Homeಮುಖಪುಟಬಿಲ್ಕಿಸ್ ಬಾನು ಪ್ರಕರಣ: ಜೈಲಿಗೆ ಮರಳಿದ ಎರಡೇ ವಾರಕ್ಕೆ ಓರ್ವ ಅಪರಾಧಿಗೆ ಪೆರೋಲ್ ನೀಡಿದ ಕೋರ್ಟ್‌

ಬಿಲ್ಕಿಸ್ ಬಾನು ಪ್ರಕರಣ: ಜೈಲಿಗೆ ಮರಳಿದ ಎರಡೇ ವಾರಕ್ಕೆ ಓರ್ವ ಅಪರಾಧಿಗೆ ಪೆರೋಲ್ ನೀಡಿದ ಕೋರ್ಟ್‌

- Advertisement -
- Advertisement -

ಜೈಲಿಗೆ ಶರಣಾದ ಎರಡೇ ವಾರಕ್ಕೆ ಬಿಲ್ಕಿಸ್ ಬಾನು ಅತ್ಯಾಚಾರಿಗಳ ಪೈಕಿ ಒಬ್ಬನಿಗೆ ಗುಜರಾತ್ ಹೈಕೋರ್ಟ್‌ ಪೆರೋಲ್ ನೀಡಿದೆ. ಒಟ್ಟು 11 ಅತ್ಯಾಚಾರ ಅಪರಾಧಿಗಳ ಪೈಕಿ ಪ್ರದೀಪ್ ಮೋಧಿಯಾ ಎಂಬಾತನಿಗೆ ಐದು ದಿನಗಳ ಪೆರೋಲ್ ನೀಡಲಾಗಿದ್ದು, ಆತನ ಮಾವ ನಿಧನರಾಗಿರುವ ಹಿನ್ನೆಲೆ ಗುಜರಾತ್‌ನ ದಾಹೋದ್‌ ಜಿಲ್ಲೆಯ ರಣಧೀಕ್‌ಪುರದ ಮನೆಗೆ ತೆರಳಲು ಅವಕಾಶ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಪೆರೋಲ್ ಪಡೆದಿರುವ ಅತ್ಯಾಚಾರಿ ಪ್ರದೀಪ್ ಮೋಧಿಯಾ ಜನವರಿ 21ರಂದು ತಡರಾತ್ರಿ ಜೈಲಿಗೆ ಶರಣಾಗಿದ್ದ. ಈತ ಸೇರಿದಂತೆ 11 ಅಪರಾಧಿಗಳಿಗೆ ಜೈಲಿಗೆ ಮರಳುವಂತೆ ಸುಪ್ರೀಂ ಕೋರ್ಟ್‌ ಸೂಚಿಸಿತ್ತು.

ನ್ಯಾಯಮೂರ್ತಿ ಎಂ.ಆರ್‌ ಮೆಂಗ್ಡೆ ಅವರು ಫೆಬ್ರವರಿ 5 ರಂದು ಫೆಬ್ರವರಿ 7 ರಿಂದ 11 ರವರೆಗೆ ಮೋಧಿಯಾಗೆ ಪೆರೋಲ್ ನೀಡಿದ್ದಾರೆ. ಮೋಧಿಯಾ ಸುಪ್ರೀಂ ಕೋರ್ಟ್‌ ಹೇಳಿದಂತೆ ಸರಿಯಾದ ಸಮಯಕ್ಕೆ ಜೈಲಿಗೆ ಮರಳಿದ್ದಾನೆ. ಅಲ್ಲದೆ ಜೈಲಿನ ಆತನ ಗುಣ ನಡತೆ ಚೆನ್ನಾಗಿದೆ. ಹಾಗಾಗಿ, 30 ದಿನಗಳ ಪೆರೋಲ್ ನೀಡುವಂತೆ ಅತನ ಪರ ವಕೀಲರು ಮನವಿ ಮಾಡಿದ್ದರು.

