Homeಮುಖಪುಟ11 ವರ್ಷ ಅವಧಿಯಲ್ಲಿ ಗರಿಷ್ಠ ಮಟ್ಟ ತಲುಪಿದ ಅಡುಗೆ ಎಣ್ಣೆ ಬೆಲೆ

11 ವರ್ಷ ಅವಧಿಯಲ್ಲಿ ಗರಿಷ್ಠ ಮಟ್ಟ ತಲುಪಿದ ಅಡುಗೆ ಎಣ್ಣೆ ಬೆಲೆ

- Advertisement -
- Advertisement -

ಕೆಲವು ಕಡೆ ಪೆಟ್ರೋಲ್ ದರವು ನೂರರ ಗಡಿಯನ್ನು ದಾಟುವ ಮೊದಲೆ, ಅಡುಗೆ ಎಣ್ಣೆಗೆ 150 ರೂ.ಗಳ ಗಡಿಯನ್ನು ದಾಟಿ ಬಹಳ ದಿನಗಳಾಗಿವೆ. ಈಗ ಪ್ಯಾಕ್‌ ಮಾಡಿದ ಅಡುಗೆ ಎಣ್ಣೆಗಳ ದರ 130 ರಿಂದ 170 ರೂ. ತಲುಪಿದೆ.

ಪೆಟ್ರೋಲ್, ಡಿಸೇಲ್ ದರಗಳ ಸತತ ಏರಿಕೆಯಿಂದ ಸಾಮಾನ್ಯ ಜನರು ತೊಂದರೆಗೆ ಒಳಗಾಗಿದ್ದಾರೆ. ಆದರೆ ಅಡುಗೆ ಮನೆಯಾಚೆ ಅಷ್ಟಾಗಿ ಸುದ್ದಿಯಾಗದ, ಭಾರತದಲ್ಲಿ ಮಹಿಳೆಯರಿಗಷ್ಟೇ ಸಂಬಂಧಿಸಿದ್ದು ಎಂಬಂತಿರುವ ಅಡುಗೆ ಎಣ್ಣೆ ದರ ಏರುತ್ತಲೇ ಸಾಗಿದೆ.

ಈಗ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ ಈ ಬಗ್ಗೆ ಸಮಾಲೋಚನೆ ಶುರು ಮಾಡಿದೆ. ಸಾಂಕ್ರಾಮಿಕ ಮತ್ತು ವಿವಿಧ ರಾಜ್ಯಗಳಲ್ಲಿನ ಲಾಕ್‌ಡೌನ್‌ಗಳ ಮಧ್ಯೆ ಅಡುಗೆ ಎಣ್ಣೆಗಳ ಬೆಲೆಯಲ್ಲಿನ ಹೆಚ್ಚಳವು ಆರ್ಥಿಕ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿದ್ದು, ಕೇಂದ್ರ ಆಹಾರ ಇಲಾಖೆ ‘ಇದು ಕಳವಳಕಾರಿ’ ಎಂದಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಅಧಿಕೃತ ಅಂಕಿಅಂಶಗಳ ಪ್ರಕಾರ, ಪ್ಯಾಕ್ ಮಾಡಿದ ಖಾದ್ಯ ತೈಲಗಳ (ಅಡುಗೆ ಎಣ್ಣೆ) ಮಾಸಿಕ ಸರಾಸರಿ ಚಿಲ್ಲರೆ ಬೆಲೆಗಳು ಈ ತಿಂಗಳು ಒಂದು ದಶಕದಲ್ಲಿ ಗರಿಷ್ಠ ಮಟ್ಟಕ್ಕೆ ಏರಿವೆ. ಇದರಲ್ಲಿ ನೆಲಗಡಲೆ(ಸೇಂಗಾ), ಸಾಸಿವೆ, ವನಸ್ಪತಿ, ಸೋಯಾ, ಸೂರ್ಯಕಾಂತಿ ಮತ್ತು ತಾಳೆ ಎಣ್ಣೆಗಳು ಸೇರಿವೆ.

