Homeಅಂತರಾಷ್ಟ್ರೀಯಬೊಲಿವಿಯಾ ಚುನಾವಣೆ: ಅಮೆರಿಕಾ ಪ್ರೇರಿತ ದಂಗೆಯ ಹೊರತಾಗಿಯೂ ಎಡಪಕ್ಷಕ್ಕೆ ಭರ್ಜರಿ ಜಯ!

ಬೊಲಿವಿಯಾ ಚುನಾವಣೆ: ಅಮೆರಿಕಾ ಪ್ರೇರಿತ ದಂಗೆಯ ಹೊರತಾಗಿಯೂ ಎಡಪಕ್ಷಕ್ಕೆ ಭರ್ಜರಿ ಜಯ!

ಬೊಲಿವಿಯನ್ ಕಾಡಿನಲ್ಲಿ ಪ್ರಖ್ಯಾತ ಎಡಪಂಥೀಯ ಕ್ರಾಂತಿಕಾರಿ ಹೋರಾಟಗಾರ ಅರ್ನೆಸ್ಟೊ "ಚೆ" ಗುವೇರಾರನ್ನು ಕೊಂದ ಅರ್ಧ ಶತಮಾನದ ನಂತರ ಬೊಲಿವಿಯಾದಲ್ಲಿ ಮತ್ತೇ ಎಡಪಂಥೀಯ ಸರ್ಕಾರ ಆಡಳಿತಕ್ಕೆ ಬರುತ್ತಿದೆ.

- Advertisement -
- Advertisement -

ಬೊಲಿವಿಯಾದಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಇವೊ ಮೊರೇಲ್ಸ್ ನೇತೃತ್ವದ ಎಡಪಂಥಿಯ ಮೂವ್ಮೆಂಟ್ ಟುವರ್ಡ್ಸ್ ಸೋಷಿಯಲಿಸಂ (MAS) ಪಕ್ಷವು ಭರ್ಜರಿ ಜಯ ಸಾಧಿಸಿದೆ. ಕಳೆದ ವರ್ಷ ಬೊಲಿವಿಯಾದಲ್ಲಿ ಅಮೆರಿಕ ಬೆಂಬಲಿತ ದಂಗೆ ನಡೆದು ಬಲಪಂಥೀಯ ಮಧ್ಯಂತರ ಸರ್ಕಾರ ಆಡಳಿತಕ್ಕೆ ಬಂದಾಗ ಅಧ್ಯಕ್ಷ ಇವೊ ಮೊರೇಲ್ಸ್ ರಾಜಿನಾಮೆ ನೀಡಿ ದೇಶ ತೊರೆಯಬೇಕಾಗಿ ಬಂದಿತ್ತು.

ಮೂವ್ಮೆಂಟ್ ಟುವರ್ಡ್ಸ್ ಸೋಷಿಯಲಿಸಂ ಪಕ್ಷವು ದೇಶದ ಉತ್ತರಾಧಿಕಾರಿಯಾಗಿ ಲೂಯಿಸ್ ಆರ್ಸ್ ಅವರನ್ನು ಬೊಲಿವಿಯಾದ ಹೊಸ ಅಧ್ಯಕ್ಷರಾಗಿ ನೇಮಿಸಲಿದೆ ಎನ್ನಲಾಗಿದೆ.

ಇದನ್ನೂ ಓದಿ: ”ಅಪ್ಪನಿಂದ ಒಂದು ದೊಡ್ಡ ಮುತ್ತು!’ ಅಪ್ಪನ ಕುರಿತು ಆಪ್ತವಾಗಿ ಮಾತಾಡಿದ ಚೆಗೆವೆರಾ ಮಗಳು ಅಲೈದಾ 