“ಹೈಕೋರ್ಟ್ ಅಪರಾಧಿ ಮೋಧಿಯಾಗೆ ಮನೆಗೆ ತೆರಳಲು ಐದು ದಿನಗಳ ಪೆರೋಲ್ ನೀಡಿದೆ. ಪೆರೋಲ್ ಷರತ್ತುಗಳ ಪ್ರಕಾರ, ಆತ ರಣಧೀಕ್‌ಪುರ ಪೊಲೀಸ್ ಠಾಣೆಗೆ ವರದಿ ಮಾಡುವ ಅಗತ್ಯವಿಲ್ಲ. ಪೆರೋಲ್ ಅವಧಿಯಲ್ಲಿ ಪೊಲೀಸರು ಆತನ ಮೇಲೆ ನಿಗಾ ಇಡಬೇಕಾಗಿಲ್ಲ. ಆತ ತಾನೇ ಜೈಲಿಗೆ ಹಿಂದಿರಿಗಬೇಕು ಎಂದು ಹೈಕೋರ್ಟ್‌ ಹೇಳಿದ್ದಾಗಿ ದಾಹೋದ್‌ನ ಲಿಮ್ಖೇಡಾದ ಉಪ ಪೊಲೀಸ್ ವರಿಷ್ಠಾಧಿಕಾರಿ ವಿಶಾಖ ಜೈನ್ ಅವರನ್ನು ಉಲ್ಲೇಖಿಸಿ ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ವರದಿ ಮಾಡಿದೆ.

ಗುಜರಾತ್‌ ಸರ್ಕಾರ ಎಲ್ಲಾ 11 ಅತ್ಯಾಚಾರಿಗಳನ್ನು ಜೈಲಿನಿಂದ ಬಿಡುಗಡೆ ಮಾಡುವ ಮುನ್ನ, 2008ರಿಂದ ಪೇರೋಲ್‌ನಲ್ಲಿ 1041 ಮತ್ತು ಫರ್ಲೋದಲ್ಲಿ 223 ದಿನಗಳ ಕಾಲ ಮೋಧಿಯಾ ಜೈಲಿನಿಂದ ಹೊರಗಿದ್ದ.

ಜನವರಿಯಲ್ಲಿ, 11 ಅಪರಾಧಿಗಳಿಗೆ ಅವಧಿ ಪೂರ್ವ ಬಿಡುಗಡೆಯನ್ನು ನೀಡಿದ್ದಕ್ಕಾಗಿ ಸುಪ್ರೀಂ ಕೋರ್ಟ್ ಗುಜರಾತ್ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು. ಗುಜರಾತ್ ರಾಜ್ಯವು “ಅಪರಾಧಿಗಳೊಂದಿಗೆ ಸಹಕರಿಸಿದೆ” ಎಂದು ಪೀಠ ಹೇಳಿತ್ತು. ಈ ಭಯದಿಂದಲೇ ನ್ಯಾಯಾಲಯವು ಬಿಲ್ಕಿಸ್ ಬಾನು ಪ್ರಕರಣದ ವಿಚಾರಣೆಯನ್ನು ಗುಜರಾತ್‌ನಿಂದ ಮಹಾರಾಷ್ಟ್ರಕ್ಕೆ ವರ್ಗಾಯಿಸಿದ್ದು ಎಂದು ಹೇಳಿತ್ತು.

ಬಿಲ್ಕಿಸ್‌ ಬಾನು ಅತ್ಯಾಚಾರ ನಡೆಯುವಾಗ 2002ರಲ್ಲಿ ಗುಜರಾತ್‌ನಲ್ಲಿ ಬಿಜೆಪಿ ಸರ್ಕಾರವಿತ್ತು. ಎಲ್ಲಾ 11 ಅತ್ಯಾಚಾರಿಗಳನ್ನು ಸನ್ನಡೆತೆಯ ಕಾರಣ ನೀಡಿ 2022ರ ಆಗಸ್ಟ್ 15 ರಂದು ಬಿಜೆಪಿ ಸರ್ಕಾರವೇ ಬಿಡುಗಡೆ ಮಾಡಿತ್ತು. ಅತ್ಯಾಚಾರ ಅಪರಾಧಿಗಳು ಎಲ್ಲರೂ ಬಿಜೆಪಿ ಸದಸ್ಯರು ಅಥವಾ ಅದರೊಂದಿಗೆ ಸಂಪರ್ಕ ಇರುವವರು ಎಂದು ಹೇಳಲಾಗ್ತಿದೆ. ಈ ಹಿಂದೆ ತಾತ್ಕಾಲಿಕ ಪೆರೋಲ್ ಮೇಲೆ ಇದ್ದಾಗ ಅಪರಾಧಿಗಳು ಸಾಕ್ಷಿಗಳಿಗೆ ಬೆದರಿಕೆ ಹಾಕಿದ್ದರು ಎಂಬ ಆರೋಪವೂ ಇದೆ. ಅಪರಾಧಿಗಳ ಬಿಡುಗಡೆ ಕುರಿತು ನಿರ್ಧಿರಿಸಲು ಸರ್ಕಾರ ರಚಿಸಿದ್ದ ಸಮಿತಿ ಸದಸ್ಯರಲ್ಲಿ ಒಬ್ಬರಾದ ಬಿಜೆಪಿ ಶಾಸಕ “ಅತ್ಯಾಚಾರಿಗಳು ಬಿಡುಗಡೆಗೆ ಅರ್ಹರು, ಏಕೆಂದರೆ ಅವರೆಲ್ಲ ಉತ್ತಮ ಸಂಸ್ಕಾರ ಅಥವಾ ಮೌಲ್ಯಗಳನ್ನು ಹೊಂದಿರುವ ಬ್ರಾಹ್ಮಣರು” ಎಂದಿದ್ದರು.