ಇದನ್ನೂ ಓದಿ: ರಸಗೊಬ್ಬರ ಬೆಲೆ ಏರಿಕೆ ಪ್ರಶ್ನಿಸದ ರಾಜ್ಯ ಸರ್ಕಾರ, ಬಿಜೆಪಿ ಸಂಸದರು ಹೇಡಿಗಳು- ಸಿದ್ದರಾಮಯ್ಯ

ಸೋಮವಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಎಲ್ಲಾ ಮಧ್ಯಸ್ಥಗಾರರೊಂದಿಗೆ ಸಭೆ ನಡೆಸಿ, ಖಾದ್ಯ ತೈಲಗಳ ಬೆಲೆಯನ್ನು ತಗ್ಗಿಸಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುವಂತೆ ರಾಜ್ಯಗಳಿಗೆ ಸೂಚಿಸಿದೆ.

ಕಳೆದ ಕೆಲವು ತಿಂಗಳುಗಳಲ್ಲಿ ಖಾದ್ಯ ತೈಲದ ಅಂತರರಾಷ್ಟ್ರೀಯ ಬೆಲೆಗಳ ಏರಿಕೆಗೆ ಹೋಲಿಸಿದರೆ ಭಾರತದಲ್ಲಿ ಖಾದ್ಯ ತೈಲದ ಬೆಲೆಯಲ್ಲಿ ತುಸು ಜಾಸ್ತಿ ಪ್ರಮಾಣದಲ್ಲಿ ಏರಿಕೆಯಾಗುವುದರ ಬಗ್ಗೆ ಕೇಂದ್ರವು ಕಳವಳ ವ್ಯಕ್ತಪಡಿಸಿದ್ದರಿಂದ ಸಭೆಯನ್ನು ನಡೆಸುವ ಅಗತ್ಯ ಬಿತ್ತು ಎಂದು ಇಲಾಖೆ ತಿಳಿಸಿದೆ.

ದೇಶೀಯ ಖಾದ್ಯ ತೈಲ ಬೆಲೆಗಳು ಸಾಮಾನ್ಯವಾಗಿ ಅಂತರರಾಷ್ಟ್ರೀಯ ಬೆಲೆಗಳನ್ನೇ ಪ್ರತಿಬಿಂಬಿಸುತ್ತವೆ, ಏಕೆಂದರೆ ಭಾರತದ ಶೇಕಡಾ 60 ರಷ್ಟು ಬೇಡಿಕೆಯನ್ನು ಆಮದಿನ ಮೂಲಕ ಪೂರೈಸಲಾಗುತ್ತದೆ.
ಬುರ್ಸಾ ಮಲೇಷ್ಯನ್ ವಿನಿಮಯ ಕೇಂದ್ರದಲ್ಲಿ ಕಚ್ಚಾ ತಾಳೆ ಎಣ್ಣೆಯ (ಪಾಮ್ ಆಯಿಲ್) ಬೆಲೆಯನ್ನು ಮೇ 25 ರಂದು ಪ್ರತಿ ಟನ್‌ಗೆ 3,890 ರಿಂಗಿಟ್ (ಮಲೇಷ್ಯಾ ಕರೆನ್ಸಿ) ಎಂದು ಉಲ್ಲೇಖಿಸಲಾಗಿದೆ. ಇದು ಒಂದು ವರ್ಷದ ಹಿಂದೆ 2,281 ಇತ್ತು.

