Homeಮುಖಪುಟತ್ರಿಪುರದಲ್ಲಿ ನಟಿ, ಟಿಎಂಸಿ ನಾಯಕಿ ಸಯೋನಿ ಘೋಷ್ ಮೇಲೆ ಹಲ್ಲೆ, ಬಂಧನ - ಪ್ರತಿಭಟನೆಗೆ ಸಜ್ಜು

ತ್ರಿಪುರದಲ್ಲಿ ನಟಿ, ಟಿಎಂಸಿ ನಾಯಕಿ ಸಯೋನಿ ಘೋಷ್ ಮೇಲೆ ಹಲ್ಲೆ, ಬಂಧನ – ಪ್ರತಿಭಟನೆಗೆ ಸಜ್ಜು

- Advertisement -
- Advertisement -

ಬಿಜೆಪಿ ಆಡಳಿತದ ತ್ರಿಪುರವು ಗೂಂಡಾರಾಜ್ ಆಗಿ ಬದಲಾಗಿದೆ ಎಂದು ಟಿಎಂಸಿ ಪಕ್ಷ ಆರೋಪಿಸಿದೆ. ನಟಿ, ಟಿಎಂಸಿ ನಾಯಕಿ ಸಯೋನಿ ಘೋಷ್‌ರವರನ್ನು ಬಂಧಿಸಿರುವ ತ್ರಿಪುರ ಪೊಲೀಸರ ಕ್ರಮ ಖಂಡಿಸಿ ಇಂದು ದೆಹಲಿಯಲ್ಲಿ ಟಿಎಂಸಿ ನಾಯಕರು ಪ್ರತಿಭಟನೆ ನಡೆಸಲು ಸಿದ್ದತೆ ನಡೆಸಿದ್ದಾರೆ. ಇದೇ ದಿನ ಬಿಜೆಪಿ ಎದುರಿಸುವುದರ ಕುರಿತು ನವದೆಹಲಿಯಲ್ಲಿ ಟಿಎಂಸಿ ಮುಖ್ಯಸ್ಥೆ ಮತ್ತು ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ವಿರೋಧ ಪಕ್ಷಗಳ ಜೊತೆ ಸಭೆ ನಡೆಸಲಿದ್ದು, ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿಯವರನ್ನು ಭೇಟಿಯಾಗಲಿದ್ದಾರೆ.

ತೃಣಮೂಲ ಕಾಂಗ್ರೆಸ್‌ನ ಪಶ್ಚಿಮ ಬಂಗಾಳದ ಯುವ ಘಟಕದ ಅಧ್ಯಕ್ಷೆಯಾದ ಸಯೋನಿ ಘೋಷ್ ಸೇರಿದಂತೆ ಹಲವರು ಮೇಲೆ ಅಗರ್ತಲದಲ್ಲಿ ಬಿಜೆಪಿ ಗೂಂಡಾಗಳು ಹಲ್ಲೆ ನಡೆಸಿದ್ದಾರೆ ಎಂದು ಟಿಎಂಸಿ ಆರೋಪಿಸಿದೆ. ಅಲ್ಲದೆ ಅವರೊಂದಿಗೆ ಟಿಎಂಸಿ ಸಂಸದೆಯಾದ ಸುಸ್ಮಿತ್ ದೇವ್, ಕುನಾಲ್ ಘೋಷ್, ಸುಬಾಲ್ ಬೌಮಿಕ್ ರವರನ್ನು ತ್ರಿಪುರ ಪೊಲೀಸರು ಬಂಧಿಸಿದ್ದಾರೆ. ಪೊಲೀಸ್ ಠಾಣೆಯಲ್ಲಿಯೇ ಹಲ್ಲೆ ನಡೆದಿದೆ ಎಂದು ಟಿಎಂಸಿ ಆರೋಪಿಸಿದ್ದು, ಆರು ಜನ ಗಾಯಗೊಂಡಿದ್ದಾರೆ ಎಂದಿದೆ.

ವಿಷಯ ತಿಳಿಯುತ್ತಿದ್ದಂತೆ ಭಾನುವಾರ ರಾತ್ರಿಯೇ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಮತ್ತು ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿಯವರು ತ್ರಿಪುರಾಗೆ ತೆರಳಿದ್ದಾರೆ. ಪಕ್ಷದ 15ಕ್ಕೂ ಹೆಚ್ಚು ಸಂಸದರು ನವದೆಹಲಿ ತಲುಪಿದ್ದು, ಗೃಹ ಸಚಿವ ಅಮಿತ್ ಶಾ ಜೊತೆ ಚರ್ಚಿಸಲು ಸಮಯ ಕೋರಿದ್ದಾರೆ. ಅಲ್ಲದೇ ಇಂದು ಸೋಮವಾರ ಧರಣಿ ನಡೆಸಲು ನಿರ್ಧರಿಸಿದ್ದಾರೆ.

