Homeಮುಖಪುಟಠೀವಿ ಬಂದು ಮಾಡಿ, ರುವಾಂಡ ಮಾದರಿ ನೋಡಿದರೆ ನಮ್ಮ ದೇಶ ಉಳಿತ್ತೈತೆ

ಠೀವಿ ಬಂದು ಮಾಡಿ, ರುವಾಂಡ ಮಾದರಿ ನೋಡಿದರೆ ನಮ್ಮ ದೇಶ ಉಳಿತ್ತೈತೆ

- Advertisement -
- Advertisement -

ಸಾಮಾನ್ಯ ಭಾರತೀಯನಿಗಿಂತ ಹೆಚ್ಚು ಎತ್ತರದಾಗ ತೇಲಾಡೋ ಹೀರೋ ಅಮಿತಾಬ ಬಚ್ಚನ ಅವರು ʻಹಮ್ʼ (ನಾವು) ಅಂತ ಒಂದು ಪಿಚ್ಚರು ಮಾಡಿದ್ದರು. ಅದರಾಗ ಒಂದು ಡಯಲಾಗು ಇತ್ತು. ʻʻʻದೇಖೋ ಗೊನಸಾಲ್ವಿಸ್. ಇಸ್ ದುನಿಯಾ ಮೆ ದೊ ತರಹ ಕಾ ಕೀಡಾ ಹೋತಾ ಹೈ,ʼʼ ಅಂತ ಶುರು ಆಗುವ ಆ ಮಾತು ಬಹಳ ಜನಪ್ರಿಯವಾಗಿತ್ತು.

ʻʻಎಕ್ ವೊ ಜೊ ಕಚರೇ ಸೆ ಉಠತಾ ಹೈ. ದೂಸರಾ ಪಾಪ ಕಿ ಗಂದಗೀ ಸೆ ಉಠತಾ ಹೈ. ಕಚರೇ ಕಾ ಕೀಡಾ ಇನ್ಸಾನ ಕೋ ಬೀಮಾರ ಕರತಾ ಹೈ. ಲೆಕಿನ್ ಪಾಪ ಕಿ ಗಂದಗೀ ಸೆ ನಿಕಲನೆ ವಾಲಾ ಕೀಡಾ ಪೂರೆ ಸಮಾಜ ಕೊ ಬೀಮಾರ ಕರತಾ ಹೈ. ಕಚರೇ ಕಾ ಕೀಡಾ ಮಾರನೆ ಕೆ ಲಿಯೆ ಫ್ಲಿಟ್ ಬಾಜಾರ್ ಮೆ ಮಿಲತಾ ಹೈ. ಲೆಕಿನ ಪಾಪ ಕಿ ಗಂದಗೀ ಕಾ ಕೀಡಾ ಮಾರನೆ ಕೆ ಲಿಯೆ ಸಾಲಾ ಫ್ಲಿಟ್ ಅಭೀ ತಕ ಬನಾ ನಹೀಂʼʼ ಸಮಾಜದಲ್ಲಿರುವುದು ಎರಡು ರೀತಿಯ ಕ್ರಿಮಿ. ಒಂದು ಕಸದಿಂದ ಬರುವುದು, ಇನ್ನೊಂದು ಪಾಪದಿಂದ ಹುಟ್ಟುವುದು. ಮೊದಲನೆಯದರಿಂದ ಮನುಷ್ಯರಿಗೆ ರೋಗ ಬಂದರೆ ಎರಡನೇಯದರಿಂದ ಇಡೀ ಸಮಾಜಕ್ಕೆ ರೋಗ ಬರತದೆ. ಒಂದನೇಯದಕ್ಕೆ ಔಷಧಿ ಇದೆ. ಇನ್ನೊಂದಕ್ಕಿಲ್ಲ,ʼʼ ಅಂತ.

