Homeಅಂತರಾಷ್ಟ್ರೀಯಅಮೆರಿಕಾದ ಈ ಪಟ್ಟಣದ ಮೇಯರ್‌ ಫ್ರೆಂಚ್ ಬುಲ್‌ಡಾಗ್!

ಅಮೆರಿಕಾದ ಈ ಪಟ್ಟಣದ ಮೇಯರ್‌ ಫ್ರೆಂಚ್ ಬುಲ್‌ಡಾಗ್!

ರಾಬಿಟ್ ಹ್ಯಾಶ್ ಸಮುದಾಯುವು 1990ರ ಇಸವಿಯಿಂದ ತಮ್ಮ ಮೇಯರ್​ ಆಗಿ ನಾಯಿಗಳನ್ನು ಆಯ್ಕೆ ಮಾಡುತ್ತಾ ಬಂದಿದ್ದಾರೆ.

- Advertisement -
- Advertisement -

ವಿಶ್ವವೇ ಅಮೆರಿಕಾ ಚುನಾವಣಾ ಫಲಿತಾಂಶಕ್ಕಾಗಿ ಎದುರು ನೋಡುತ್ತಿದೆ. ನಿನ್ನೆಯಿಂದ ಕುತೂಹಲ ಉಳಿಸಿಕೊಂಡಿರುವ ಚುನಾವಣಾ ಫಲಿತಾಂಶ ಇನ್ನೂ ಹೊರಬಿದ್ದಿಲ್ಲ. ಡೊನಾಲ್ಡ್ ಟ್ರಂಪ್, ಜೋ ಬಿಡನ್ ನಡುವೆ ತೀವ್ರ ಪೈಪೋಟಿ ಇದೆ. ಆದರೆ ಇಲ್ಲೊಂದು ನಗರದಲ್ಲಿ ಮೇಯರ್‌ ಚುನಾವಣೆಯಲ್ಲಿ ಭರ್ಜರಿ ಬಹುಮತದಲ್ಲಿ ಬುಲ್‌ಡಾಗ್ ಜಯಗಳಿಸಿದೆ.

ಫಾಕ್ಸ್ ನ್ಯೂಸ್ ಪ್ರಕಾರ, ಅಮೆರಿಕಾದ ಕೆಂಟುಕಿಯ ರಾಬಿಟ್ ಹ್ಯಾಶ್‌ನ ಜನರು ಮೇಯರ್​ ಚುನಾವಣೆಯಲ್ಲಿ ವಿಲ್ಬರ್​ ಬೀಸ್ಟ್​ ಹೆಸರಿನ ಫ್ರೆಂಚ್ ಬುಲ್​ಡಾಗ್​​​ವೊಂದನ್ನು ತಮ್ಮ ನಾಯಕನನ್ನಾಗಿ ಆಯ್ಕೆ ಮಾಡಿದ್ದಾರೆ. ಅದರಲ್ಲೂ ವಿಲ್ಬರ್ ಬೀಸ್ಟ್ 13,143 ಮತಗಳಿಂದ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿದ್ದಾರೆ ಎಂದು ರಾಬಿಟ್ ಹ್ಯಾಶ್ ಹಿಸ್ಟಾರಿಕಲ್ ಸೊಸೈಟಿ ತಿಳಿಸಿದೆ.

“ರಾಬಿಟ್ ಹ್ಯಾಶ್‌ನ ಮೇಯರ್ ಚುನಾವಣೆಯಲ್ಲಿ ವಿಲ್ಬರ್ ಬೀಸ್ಟ್ ಹೊಸ ಮೇಯರ್ ಆಗಿದ್ದು, ಒಟ್ಟು 22,985 ಮತಗಳಲ್ಲಿ 13,143 (ಇದುವರೆಗೆ ಗಳಿಸಿದ ಒಟ್ಟು ಮೊತ್ತ) ಮತಗಳನ್ನು ಪಡೆದಿದ್ದಾರೆ!” ಎಂದು ರಾಬಿಟ್ ಹ್ಯಾಶ್ ಹಿಸ್ಟಾರಿಕಲ್ ಸೊಸೈಟಿ ಬುಧವಾರ ಫೇಸ್‌ಬುಕ್ ಪೋಸ್ಟ್‌ನಲ್ಲಿ ಪ್ರಕಟಿಸಿದೆ.

