Homeಕರೋನಾ ತಲ್ಲಣಗಂಗೆ ತಟದಲ್ಲಿನ ಕೊರೊನಾ ಸೋಂಕಿತರ ಸಮಾಧಿ ಮೇಲಿನ ಬಟ್ಟೆ, ಬಿದಿರು ಕೋಲು ತೆಗೆಸಿದ ಉತ್ತರ ಪ್ರದೇಶ!

ಗಂಗೆ ತಟದಲ್ಲಿನ ಕೊರೊನಾ ಸೋಂಕಿತರ ಸಮಾಧಿ ಮೇಲಿನ ಬಟ್ಟೆ, ಬಿದಿರು ಕೋಲು ತೆಗೆಸಿದ ಉತ್ತರ ಪ್ರದೇಶ!

- Advertisement -
- Advertisement -

ಗಂಗಾ ನದಿಯುದ್ದಕ್ಕೂ ಕನಿಷ್ಠ ಎರಡು ಘಾಟ್‌ಗಳಲ್ಲಿ ಶಂಕಿತ ಕೊರೊನಾ ಸೋಂಕಿತರ ಸಮಾಧಿ ಸ್ಥಳಗಳೆಂದು  ಗುರುತಿಸಲು ಬಳಸಿದ್ದ ಬಟ್ಟೆ ಮತ್ತು ಬಿದಿರಿನ ಕೋಲುಗಳನ್ನು ಉತ್ತರ ಪ್ರದೇಶದ ಜಿಲ್ಲಾಡಳಿತವು ತೆಗೆದುಹಾಕಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಕಳೆದ ಭಾನುವಾರ ರಾತ್ರಿ ಪ್ರಯಾಗರಾಜ್‌ನ ಶೃಂಗರ್‌ಪುರ ಘಾಟ್‌ನಲ್ಲಿ ಜೆಸಿಬಿ ಯಂತ್ರಗಳು ಮತ್ತು ಕಾರ್ಮಿಕರನ್ನು, ಸುಮಾರು ಒಂದು ಕಿಲೋಮೀಟರ್ ವಿಸ್ತಾರದಲ್ಲಿ ಸಮಾಧಿ ಮೇಲಿನ ಬಟ್ಟೆ ಮತ್ತು ಬಿದಿರಿನ ಕೋಲುಗಳನ್ನು ತೆಗೆಯಲು ಬಳಸಿಕೊಳ್ಳಲಾಗಿದೆ ಎಂದು ದೈನಿಕ್ ಭಾಸ್ಕರ್ ಪತ್ರಿಕೆ ವರದಿ ಮಾಡಿದ್ದಾರೆ. ಇದೇ ರೀತಿಯ ಘಟನೆಗಳು ಸೋಮವಾರ ಬೆಳಿಗ್ಗೆ ಮತ್ತೊಂದು ಘಾಟ್‌ನಲ್ಲಿ ನಡೆದಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಕೋವಿಡ್ ಸೋಂಕಿತರೆಂದು ಶಂಕಿಸಲಾಗಿರುವ ಅನೇಕ ಮೃತದೇಹಗಳನ್ನು ಉತ್ತರ ಪ್ರದೇಶದ ಗಂಗಾ ನದಿಯ ದಡದಲ್ಲಿ ಸಮಾಧಿ ಮಾಡಲಾಗಿತ್ತು. ಇಲ್ಲಿನ ಮೃತದೇಹಗಳು ನದಿಯಲ್ಲಿ ತೇಲಿ ಬಿಹಾರದ ಹಳ್ಳಿಗಳಕಡೆಗೂ ಬಮದು ದೊಡ್ಡ ಆತಂಕಕ್ಕೆ ಕಾರಣವಾಗಿತ್ತು.

ಮಳೆಯಿಂದಾಗಿ ಹಲವಾರು ಶವಗಳು ಹೊರಬಂದ ನಂತರ ಶವಗಳನ್ನು ಮುಚ್ಚಲು ತಂಡವನ್ನು ನಿಯೋಜಿಸಿದೆ ಎಂದು ಜಿಲ್ಲಾಡಳಿತ ಹೇಳಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ. ನದಿ ತಟಗಳ ಚಿತ್ರಗಳು ಮಾಧ್ಯಮಗಳಲ್ಲಿ ಪ್ರಸಾವಾಗಲು ಶುರುವಾದ ಬಳಿಕ ಜಿಲ್ಲಾ ಪ್ರಾಧಿಕಾರ ಸಮಾಧಿ ಮೇಲಿನ ಬಟ್ಟೆ ಮತ್ತು ಬಿದಿರು ತೆಗೆಯಲು ನಿರ್ದೇಶನ ನೀಡಿದೆ.