 

ಇವತ್ತು ನಮ್ಮೆದುರಿಗೆ ಇರುವುದು ಸಹ ಎರಡು – ಕೊರೋನಾ ಕ್ರಿಮಿ ಮತ್ತು ಕೋಮು ಕ್ರಿಮಿ. ಕೊರೋನಾ ರೋಗಿಷ್ಟರ ಕೆಮ್ಮು – ಕಫಾದಾಗ ಇದ್ದರ. ಎರಡನೇದು ಠೀವಿ ಗೂಟಗಳ (ಟೀವಿ ಆಂಕರುಗಳ) ಒದರಿಕೆಯಿಂದ ಬರತೇತಿ. ಕೊರೋನಾ ಬರಾಕ ನೀವು ರೋಗಿ ಎದರಿಗೆ ಇರಬೇಕು. ಎರಡನೇದು ಬರಾಕ ನಿಮ್ಮ ಮನ್ಯಾಗ ಠೀವಿ ಇದ್ದರ ಸಾಕು. ನೀವು ಅದರ ಎದರಿಗೆ ಇರಬೇಕು ಅಂತ ಏನಿಲ್ಲ.


ಇದನ್ನೂ ಓದಿ: ಆನಿ ಬಂದವು ಆನಿ ಎರಡೆರಡು ಆನಿ – ಒಂದು ಅಂಬಾನಿ, ಇನ್ನೊಂದು ಅಡಾನಿ


ಇಂತ ದುರಿತ ಕಾಲದಾಗ ಅವರ ಕೆಲಸ ಏನಪಾ ಅಂದರ ಜನರ ಅಂಜಿಕಿ ಕಮ್ಮಿ ಮಾಡೋದು. ಆದರ ಅವರು ಏನು ಮಾಡಾಕ ಹತ್ಯಾರು ಅಂದರ ಜನರ ಅಂಜಿಕಿ ಜಾಸ್ತಿ ಮಾಡಾಕ ಹತ್ಯಾರು. ಹೆದರಿದವರ ಮ್ಯಾಗ ಹಲ್ಲಿ ಒಗದಿದ್ದರು ಅಂದಂಗ ಇಲ್ಲದ್ದು – ಬಿಟ್ಟದ್ದು ಎಲ್ಲಾ ಹುಡಿಕಿ ಹುಡಿಕಿ ಮಂದೀಗೆ ಹೆದರಸಾಕ ಹತ್ಯಾರು.

ಅವರು ರೋಗದ ಬಗ್ಗೆ- ವೈರಸ್ಸ ಬಗ್ಗೆ ತಪ್ಪು ಮಾಹಿತಿ ಕೊಡತಾರು. ಮತ್ತ ಆ ನೆವದಿಂದ ಜನಾಂಗೀಯ ದ್ವೇಷ ಹುಟ್ಟಸಾಕ- ಹೆಚ್ಚು ಮಾಡಾಕ ಕುಂತಾರು.

ನಮ್ಮ ಒಳಗ ಇದ್ದಿರಬಹುದಾದ ದ್ವೇಷ ಹೊಡದ ಎಬ್ಬಸಾಕ ಹತ್ಯಾರು. ಅವರಿಗೆ ಏನು ಗೊತ್ತಿಲ್ಲಾ ಅಂದರ ಒಂದ ಸಲಾ ಇದು ಸುರು ಆತಂದರ ಅದನ್ನ ನಿಲ್ಲಸಾಕ ಆಗಂಗಿಲ್ಲ. ಅದಕ್ಕ ದಿನಾ ಸಂಜೀಕೆ ನರಬಲಿ ಕೊಡಬೇಕು. ಕಡೀಕೆ ಅದು ಫ್ರಾಂಕೆನ್ ಸ್ಟೈನ್ ರಾಕ್ಷಸನ ಗತೆ, ತಮ್ಮ ಸೃಷ್ಟಿ ಮಾಡಿದವರನ್ನ ತಿಂದು ಬಿಡತೇತಿ.

ಹದಿನೈದನೇ ಶತಮಾನದ ಸಂತ ನಾರ್ಸಿ ಮೆಹತಾ ಅವರ ಭಜನೆಯ ಆಶಯದಂತೆ ಆ ಭಗವಂತ ನಮಗೂ ಅವರಿಗೂ, ಸಬಕೋ ಸನ್ಮತಿ ಕೊಡಲಿ.

