Homeಕರ್ನಾಟಕಹೋರಾಟಕ್ಕೆ ಮಣಿಯುತ್ತಿರುವ ಟೊಯೊಟಾ: ಕಾನೂನುಬಾಹಿರ ಷರತ್ತಿಗೆ ಬಗ್ಗುವುದಿಲ್ಲವೆಂದ ಕಾರ್ಮಿಕರು

ಹೋರಾಟಕ್ಕೆ ಮಣಿಯುತ್ತಿರುವ ಟೊಯೊಟಾ: ಕಾನೂನುಬಾಹಿರ ಷರತ್ತಿಗೆ ಬಗ್ಗುವುದಿಲ್ಲವೆಂದ ಕಾರ್ಮಿಕರು

ಆಡಳಿತ ಮಂಡಳಿಯ ದೌರ್ಜನ್ಯವನ್ನು ಪ್ರಶ್ನಿಸಿದ್ದಕ್ಕೆ ಹಲವು ಕಾರ್ಮಿರನ್ನು ವಜಾ ಮಾಡಿದ್ದ ಕಂಪೆನಿಯ ವಿರುದ್ಧ 3500 ಕಾರ್ಮಿಕರು ಪ್ರಾರಂಭಿಸಿದ್ದ ಹೋರಾಟ 65 ನೇ ದಿನ ದಾಟಿದೆ.

- Advertisement -
- Advertisement -

ಕಳೆದ 65 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಟೊಯೊಟಾ ಕಿಲೋಸ್ಕರ್‌ ಕಾರ್ಮಿಕರ ಪ್ರತಿಭಟನೆಗೆ ಕಂಪೆನಿಯು ಮಂಡಿಯೂರುತ್ತಿದ್ದು ತನ್ನ ಲಾಕೌಟ್‌‌ ಅನ್ನು ತೆರವುಗೊಳಿಸುವುದಾಗಿ ಹೇಳಿದೆ. ಆದರೆ ಕೆಲಸಕ್ಕೆ ಬರಲು ಇಚ್ಚಿಸುವ ಕಾರ್ಮಿಕರು ಮುಚ್ಚಳಿಕೆ ನೀಡಿ ಬರಬಹುದು ಎಂದು ಷರತ್ತನ್ನು ವಿಧಿಸಿದೆ. ಇದಕ್ಕೆ ಟೊಯೊಟಾ ಕಿರ್ಲೋಸ್ಕರ್‌ ಕಾರ್ಮಿಕ ಸಂಘಟನೆ ವಿರೋಧ ವ್ಯಕ್ತಪಡಿಸಿದೆ.

ಕಿರ್ಲೋಸ್ಕರ್‌ ಆಡಳಿತ ಮಂಡಳಿಯ ಪತ್ರಿಕಾ ಹೇಳಿಕೆಗೆ ಕಾರ್ಮಿಕ ಸಂಘಟನೆ ಪ್ರತಿಕ್ರಿಯೆ ನೀಡಿದ್ದು, “ಕಂಪೆನಿಯು ಪತ್ರಿಕಾ ಹೇಳಿಕೆ ನೀಡುವ ಮೂಲಕ, ಇಷ್ಟು ದಿನ ಕಾರ್ಮಿಕರು ಮುಷ್ಕರ ಮಾಡುತ್ತಿರಲಿಲ್ಲ ತಾವಾಗಿಯೆ ಬೀಗಮುದ್ರೆಯನ್ನು ಘೋಷಿಸಿದ್ದೆವು ಎಂದು ಒಪ್ಪಿಕೊಂಡಂತಾಗಿದೆ” ಎಂದು ಹೇಳಿದೆ.