ಚಿಕಾಗೊ ಬೋರ್ಡ್ ಆಫ್ ಟ್ರೇಡ್ (ಸಿಬಿಒಟಿ)ನಲ್ಲಿನ ಸೋಯಾಬೀನ್ ಎಣ್ಣೆ ಬೆಲೆಗಳು ಸಹ ಹೆಚ್ಚಿನ ಮಟ್ಟದಲ್ಲಿವೆ. ಸಿಬಿಒಟಿಯಲ್ಲಿ, ಜುಲೈನಲ್ಲಿ ಸೋಯಾಬೀನ್ ಮುಕ್ತಾಯದ ಬೆಲೆ ಮೇ 24 ರಂದು ಪ್ರತಿ ಟನ್‌ಗೆ 559.51 ಡಾಲರ್‌‌ನಷ್ಟಾಗಿದೆ. ಕಳೆದ ವರ್ಷದ ಈ ಸಮಯದಲ್ಲಿ ಇದು 306.16 ಡಾಲರ್‌ನಷ್ಟಿತ್ತು. ಅಂದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ದುಬಾರಿ ಬೆಲೆಯಿದೆ.

ಇದನ್ನೂ ಓದಿ: ಇಂಧನ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ: ರಸ್ತೆಯಲ್ಲಿ ಅಡುಗೆ ಮಾಡಿದ ಡಿ.ಕೆ. ಶಿವಕುಮಾರ್‌

ರಾಜ್ಯ ನಾಗರಿಕ ಸರಬರಾಜು ಇಲಾಖೆಗಳು ಒದಗಿಸಿದ ಮಾಹಿತಿ ಮತ್ತು ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಅಖಿಲ ಭಾರತ ಮಟ್ಟದಲ್ಲಿ ಆರು ಖಾದ್ಯ ತೈಲಗಳ ಚಿಲ್ಲರೆ ಬೆಲೆಗಳು ಜನವರಿ 2010 ಕ್ಕೆ ಹೋಲಿಸಿದರೆ ಗರಿಷ್ಠ ಮಟ್ಟವನ್ನು ತಲುಪಿವೆ ಎಂಬುದು ಗೊತ್ತಾಗುತ್ತದೆ.

ಮಂಗಳವಾರದ ಅಂಕಿಅಂಶದ ಪ್ರಕಾರ, ಸಾಮಾನ್ಯ ಅಡುಗೆ ಎಣ್ಣೆಯಾದ ಸಾಸಿವೆ ಎಣ್ಣೆಯ (ಪ್ಯಾಕ್ಡ್) ಮಾಸಿಕ ಸರಾಸರಿ ಚಿಲ್ಲರೆ ಬೆಲೆ ಈ ವರ್ಷದ ಮೇ ತಿಂಗಳಲ್ಲಿ ಒಂದು ಕೆ.ಜಿ.ಗೆ 164.44 ರೂ.ಗಳ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ. ಇದು ಕಳೆದ ವರ್ಷ ಮೇ ತಿಂಗಳಿಮ ದರಕ್ಕಿಂತ (ಆಗ ರೂ 118.25) ಶೇ 39ರಷ್ಟು ಹೆಚ್ಚಾಗಿದೆ.

ಈ ವರ್ಷದ ಏಪ್ರಿಲ್‌ನಲ್ಲಿ ಖಾದ್ಯ ತೈಲಗಳ ಸರಾಸರಿ ಬೆಲೆ ಕೆ.ಜಿ.ಗೆ 155.39 ರೂ. ಇದ್ದರೆ, ಮೇ 2010 ರಲ್ಲಿ ಅದು ಕೆ.ಜಿ.ಗೆ 63.05 ರೂ. ಇತ್ತು. ಅಂದರೆ ಎರಡೂವರೆ ಪಟ್ಟು ಏರಿಕೆಯಾಗಿದೆ.