ಈ ಕೀಲಿ ಕಿಟಕ್ಕಿನ್ಯಾಗ ಎಲ್ಲಾರೂ ಪಿಚ್ಚರು ನೋಡಾಕ ಹತ್ಯಾರು. ನೀವು ಸಹಿತ ʻಇಂಗೋಮಾನ್ಷಯಾʼ (ಸಿಹಿ ಕನಸು) ಅನ್ನುವ ಒಂದು ಸಾಕ್ಷ ಚಿತ್ರ ಸಿಕ್ಕರೆ ನೋಡ್ರಿ. ಅದು ರುವಾಂಡ ದೇಶದಲ್ಲಿ 1994 ರಾಗ ನಡೆದ ನರಮೇಧದ ನಂತರ ಹುಟು ಮತ್ತು ಟುಟ್ಸಿ ಎಂಬ ವಿರೋಧಿ ಜನಾಂಗೀಯ ಗುಂಪುಗಳ ಹೆಣ್ಣು ಮಕ್ಕಳು ಕೂಡಿ ಒಂದು ಡೊಳ್ಳು ಕುಣಿತದ ತಂಡ ಹಾಗೂ ಒಂದು ಐಸ್ ಕ್ರೀಮು ಅಂಗಡಿ ಹಾಕಿ ಒಗ್ಗಟ್ಟು ಸಾರಿದ್ದರ ಬಗ್ಗೆ ಐತಿ. ಅದನ್ನ ಮಾಡಾಕ ಕೀಕೀ ಅನ್ನೋ ಪಾಪ್ ಹಾಡುಗಾರ್ತಿ ಅವರಿಗೆ ಹುರಿದುಂಬಸತಾಳು.

ಇದರ ಹಿನ್ನೆಲೆ ಎನಂದರ 1994 ಬೇಸಿಗೆಯೊಳಗ ಮಧ್ಯ ಆಫ್ರಿಕಾದ ಸಣ್ಣ ದೇಶ ರುವಾಂಡದಾಗ ಹುಟು ಹಾಗೂ ಟುಟ್ಸಿ ಅವರ ನಡುವೆ ಜನಾಂಗೀಯ ಕದನ ನಡೀತು. ಬಹುಸಂಖ್ಯಾತ ಹುಟುರವರಲ್ಲಿನ ಉಗ್ರವಾದಿಗಳು ಅಲ್ಪ ಸಂಖ್ಯಾತ ಟುಟ್ಸಿ ಹಾಗೂ ಸೌಮ್ಯವಾದಿ ಹುಟು ಜನರನ್ನ ಕೊಂದರು. ಅಸಂಖ್ಯ ಜನ ಸತ್ತರು, ಎಷ್ಟೋ ಜನ ನಾಪತ್ತೆಯಾದರು, ಹಲವರು ವಿದೇಶಗಳಿಗೆ ಓಡಿ ಹೋದರು.


ಇದನ್ನೂ ಓದಿ:  ಜನ ಏನ್‌ ಮಾಡ್ಬೇಕು ಅಂತ ಹೇಳ್ತಿರೋ ಸರ್ಕಾರ ತಾನೇನು ಮಾಡಿದೀನಿ ಅಂತನೇ ಹೇಳ್ತಿಲ್ಲ?


ನಿನ್ನೆ ಮೊನ್ನೆ ನೆರೆಹೊರೆಯವರಾಗಿದ್ದ ಜನರನ್ನ ರಕ್ತ ಪಿಪಾಸುಗಳಾಗುವಂತೆ ಮಾಡಿದ್ದು ಯಾರಂದರ ರುವಾಂಡ ರೇಡಿಯೋದ ಪತ್ರಕರ್ತರು. ʻಟುಟ್ಸಿಗಳು ವಿಷದ ಹಾವು – ಚೇಳು- ಜಿರಲೆ. ಅವರನ್ನು ಕೊಲ್ಲಿರಿ. ದೇವರು ನಿಮಗೆ ಶಹಬ್ಬಾಸು ಗಿರಿ ಕೊಡತಾನೆ. ಚಿಕ್ಕ ಮಕ್ಕಳು ಅಂತ ಬಿಡಬೇಡಿ, ಹಾವುಗಳಲ್ಲಿ ಹುಟ್ಟಿನಿಂದ ವಿಷ ತುಂಬಿರತದೆʼ ಅಂತ ಇಪ್ಪತ್ನಾಕು ತಾಸು ಪ್ರಸಾರ ಮಾಡಿದರು.