“ಆಡಳಿತ ಮಂಡಳಿಯು ತನ್ನ ಅಗತ್ಯತೆಗಳನ್ನು ಕಾರ್ಮಿಕ ಸಂಘದ ಸಹಕಾರವಿಲ್ಲದೇ ಪೂರೈಸಿಕೊಳ್ಳಬಹುದು ಎಂದು ಭಾವಿಸಿರಬಹುದು. ಅವರಿಗೆ ಬೀಗ ಮುದ್ರೆಯು ಸಮಸ್ಯೆಗಳಿಗೆ ಪರಿಹಾರವಲ್ಲ ಎಂದು ಈಗ ಅರ್ಥವಾಗುತ್ತಿದೆ. ಇಷ್ಟಾದರೂ ಬೀಗಮುದ್ರೆ ತೆರವಿನ ನಂತರ ಮುಚ್ಚಳಿಕೆ ಕೇಳುತ್ತಿರುವುದು, ಕಾನೂನಿನ ಪ್ರಕಾರ ಕಾನೂನು ಬಾಹಿರ ಬೀಗಮುದ್ರೆಯನ್ನು ಮುಂದುವರೆಸಿದಂತೆ ಆಗುತ್ತದೆ” ಎಂದು ಸಂಘಟನೆ ಹೇಳಿದೆ.

ಇದನ್ನೂ ಓದಿ: 3 ನೇ ತಿಂಗಳಿಗೆ ಕಾಲಿಟ್ಟ ಟೊಯೊಟಾ ಕಾರ್ಮಿಕರ ಹೋರಾಟ: ದೌರ್ಜನ್ಯಕ್ಕೆ ತಲೆಬಾಗುವುದಿಲ್ಲ ಎಂದ ಕಾರ್ಮಿಕರು

ಜಿಲ್ಲಾಧಿಕಾರಿ,toyota

“ಕಂಪೆನಿಯು ಎರಡನೇ ಬಾರಿಗೆ ದಿನಾಂಕ 23.11.2020 ರಿಂದ ಘೋಷಿಸಿದ್ದ ಬೀಗಮುದ್ರೆ ಕೂಡಾ ಕಾನೂನು ಬಾಹಿರವಾಗಿತ್ತು. ಈ ನಿರ್ಧಾರವು ನಿರರ್ಥಕ ಹಾಗೂ ಸಂಸ್ಥೆಯ ಬೆಳವಣಿಗೆಗೆ ಹಾನಿಕಾರಕ ಎಂದು ಆಡಳಿತ ಮಂಡಳಿ ಅರಿಯುವವರೆಗೂ ಇದು ಹಾಗೆ ಮುಂದುವರೆಯುತ್ತದೆ” ಎಂದು ಕಂಪೆನಿಯ ಕಾರ್ಮಿಕ ಸಂಘಟನೆ ಟಿಕೆಎಇಯು ಎಚ್ಚರಿಸಿದೆ.

“ಕೆಲಸದ ಒತ್ತಡದ ನಿಗದಿಯ ವಿಚಾರವಾಗಿ ಆಡಳಿತ ಮಂಡಳಿಯ ಏಕಪಕ್ಷೀಯ ನಿರ್ಧಾರಗಳೇ ಕಾರ್ಮಿಕರ ಪ್ರತಿಭಟನೆಗೆ ಕಾರಣವಾಗಿತ್ತೇ ವಿನಃ ಕಾರ್ಮಿಕರು ಯಾವುದೇ ಮುಷ್ಕರ ಮಾಡುತ್ತಿರಲಿಲ್ಲ. ಈ ವಿಚಾರವಾಗಿ ಕಾರ್ಮಿಕ ಸಂಘದ ಹಲವಾರು ಪ್ರಯತ್ನಗಳಿಗೆ ಆಡಳಿತ ವರ್ಗವು ಸ್ಪಂದಿಸಲಿಲ್ಲ, ಅದಕ್ಕೆ ಪೂರಕ ದಾಖಲೆಗಳು ನಮ್ಮಲ್ಲಿವೆ. ಆಡಳಿತ ಮಂಡಳಿಯ ನೋಟಿಸಿನ ವಿಷಯಗಳು ನಮಗೆ ಅರ್ಥವಾಗಿದೆ, ಆಡಳಿತ ಮಂಡಳಿಯ ಷರತ್ತುಗಳು ಕಾರ್ಮಿಕ ವಿರೋಧಿಯ ಜೊತೆಗೆ ಸಂಸ್ಥೆಯ ವಿರುದ್ಧವಾಗಿದೆ” ಎಂದು ಕಾರ್ಮಿಕ ಸಂಘಟನೆ ಹೇಳಿದೆ.

