Homeಮುಖಪುಟಉತ್ತರ ಪ್ರದೇಶ: ರೈಲಿನ ಎಂಜಿನ್‌ನಲ್ಲಿ ಆಕಸ್ಮಿಕ ಬೆಂಕಿ, ಅವಘಡ ತಪ್ಪಿಸಲು ರೈಲು ತಳ್ಳಿದ ಪ್ರಯಾಣಿಕರು

ಉತ್ತರ ಪ್ರದೇಶ: ರೈಲಿನ ಎಂಜಿನ್‌ನಲ್ಲಿ ಆಕಸ್ಮಿಕ ಬೆಂಕಿ, ಅವಘಡ ತಪ್ಪಿಸಲು ರೈಲು ತಳ್ಳಿದ ಪ್ರಯಾಣಿಕರು

- Advertisement -
- Advertisement -

ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ದೌರಾಲಾ ನಿಲ್ದಾಣದಲ್ಲಿ ಶನಿವಾರ ಸಹರಾನ್‌ಪುರ-ದೆಹಲಿ ಪ್ಯಾಸೆಂಜರ್ ರೈಲಿನ ಎಂಜಿನ್ ಮತ್ತು ಎರಡು ಬೋಗಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ.

04460 ಸಂಖ್ಯೆಯ ರೈಲು ಸಹರಾನ್‌ಪುರದಿಂದ ದೆಹಲಿ ಕಡೆಗೆ ಪ್ರಯಾಣಿಸುತ್ತಿತ್ತು. ನಿಲ್ದಾಣದಲ್ಲಿ ರೈತಲು ನಿಂತಿದ್ದ ಕಾರಣ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗುವಲ್ಲಿ ಯಶಸ್ವಿಯಾಗಿದ್ದಾರೆ.

“ಆಕಸ್ಮಿಕವಾಗಿ ಬೆಂಕಿ ಹತ್ತಿಕೊಳ್ಳಲು ಕಾರಣವೇನು ಎಂವಬುದು ಇನ್ನೂ ತಿಳಿದು ಬಂದಿಲ್ಲ. ಘಟನೆಯಲ್ಲಿ ಯಾವುದೇ ಗಾಯಾಳುಗಳು ಅಥವಾ ಸಾವು ನೋವುಗಳು ವರದಿಯಾಗಿಲ್ಲ” ಎಂದಿದ್ದಾರೆ ಎಂದು ಭಾರತೀಯ ರೈಲ್ವೇಯ ಟ್ರಾಫಿಕ್ ಇನ್ಸ್‌ಪೆಕ್ಟರ್ ವೈ.ಕೆ ಝಾ ಅವರನ್ನು ಎಎನ್‌ಐ ಉಲ್ಲೇಖಿಸಿದೆ.

ಇದನ್ನೂ ಓದಿ: RSS ಹೊರತುಪಡಿಸಿ ಹಿಂದೂ, ಮುಸ್ಲಿಂ, ಸಿಖ್, ಕ್ರೈಸ್ತ, ಜೈನ, ಬೌದ್ಧ ಎಲ್ಲರೂ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರೆ: ತೇಜಸ್ವಿ ಯಾದವ್

ಬೆಂಕಿ ಹೊತ್ತಿಕೊಂಡ ಎಂಜಿನ್ ಮತ್ತು ಎರಡು ಕಂಪಾರ್ಟ್‌ಮೆಂಟ್‌ಗಳಿಂದ ಉಳಿದ ಬೋಗಿಗಳನ್ನು ಬೇರ್ಪಡಿಸುವ ಪ್ರಯತ್ನದಲ್ಲಿ ಪ್ರಯಾಣಿಕರು ರೈಲನ್ನು ತಳ್ಳುತ್ತಿರುವುದು ಕಂಡುಬಂದಿದೆ.

Image

ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವೀಡಿಯೊದಲ್ಲಿ, ಪ್ರಯಾಣಿಕರು ರೈಲನ್ನು ಬೆಂಕಿ ಹತ್ತಿಕೊಂಡಿದ್ದ ಎಂಜಿನ್‌ನಿಂದ ಮತ್ತು ಎರಡು ಕಂಪಾರ್ಟ್‌ಮೆಂಟ್‌ಗಳಿಂದ ಬೇರ್ಪಡಿಸುವ ಪ್ರಯತ್ನದಲ್ಲಿ ಒಟ್ಟಾಗಿ ರೈಲನ್ನು ತಳ್ಳುತ್ತಿದ್ದಾರೆ.

ಘಟನೆ ಕುರಿತು ಮತ್ತಷ್ಟು ಮಾಹಿತಿ ತಿಳಿದು ಬರಬೇಕಿದೆ.


ಇದನ್ನೂ ಓದಿ: ನವೀನ್ ಮೃತದೇಹ ತರುವ ಜಾಗದಲ್ಲಿ 8 ಜನರನ್ನು ಕರೆತರಬಹುದು: ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ವಿವಾದಾತ್ಮಕ ಹೇಳಿಕೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

’ಆದಿವಾಸಿಗಳ ಅಭಿವೃದ್ಧಿ’ ಪುಸ್ತಕದಿಂದ ಆಯ್ದ ಅಧ್ಯಾಯ; ಆದಿವಾಸಿಗಳೊಡನೆ ಅನುಸಂಧಾನ ವಿಧಾನ ಯಾವುದಾಗಿರಬೇಕು?

0
ಶ್ರೀಮತಿ ಖೋಂಗಮೆನ್ (1) ಅವರು, ಈಗ್ಗೆ ಮೂರು ದಿನಗಳ ಹಿಂದೆ ಈ ಸಮ್ಮೇಳನದ ಕುರಿತು ನನಗೆ ವಿವರಗಳನ್ನು ನೀಡಿದರು. ಈ ಕಾರ್ಯಕ್ರಮದ ಆಯೋಜನೆ ಮತ್ತು ವಿವರಗಳನ್ನು ನೋಡಿ ನನಗೆ ಸಂತೋಷವಾಯಿತು. ಈ ತರಹದ...