ಇದನ್ನೂ ಓದಿ : ಉದ್ಧವ್ ಠಾಕ್ರೆ ಬಣದ ನಾಯಕನ ಹತ್ಯೆ ಆರೋಪಿ ನಾಲ್ಕು ದಿನಗಳ ಹಿಂದೆ ಸಿಎಂ ಏಕನಾಥ್ ಶಿಂದೆಯನ್ನು ಭೇಟಿಯಾಗಿದ್ದ: ಸಂಜಯ್ ರಾವುತ್ ಆರೋಪ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ಯಾಲೆಸ್ತೀನ್ ಜನರೊಂದಿಗೆ ಒಗ್ಗಟ್ಟು ಪ್ರದರ್ಶನ: ದೆಹಲಿಯ ಮೆಕ್‌ಡೊನಾಲ್ಡ್ಸ್ ಹೊರಗೆ ಪ್ರತಿಭಟನೆ

ಪ್ಯಾಲೆಸ್ಟೈನ್ ಜೊತೆ ಒಗ್ಗಟ್ಟಿನ ಭಾರತೀಯ ಜನರು (ಐಪಿಎಸ್‌ಪಿ) ಗುಂಪಿನ ಸದಸ್ಯರು (ಏ.3) ಜನಪಥ್ ಪ್ರದೇಶದ ಮೆಕ್‌ಡೊನಾಲ್ಡ್ಸ್ ಔಟ್‌ಲೆಟ್‌ನ ಹೊರಗೆ ದಿಢೀರ್ ಪ್ರತಿಭಟನೆಯನ್ನು ಆಯೋಜಿಸಿದ್ದರು. ಪ್ಯಾಲೆಸ್ತೀನಿಯನ್ನರನ್ನು ಒಳಗೊಂಡ ನಡೆಯುತ್ತಿರುವ ಸಂಘರ್ಷದಲ್ಲಿ ಮೆಕ್‌ಡೊನಾಲ್ಡ್ಸ್ ಮತ್ತು ಕೋಕಾ-ಕೋಲಾದಂತಹ ಬಹುರಾಷ್ಟ್ರೀಯ...

‘ಇರಾನಿಯನ್ನರು ಸ್ಮಾರ್ಟ್ ಚೆಸ್ ಆಡುತ್ತಿದ್ದು, ಟ್ರಂಪ್ ಭ್ರಮಾಲೋಕದಲ್ಲಿದ್ದಾರೆ..’; ಮಾಜಿ ರಾಜತಾಂತ್ರಿಕ ಅಧಿಕಾರಿ ಕೆ.ಪಿ. ಫ್ಯಾಬಿಯನ್

ಪ್ರಸ್ತುತ ನಡೆಯುತ್ತಿರುವ ಪಶ್ಚಿಮ ಏಷ್ಯಾ ಸಂಘರ್ಷದ ಬಗ್ಗೆ ಮಾತನಾಡಿದ ಭಾರತದ ಮಾಜಿ ರಾಯಭಾರಿ ಕೆ.ಪಿ. ಫ್ಯಾಬಿಯನ್, "ಇರಾನಿಯನ್ನರು ಸ್ಮಾರ್ಟ್ ಚೆಸ್ ಆಟವನ್ನು ಆಡುತ್ತಿದ್ದಾರೆ. ಆದರೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗಳು...

