ಟೋಕಿಯೊ ಒಲಿಂಪಿಕ್ಸ್ ಮುಗಿಯಲು ಇನ್ನು ಒಂದೇ ದಿನ ಬಾಕಿದೆ. ಈ ನಡುವೆ ಭಾರತದ ಕೊರಳಿಗೆ ಮತ್ತೊಂದು ಪದಕ ಸೇರ್ಪಡೆಯಾಗಿದೆ. 65 ಕೆಜಿ ವಿಭಾಗದ ಫ್ರೀಸ್ಟೈಲ್ ಕುಸ್ತಿಯಲ್ಲಿ ಭಾರತದ ಕುಸ್ತಿ ಪಟು ಬಜರಂಗ್ ಪೂನಿಯಾ ಅವರು ಕಝಕ್‌ಸ್ತಾನದ ದೌಲೆತ್ ನಿಯಾಜ್‌ಕೋವ್ ವಿರುದ್ದ 8-0 ಅಂತರದಲ್ಲಿ ಭರ್ಜರಿಯಾಗಿ ಗೆದ್ದಿದ್ದಾರೆ.
#TokyoOlympics | Wrestler Bajrang Punia wins #Bronze medal in Men's Freestyle 65kg against Kazakhstan's Daulet Niyazbekov, 8-0
(File pic) pic.twitter.com/LzMlCHxzaK
— ANI (@ANI) August 7, 2021
ಸೆಮಿಫೈನಲ್‌ಗೆ ತಲುಪಿದ್ದ ಬಜರಂಗ್ ಪೂನಿಯಾ ಅವರು ಶುಕ್ರವಾರಂದು ಅಝರ್‌ಬೈಜಾನ್ ಹಾಜಿ ಅಲಿಯೇವ್ ಅವರ ವಿರುದ್ದ 5-12 ಅಂಕದಲ್ಲಿ ಸೋಲುಂಡಿದ್ದರು. ಇದರ ನಂತರ ಅವರು ಇಂದು ಕಝಕ್‌ಸ್ತಾನದ ದೌಲೆತ್ ನಿಯಾಜ್‌ಕೋವ್ ವಿರುದ್ದ ಹೋರಾಡಿ ಕಂಚು ಗೆದ್ದುಕೊಂಡಿದ್ದಾರೆ.
ಇದನ್ನೂ ಓದಿ: 41 ವರ್ಷಗಳ ಕಾಯುವಿಕೆ ಅಂತ್ಯ | ಕೊನೆಗೂ ಪದಕಕ್ಕೆ ಮುತ್ತಿಟ್ಟ ಭಾರತೀಯ ಹಾಕಿ ತಂಡ!
ಈ ಮಧ್ಯೆ, ಗಾಲ್ಫ್ ಕ್ರೀಡೆಯಲ್ಲಿ ಕರ್ನಾಟಕ ಮೂಲದ ಗಾಲ್ಫರ್ ಅದಿತಿ ಅಶೋಕ್ ಅವರು ನಾಲ್ಕನೇ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ. ಅವರ ಸಾಧನೆಗೆ ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಶ್ಲಾಘನೆ ಮಾಡಿದ್ದು ಅಭಿನಂದನೆ ಸಲ್ಲಿಸಿದ್ದಾರೆ.
ಈ ನಡುವೆ ಜಾವೆಲಿನ್ ಥ್ರೋ ಪಂದ್ಯಾಟ ನಡೆಯುತ್ತಿದ್ದು, ಭಾರತದ ನೀರಜ್ ಚೋಪ್ರಾ ಅವರು ಅಗ್ರ ಸ್ಥಾನವನ್ನು ಕಾಯ್ದು ಕೊಂಡಿದ್ದಾರೆ. ಅವರ ಮೂಲಕ ಭಾರತಕ್ಕೆ ಟೋಕಿಯೊ ಪಂದ್ಯಾಟದಲ್ಲಿ ಮೊದಲ ಚಿನ್ನ ಸಿಗುವ ನಿರೀಕ್ಷೆಯಿದೆ.
ಇದನ್ನೂ ಓದಿ: ‘ತಂಡದಲ್ಲಿ ದಲಿತರು ಹೆಚ್ಚು ಇದ್ದಿದ್ದರಿಂದ ಸೋಲಾಯಿತು!’; ಸಾಧಕಿ ವಂದನಾಗೆ ಜಾತಿ ನಿಂದನೆ