ತಾಳೆ ಎಣ್ಣೆ (ಪಾಮ್ ಆಯಿಲ್) ಭಾರತೀಯ ಮನೆಗಳಲ್ಲಿ ವ್ಯಾಪಕವಾಗಿ ಬಳಸಲ್ಪಡುತ್ತದೆ, ಇದರ ರೇಟು ಇನ್ನೂ ಜೋರಾಗಿ ಏರಿಕೆ ಕಂಡಿದೆ. ಪಾಮ್ ಆಯಿಲ್ ಮಾಸಿಕ ಸರಾಸರಿ ಚಿಲ್ಲರೆ ಬೆಲೆ ಈ ವರ್ಷದ ಮೇ ತಿಂಗಳಿಗೆ ಪ್ರತಿ ಕೆ.ಜಿ.ಗೆ 131.69 ರೂ.ಗಳಷ್ಟಿದೆ. ಇದು ಕಳೆದ 11 ವರ್ಷಗಳಲ್ಲಿ ಅತಿ ಹೆಚ್ಚು ಮತ್ತು ಕಳೆದ ವರ್ಷ ಇದೇ ತಿಂಗಳಿಗೆ ಹೋಲಿಸಿದರೆ ಶೇಕಡಾ 49 ರಷ್ಟು ಹೆಚ್ಚಾಗಿದೆ. ಈಗ ಪ್ರತಿ ಕೆ.ಜಿ.ಗೆ 87.27 ರೂ. ದರವಿದೆ. 11 ವರ್ಷಗಳ ಹಿಂದೆ 2010 ರ ಏಪ್ರಿಲ್‌ನಲ್ಲಿ ತಾಳೆ ಎಣ್ಣೆಯ ಮಾಸಿಕ ಚಿಲ್ಲರೆ ಬೆಲೆಯು ದಾಖಲಾಗಿದ್ದು, ಪ್ರತಿ ಕೆ.ಜಿ.ಗೆ 49.13 ರೂ. ಇತ್ತು. ಅಂದರೆ ಈಗ ಡಬಲ್ ಆಗಿದೆ.

ಇದನ್ನೂ ಓದಿ: ಮತ್ತೆ 25 ರೂ ಹೆಚ್ಚಳ: ನಾಲ್ಕು ದಿನಗಳಲ್ಲಿ ಎರಡನೇ ಬಾರಿಗೆ ಗ್ಯಾಸ್ ಬೆಲೆ ಏರಿಕೆ

ನಾಲ್ಕು ಇತರ ಖಾದ್ಯ ತೈಲಗಳ ಮಾಸಿಕ ಸರಾಸರಿ ಚಿಲ್ಲರೆ ಬೆಲೆಗಳು – ನೆಲಗಡಲೆ (ಪ್ರತಿ ಕೆ.ಜಿ.ಗೆ  175.55 ರೂ.), ವನಸ್ಪತಿ (ಕೆ.ಜಿ.ಗೆ 128.7 ರೂ.), ಸೋಯಾ (ಕೆ.ಜಿ.ಗೆ 148.27 ರೂ.) ಮತ್ತು ಸೂರ್ಯಕಾಂತಿ (ಕೆ.ಜಿ.ಗೆ 169.54 ರೂ.) ಇವೆ. ಮೇ ತಿಂಗಳಲ್ಲಿ ಈ ದರಗಳು ಗರಿಷ್ಠ ಮಟ್ಟವನ್ನು ತಲುಪಿವೆ. ಕಳೆದ ವರ್ಷಕ್ಕಿಂತ ಶೇಕಡಾ 19-52 ರ ವ್ಯಾಪ್ತಿಯಲ್ಲಿ ಹೆಚ್ಚಳವಾಗಿದೆ.

2019-20 ತೈಲ ವರ್ಷದಲ್ಲಿ (ನವೆಂಬರ್-ಅಕ್ಟೋಬರ್), ಭಾರತದ ದೇಶೀಯ ಸಸ್ಯಜನ್ಯ ತೈಲ ಉತ್ಪಾದನೆಯು ಕೇವಲ 8.5 ದಶಲಕ್ಷ ಟನ್‌ಗಳಷ್ಟಿದೆ ಎಂದು ಅಂದಾಜಿಸಲಾಗಿದ್ದು, ಆಮದು ಪ್ರಮಾಣ 13.5 ಮೆ.ಟನ್ ಇದೆ. ಆಮದು ಮಾಡಿಕೊಳ್ಳುವ ತೈಲಗಳಲ್ಲಿ ತಾಳೆ (7 ಮೆ.ಟನ್), ಸೋಯಾಬೀನ್ (3.5 ಮೆ.ಟನ್) ಮತ್ತು ಸೂರ್ಯಕಾಂತಿ (2.5 ಮೆ.ಟನ್) ಸೇರಿವೆ.