ಈ ಹಿನ್ನಲೆಯಲ್ಲಿ ಕಾರ್ಮಿಕ ಸಂಘಟನೆಯು ಕಂಪೆನಿಯ ಆಡಳಿತ ಮಂಡಳಿಯ ಪತ್ರಿಕಾ ಹೇಳಿಕೆಗೆ ಕೆಲವು ವಿಚಾರವನ್ನು ಸ್ಪಷ್ಟಪಡಿಸಿದೆ.

►ಆಡಳಿತ ಮಂಡಳಿಯು ತನ್ನ ಕಾನೂನು ಬಾಹಿರ ಬೀಗಮುದ್ರೆಯನ್ನು ಮುಂದುವರೆಸಿದೆ.
►ಬೀಗಮುದ್ರೆ ತೆರವಿನ ನಂತರ ಮುಚ್ಚಳಿಕೆ ಕೇಳುವುದು, ಬೀಗಮುದ್ರೆಯನ್ನು ಮುಂದುವರೆಸಿದಂತೆ ಆಗುತ್ತದೆ.
►ಕಾರ್ಮಿಕರು ಈ ಕಾನೂನು ಬಾಹಿರ ಬೀಗಮುದ್ರೆಯ ಸಮಯದ ಸಂಪೂರ್ಣ ಸಂಬಳಕ್ಕೆ ಅರ್ಹರಾಗಿರುತ್ತಾರೆ.
►ಕಾರ್ಮಿಕರು ಕಾನೂನು ಬಾಹಿರ ಬೀಗಮುದ್ರೆ ಹಾಗೂ ಮುಚ್ಚಳಿಕೆ ಸಮಯದಲ್ಲಿ ಕೆಲಸಕ್ಕೆ ಹಾಜರಾಗುವುದಿಲ್ಲ.

ಇದನ್ನೂ ಓದಿ: ಕಂಪೆನಿ ಹಠಮಾರಿ ದೋರಣೆ ಕೈಬಿಡದಿದ್ದರೆ ನಾನೇ ಹೋರಾಟಕ್ಕಿಳಿಯುತ್ತೇನೆ: ಟೊಯೊಟಾ ಕಾರ್ಮಿಕರ ಬೆಂಬಲಕ್ಕೆ ಡಿಕೆ. ಸುರೇಶ್

ಅಷ್ಟೇ ಅಲ್ಲದೆ ಮಂಗಳವಾರ ನಡೆದ ಕಾರ್ಮಿಕ ಸಂಘದ “ಸರ್ವ ಸದಸ್ಯರ ಸಭೆ” ಯಲ್ಲಿ ಕೆಲವು ನಿರ್ಣಯಗಳನ್ನು ಪ್ರತಿಭಟನಾ ನಿರತ ಕಾರ್ಮಿರಕು ತೆಗೆದುಕೊಂಡಿದ್ದಾರೆ.

