Homeರಂಜನೆಕ್ರೀಡೆಮಥುರಾ: ರೈಲು ಹಳಿ ಮೇಲೆ PUBG ಆಡುತ್ತಿದ್ದ ಇಬ್ಬರು ಬಾಲಕರ ದಾರುಣ ಸಾವು

ಮಥುರಾ: ರೈಲು ಹಳಿ ಮೇಲೆ PUBG ಆಡುತ್ತಿದ್ದ ಇಬ್ಬರು ಬಾಲಕರ ದಾರುಣ ಸಾವು

- Advertisement -
- Advertisement -

ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ಲಕ್ಷ್ಮಿನಗರ ಪ್ರದೇಶದಲ್ಲಿ ರೈಲು ಕಂಬಿಗಳ ಮೇಲೆ ಕುಳಿತು ಮೊಬೈಲ್ ಫೋನ್‌ಗಳಲ್ಲಿ PUBG ಆಡುತ್ತಿದ್ದ ಇಬ್ಬರು ಬಾಲಕರ ಮೇಲೆ ರೈಲು ಹರಿದು ಬಾಲಕರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಭಾನುವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ಬಾಲಕರನ್ನು ಗುರುನಾನಕ್ ದೇವ್ ಪಬ್ಲಿಕ್ ಸ್ಕೂಲ್‌ನ ಹತ್ತನೇ ತರಗತಿಯ ವಿದ್ಯಾರ್ಥಿ ಗೌರವ್ ಕುಮಾರ್ (14) ಮತ್ತು ನೆರೆಯ ಬಿಜಿಬಿ ಬ್ರಜ್ ಎಜುಕೇಶನ್ ಅಕಾಡೆಮಿ ಸೀನಿಯರ್ ಸೆಕೆಂಡರಿ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ ಕಪಿಲ್ ಕುಮಾರ್ (14) ಎಂದು ಗುರುತಿಸಲಾಗಿದೆ.

ಇಬ್ಬರೂ ವಿದ್ಯಾರ್ಥಿಗಳು ಬೆಳಿಗ್ಗೆ ವಾಕಿಂಗ್‌ಗೆ ಹೋಗಿದ್ದರು. ಆದರೆ ರೈಲು ಹಳಿಗಳ ಮೇಲೆ ಕುಳಿತು ಅವರು ತಮ್ಮ ಮೊಬೈಲ್‌ನಲ್ಲಿ PUBG ಆಡುವುದರಲ್ಲಿ ತೊಡಗಿದ್ದರು. ಇಬ್ಬರು ಆಟ ಆಡುವುದರಲ್ಲಿ ಮೈಮರೆತಿದ್ದರು ಎಂದು ಜಮುನಾ ಪಾರ್ ಪೊಲೀಸ್ ಠಾಣೆಯ ಎಸ್‌ಎಚ್‌ಒ ತಿಳಿಸಿದ್ದಾರೆ.

ಇದನ್ನೂ ಓದಿ: PUBG ಸೇರಿದಂತೆ 118 ಜನಪ್ರಿಯ ಚೀನಿ ಅಪ್ಲಿಕೇಷನ್ ನಿಷೇಧಿಸಿದ ಭಾರತ

ಮಥುರಾ ಕಂಟೋನ್ಮೆಂಟ್ ಮತ್ತು ರಾಯಾ ನಿಲ್ದಾಣಗಳ ನಡುವಿನ ಅಪಘಾತ ಸ್ಥಳದಲ್ಲಿ ಎರಡೂ ಮೊಬೈಲ್ ಫೋನ್‌ಗಳು ಪತ್ತೆಯಾಗಿವೆ. ಒಂದು ಫೋನ್ ಹಾನಿಗೊಳಗಾಗಿದ್ದರೆ, ಮತ್ತೊಂದರಲ್ಲಿ PUBG ಆಟ ನಡೆಯುತ್ತಿತ್ತು. ಅಪಘಾತ ಸಂಭವಿಸಿದಾಗ ಯಾವ ರೈಲು ಹಾದುಹೋಗಿದೆ ಎಂದು ನಮಗೆ ನಿಖರವಾಗಿ ತಿಳಿದಿಲ್ಲ ಎಂದು ಎಂದು ಜಮುನಾಪರ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಶಶಿ ಪ್ರಕಾಶ್ ಸಿಂಗ್ ತಿಳಿಸಿದ್ದಾರೆ.

“ಈ ಆನ್‌ಲೈನ್ ಆಟದ ಬಗ್ಗೆ ನಮಗೆ ಯಾವುದೇ ಕಲ್ಪನೆ ಕೂಡ ಇಲ್ಲ. ನನಗೆ ಅದರ ಬಗ್ಗೆ ತಿಳಿದಿದ್ದರೆ, ನಾನು ಆತನಿಗೆ ಎಂದಿಗೂ ಮೊಬೈಲ್ ಫೋನ್ ಕೊಡುತ್ತಿರಲಿಲ್ಲ ”ಎಂದು ಹಾಸಿಗೆ ವ್ಯಾಪಾರ ನಡೆಸುತ್ತಿರುವ ಕಪಿಲ್ ತಂದೆ ಸಂಜಯ್ ಕುಮಾರ್ ಹೇಳಿದ್ದಾರೆ.

PlayerUnknown’s Battlegrounds ಅನ್ನು ಜನಪ್ರಿಯವಾಗಿ PUBG ಎಂದು ಕರೆಯಲಾಗುತ್ತದೆ. ಇದು ಆನ್‌ಲೈನ್ ಮಲ್ಟಿಪ್ಲೇಯರ್ ಆಟವಾಗಿದೆ. ಈ ಆಟವು ಹೆಚ್ಚು ವ್ಯಸನಕಾರಿಯಾಗಿದೆ ಮತ್ತು ಇದನ್ನು ಆಡುವವರಲ್ಲಿ ಹಿಂಸಾತ್ಮಕ ನಡವಳಿಕೆಯನ್ನು ಉಂಟುಮಾಡಬಹುದು ಎಂದು ತಜ್ಞರು ಹೇಳುತ್ತಾರೆ.

PUBG ಆಟವನ್ನು ಭಾರತದಲ್ಲಿ ಬ್ಯಾನ್ ಮಾಡಲಾಗಿದೆ. ಆದರೂ ಕೂಡ ಬೇರೆ ಬೇರೆ ಮಾರ್ಗಗಳ ಮೂಲಕ ಯುವಜನತೆ ಪಬ್ಜಿ ಆಡುತ್ತಿದ್ದಾರೆ.


ಇದನ್ನೂ ಓದಿ: ಫ್ಯಾಕ್ಟ್‌ಚೆಕ್: PUBG ನಿಷೇಧ ಭಾರತದ ಆರ್ಥಿಕತೆಯನ್ನು ಹಾಳು ಮಾಡುತ್ತದೆ ಎಂದಿದ್ದರೆ ಅಮರ್ಥ್ಯ ಸೇನ್?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...