ಇದನ್ನೂ ಓದಿ: ಮಾನಸಿಕ ಸಮಸ್ಯೆಯಿರುವ ವ್ಯಕ್ತಿಯನ್ನು ಅಸ್ಸೆಂಬ್ಲಿಗೆ ಸೇರಿಸುವುದೇ?; ಶಾಸಕ ಅಖಿಲ್ ಗೊಗಯ್ ಬಗ್ಗೆ ಅಸ್ಸಾಂ ಸಿಎಂ

ಎರಡು ಜೆಸಿಬಿ ಯಂತ್ರಗಳು ಮತ್ತು ಸುಮಾರು ಎರಡು ಡಜನ್ ಕಾರ್ಮಿಕರು ಭಾನುವಾರ ರಾತ್ರಿ ಸಮಾಧಿ ಮೇಲಿನ ಬಟ್ಟೆ ಮತ್ತು ಬಿದಿರಿನ ಕೋಲುಗಳನ್ನು ತೆಗೆದಿದ್ದಾರೆ ಎಂದು ಶ್ರೀಂಗ್‌ವೀರ್‌ಪುರ ಘಾಟ್‌ನ ಅರ್ಚಕರೊಬ್ಬರು ದೈನಿಕ್ ಭಾಸ್ಕರ್‌ಗೆ ತಿಳಿಸಿದ್ದಾರೆ. ಮೃತದೇಹಗಳನ್ನು ಟ್ರಾಲಿಯಲ್ಲಿ ತೆಗೆದುಕೊಂಡು ಹೋಗಿ ನಂತರ ಸುಟ್ಟುಹಾಕಲಾಯಿತು ಎಂದು ಅರ್ಚಕರು ತಿಳಿಸಿದ್ದಾರೆ.

ಪ್ರಯಾಗರಾಜ್‌ನ ಫಾಫಾಮೌ ಘಾಟ್‌ನಲ್ಲಿ ಸೋಮವಾರ ಬೆಳಿಗ್ಗೆ 100 ಕ್ಕೂ ಹೆಚ್ಚು ಸ್ವಚ್ಛತಾ ಕಾರ್ಮಿಕರನ್ನು ಸಮಾಧಿ ಮೇಲಿನ ಹೊದಿಕೆಗಳನ್ನು ತೆಗೆದುಹಾಕಲು ನೇಮಿಸಲಾಗಿತ್ತು ಎಂದು ಹಿಂದೂಸ್ತಾನ್ ವರದಿ ಮಾಡಿದೆ. ಗುರುತುಗಳನ್ನು ತೆಗೆದುಹಾಕುವಾಗ ಸ್ಥಳೀಯ ನಾಗರಿಕ ಸಂಸ್ಥೆಯ ವಲಯ ಅಧಿಕಾರಿ ನೀರಜ್ ಸಿಂಗ್ ಮತ್ತು ಇತರ ಅಧಿಕಾರಿಗಳು ಉಪಸ್ಥಿತರಿದ್ದರು ಎನ್ನಲಾಗಿದೆ.

ಆದರೆ, ಅಂತಹ ಯಾವುದೇ ಘಟನೆ ನಡೆದಿಲ್ಲ. ನದಿ ಪಾತ್ರದಲ್ಲಿ ಸ್ವಚ್ಛತಾ ಕಾರ್ಯ ನಡೆಯುತ್ತಿತ್ತು. ಸಮಾಧಿ ಮೇಲಿನ ಬಟ್ಟೆ ಮತ್ತು ಬಿದಿರು ಕೋಲುಗಳನ್ನು ತೆಗೆಯಲಾಗಿಲ್ಲ ಎಂದು ಅಧಿಕಾರಿಗಳು ಮತ್ತು ಪೊಲೀಸ್ ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ.


ಇದನ್ನೂ ಓದಿ: ಖಾಸಗಿ ಆಸ್ಪತ್ರೆಯಲ್ಲಿ ಹಣ ನೀಡಿ ಲಸಿಕೆ ಹಾಕಿಸಿಕೊಳ್ಳಿ ಎಂದು ತೇಜಸ್ವಿ ಸೂರ್ಯ ಪ್ರಚಾರ: ತರಾಟೆ ತೆಗೆದುಕೊಂಡ ಜನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಯುಎಸ್ ಮಾನವ ಹಕ್ಕುಗಳ ವರದಿಯಲ್ಲಿ ಮಣಿಪುರ ಹಿಂಸಾಚಾರ, ಹರ್ದೀಪ್ ಸಿಂಗ್‌ ಹತ್ಯೆ ಬಗ್ಗೆ ಉಲ್ಲೇಖ

0
ಯುನೈಟೆಡ್ ಸ್ಟೇಟ್ಸ್ ತನ್ನ 2023ರ ಮಾನವ ಹಕ್ಕುಗಳ ವರದಿಯಲ್ಲಿ ಮಣಿಪುರ ಹಿಂಸಾಚಾರ, BBC ಮೇಲೆ ತೆರಿಗೆ ಅಧಿಕಾರಿಗಳ ದಾಳಿ, ಕೆನಡಾದಲ್ಲಿ ಸಿಖ್ ಕಾರ್ಯಕರ್ತ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಂತಹ ಭಾರತಕ್ಕೆ ಸಂಬಂಧಿಸಿದ ಪ್ರಮುಖ...