Homeಅಂತರಾಷ್ಟ್ರೀಯನ್ಯೂಜಿಲೆಂಡ್ ಚುನಾವಣೆ: ಪ್ರಧಾನಿ ಜಸಿಂಡಾ ಅರ್ಡೆರ್ನ್‌ರ ಲೇಬರ್ ಪಕ್ಷಕ್ಕೆ ಭರ್ಜರಿ ಜಯ!

ನ್ಯೂಜಿಲೆಂಡ್ ಚುನಾವಣೆ: ಪ್ರಧಾನಿ ಜಸಿಂಡಾ ಅರ್ಡೆರ್ನ್‌ರ ಲೇಬರ್ ಪಕ್ಷಕ್ಕೆ ಭರ್ಜರಿ ಜಯ!

ಈ ಭರ್ಜರಿ ಜಯದೊಂದಿಗೆ 40 ವರ್ಷದ ಜಸಿಂಡಾ ಅರ್ಡೆರ್ನ್ ಎರಡನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾಗಲಿದ್ದಾರೆ

- Advertisement -
- Advertisement -

ಕೊರೊನಾ ನಿರ್ವಹಣೆಯಲ್ಲಿ ಅತ್ಯುತ್ತಮ ಸಾಧನೆಗಾಗಿ ಜಗತ್ತಿನ ಗಮನಸೆಳೆದಿದ್ದ ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಅರ್ಡೆರ್ನ್ ಅವರ ಲೇಬರ್ ಪಕ್ಷವು ನ್ಯೂಜಿಲೆಂಡ್ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆದಿದೆ.

ಈ ಭರ್ಜರಿ ಜಯದೊಂದಿಗೆ 40 ವರ್ಷದ ಜಸಿಂಡಾ ಅರ್ಡೆರ್ನ್ ಎರಡನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾಗಲಿದ್ದಾರೆ ಎಂದು ದಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಬಹುತೇಕ ಮತ ಎಣಿಕೆ ಮುಗಿದಿದ್ದು, ಜಸಿಂಡಾರವರ ಲೇಬರ್ ಪಕ್ಷವು ಸಂಸತ್ತಿನಲ್ಲಿ ಸ್ಪಷ್ಟ ಬಹುಮತ ಗಳಿಸುವ ನಿರೀಕ್ಷೆಯಿದೆ. ಸುಮಾರು 120 ಸ್ಥಾನಗಳಲ್ಲಿ 64 ಸ್ಥಾನಗಳನ್ನು ಗೆದ್ದುಕೊಂಡಿದ್ದು, ಶೇ. 49 ರಷ್ಟು ಮತಗಳನ್ನು ಗಳಿಸಿದೆ. 1990 ರ ದಶಕದ ಮಧ್ಯಭಾಗದಿಂದ ನ್ಯೂಜಿಲೆಂಡ್ ಚುನಾವಣಾ ಇತಿಹಾಸದಲ್ಲಿಯೇ ಇದು ಪ್ರಬಲ ಪ್ರದರ್ಶನ ಎನ್ನಲಾಗಿದೆ.


ಇದನ್ನೂ ಓದಿ: ನ್ಯೂಜಿಲೆಂಡ್: ಕೊರೊನಾ ವಿರುದ್ದದ ಸಮರದಲ್ಲಿ ಗೆಲುವಿನತ್ತ ದಾಪುಗಾಲು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...