Homeಕ್ರೀಡೆಒಲಂಪಿಕ್ಟೋಕಿಯೋ ಒಲಿಂಪಿಕ್ಸ್: ಭಾರತಕ್ಕೆ ಮೊದಲ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ ನೀರಜ್ ಚೋಪ್ರಾ!

ಟೋಕಿಯೋ ಒಲಿಂಪಿಕ್ಸ್: ಭಾರತಕ್ಕೆ ಮೊದಲ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ ನೀರಜ್ ಚೋಪ್ರಾ!

- Advertisement -
- Advertisement -

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪುರುಷರ ಜಾವಲಿನ್ ಥ್ರೋ ಸ್ಪರ್ಧೆಯಲ್ಲಿ ಬರೋಬ್ಬರಿ 87.65 ಮೀ ದೂರ ಎಸೆಯುವ ಮೂಲಕ ನೀರಜ್ ಚೋಪ್ರಾ ಭಾರತಕ್ಕೆ ಮೊದಲ ಚಿನ್ನ ತಂದು ಕೊಟ್ಟು ಇತಿಹಾಸ ನಿರ್ಮಿಸಿದ್ದಾರೆ.

ಮೊದಲ ಪ್ರಯತ್ನದಲ್ಲಿಯೇ 87.03 ಮೀಟರ್ ಎಸೆದ ಅವರು ಎರಡನೇ ಪ್ರಯತ್ನದಲ್ಲಿ 87.65 ಮೀ ದೂರ ಎಸೆದು ದಾಖಲೆ ನಿರ್ಮಿಸಿದರು. ಅಂತಿಮ ಪ್ರಯತ್ನದಲ್ಲಿ 75 ಮೀಟರ್ ಮಾತ್ರ ಎಸೆದರು. ಆ ಮೂಲಕ ಅತಿ ದೂರ ಎಸೆದು ಮೊದಲಿಗರಾಗಿದ್ದಾರೆ.

ಚೆಕ್ ರಿಪಬ್ಲಿಕ್‌ನ ಜೆ.ವಡ್ಲೆಚ್ 86.67 ಮೀಟರ್ ದೂರ ಎಸೆದು ಬೆಳ್ಳಿ ಗೆದ್ದರೆ, ಅದೇ ದೇಶದ ವಿ.ವೆಸ್ಲಿ 85.44ಮೀಟರ್ ಎಸೆದು ಕಂಚು ತನ್ನದಾಗಿಸಿಕೊಂಡರು.

2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ 10ಮೀ ಏರ್ ರೈಫಲ್ ವಿಭಾಗದಲ್ಲಿ ಭಾರತದ ಅಭಿನವ್ ಬಿಂದ್ರಾ ಚಿನ್ನ ಗೆದ್ದದ್ದೆ ಭಾರತಕ್ಕೆ ಕಡೆಯ ಚಿನ್ನವಾಗಿತ್ತು.

ಒಂದೇ ಒಲಿಂಪಿಕ್ಸ್‌ನಲ್ಲಿ ಅತಿ ಹೆಚ್ಚು ಪದಕ ಗೆದ್ದಿದ್ದು 2012 ರ ಲಂಡನ್‌ನಲ್ಲಾಗಿತ್ತು. ಆಗ ಭಾರತ 6 ಪದಕಗಳನ್ನು ತನ್ನದಾಗಿಸಿಕೊಂಡಿತ್ತು. ಆಗ ಎರಡು ಬೆಳ್ಳಿ ಮತ್ತು ನಾಲ್ಕು ಕಂಚು ಭಾರತದ ಪಾಲಿಗಿತ್ತು. ಆದರೆ ಟೋಲಿಯೋ ಒಲಿಂಪಿಕ್ಸ್‌ನಲ್ಲಿ ಭಾರತ ಮೊದಲ ಬಾರಿಗೆ 7 ಪದಕ ಗೆದ್ದಿದೆ. ಒಂದು ಚಿನ್ನ, ಎರಡು ಬೆಳ್ಳಿ, ನಾಲ್ಕು ಕಂಚು ತನ್ನದಾಗಿಸಿ ದಾಖಲೆ ನಿರ್ಮಿಸಿದೆ.