ಒಟ್ಟಿನಲ್ಲಿ ಪೆಟ್ರೋಲ್, ಡಿಸೇಲ್ ದರಗಳನ್ನೂ ಮೀರಿ ಅಡುಗೆ ಎಣ್ಣೆಯ ದರಗಳು ನಾಗಾಲೋಟದಲ್ಲಿದೆ. “ಲಾಕ್‌ಡೌನ್‌ನಲ್ಲಿ ಬೈಕ್ ಮನೆಯಲ್ಲಿಟ್ಟು ಆರಾಮಾಗಿರಬಹುದು. ಆದರೆ ಅಡುಗೆ ಮನೆಯಲ್ಲಿ ಕುದಿ, ಝಳ ಅನುಭವಿಸುವವರಿಗಷ್ಟೇ ಗೊತ್ತು ಇದರ ಕಷ್ಟ” ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.

ಇದನ್ನೂ ಓದಿ: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗಿದೆ: ಕೇಂದ್ರ ಸಚಿವರು ಸುಳ್ಳು ಹೇಳಿದರೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕಿರಣ್ ರಿಜಿಜು ‘ಸೇಫ್‌’ವಾದ ಅಲ್ಲಗಳೆದ ಸರಣಿ ಮುಸ್ಲಿಂ ವಿರೋಧಿ ಹಿಂಸಾಚಾರಾಗಳು

ಜೂನ್ 15, 2026ರಂದು ಪ್ರಕಟಗೊಂಡ ಇಂಡಿಯನ್ ಎಕ್ಸ್‌ಪ್ರೆಸ್‌ನ 'ಐಡಿಯಾ ಎಕ್ಸ್‌ಚೇಂಜ್' ಕಾರ್ಯಕ್ರಮದ ಸಂದರ್ಶನವೊಂದರಲ್ಲಿ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು, “ಭಾರತದಲ್ಲಿ ಮುಸ್ಲಿಮರು ಸುರಕ್ಷಿತವಾಗಿಲ್ಲ ಎಂದು ಹೇಳುವ ಮೂಲಕ ನೀವು ದೇಶದ ಚಾರಿತ್ರ್ಯಕ್ಕೆ...

ರಾಮ ಮಂದಿರ ದೇಣಿಗೆ ದುರುಪಯೋಗ ವಿವಾದ; ಪ್ರಾಥಮಿಕ ವರದಿ ಸಲ್ಲಿಸಿದ ಎಸ್‌ಐಟಿ

ಅಯೋಧ್ಯೆಯ ರಾಮ ಮಂದಿರದಲ್ಲಿ ಸ್ವೀಕರಿಸಿದ ದೇಣಿಗೆಯ ದುರುಪಯೋಗದ ಆರೋಪದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಜೂನ್ 23 ಮಂಗಳವಾರ ಉತ್ತರ ಪ್ರದೇಶ ಸರ್ಕಾರಕ್ಕೆ ತನ್ನ ಪ್ರಾಥಮಿಕ ತನಿಖಾ ವರದಿಯನ್ನು ಸಲ್ಲಿಸಿದೆ...

