂದೂಗಳು

ಹಳೆಯ ದೆಹಲಿಯ ಹಿಂದೂ-ಮುಸ್ಲಿಂ ಜನರು ವಾಸಿಸುವ ತ್ರನಗರದ ನೆರೆಹೊರೆಯಲ್ಲಿ ಹಿಂದೂ ಕುಟುಂಬಗಳು ಜೀವಂತ ಹಂದಿಗಳನ್ನು ಪೂಜಿಸುತ್ತಿದ್ದಾರೆ. ಮುಸ್ಲಿಮರ ಮೇಲಿನ ದ್ವೇಷಕ್ಕೆ ಮನೆಯ ಮುಂಭಾಗ ಅಲಂಕೃತ ಹಂದಿ (ವರಹಾಸ್ವಾಮಿ) ಚಿತ್ರಗಳನ್ನು ಅಳವಡಿಸಿದ್ದಾರೆ ಎಂದು 'ದಿ...

ಪ. ಬಂಗಾಳ: ಮಹಿಳೆಯರಿಗೆ ₹3,000 ರಿಂದ 6 ತಿಂಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಸೇರಿದಂತೆ ಹಲವು ಭರವಸೆ ನೀಡಿದ ಬಿಜೆಪಿ 

ಕೋಲ್ಕತ್ತಾ : ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಪ್ರಚಾರ ಆರಂಭವಾಗಿದ್ದು, ಮೊದಲ ಹಂತದ ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ, ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಪಶ್ಚಿಮ ಬಂಗಾಳದ ಬಿಜೆಪಿ...

ಹಾಸನ| ರೈತ ಮುಖಂಡ ವಾಸುದೇವ ಕಲ್ಕೆರೆ ಮೇಲೆ ಹಲ್ಲೆ; ದುಷ್ಕರ್ಮಿಗಳ ಬಂಧನಕ್ಕೆ ಕೆಪಿಆರ್‌ಎಸ್‌ ಆಗ್ರಹ

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಕರ್ನಾಟಕ ಪ್ರಾಂತ ರೈತ ಸಂಘದ (ಕೆಪಿಆರ್‌ಎಸ್‌) ಕಾರ್ಯದರ್ಶಿ ಹಾಗೂ ಕಲ್ಕೆರೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ, ಡಿವೈಎಫ್‌ಐ ಜಿಲ್ಲಾಧ್ಯಕ್ಷ ವಾಸುದೇವ ಕಲ್ಕೆರೆ ಮೇಲೆ ಹಲ್ಲೆ-ದೌರ್ಜನ್ಯ ನಡೆಸಿರುವ ಗೂಂಡಾಗಳನ್ನು...

ಉತ್ತರ ಪ್ರದೇಶ| ಡಿಜಿಟಲ್ ಬಂಧನದಿಂದ ಪೋಷಕರನ್ನು ರಕ್ಷಿಸಿದ 8ನೇ ತರಗತಿ ವಿದ್ಯಾರ್ಥಿ

ಸುಮಾರು 10 ಗಂಟೆಗಳ ಕಾಲ ವೀಡಿಯೊ ಕರೆ ಮೂಲಕ ಡಿಜಿಟಲ್ ಬಂಧನಕ್ಕೆ ಒಳಗಾಗಿದ್ದ ತನ್ನ ಹೆತ್ತವರು ಹಣ ಕಳೆದುಕೊಳ್ಳದಂತೆ 8ನೇ ತರಗತಿಯ ಬಾಲಕನೊಬ್ಬ ರಕ್ಷಿಸಿರುವ ಘಟನೆ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಬರೇಲಿಯಲ್ಲಿ...

ಅಸ್ಸಾಂ: ಪವನ್ ಖೇರಾ ವಿರುದ್ಧದ ಪ್ರಕರಣದಲ್ಲಿ ಒಂದು ವಾರದ ನಿರೀಕ್ಷಣ ಜಾಮೀನು ನೀಡಿದ ತೆಲಂಗಾಣ ಹೈಕೋರ್ಟ್

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ ಅವರು ಸಲ್ಲಿಸಿದ ಎಫ್‌ಐಆರ್‌ಗೆ ಸಂಬಂಧಿಸಿದಂತೆ ತೆಲಂಗಾಣ ಹೈಕೋರ್ಟ್ ಶುಕ್ರವಾರ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರಿಗೆ ಒಂದು ವಾರದ...

ನಿವಾಸದಲ್ಲಿ ನಗದು ಪತ್ತೆ ಪ್ರಕರಣದಲ್ಲಿ ಸಿಲುಕಿದ್ದ ನ್ಯಾಯಮೂರ್ತಿ ಯಶವಂತ್ ವರ್ಮಾ ರಾಜೀನಾಮೆ

ತಮ್ಮ ನಿವಾಸದಲ್ಲಿ ನಗದು ಪತ್ತೆ ಆರೋಪದ ಕೇಂದ್ರಬಿಂದುವಾಗಿದ್ದ ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ಕಳೆದ ವರ್ಷ ಏಪ್ರಿಲ್ 5...

ಆಂಧ್ರಪ್ರದೇಶ: ಬೇಸಿಗೆ ವಿಹಾರಕ್ಕೆಂದು ತೆರಳಿದ್ದ ಮೂವರು ಅಪ್ರಾಪ್ತ ಬಾಲಕಿಯರು ಅನಂತಗಿರಿ ಜಲಪಾತದಲ್ಲಿ ಮುಳುಗಿ ಸಾವು 

ಅನಂತಗಿರಿ: ಬೇಸಿಗೆ ವಿಹಾಕ್ಕೆಂದು ತೆರಳಿದ್ದ ಮೂವರು ಅಪ್ರಾಪ್ತ ಬಾಲಕಿಯರು ಅನಂತಗಿರಿ ಜಲಪಾತದಲ್ಲಿ ಸೆಲ್ಫಿ ತೆಗೆದುಕೊಳ್ಳಲು ಜಲಪಾತಕ್ಕೆ ಇಳಿದು ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಲ್ಲೂರಿ ಸೀತಾರಾಮರಾಜು ಮೂಲಗುಮ್ಮಿ ಗ್ರಾಮದಲ್ಲಿ ನಾಲ್ವರು...