ಆರು ವರ್ಷಗಳ ಹಿಂಸೆ- ಕ್ಷಾಮ- ದುರಾಡಳಿತದ ನಂತರ ಚುನಾವಣೆಯಾಗಿ ರುವಾಂಡದಾಗ ಶಾಂತಿ ಪ್ರಿಯ ಸರಕಾರ ಬಂತು. ಈಗ ಆಫ್ರಿಕಾ ಖಂಡದ 54 ದೇಶಗಳೊಳಗ ಅತಿ ವೇಗವಾಗಿ ಬೆಳೆಯುತ್ತಿರುವ ದೇಶ ರವಾಂಡ. ಟುಟ್ಸಿ ರಾಜಮನೆತನಕ್ಕ ಸೇರಿದ ಅದರ ಅಧ್ಯಕ್ಷ ಪಾಲ ಕಗಾಮೆ ಎಲ್ಲಾ ಜನಾಂಗಗಳನ್ನು ಜೊತೆಯಲ್ಲಿ ಸೇರಿಸಿ ಕರೆದುಕೊಂಡು ಹೋಗುವ ಮಾತಾಡತಾನು. ಅಲ್ಲಿನ ಸಂಸತ್ತಿನಲ್ಲಿ ಹೆಣ್ಣುಮಕ್ಕಳು ಹೆಚ್ಚಿನ ಸಂಖ್ಯೆದಾಗ ಅದಾರು. ಅರಣ್ಯ – ವನ್ಯಜೀವಿ ರಕ್ಷಣೆ ಛಲೋ ಮಾಡತಾರು ಅಂತ ಹೇಳಿ ಅವರಿಗೆ ಪ್ರಶಸ್ತಿ ಕೊಟ್ಟೇತಿ. ರೇಡಿಯೋ ರವಾಂಡಾದ ಕೆಲವು (ಅನೌನ್ಸರು) ಕಿರಚಾಟಿಗಳ ಮ್ಯಾಲೆ ಮೊಕದ್ದಮೆ ನಡದು ಜೈಲಿಗೆ ಹೋಗ್ಯಾರು. ಅದರಾಗಿನ ಕಾರ್ಯಕ್ರಮದ ಗುಣಮಟ್ಟ ಬ್ಯಾರೆ ಈಗ ಆಗೇತಿ.

ನಮ್ಮ ಮಾಧ್ಯಮಗಳು ಈ ಭೂಮಿಯನ್ನ ಸ್ವರ್ಗ ಮಾಡೋದು ಹೋಗಲಿ. ನರಕಾ ಅಂತೂ ಮಾಡಬಾರದು ಅಂತ ಹೇಳಿ ರಘುಪತಿ ರಾಘವನಲ್ಲೆ ಪ್ರಾರ್ಥನೆ ಮಾಡೋಣು. ಅದರಕಿಂತಾ ಮೊದಲಿಗೆ ಠೀವಿ ಬಂದು ಮಾಡೋಣು, ಅಲ್ಲವೇ ಮನೋಲ್ಲಾಸಿನಿ?


ಇದನ್ನೂ ಓದಿ: ಖಾಲಿ ಹೊಟ್ಟಿಗಿಂತಾ ಖಾಲಿ ಮೆದುಳು ಭಾಳ ಅಪಾಯಕಾರಿ. ಆದರೆ ಸರಕಾರ ಹಾಗೂ ಮಾಧ್ಯಮ ಎರಡೂ ಸರಿಯಾಗಿಲ್ಲ

ವಿಡಿಯೊ ನೋಡಿ: ಕೊರೊನಾಗೆ ಚಿಕಿತ್ಸೆ ಏನು? ವ್ಯಾಕ್ಸೀನ್‌ ತಯಾರಿ ಎಲ್ಲಿಯವರೆಗೆ ಬಂದಿದೆ? ಅಂತಿಮ ಪರಿಹಾರ ಏನು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಸ್ವಕ್ಷೇತ್ರ ತಿರುವನಂತಪುರದಲ್ಲಿ ಬಿಜೆಪಿ ಭರ್ಜರಿ ಗೆಲುವು : ‘ಪ್ರಜಾಪ್ರಭುತ್ವದ ಸೌಂದರ್ಯ’ ಎಂದ ಕಾಂಗ್ರೆಸ್ ಸಂಸದ ಶಶಿ ತರೂರ್

ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಇಂದು (ಡಿ.13) ಪ್ರಕಟಗೊಂಡಿದ್ದು, ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ 45 ವರ್ಷಗಳ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌...