ಮುಖ್ಯಮಂತ್ರಿ ಸುವೇಂದು ಅಧಿಕಾರಿಗೆ ನೋಟಿಸ್ ಜಾರಿ ಮಾಡಿದ ಕಲ್ಕತ್ತಾ ಹೈಕೋರ್ಟ್

ಭವಾನಿಪುರ ವಿಧಾನಸಭಾ ಕ್ಷೇತ್ರದ ಇತ್ತೀಚಿನ ಚುನಾವಣೆಯಲ್ಲಿ ಸುವೇಂದು ಅಧಿಕಾರಿ ಅವರ ಆಯ್ಕೆಯನ್ನು ಪ್ರಶ್ನಿಸಿ ಮಾಜಿ ಮುಖ್ಯಮಂತ್ರಿ ಹಾಗೂ ಟಿಎಂಸಿ (TMC) ನಾಯಕಿ ಮಮತಾ ಬ್ಯಾನರ್ಜಿ ಸಲ್ಲಿಕೆ ಮಾಡಿರುವ ಚುನಾವಣಾ ಅರ್ಜಿಗೆ ಸಂಬಂಧಿಸಿದಂತೆ ಕಲ್ಕತ್ತಾ...

TMC ಅಧ್ಯಕ್ಷ ಸ್ಥಾನದಿಂದ ಮಮತಾ ಬ್ಯಾನರ್ಜಿಯನ್ನು ಉಚ್ಚಾಟಿಸಿದ ತೃಣಮೂಲ ಬಂಡಾಯ ಶಾಸಕರು

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣಾ ಸೋಲಿನ ಬೆನ್ನಲ್ಲೇ ತೃಣಮೂಲ ಕಾಂಗ್ರೆಸ್ ಪಕ್ಷವು ಇತಿಹಾಸದಲ್ಲೇ ಕಾಣದ ಅತ್ಯಂತ ದೊಡ್ಡ ಬಂಡಾಯಕ್ಕೆ ಸಾಕ್ಷಿಯಾಗಿದೆ. ಬಂಡಾಯ ಶಾಸಕರ ನೇತೃತ್ವ ವಹಿಸಿರುವ ಋತಬ್ರತಾ ಬ್ಯಾನರ್ಜಿ ಸೋಮವಾರ ಮಮತಾ ಬ್ಯಾನರ್ಜಿ...

ಯುಪಿ: ಮೊಹರಂ ಮೆರವಣಿಗೆಯಲ್ಲಿ ಪಿತೂರಿ: ಪಾಕ್ ಪರ ಘೋಷಣೆಯ ಸುಳ್ಳು ವಿಡಿಯೋ ಹರಿಬಿಟ್ಟ ಇಬ್ಬರು ಹಿಂದುತ್ವವಾದಿಗಳ ಬಂಧನ 

ಬರೇಲಿ (ಉತ್ತರ ಪ್ರದೇಶ): ಮೊಹರಂ ಮೆರವಣಿಗೆಯೊಂದರಲ್ಲಿ "ಪಾಕಿಸ್ತಾನ್ ಜಿಂದಾಬಾದ್" ಎಂದು ದೇಶವಿರೋಧಿ ಘೋಷಣೆ ಕೂಗಲಾಗಿದೆ ಎಂಬ ನಕಲಿ ವೀಡಿಯೋ ಸೃಷ್ಟಿಸಿ, ಮುಸ್ಲಿಂ ಸಮುದಾಯದ ಮೇಲೆ ಸುಳ್ಳು ಆರೋಪ ಹೊರಿಸಲು ಯತ್ನಿಸಿದ ಇಬ್ಬರು ಹಿಂದುತ್ವವಾದಿ...

ಮಕ್ಕಳಿಗೆ ಆರ್‌ಎಸ್‌ಎಸ್‌ ತರಬೇತಿ ನೀಡುವುದನ್ನು ಟೀಕಿಸಿ ವಿಡಿಯೋ ಹಂಚಿಕೆ : ಯುವಕನನ್ನು ವಶಕ್ಕೆ ಪಡೆದ ಪೊಲೀಸರು!