ಅಲ್ಲದೆ ಇಂದು ಮಮತಾ ಬ್ಯಾನರ್ಜಿ ಸಹ ದೆಹಲಿಯಲ್ಲಿರಲಿದ್ದು ಈ ವಿಷಯದ ಕುರಿತು ವಿರೋಧ ಪಕ್ಷಗಳೊಂದಿಗೆ ಚರ್ಚಿಸಲಿದ್ದಾರೆ. ಮುಖ್ಯವಾಗಿ ಬಿಜೆಪಿ ಹಿಂಸಾಚಾರಗಳ ಮತ್ತು ಬಿಜೆಪಿಯನ್ನು 2024ರ ಚುನಾವಣೆಯಲ್ಲಿ ಎದುರಿಸುವುದು ಹೇಗೆ ಎಂಬುದರ ಕುರಿತು ಚರ್ಚೆಗಳು ನಡೆಯಲಿವೆ ಎಂದು ವರದಿಯಾಗಿದೆ.

ಟಿಎಂಸಿಯ ಈ ಆರೋಪಗಳನ್ನು ಬಿಜೆಪಿ ಅಲ್ಲಗೆಳೆದಿದೆ. ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೆಬ್ ಭಾಗವಹಿಸಿದ್ದ ಸಾರ್ವಜನಿಕ ಸಭೆಯನ್ನು ಸಯೋನಿ ಘೋಷ್ ಸೇರಿ ಇತರರು ಅಡ್ಡಿಪಡಿಸಿದರು. ವೇದಿಕೆಗೆ ಕಲ್ಲು ತೂರಿದರು ಎಂದು ಆರೋಪಿಸಿದೆ.

ಗಲಭೆಗೆ ಸಂಬಂಧಿಸಿದಂತೆ ಸಯೋನಿ ಘೋಷ್ ಸೇರಿದಂತೆ ಟಿಎಂಸಿಯ ಇತರರನ್ನು ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸುತ್ತಿದ್ದ ವೇಳೆ ಅಪರಿಚಿತ ದುಷ್ಕರ್ಮಿಗಳು ದಾಳಿ ನಡೆಸಿ ಹಲ್ಲೆ ಮಾಡಿದರು. ಆದರೆ ಯಾರಿಗು ಗಾಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಆನಂತರ ಸಯೋನಿ ಘೋಷ್‌ರವರನ್ನು ಪೊಲೀಸರು ಅಧಿಕೃತವಾಗಿ ಬಂಧಿಸಿದ್ದಾರೆ. ಅವರ ಮೆಲೆ ಕೊಲೆಯತ್ನ ಮತ್ತು ಗಲಭೆ ಹ ಹರಡುವ ಪ್ರಕರಣಗಳನ್ನು ದಾಖಲಿಸಿದ್ದು ಜಾಮೀನು ರಹಿತ ಪ್ರಕರಣಗಳನ್ನು ಸೇರಿಸಿದ್ದಾರೆ. ಆದರೆ ಅವರನ್ನು ಕೋರ್ಟ್‌ಗೆ ಹಾಜರುಪಡಿಸಿಲ್ಲ ಎಂದು ಟಿಎಂಸಿ ಆರೋಪಿಸಿದೆ.

ಪಶ್ಚಿಮ ಬಂಗಾಳದಲ್ಲಿ ಭರ್ಜರಿ ಜಯ ಸಾಧಿಸಿರುವ ಟಿಎಂಸಿಯು ಇತರ ರಾಜ್ಯಗಳತ್ತ ದೃಷ್ಟಿ ಹಾಯಿಸಿದೆ. 2023ರಲ್ಲಿ ತ್ರಿಪುರದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಅಲ್ಲಿ ತನ್ನ ಪ್ರಭಾವ ಬೀರಲು ಯತ್ನಿಸುತ್ತಿದೆ. ಹಾಗಾಗಿ ಬಿಜೆಪಿ ಮತ್ತು ಟಿಎಂಸಿ ನಡುವೆ ಜಿದ್ದಾಜಿದ್ದಿ ಆರಂಭವಾಗಿದೆ.


ಇದನ್ನೂ ಓದಿ: ಸಂಸತ್ತಿನಲ್ಲಿ ಕಾಯ್ದೆ ರದ್ದಾದ ನಂತರವೇ ಮುಷ್ಕರ ವಾಪಸ್: ನಾಳೆ ಲಕ್ನೋದಲ್ಲಿ ಮಹಾಪಂಚಾಯತ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. TMC ಬಂಗಾಳ ದಲ್ಲಿ ಮಾಡುತ್ತಿರುವ ದ್ವೇಷ ರಾಜಕಾರಣಕ್ಕೆ ಸರಿಯಾಗಿ ತಿರುಗೇಟು ಕೊಡುತ್ತಿರುವುದು ತ್ರಿಪುರಾ ದ ಬಿಜೆಪಿ ಸರ್ಕಾರ ಮಾತ್ರ.

