ಉತ್ತರ ಕನ್ನಡದಲ್ಲಿರುವ ಆಫ್ರಿಕಾದ ನಿಗ್ರೊ ಮೂಲದ ಸಿದ್ದಿ ಬುಡಕಟ್ಟು ಜನಾಂಗಕ್ಕೆ ಅದರದೇ ಆದ ಸಂಸ್ಕ್ರತಿ, ಸಾಹಿತ್ಯ, ಕಲೆ, ಸಂಗೀತ, ಹಾಡು ಆಚರಣೆಗಳಿವೆ. ಮದುವೆ, ಹಬ್ಬ, ಉತ್ಸವ ಮುಂತಾದ ವಿಶೇಷ ಸಂದರ್ಭದಲ್ಲಿ ಜಾನಪದ ಶೈಲಿಯ ಹಾಡು ಹಾಡಿ, ನೃತ್ಯ ಮಾಡಿ ಸಂಭ್ರಮಿಸುತ್ತಾರೆ. ಸಿದ್ದಿಗಳ ಡಮಾಮಿ ಕುಣಿತಕ್ಕಂತೂ ಚೆತೋಹಾರಿ ಸೊಬಗಿದೆ.

ಕಾಡಿನ ವಾಸಿಗಳಾದ ಸಿದ್ದಿಗಳ ವಿಶಿಷ್ಟ ಹಾಡುಗಳೀಗ ಸಾಮಾಜಿಕ ಜಾಲತಾಣಕ್ಕೂ ವ್ಯಾಪಿಸಿ ಮೆಚ್ಚಿಗೆ ಗಳಿಸುತ್ತಿದೆ. ಈ ಬೆನ್ನಲ್ಲೆ ಸಿದ್ದಿ ಹಾಡೊಂದನ್ನು ಖ್ಯಾತ ನಟ ದುನಿಯಾ ವಿಜಯ್ ನಟನೆಯ ಸಲಗ ಸಿನಿಮಾಕ್ಕೆ ತೆಗೆದುಕೊಳ್ಳಲಾಗಿದೆ.

ಬಿಡುಗಡೆಗೆ ಸಿದ್ದವಾಗಿರುವ ಈ ಚಿತ್ರದ ಸಿದ್ದಿ ಹಾಡನ್ನು ಯಲ್ಲಾಪುರ ತಾಲೂಕಿನ ಮಂಚಿಕೇರಿಯ ಗೀತಾ ಸಿದ್ದಿ ಮತ್ತು ಗಿರಿಜಾ ಸಿದ್ದಿ ತಂಡ ತುಂಬಾ ಆಕರ್ಷಕವಾಗಿ ಹಾಡಿದೆ. ಜೊತೆಗೆ ಅಭಿನಯವನ್ನೂ ಮಾಡಿದ್ದಾರೆ. ಎ2 ಮ್ಯೂಸಿಕ್ ಕಂಪನಿ ಸಿದ್ದಿ ಕಲಾವಿದರು ಹಾಡಿರುವ ಹಾಡನ್ನು ಯೂ ಟ್ಯೂಬ್‌ನಲ್ಲಿ ಬಿಡುಗಡೆ ಮಾಡಿದೆ. ಈ ಹಾಡನ್ನು ಈಗಾಗಲೇ 8 ಲಕ್ಷ ಜನರು ನೋಡಿದ್ದಾರೆ. ಸಿದ್ದಿಗಳ ಕಲೆಗೆ ಸಿಕ್ಕಿರುವ ಈ ಮನ್ನಣೆ ದಾಖಲೆಯೇ ಸರಿ.


ಇದನ್ನೂ ಓದಿ: ಕನ್ನಡದಲ್ಲೂ ’ಜೈ ಭೀಮ್’ ಎಂದ ತಮಿಳು ನಟ ಸೂರ್ಯ: ಹೊಸ ಚಿತ್ರಕ್ಕೆ ಕನ್ನಡಿಗರ ಸ್ವಾಗತ

LEAVE A REPLY

Please enter your comment!
Please enter your name here