ರಾಜಸ್ಥಾನದ ಜುಂಜುನು ಜಿಲ್ಲೆಯ ನವೀನ್ ಚೌಧರಿ ಎಂಬ 25 ವರ್ಷದ ಯುವಕ, ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಕುರಿತು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. 'ಜುಂಜುನು ಎಕ್ಸ್‌ಪ್ರೆಸ್' ಎಂಬ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ...

ಮುಂಗಾರು ಮಳೆ ಕೊರತೆ: ಇಡೀ ದೇಶದಲ್ಲಿ ಆತಂಕದ ಕಾರ್ಮೋಡ

ಭಾರತದ ಆಕಾಶದಲ್ಲಿ ಸದ್ಯ ಮೂಡುತ್ತಿರುವ ಉಪಗ್ರಹ ಚಿತ್ರಗಳು ಮತ್ತು ಹವಾಮಾನ ಇಲಾಖೆಯ ದತ್ತಾಂಶಗಳು ದೇಶಕ್ಕೆ ದೊಡ್ಡ ಗಂಡಾಂತರದ ಮುನ್ಸೂಚನೆ ನೀಡುತ್ತಿವೆ. ಕೃಷಿ ಚಟುವಟಿಕೆಗಳ ಅತ್ಯಂತ ನಿರ್ಣಾಯಕ ಅವಧಿಯಾದ ಜೂನ್ ತಿಂಗಳಲ್ಲೇ ಮುಂಗಾರು ಮಳೆ...

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? : ಬಿ.ಕೆ ಹರಿಪ್ರಸಾದ್

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? ಬಿಜೆಪಿ ನಾಯಕರ ಆರೋಪಗಳನ್ನು ನೋಡಿದರೆ, ತಪ್ಪು ಮಾಡಿದವರೇ ಉಪದೇಶ ಮಾಡುವ ಸ್ಥಿತಿಗೆ ಬಂದಂತಿದೆ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಹೇಳಿದರು....

ಎಸ್‌ಐಆರ್‌ನಲ್ಲಿ ಕೈಬಿಟ್ಟ ವ್ಯಕ್ತಿ ಕುರಿತು ಮಹತ್ವದ ಹೇಳಿಕೆ ನೀಡಿದ ಸುಪ್ರೀಂ ಕೋರ್ಟ್

ವಿಶೇಷ ತೀವ್ರ ಪರಿಷ್ಕರಣೆಯ (Special Intensive Revision) ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವ ಅಥವಾ ಹೊರಗಿಟ್ಟಿರುವ ಬಂಗಾಳದ ಮುರ್ಷಿದಾಬಾದ್‌ನ 75 ವರ್ಷದ ವಕೀಲರೊಬ್ಬರು "ಪಶ್ಚಿಮ ಬಂಗಾಳದ ನಿಜವಾದ ಮತ್ತು ವಿಶ್ವಾಸಾರ್ಹ ನಾಗರಿಕ" ನಂತೆ...

ನೀಟ್ ಅಕ್ರಮ, ವ್ಯವಸ್ಥೆಯ ವೈಫಲ್ಯಕ್ಕೆ ಮತ್ತೊಂದು ಬಲಿ: ಮರು ಪರೀಕ್ಷೆ ಹಿಂದಿನ ದಿನವೇ ಆತ್ಮಹತ್ಯೆಗೆ ಶರಣಾದ ಪ್ರತಿಭಾವಂತ ವಿದ್ಯಾರ್ಥಿನಿ 

ಹೈದರಾಬಾದ್: ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET) ಸುತ್ತ ಹಬ್ಬಿರುವ ಅಕ್ರಮಗಳ ಜಾಲ ಮತ್ತು ವ್ಯವಸ್ಥೆಯ ನಿರಂತರ ಗೊಂದಲಗಳು ಮತ್ತೊಂದು ಯುವ ಜೀವವನ್ನು ಬಲಿಪಡೆದಿವೆ.  ಜೂನ್...