‘ನಾನು ಸಂಸತ್ತಿಗೆ ಹೋಗುವುದು ಗದ್ದಲ ಸೃಷ್ಟಿಸಲು ಅಲ್ಲ’ : ಎಎಪಿ ಆರೋಪಗಳನ್ನು ತಳ್ಳಿ ಹಾಕಿದ ರಾಘವ್ ಚಡ್ಡಾ

ತನ್ನ ವಿರುದ್ದ ಆಮ್‌ ಆದ್ಮಿ ಪಕ್ಷ (ಎಎಪಿ) ಮಾಡಿರುವ ಎಲ್ಲಾ ಆರೋಪಗಳನ್ನು ರಾಘವ್ ಚಡ್ಡಾ ಶನಿವಾರ (ಏ.4) ಅಲ್ಲಗಳೆದಿದ್ದು, "ಅವೆಲ್ಲವೂ ಸುಳ್ಳು ಮತ್ತು ಸಂಘಟಿತ ಅಭಿಯಾನದ ಭಾಗ" ಎಂದಿದ್ದಾರೆ. "ಸಂಸತ್ತಿನಲ್ಲಿ ನನ್ನ ಉದ್ದೇಶ...

ಎಡರಂಗದಲ್ಲಿ ಎಡಪಂಥೀಯರೇ ಇಲ್ಲ; ದ್ವೇಷ ಹರಡುವ ಜನರೊಂದಿಗೆ ಪಿಣರಾಯಿ ಪಾಲುದಾರಿಕೆ ಹೊಂದಿದ್ದಾರೆ: ರಾಹುಲ್ ಗಾಂಧಿ

ಕೇರಳ ವಿಧಾನಸಭಾ ಚುನಾವಣೆ ಪ್ರಚಾರವು ಅಂತಿಮ ಹಂತಕ್ಕೆ ತಲುಪುತ್ತಿದ್ದಂತೆ ತೀಕ್ಷ್ಣವಾದ ರಾಜಕೀಯ ದಾಳಿಯನ್ನು ಆರಂಭಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, "ಸಿಪಿಐ-ಎಂ ನೇತೃತ್ವದ ಎಡಪಕ್ಷವು ತನ್ನ ಸೈದ್ಧಾಂತಿಕ ತಿರುಳನ್ನು ಕಳೆದುಕೊಳ್ಳುತ್ತಿದೆ" ಎಂದು ಆರೋಪಿಸಿದ್ದಾರೆ. "ಎಲ್‌ಡಿಎಫ್...

ಬಿಜೆಪಿ ಟಿಕೆಟ್ ನಿರಾಕರಿಸಿಲ್ಲ, ನಾನೇ ಸ್ಪರ್ಧಿಸಲ್ಲ ಅಂದಿದ್ದೆ : ಅಣ್ಣಾಮಲೈ

"ವಿಧಾನಸಭಾ ಚುನಾವಣೆಗೆ ಬಿಜೆಪಿ ನನಗೆ ಟಿಕೆಟ್ ನಿರಾಕರಿಸಿಲ್ಲ, ನಾನೇ ಸ್ಪರ್ಧಿಸಲ್ಲ ಎಂದು ಮುಂಚಿತವಾಗಿ ಹೈಕಮಾಂಡ್‌ಗೆ ತಿಳಿಸಿದ್ದೆ" ಎಂದು ತಮಿಳುನಾಡು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಹೇಳಿದ್ದಾರೆ. ಚೆನ್ನೈ ವಿಮಾನ ನಿಲ್ದಾಣದಲ್ಲಿ ಶನಿವಾರ...

ಸುರಕ್ಷಿತವಾಗಿ ಹಾರ್ಮುಜ್ ದಾಟಿದ 7ನೇ ಎಲ್‌ಪಿಜಿ ಹಡಗು; ಸರದಿಯಲ್ಲಿ ಕಾಯುತ್ತಿವೆ ಭಾರತದ 17 ಟ್ಯಾಂಕರ್‌ಗಳು

ಭಾರತದ ಧ್ವಜ ಹೊಂದಿದ್ದ ಮತ್ತೊಂದು ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್‌ಪಿಜಿ) ಟ್ಯಾಂಕರ್, ಗ್ರೀನ್ ಸಾನ್ವಿ ಹೆಸರಿನ ಹಡಗು ಹಾರ್ಮುಜ್ ಜಲಸಂಧಿಯ ಪೂರ್ವಕ್ಕೆ ಯಶಸ್ವಿಯಾಗಿ ತಲುಪಿದೆ. ಹಡಗು ಟ್ರ್ಯಾಕಿಂಗ್ ದತ್ತಾಂಶದ ಪ್ರಕಾರ, ನಡೆಯುತ್ತಿರುವ ಪಶ್ಚಿಮ...