ಇದನ್ನೂ ಓದಿ: ಅಮೆರಿಕಾ ಚುನಾವಣೆ: ಹೊಸ ಭರವಸೆಯಿತ್ತ ನಾಲ್ವರು ಪ್ರಗತಿಪರ ಮಹಿಳೆಯರ ಗೆಲುವು

ಜಾಕ್ ರಾಬಿಟ್ ಹೆಸರಿನ ಬೀಗಲ್​ ನಾಯಿ​ ಹಾಗೂ ಪಪ್ಪಿ ಹೆಸರಿನ ಗೋಲ್ಡನ್ ರಿಟ್ರೈವರ್ ನಾಯಿಗಳು ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನ ಪಡೆದುಕೊಂಡಿವೆ. ಇನ್ನು 12 ವರ್ಷದ ಲೇಡಿ ಸ್ಟೋನ್ ಹೆಸರಿನ ಬಾರ್ಡರ್​ ಕೋಲಿ ನಾಯಿ ಪಟ್ಟಣದ ರಾಯಭಾರಿ ಸ್ಥಾನವನ್ನ ಹಾಗೆ ಉಳಿಸಿಕೊಂಡಿದೆ.

PC: Rabbit Hash Historical Society@Facebook

ಕೆಂಟುಕಿ.ಕಾಂ ಪ್ರಕಾರ, ಓಹಿಯೋ ನದಿಯುದ್ದಕ್ಕೂ ವಾಸವಿರುವ ಸಮುದಾಯವಾದ ರಾಬಿಟ್ ಹ್ಯಾಶ್, 1990ರ ಇಸವಿಯಿಂದ ತಮ್ಮ ಮೇಯರ್​ ಆಗಿ ನಾಯಿಗಳನ್ನು ಆಯ್ಕೆ ಮಾಡುತ್ತಾ ಬಂದಿದ್ದಾರೆ. ಇಲ್ಲಿನ ಜನರು ಹಿಸ್ಟೋರಿಕಲ್ ಸೊಸೈಟಿಗೆ ತಲಾ 1 ಡಾಲರ್​ ದೇಣಿಗೆ ನೀಡುವ ಮೂಲಕ ಮತ ಹಾಕುತ್ತಾರೆ.

ಮೇಯರ್‌ ಆಗಿ ಆಯ್ಕೆಯಾದ ಫ್ರೆಂಚ್ ಬುಲ್‌ಡಾಗ್ ವಿಲ್ಬರ್ ನಾಯಿ ಅಧಿಕಾರ ವಹಿಸಿಕೊಂಡ ನಂತರ, ರಾಬಿಟ್ ಹ್ಯಾಶ್ ಹಿಸ್ಟಾರಿಕಲ್ ಸೊಸೈಟಿ ಮತ್ತು ಇತರ ದತ್ತಿ ಕಾರ್ಯಗಳಿಗಾಗಿ ಹಣವನ್ನು ಸಂಗ್ರಹಿಸಲು ಸಹಾಯ ಮಾಡುತ್ತದೆ.


ಇದನ್ನೂ ಓದಿ: ಬೊಲಿವಿಯಾ ಚುನಾವಣೆ: ಅಮೆರಿಕಾ ಪ್ರೇರಿತ ದಂಗೆಯ ಹೊರತಾಗಿಯೂ ಎಡಪಕ್ಷಕ್ಕೆ ಭರ್ಜರಿ ಜಯ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...