ಸದ್ಯಕ್ಕೆ ಬೊಲಿವಿಯಾದ ಹಂಗಾಮಿ ಅಧ್ಯಕ್ಷೆಯಾಗಿದ್ದ ಜಿನೈನ್ ಅನೀಝ್, “ಆರ್ಸ್ ಮತ್ತು ಚೋಕ್ಹುವಾಂಕಾ ಚುನಾವಣೆಯಲ್ಲಿ ಗೆದ್ದಿದ್ದಾರೆ. ವಿಜೇತರನ್ನು ಅಭಿನಂದಿಸುತ್ತೇನೆ ಮತ್ತು ಬೊಲಿವಿಯಾ ಮತ್ತು ಪ್ರಜಾಪ್ರಭುತ್ವವನ್ನು ಗಮನದಲ್ಲಿಟ್ಟುಕೊಂಡು ಆಡಳಿತ ನಡೆಸಲು ಕೇಳುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.

ಬೊಲಿವಿಯಾದ ಮಾಜಿ ಅಧ್ಯಕ್ಷ ಮೋರೆಲ್ಸ್‌, “MAS-IPSP ಗೆ ಅದ್ಭುತ ಜಯವಾಗಿದೆ. ನಾವು ಜನರಿಗೆ ಘನತೆ ಮತ್ತು ಸ್ವಾತಂತ್ರ್ಯವನ್ನು ಪುನಃಸ್ಥಾಪಿಸುತ್ತೇವೆ” ಎಂದು ಟ್ವೀಟ್ ಮಾಡಿದ್ದಾರೆ.

 

ಬೊಲಿವಿಯನ್ ಕಾಡಿನಲ್ಲಿ ಪ್ರಖ್ಯಾತ ಎಡಪಂಥೀಯ ಕ್ರಾಂತಿಕಾರಿ ಹೋರಾಟಗಾರ ಅರ್ನೆಸ್ಟೊ “ಚೆ” ಗುವೇರಾರನ್ನು ಕೊಂದ ಅರ್ಧ ಶತಮಾನದ ನಂತರ ಬೊಲಿವಿಯಾದಲ್ಲಿ ಮತ್ತೇ ಎಡಪಂಥೀಯ ಸರ್ಕಾರ ಆಡಳಿತಕ್ಕೆ ಬರುತ್ತಿದೆ.

ಇದನ್ನೂ ಓದಿ: ನ್ಯೂಜಿಲೆಂಡ್ ಚುನಾವಣೆ: ಪ್ರಧಾನಿ ಜಸಿಂಡಾ ಅರ್ಡೆರ್ನ್‌ರ ಲೇಬರ್ ಪಕ್ಷಕ್ಕೆ ಭರ್ಜರಿ ಜಯ!

ಆರ್ಜೆಂಟೈನಾ ಅಧ್ಯಕ್ಷ ಅಲ್ಬರ್ಟೊ, ಇವೊ ಮೊರೇಲ್ಸ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಸಂಗಾತಿ ‘ಚೆ’ ಎಂಬ ವಿಸ್ಮಯಕ್ಕೆ ಸಾವಿಲ್ಲ

Also Read: Bolivian leftists claim landslide victory in Presidential election

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಮಹಾರಾಷ್ಟ್ರ ಸರ್ಕಾರ

50ಕ್ಕೂ ಹೆಚ್ಚು ಶಾಸಕರ ಬೆಂಬಲವಿದೆ, ಬಹುಮತ ಸಾಬೀತುಪಡಿಸುತ್ತೇನೆ: ಬಂಡಾಯ ನಾಯಕ ಏಕನಾಥ್ ಶಿಂಧೆ

0
ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್‌ ಕೋಶ್ಯಾರಿ ಅವರು ಮುಖ್ಯಮಂತ್ರಿ ಉದ್ಧವ್‌ ಠಾಕ್ರೆಗೆ ಬಹುಮತ ಸಾಬೀತು ಪಡಿಸುವಂತೆ ಸೂಚಿಸಿದ ಬೆನ್ನಲ್ಲೇ, ಬಂಡಾಯ ಶಿವಸೇನೆ ನಾಯಕ ಏಕನಾಥ್ ಶಿಂಧೆ ಇಂದು ತಮ್ಮದೇ ಪಕ್ಷದ 50 ಶಾಸಕರು...