ಸಿಬಿಎಸ್‌ಇ ಹಿಂದಿ ಹೇರಿಕೆಯು ತ್ರಿಭಾಷಾ ಸೂತ್ರ ಜಾರಿಯ ‘ರಹಸ್ಯ ಕಾರ್ಯವಿಧಾನ’: ಸ್ಟಾಲಿನ್ ಆರೋಪ

ಸಿಬಿಎಸ್‌ಇ ಇತ್ತೀಚೆಗೆ ಅನಾವರಣಗೊಳಿಸಿದ ಪಠ್ಯಕ್ರಮ ಚೌಕಟ್ಟಿನ ಕುರಿತು ಮಾತನಾಡಿದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, "ಮೂರು ಭಾಷಾ ಸೂತ್ರ ಎಂದು ಕರೆಯಲ್ಪಡುವುದು ವಾಸ್ತವದಲ್ಲಿ ಹಿಂದಿ ಮಾತನಾಡದ ಪ್ರದೇಶಗಳಿಗೆ ಹಿಂದಿ ವಿಸ್ತರಿಸುವ ರಹಸ್ಯ ಕಾರ್ಯವಿಧಾನವಾಗಿದೆ"...

‘ತಿಂದ ಮನೆಗೆ ಕನ್ನ ಹಾಕುವುದು ತರವಲ್ಲ, ನಿಮ್ಮ ಅಧಿಕ ಪ್ರಸಂಗ ಕರ್ನಾಟಕದ ಜನತೆ ಒಪ್ಪುವುದಿಲ್ಲ’ : ರಾಜ್ಯಪಾಲರ ವಿರುದ್ಧ ಕರವೇ ಕಿಡಿ

ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಲ್ಲಿ ತೃತೀಯ ಭಾಷೆಗೆ ಗ್ರೇಡಿಂಗ್ ನೀಡುವ ಸರ್ಕಾರದ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ರಾಜ್ಯಾಧ್ಯಕ್ಷ...

‘ತಪ್ಪಾಗಿದೆ’ : ಕೇಂದ್ರ ಸರ್ಕಾರದ ಟ್ರಾನ್ಸ್‌ಜೆಂಡರ್‌ ವಿಧೇಯಕದ ಕುರಿತ ಟೀಕೆಗಳನ್ನು ಕೈಬಿಟ್ಟ ರಾಜಸ್ಥಾನ ಹೈಕೋರ್ಟ್

ಟ್ರಾನ್ಸ್‌ಜೆಂಡರ್ ಕಾಯ್ದೆ, 2019ರಲ್ಲಿ ಬದಲಾವಣೆಗಳನ್ನು ತರಲಿರುವ ಕೇಂದ್ರ ಸರ್ಕಾರದ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ವಿಧೇಯ, 2026ರ ಕುರಿತು ಈ ಹಿಂದೆ ಮಾಡಿದ್ದ ವಿಮರ್ಶಾತ್ಮಕ ಟಿಪ್ಪಣಿಗಳನ್ನು ರಾಜಸ್ಥಾನ ಹೈಕೋರ್ಟ್ ತೆಗೆದುಹಾಕಿದೆ ಎಂದು...

ಯುಸಿಸಿ ಜಾರಿ ನಂತರ ‘ಜನಸಂಖ್ಯಾ ನಿಯಂತ್ರಣ’ ಕಾನೂನಿಗೆ ಮುಂದಾದ ಉತ್ತರಾಖಂಡ ಬಿಜೆಪಿ ಸರ್ಕಾರ

ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತಂದ ನಂತರ, ಉತ್ತರಾಖಂಡ ಸರ್ಕಾರ ಈಗ ಜನಸಂಖ್ಯಾ ನಿಯಂತ್ರಣ ಕಾನೂನನ್ನು ತರುವ ಬಗ್ಗೆ ಯೋಚಿಸುತ್ತಿದೆ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಶುಕ್ರವಾರ ಸೂಚಿಸಿದ್ದಾರೆ. ಪ್ರಸ್ತಾವಿತ ಕ್ರಮದ...