►ಆಡಳಿತ ಮಂಡಳಿಯು ಮುಚ್ಚಳಿಕೆ ಕೇಳುವ ಮೂಲಕ ಮುಂದುವರೆದ ಕಾನೂನು ಬಾಹಿರ ಬೀಗಮುದ್ರೆಯನ್ನು ಖಂಡಿಸುತ್ತೇವೆ.
►ಕಾನೂನು ಬಾಹಿರ ಬೀಗಮುದ್ರೆಯ ಸಮಯದ ಸಂಪೂರ್ಣ ಸಂಬಳ ನೀಡಬೇಕು.
►ಆಡಳಿತ ಮಂಡಳಿಯ ಈ ಸಮಯದ ಎಲ್ಲಾ ಅಮಾನತು ಹಾಗೂ ಶಿಕ್ಷೆಯ ಆದೇಶಗಳನ್ನು ಹಿಂಪಡೆಯಬೇಕು.
►ನಾವು ಕಾನೂನು ಬಾಹಿರ ಬೀಗಮುದ್ರೆಯ ವಿರುದ್ಧ ನಮ್ಮ ನ್ಯಾಯಸಮ್ಮತ ಪ್ರತಿಭಟನೆಯನ್ನು ಮುಂದುವರೆಸುತ್ತೇವೆ.

ಆಡಳಿತ ಮಂಡಳಿಯ ದೌರ್ಜನ್ಯವನ್ನು ಪ್ರಶ್ನಿಸಿದ್ದಕ್ಕೆ ಹಲವು ಕಾರ್ಮಿರನ್ನು ವಜಾ ಮಾಡಿದ್ದ ಕಂಪೆನಿಯ ವಿರುದ್ಧ 3500 ಕಾರ್ಮಿಕರು ಪ್ರಾರಂಭಿಸಿದ್ದ ಹೋರಾಟ 65 ನೇ ದಿನ ದಾಟಿದೆ. ರಾಮನಗರ ಜಿಲ್ಲೆಯ ಬಿಡದಿ ಕೈಗಾರಿಕಾ ಪ್ರದೇಶದಲ್ಲಿನ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿಯ ಲಾಕೌಟ್‌ ನಿಷೇಧಿಸಿ ರಾಜ್ಯ ಸರ್ಕಾರ ನವೆಂಬರ್‌ 18 ರಂದು ಆದೇಶ ನೀಡಿದ್ದರೂ ಕಂಪೆನಿ ಮಾತ್ರ ಕಾರ್ಮಿಕರನ್ನು ಕಾರ್ಖಾನೆ ಒಳಗಡೆ ಹೋಗಲು ಅನುಮತಿ ನೀಡುತ್ತಿಲ್ಲ ಎಂದು ಕಾರ್ಮಿಕರು ಆರೋಪಿಸಿದ್ದಾರೆ.

ಇದನ್ನೂ ಓದಿ: ಸೂಜಿ ತಯಾರಿಕಾ ಕಂಪೆನಿ ’ಸ್ಮಿಟ್ಝ್’ ಲಾಕೌಟ್: ನೂರಾರು ಕಾರ್ಮಿಕರು ಬೀದಿಗೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಕಾನೂನು ಕ್ರಮ ಜರುಗಿಸಲು ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ತಡೆ

ನವದೆಹಲಿ: ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಅವಧಿಯಲ್ಲಿ ನಡೆದ 2021 ರ "ಬಟ್ಟೆ ಚೀಲ ಹಗರಣ"ಕ್ಕೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ರಾಜ್ಯ ಸರ್ಕಾರಕ್ಕೆ ಅನುಮತಿ ನೀಡುವಂತೆ...

‘ಯುದ್ಧ ಸೃಷ್ಟಿಸಿದ್ದು ನೀವೇ’: ಹಾರ್ಮುಜ್ ಅಡ್ಡಿಗೆ ಅಮೆರಿಕವನ್ನು ದೂಷಿಸಿದ ಚೀನಾ, ಟ್ರಂಪ್ ಅವರ ‘ಧೈರ್ಯದ ಕೊರತೆ’ ಹೇಳಿಕೆಗೆ ತಿರುಗೇಟು

ಚೀನಾ ಮತ್ತು ಜಪಾನ್‌ನಂತಹ ದೇಶಗಳು ಹಾರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯಲು "ಧೈರ್ಯ" ಹೊಂದಿಲ್ಲ ಎಂದು ಹೇಳಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗಳನ್ನು ಚೀನಾ ಬಲವಾಗಿ ವಿರೋಧಿಸಿದೆ. ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಚೀನಾದ ವಿದೇಶಾಂಗ...