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ : ಯುಡಿಎಫ್‌ ಸ್ಪಷ್ಟ ಮೇಲುಗೈ

ಇಂದು (2025 ಡಿಸೆಂಬರ್ 13, ಶನಿವಾರ) ಪ್ರಕಟಗೊಂಡ ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದಲ್ಲಿ ವಿರೋಧ ಪಕ್ಷಗಳ ಒಕ್ಕೂಟವಾದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸ್ಪಷ್ಟ ಮೇಲುಗೈ ಸಾಧಿಸಿದೆ. ಈ ಮೂಲಕ ರಾಜ್ಯ...

ಕೋಲ್ಕತ್ತಾ ಮೆಸ್ಸಿ ಕಾರ್ಯಕ್ರಮದಲ್ಲಿ ಗಲಾಟೆ | ಕ್ಷಮೆ ಯಾಚಿಸಿದ ಸಿಎಂ ಮಮತಾ ಬ್ಯಾನರ್ಜಿ, ತನಿಖೆಗೆ ಸಮಿತಿ ರಚನೆ; ಆಯೋಜಕನ ಬಂಧನ

ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಭೇಟಿಯ ವೇಳೆ ಶನಿವಾರ (ಡಿಸೆಂಬರ್ 13) ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಉಂಟಾದ ಗಲಾಟೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕ್ಷಮೆಯಾಚಿಸಿದ್ದು, ನಿವೃತ್ತ ನ್ಯಾಯಮೂರ್ತಿ...

ಮೆಸ್ಸಿ ನೋಡಲು 25 ಸಾವಿರ ರೂ. ಪಾವತಿಸಿದವರಿಗೆ ನಿರಾಶೆ; ಕೋಪಗೊಂಡ ಅಭಿಮಾನಿಗಳಿಂದ ಕ್ರೀಡಾಂಗಣದಲ್ಲಿ ದಾಂಧಲೆ

ಶನಿವಾರ ನಡೆದ ಲಿಯೋನೆಲ್ ಮೆಸ್ಸಿ ಅವರ ಬಹು ನಿರೀಕ್ಷಿತ "ಗೋಟ್ ಇಂಡಿಯಾ ಟೂರ್" ಕೋಲ್ಕತ್ತಾದಲ್ಲಿ ಅಸ್ತವ್ಯಸ್ತವಾಯಿತು. ಯುವ ಭಾರತಿ ಕ್ರಿರಂಗನ್‌ನಲ್ಲಿ ರೊಚ್ಚಿಗೆದ್ದ ಅಭಿಮಾನಿಗಳ ದಾಂಧಲೆಯಿಂದ ಕ್ರೀಡಾಂಗಣ ಅವ್ಯವಸ್ಥೆಗೆ ಒಳಗಾಯಿತು. ಸಾವಿರಾರು ಅಭಿಮಾನಿಗಳು ಅರ್ಜೆಂಟೀನಾದ...

ಡ್ರಗ್‌ ಪೆಡ್ಲರ್‌ಗಳ ಮನೆ ಒಡೆದು ಹಾಕುವ ಹೇಳಿಕೆ : ಪರಮೇಶ್ವರ್ ಮಾತಿಗೆ ಆತಂಕ ವ್ಯಕ್ತಪಡಿಸಿದ ಕಾಂಗ್ರೆಸ್ ಹಿರಿಯ ನಾಯಕ ಚಿದಂಬರಂ

"ಡ್ರಗ್‌ ಪೆಡ್ಲರ್‌ಗಳ ಬಾಡಿಗೆ ಮನೆಗಳನ್ನು ಒಡೆದು ಹಾಕುವ ಹಂತಕ್ಕೆ ಹೋಗಿದ್ದೇವೆ" ಎಂಬ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆಗೆ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಆತಂಕ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ...

