Homeಕ್ರೀಡೆಒಲಂಪಿಕ್ವಂದನಾ ಜಾತಿ ನಿಂದನೆ ಪ್ರಕರಣ; ಘಟನೆ ನಾಚಿಕೆಗೇಡು ಎಂದ ಹಾಕಿ ತಂಡದ ನಾಯಕಿ

ವಂದನಾ ಜಾತಿ ನಿಂದನೆ ಪ್ರಕರಣ; ಘಟನೆ ನಾಚಿಕೆಗೇಡು ಎಂದ ಹಾಕಿ ತಂಡದ ನಾಯಕಿ

- Advertisement -
- Advertisement -

ಭಾರತ ಹಾಕಿ ತಂಡದ ಮಹಿಳಾ ಆಟಗಾರ್ತಿ ವಂದನಾ ಕಟಾರಿಯಾ ವಿರುದ್ಧ ಜಾತಿ ನಿಂದನೆ ಮಾಡಿದ ಘಟನೆಯನ್ನು ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್‌ ‘ನಾಚಿಕೆಗೇಡು’ ಎಂದು  ಖಂಡಿಸಿದ್ದಾರೆ. ಆಟಗಾರರು ದೇಶದ ಎಲ್ಲಾ ಕಡೆಗಳಿಂದ ಬರುತ್ತಾರೆ, ಆದರೆ ಅವರು ಭಾರತದ ಧ್ವಜಕ್ಕಾಗಿ ಆಡುತ್ತಾರೆ ಎಂದು ಅವರು ಶನಿವಾರ ಹೇಳಿದ್ದಾರೆ.

“ಮಹಿಳೆಯರ ಹಾಕಿ ತಂಡದಲ್ಲಿ ದಲಿತ ಆಟಗಾರರೇ ಇರುವುದರಿಂದ ಸೆಮಿಫೈನಲ್ ಸೋತು ಹೋಯಿತು. ದಲಿತರನ್ನು ಹಾಕಿ ಮಾತ್ರವಲ್ಲ, ಯಾವುದೆ ಆಟಕ್ಕೂ ಸೇರಿಸಿಕೊಳ್ಳಬಾರದು” ಎಂದು ಹಾಕಿ ಆಟಗಾರ್ತಿ ವಂದನಾ ಕಟಾರಿಯಾ ಅವರ ಮನೆಯ ಮುಂದೆ ಮೇಲ್ಜಾತಿಯ ವ್ಯಕ್ತಿಗಳು ಗಲಾಟೆ ಮಾಡಿದ್ದರು. ದುಷ್ಕರ್ಮಿಗಳು ಭಾರತ ತಂಡ ಸೆಮಿಫೈನಲ್‌ನಲ್ಲಿ ಸೋತಿದ್ದಕ್ಕಾಗಿ ಸಂತೋಷ ವ್ಯಕ್ತಪಡಿಸಿ ಜನಾಂಗೀಯ ಮತ್ತು ಜಾತಿ ನಿಂದನೆ ಮಾಡಿ ವಂದನಾ ಅವರ ಮನೆಯ ಮುಂದೆ ಕುಣಿದು ಸಂತೋಷ ವ್ಯಕ್ತಪಡಿಸಿದ್ದರು ಎಂದು ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿತ್ತು.

ಇದನ್ನೂ ಓದಿ: ‘ತಂಡದಲ್ಲಿ ದಲಿತರು ಹೆಚ್ಚು ಇದ್ದಿದ್ದರಿಂದ ಸೋಲಾಯಿತು!’; ಸಾಧಕಿ ವಂದನಾಗೆ ಜಾತಿ ನಿಂದನೆ

“ವಂದನಾ ಅವರ ಕುಟುಂಬದೊಂದಿಗೆ ನಡೆದ ಘಟನೆ ನಾಚಿಕೆಗೇಡು. ನಾನು ಜನರು ಜಾತಿವಾದವನ್ನು ಮೀರಲಿ ಎಂದು ಬಯಸುತ್ತೇನೆ. ನಮ್ಮ ಧರ್ಮಗಳು ವಿಭಿನ್ನವಾಗಿದ್ದು, ನಾವು ದೇಶದ ವಿವಿಧ ಭಾಗಗಳಿಂದ ಬಂದಿದ್ದೇವೆ. ಆದರೆ ನಾವು ಆಡುವಾಗ ನಾವು ಭಾರತದ ಧ್ವಜಕ್ಕಾಗಿ ಆಡುತ್ತೇವೆ” ಎಂದು ತಂಡದ ನಾಯಕ ರಾಣಿ ರಾಂಪಾಲ್ ಹೇಳಿದ್ದಾರೆ.