    ಬಿಜೆಪಿ ನಾಯಕರನ್ನು ಸಂಬಂಧವೇ ಇಲ್ಲದ ಯಾವ ಯಾವುದೋ ಕೇಸ್ ಗಳಲ್ಲಿ ಸಿಕ್ಕಿಸಿ ಅವರನ್ನು ಅರೆಸ್ಟ್ ಮಾಡುತ್ತಿರುವುದು ಎಲ್ಲರಿಗೂ ತಿಳಿದ ವಿಷಯವೇ. ಈ ಬಗ್ಗೆ ಕಲ್ಕತ್ತ ಹೈ ಕೋರ್ಟ್ ಟಿ ಎಂ ಸಿ ಸರ್ಕಾರಕ್ಕೆ ಛೀ ಮಾರಿ ಹಾಕಿದೆ.

    ಆದರೆ ಬಂಗಾಳದ ಟಿ ಎಂ ಸಿ ಸರ್ಕಾರಕ್ಕೆ ಆ ಛೀ ಮಾರಿ ಬಗ್ಗೆ ಯಾವುದೇ ಗೌರವ ಇಲ್ಲ.

    ಏಟಿಗೆ ತಿರುಗೇಟು ಕೊಡದಿದ್ದರೆ ಸರ್ಕಾರದ ಬೆಂಬಲ ದಿಂದ ರೌಡಿಗಳೆಲ್ಲ ನಾಯಕರಾಗಿ ವಿಜೃಂಭಿಸುವದು ಭಾರತದಲ್ಲಿ ಅತ್ಯಂತ ಸಹಜ.

    ಈಗ ತ್ರಿಪುರಾ ದ ಬಿಜೆಪಿ ಸರ್ಕಾರ ಟಿ ಎಂ ಸಿ ಪಕ್ಷಕ್ಕೆ ಅದರದೇ ರುಚಿ ತೋರಿಸುತ್ತಿದೆ.

    ಟಿ ಎಂ ಸಿ ನಾಯಕರ ಭೇಟಿಗೆ ಅವಕಾಶ ನೀಡದೇ ಅಲ್ಲಿಗೆ ಬರುವ ಟಿ ಎಂ ಸಿ ನಾಯಕರಿಗೆ ಅರೆಸ್ಟ್ ಮಾಡುತ್ತಿದೆ! ಉದಾಹರಣೆ ಗೆ ಟಿ ಎಂ ಸಿ ಯುವ ನಾಯಕಿ ಸಾಯನಿ ಘೋಷ್ ಅವರನ್ನು ಕೊಲೆ ಕೇಸ್ ನಲ್ಲಿ ಅರೆಸ್ಟ್ ಮಾಡಿದೆ.

    ಟಿಟ್ ಫಾರ್ ಟ್ಯಾಟ್ ಆದಲ್ಲಿ ಮಾತ್ರ ಕಮ್ಯುನಿಸ್ಟರು ಮತ್ತು ಅವರ ಹಿಂಬಾಲಕರಾದ ಟಿ ಎಂ ಸಿ ಗೆ ತಾವು ದೈತ್ಯರು ತಮ್ಮನ್ನು ಯಾರೂ ಏನೂ ಮಾಡಲು ಸಾಧ್ಯವಿಲ್ಲ ಎಂಬ ಭ್ರಮೆ ಅಳಿಯಲು ಸಾಧ್ಯ. ಟಿ ಎಂ ಸಿ ಯ ಗೂಂಡಾ ಗಳನ್ನು ಭೂಮಿಗೆ ತರಲು ಇದು ಅತ್ಯಂತ ಅವಶ್ಯಕ.

    ವೆಲ್ ಡನ್ ತ್ರಿಪುರಾ ಗವರ್ನಮೆಂಟ್.

LEAVE A REPLY

Please enter your comment!
Please enter your name here

- Advertisment -

Must Read

ಇಸ್ರೇಲ್‌ಗೆ ಶಸ್ತ್ರಾಸ್ತ್ರ ಪೂರೈಸುವ ಹಡಗಿಗೆ ಬಂದರಿನಲ್ಲಿ ನಿಲುಗಡೆ ನಿಷೇಧಿಸಿದ ಸ್ಪೇನ್

0
ಇಸ್ರೇಲ್‌ಗೆ ಶಸ್ತ್ರಾಸ್ತ್ರಗಳನ್ನು ಸಾಗಿಸುವ ಹಡಗನ್ನು ಸ್ಪೇನ್ ಬಂದರಿನಲ್ಲಿ ನಿಲ್ಲಿಸಲು ಅನುಮತಿ ನಿರಾಕರಿಸಲಾಗಿದೆ ಎಂದು ಅಲ್ಲಿನ ವಿದೇಶಾಂಗ ಸಚಿವ ಜೋಸ್ ಮ್ಯಾನುಯೆಲ್ ಅಲ್ಬರೆಸ್ ಗುರುವಾರ ಹೇಳಿದ್ದಾರೆ. "ಇದೇ ಮೊದಲ ಬಾರಿಗೆ ನಾವು ಇಸ್ರೇಲ್‌ಗೆ ತೆರಳುತ್ತಿದ್ದ ಹಡಗಿಗೆ...