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ: ಶಶಿ ತರೂರ್ ಕ್ಷೇತ್ರ ತಿರುವನಂತಪುರಂನಲ್ಲಿ ಬಿಜೆಪಿ ಮುನ್ನಡೆ

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ, ವಿಶೇಷವಾಗಿ ತಿರುವನಂತಪುರಂನಲ್ಲಿ ಭಾರತೀಯ ಜನತಾ ಪಕ್ಷದ ಸಾಧನೆಯನ್ನು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಶನಿವಾರ ಅಭಿನಂದಿಸಿದ್ದಾರೆ. ಜನರ ತೀರ್ಪನ್ನು ಗೌರವಿಸಬೇಕು ಎಂದು ಹೇಳಿದ್ದಾರೆ. ಎಕ್ಸ್‌ನಲ್ಲಿ ದೀರ್ಘ...

ಆಳಂದ ಮತಗಳ್ಳತನ | ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಸೇರಿ 7 ಮಂದಿ ವಿರುದ್ಧ ಎಸ್‌ಐಟಿ ಚಾರ್ಜ್‌ಶೀಟ್‌

ಕಲಬುರಗಿಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತಗಳ್ಳತನ (ಚುನಾವಣಾ ಆಕ್ರಮ) ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದು, ಆಳಂದದ ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್...

ಉತ್ತರ ಪ್ರದೇಶ| ಗಸ್ತು ವಾಹನ ಹಳ್ಳಕ್ಕೆ ಉರುಳಿಸಿದ ಪಾನಮತ್ತ ಪೊಲೀಸರು; ಕ್ರೇನ್ ಚಾಲಕನ ಮೇಲೆ ಹಲ್ಲೆ

ಶುಕ್ರವಾರ (ಡಿಸೆಂಬರ್ 12) ರಾತ್ರಿ ಪೊಲೀಸರೊಬ್ಬರು ಕಾರಿನ ನಿಯಂತ್ರಣ ಕಳೆದುಕೊಂಡ ಬಳಿಕ '112' ಪೊಲೀಸ್ ಪ್ರತಿಕ್ರಿಯೆ ವಾಹನ (ಪಿಆರ್‌ವಿ) ಹಳ್ಳಕ್ಕೆ ಉರುಳಿದೆ. ವರದಿಗಳ ಪ್ರಕಾರ, ಘಟನೆಯ ಸಮಯದಲ್ಲಿ ಪೊಲೀಸರು ಪಾನಮತ್ತರಾಗಿದ್ದರು. ಕಾರ್ ಕಂದಕಕ್ಕೆ...

ಲಿಯೋನೆಲ್ ಮೆಸ್ಸಿ ಇಂಡಿಯಾ ಪ್ರವಾಸ; ಅಭೂತಪೂರ್ವ ಸ್ವಾಗತ ಕೋರಿದ ಕೋಲ್ಕತ್ತಾ ಅಭಿಮಾನಿಗಳು

ಇಂಡಿಯಾ ಪ್ರವಾಸ ಪ್ರಾರಂಭಿಸಿರುವ ಅರ್ಜೆಂಟೀನಾದ ಪುಟ್‌ಬಾಲ್‌ ತಾರೆ ಲಿಯೋನೆಲ್ ಮೆಸ್ಸಿ ಕೋಲ್ಕತ್ತಾಗೆ ಬಂದಿಳಿದಿದ್ದಾರೆ. ಶನಿವಾರ ಬೆಳಗಿನ ಜಾವ ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳಿಂದ ಅವರಿಗೆ ಅಭೂತಪೂರ್ವ ಸ್ವಾಗತ ಕೋರಿದರು. ಅರ್ಜೆಂಟೀನಾದ ಸೂಪರ್‌ಸ್ಟಾರ್ ದುಬೈ...

ನಟಿಯ ಅಪಹರಣ, ಅತ್ಯಾಚಾರ ಪ್ರಕರಣ : ಆರು ಅಪರಾಧಿಗಳಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

ಮಲಯಾಳಂ ಮೂಲದ ಬಹುಭಾಷಾ ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದ (2017ರ ಪ್ರಕರಣ) ಆರು ಅಪರಾಧಿಗಳಿಗೆ ಇಪ್ಪತ್ತು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಶುಕ್ರವಾರ (ಡಿಸೆಂಬರ್ 12) ಕೇರಳ ನ್ಯಾಯಾಲಯ ಆದೇಶಿಸಿದೆ. ಡಿಸೆಂಬರ್...