“ಇದು ಯಾವುದೇ ಕ್ರೀಡಾಪಟು ಅಥವಾ ಸಾಮಾನ್ಯ ವ್ಯಕ್ತಿಗೆ ಸಂಭವಿಸಬಾರದು. ನಮ್ಮ ತಂಡವು ಮೊದಲ ಪದಕ ಗೆಲ್ಲದಿದ್ದರೂ ಜನರಿಂದ ತುಂಬಾ ಪ್ರೀತಿಯನ್ನು ಗಳಿಸಿದೆ. ಆದರೆ ಇಂತಹ ದೌರ್ಜನ್ಯವನ್ನು ಕೊನೆಯಾಗಬೇಕು. ನಾವು ನಮ್ಮ ದೇಶವನ್ನು ಕ್ರೀಡಾ ರಾಷ್ಟ್ರವನ್ನಾಗಿ ಮಾಡಬೇಕು” ಎಂದು ಅವರು ಹೇಳಿದ್ದಾರೆ.

ಪ್ರಕರಣದ ಮೂರನೇ ವ್ಯಕ್ತಿಯನ್ನು ಇಂದು ಬೆಳಿಗ್ಗೆ ಬಂಧಿಸಲಾಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

“ನಾನು ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಲು ಇಷ್ಟಪಡುವುದಿಲ್ಲ. ಘಟನೆಯ ಬಗ್ಗೆ ನಾನು ಸ್ವಲ್ಪ ತಿಳಿದುಕೊಂಡಿದ್ದೇನೆ. ಕುಟುಂಬದೊಂದಿಗೆ ಮಾತನಾಡಿದ್ದು, ಅವರು ಎಲ್ಲವೂ ಚೆನ್ನಾಗಿದೆ ಎಂದು ಹೇಳಿದ್ದಾರೆ. ಪೊಲೀಸರು ಪ್ರಕರಣವನ್ನು ತನಿಖೆ ನಡೆಸುತ್ತಿದ್ದಾರೆ” ವಂದನಾ ಕಟಾರಿಯಾ ಹೇಳಿದ್ದಾರೆ.

ಇದನ್ನೂ ಓದಿ: ಹೆಣ್ಣು ಮಕ್ಕಳ ಆಕ್ರಂದನ ಕೇಳುತ್ತಿಲ್ಲವೇ? ದೆಹಲಿಯ ದಲಿತ ಬಾಲಕಿ ಮೇಲಿನ ಅತ್ಯಾಚಾರ ಖಂಡಿಸಿ ಪ್ರತಿಭಟನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದಲಿತ ಕುಟುಂಬದ ಮೂವರ ಹತ್ಯೆ ಪ್ರಕರಣ: ಪೊಲೀಸರ ವರ್ಗಾವಣೆ

0
ಉತ್ತರಪ್ರದೇಶದ ಕೌಶಂಬಿ ಜಿಲ್ಲೆಯ ಸಂದೀಪನ್ ಘಾಟ್ ಪ್ರದೇಶದಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿ ದಲಿತ ಕುಟುಂಬದ ಮೂವರು ಸದಸ್ಯರ ಹತ್ಯೆ ನಡೆದಿದ್ದು, ಇದೀಗ ಸ್ಥಳೀಯ ಪೊಲೀಸ್ ಠಾಣಾಧಿಕಾರಿ ಮತ್ತು ಹೊರಠಾಣೆ ಪ್ರಭಾರ ಅಧಿಕಾರಿಯನ್ನು ವರ್ಗಾಯಿಸಲಾಗಿದೆ. ಸಾಂದೀಪನ್...