ಭಾರತ ಇದುವರೆಗೂ ಒಲಿಂಪಿಕ್ಸ್‌ನಲ್ಲಿ 9 ಚಿನ್ನ, 9ಬೆಳ್ಳಿ ಮತ್ತು 16 ಕಂಚಿನ ಪದಕಗಳನ್ನು ಗೆದ್ದಿದೆ.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪುರುಷರ ಜಾವಲಿನ್ ಥ್ರೋ ಅರ್ಹತಾ ಪಂದ್ಯದಲ್ಲಿ ಭಾರತದ ನೀರಜ್ ಚೋಪ್ರಾ 86.65 ಮೀಟರ್ ದೂರ ಎಸೆಯುವ ಮೂಲಕ ಮೊದಲಿಗರಾಗಿ ಫೈನಲ್‌ಗೆ ಅರ್ಹತೆ ಗಿಟ್ಟಿಸಿದ್ದರು.

ಇನ್ನೊಂದೆಡೆ ಟೋಕಿಯೊ ಒಲಿಂಪಿಕ್ಸ್‌ ಮುಗಿಯಲು ಇನ್ನು ಒಂದೇ ದಿನ ಬಾಕಿದೆ. ಈ ನಡುವೆ ಭಾರತದ ಕೊರಳಿಗೆ ಮತ್ತೊಂದು ಪದಕ ಸೇರ್ಪಡೆಯಾಗಿದೆ. 65 ಕೆಜಿ ವಿಭಾಗದ ಫ್ರೀಸ್ಟೈಲ್ ಕುಸ್ತಿಯಲ್ಲಿ ಭಾರತದ ಕುಸ್ತಿ ಪಟು ಬಜರಂಗ್ ಪೂನಿಯಾ ಅವರು ಕಝಕ್‌ಸ್ತಾನದ ದೌಲೆತ್‌ ನಿಯಾಜ್‌ಕೋವ್ ವಿರುದ್ದ 8-0 ಅಂತರದಲ್ಲಿ ಭರ್ಜರಿಯಾಗಿ ಗೆದ್ದಿದ್ದಾರೆ.

ಸೆಮಿಫೈನಲ್‌ಗೆ ತಲುಪಿದ್ದ ಬಜರಂಗ್ ಪೂನಿಯಾ ಅವರು ಶುಕ್ರವಾರಂದು ಅಝರ್‌ಬೈಜಾನ್‌ ಹಾಜಿ ಅಲಿಯೇವ್ ಅವರ ವಿರುದ್ದ 5-12 ಅಂಕದಲ್ಲಿ ಸೋಲುಂಡಿದ್ದರು. ಇದರ ನಂತರ ಅವರು ಇಂದು ಕಝಕ್‌ಸ್ತಾನದ ದೌಲೆತ್‌ ನಿಯಾಜ್‌ಕೋವ್ ವಿರುದ್ದ ಹೋರಾಡಿ ಕಂಚು ಗೆದ್ದುಕೊಂಡಿದ್ದಾರೆ.

ಈ ಮಧ್ಯೆ, ಗಾಲ್ಫ್ ಕ್ರೀಡೆಯಲ್ಲಿ ಕರ್ನಾಟಕ ಮೂಲದ ಗಾಲ್ಫರ್ ಅದಿತಿ ಅಶೋಕ್ ಅವರು ನಾಲ್ಕನೇ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ. ಅವರ ಸಾಧನೆಗೆ ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಶ್ಲಾಘನೆ ಮಾಡಿದ್ದು ಅಭಿನಂದನೆ ಸಲ್ಲಿಸಿದ್ದಾರೆ.


ಇದನ್ನೂ ಓದಿ; ಟೋಕಿಯೊ ಒಲಿಂಪಿಕ್ಸ್‌: ಫ್ರೀಸ್ಟೈಲ್ ಕುಸ್ತಿಯಲ್ಲಿ ಕಂಚು ಗೆದ್ದ ಬಜರಂಗ್ ಪೂನಿಯಾ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK: ಜಾತಿ ಗಣತಿ ಕುರಿತ ರಾಹುಲ್ ಗಾಂಧಿಯ ವೈರಲ್ ಕ್ಲಿಪ್ ಎಡಿಟೆಡ್

0
ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿರುವ ಭಾಷಣದ ಕ್ಲಿಪ್‌ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅನೇಕ ಬಾರಿ ಸುಳ್ಳು ಸುದ್ದಿಗಳನ್ನು ಹಂಚಿಕೊಂಡಿರುವ ಬಲ ಪಂಥೀಯ ಎಕ್ಸ್...