ಮೂರನೇ ಅತ್ಯಾಚಾರ ಪ್ರಕರಣ: ಸ್ವ-ಘೋಷಿತ ‘ದೇವಮಾನವ’ ಖರತ್‌ಗೆ ಏಳು ದಿನಗಳ ನ್ಯಾಯಾಂಗ ಬಂಧನ ವಿಧಿಸಿದ ನಾಸಿಕ್ ನ್ಯಾಯಾಲಯ

ನಾಸಿಕ್: ಗರ್ಭಿಣಿ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ದಾಖಲಾಗಿರುವ ಮೂರನೇ ಅತ್ಯಾಚಾರ ಪ್ರಕರಣದಲ್ಲಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ಅವರನ್ನು ಮಹಾರಾಷ್ಟ್ರದ ನಾಸಿಕ್ ನ್ಯಾಯಾಲಯ ಸೋಮವಾರ ಏಪ್ರಿಲ್...

‘ನನ್ನನ್ನು ಎದುರಿಸಲು 19 ರಾಜ್ಯಗಳು, ಕೇಂದ್ರ ಒಗ್ಗೂಡಿವೆ, ನಾನು ಸಾಮಾನ್ಯ ಜನರಿಗಾಗಿ ಏಕಾಂಗಿಯಾಗಿ ಹೋರಾಡುತ್ತಿದ್ದೇನೆ’: ಮಮತಾ ಬ್ಯಾನರ್ಜಿ

2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮುನ್ನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ತಮ್ಮ ವಿರುದ್ಧ ಹೋರಾಡಲು 19 ರಾಜ್ಯಗಳು ಮತ್ತು ಕೇಂದ್ರ ಸರ್ಕಾರಗಳು ಒಗ್ಗೂಡಿವೆ ಮತ್ತು ಅವರು ಸಾಮಾನ್ಯ ಜನರಿಗಾಗಿ ಏಕಾಂಗಿಯಾಗಿ...

ಮತಗಟ್ಟೆಗಳಲ್ಲಿ ಬಯೋಮೆಟ್ರಿಕ್ ವ್ಯವಸ್ಥೆ : ಕೇಂದ್ರ ಸರ್ಕಾರ, ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ನೋಟಿಸ್

ಚುನಾವಣಾ ಅಕ್ರಮಗಳನ್ನು ತಡೆಗಟ್ಟಲು ಮತದಾನ ಕೇಂದ್ರಗಳಲ್ಲಿ ಬೆರಳಚ್ಚು ಮತ್ತು ಕಣ್ಣಿನ ಮಣಿ (ಐರಿಸ್) ಆಧಾರಿತ ಬಯೋಮೆಟ್ರಿಕ್ ಗುರುತಿಸುವಿಕೆಯನ್ನು ಜಾರಿಗೆ ತರಬೇಕು ಎಂದು ಕೋರಿ ಸಲ್ಲಿಕೆಯಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್‌) ಸಂಬಂಧ ಸುಪ್ರೀಂ...

‘ಅಸ್ಸಾಂ ಮುಖ್ಯಮಂತ್ರಿ ದೇಶದ ಅತ್ಯಂತ ಭ್ರಷ್ಟ, ತಮ್ಮ ವಿರೋಧಿಗಳನ್ನು ಮುಗಿಸಲು ಅಧಿಕಾರ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ; ರಾಹುಲ್ ಗಾಂಧಿ

ನವದೆಹಲಿ: "ಅಸ್ಸಾಂನ ಪ್ರಸ್ತುತ ಮುಖ್ಯಮಂತ್ರಿ ದೇಶದ ಅತ್ಯಂತ ಭ್ರಷ್ಟ. ಅವರು ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ತಮ್ಮ ರಾಜಕೀಯ ವಿರೋಧಿಗಳು ಮತ್ತು ವಿಮರ್ಶಕರನ್ನು ಕಿರುಕುಳ ನೀಡಲು ಅವರು ರಾಜ್ಯ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವುದು ಸಂವಿಧಾನಕ್ಕೆ ವಿರುದ್ಧವಾಗಿದೆ"...

ಕೃಷಿ ವೆಚ್ಚದ ಆಧಾರದ ಮೇಲೆ ಎಂಎಸ್‌ಪಿ ನಿಗದಿ ಕೋರಿ ರೈತರಿಂದ ಅರ್ಜಿ : ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್

ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ನಿಗದಿಪಡಿಸುವಾಗ, ಆಯಾ ರಾಜ್ಯ ಸರ್ಕಾರಗಳು ಪ್ರಸ್ತಾಪಿಸಿದ 'C2' ಎಂದು ಕರೆಯಲಾಗುವ ಕೃಷಿ ವೆಚ್ಚಕ್ಕೆ ಸಮರ್ಪಕ ಪ್ರಾಮುಖ್ಯತೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ...

ದೆಹಲಿ ವಿವಿ: ಅಂಬೇಡ್ಕರ್ ಕಾಲೇಜಿನಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮ ವಿರೋಧಿಸಿ ಪ್ರತಿಭಟಿಸಿದ ವಿದ್ಯಾರ್ಥಿಗಳ ಮೇಲೆ ಹಲ್ಲೆ, ಬಂಧನ

ಸೋಮವಾರ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಆಯೋಜಿಸಿದ್ದ ಕಾರ್ಯಕ್ರಮವನ್ನು ವಿರೋಧಿಸಿ ಪ್ರತಿಭಟಿಸಿದ ದೆಹಲಿ ವಿಶ್ವವಿದ್ಯಾಲಯದ ಡಾ. ಭೀಮ್ ರಾವ್ ಅಂಬೇಡ್ಕರ್ ಕಾಲೇಜಿನ ವಿದ್ಯಾರ್ಥಿಗಳ ಮೇಲೆ ಭದ್ರತಾ ಸಿಬ್ಬಂದಿ ಹಲ್ಲೆ ನಡೆಸಿ, ದೆಹಲಿ ಪೊಲೀಸರು...

ಪವನ್ ಖೇರಾಗೆ ನಿರೀಕ್ಷಣಾ ಜಾಮೀನು : ತೆಲಂಗಾಣ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಅಸ್ಸಾಂ ಸರ್ಕಾರ

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ವಿರುದ್ಧದ ಹೇಳಿಕೆಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರಿಗೆ ತೆಲಂಗಾಣ ಹೈಕೋರ್ಟ್ ಒಂದು ವಾರದ ಟ್ರಾನ್ಸಿಟ್ ನಿರೀಕ್ಷಣಾ ಜಾಮೀನು ನೀಡಿದ...

ಶಾಂತಿಗಾಗಿ ಕರೆ ನೀಡಿದ್ದ ಪೋಪ್ ಲಿಯೋ XIV ವಿರುದ್ಧ ಟ್ರಂಪ್ ವಾಗ್ದಾಳಿ; ತಾನೇ ಯೇಸು ಕ್ರಿಸ್ತ ಎಂಬಂತೆ ಎಐ ಫೋಟೋ ಹಂಚಿಕೊಂಡ ಅಮೆರಿಕ ಅಧ್ಯಕ್ಷ

ವಾಷಿಂಗ್ಟನ್: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ರಾತ್ರಿ ಪೋಪ್ ಲಿಯೋ XIV ವಿರುದ್ಧ ಅಸಾಧಾರಣ ಟೀಕೆಗಳನ್ನು ವ್ಯಕ್ತಪಡಿಸಿದ್ದಾರೆ. ಅಮೆರಿಕದಲ್ಲಿ ಜನಿಸಿದ ಕ್ಯಾಥೋಲಿಕ್ ಚರ್ಚ್‌ನ ಜಾಗತಿಕ ನಾಯಕ "ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ" ಮತ್ತು...