ಉತ್ತರ ಪ್ರದೇಶದ ಹಾಪುರ್‌ನಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯ ಇಬ್ಬರು ದಲಿತ ವಿದ್ಯಾರ್ಥಿನಿಯರ ಸಮವಸ್ತ್ರವನ್ನು ತೆಗೆಯುವಂತೆ ಒತ್ತಾಯಿಸಿದ ಇಬ್ಬರು ಶಿಕ್ಷಕರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಜುಲೈ 11 ರಂದು ಶಾಲಾ ಸಮವಸ್ತ್ರದಲ್ಲಿರುವ ವಿದ್ಯಾರ್ಥಿಗಳ ಛಾಯಾಚಿತ್ರಗಳನ್ನು ಶಿಕ್ಷಕರು ಕ್ಲಿಕ್ಕಿಸುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
“ಸಾಮಾನ್ಯ ಬಟ್ಟೆಯಲ್ಲಿ ಛಾಯಾಚಿತ್ರಕ್ಕಾಗಿ ಬಂದ ಇತರ ಇಬ್ಬರು ಹುಡುಗಿಯರಿಗೆ ನೀಡಲು ಶಿಕ್ಷಕರು ತಮ್ಮ ಸಮವಸ್ತ್ರವನ್ನು ತೆಗೆದುಹಾಕಲು ಹುಡುಗಿಯರನ್ನು ಒತ್ತಾಯಿಸಿದ್ದಾರೆ. ಹುಡುಗಿಯರು ಇದಕ್ಕೆ ನಿರಾಕರಿಸಿದಾಗ, ಅವರನ್ನು ಥಳಿಸಿದ್ದಾರೆ. ಅಲ್ಲದೆ ಶಿಕ್ಷಕರು ಬಲವಂತವಾಗಿ ಅವರ ಸಮವಸ್ತ್ರವನ್ನು ತೆಗೆದುಹಾಕಿದ್ದಾರೆ. ಅವರ ಜಾತಿಯ ಕಾರಣದಿಂದ ಅವರ ವಿರುದ್ಧ ತಾರತಮ್ಯ ಮಾಡಿದ್ದಾರೆ” ಎಂದು ಬಾಲಕಿಯರ ಪೋಷಕರು ಆರೋಪಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ಶಿಕ್ಷಕರು ಶಾಲಾ ಸಮವಸ್ತ್ರದಲ್ಲಿರುವ ವಿದ್ಯಾರ್ಥಿಗಳ ಫೋಟೋಗಳನ್ನು ಕ್ಲಿಕ್ಕಿಸುತ್ತಿದ್ದರು. ನನ್ನ ಮಗಳ ಸಮವಸ್ತ್ರವನ್ನು ತೆಗೆದು ಬೇರೆ ಹುಡುಗಿಗೆ ಕೊಡುವಂತೆ ಕೇಳಲಾಯಿತು. ನನ್ನ ಮಗಳು ಅದನ್ನು ನಿರಾಕರಿಸಿದಾಗ, ಅವರು ಅವಳನ್ನು ಹೊಡೆದು ಬಲವಂತವಾಗಿ ಅವಳ ಸಮವಸ್ತ್ರವನ್ನು ತೆಗೆದುಹಾಕಿದರು. ಈ ಬಗ್ಗೆ ನಾನು ಶಾಲೆಗೆ ದೂರು ನೀಡಿದರೂ, ಯಾಕೆ ಹೀಗೆ ಮಾಡಲಾಗಿದೆ ಎಂದು ನನಗೆ ಉತ್ತರ ಸಿಗಲಿಲ್ಲ” ಎಂದು ಬಾಲಕಿಯರೊಬ್ಬರ ತಾಯಿ ಇಂಡಿಯನ್ ಎಕ್ಸ್‌ಪ್ರೆಸ್ ತಿಳಿಸಿದ್ದಾಗಿ ವರದಿ ಹೇಳಿದೆ.
ಮತ್ತೊಬ್ಬ ಬಾಲಕಿಯ ತಂದೆ ಜಾತಿ ವಿರೋಧಿ ಸಂಘಟನೆ ಶೋಷಿತ್ ಕ್ರಾಂತಿ ದಳದೊಂದಿಗೆ ವಿಷಯ ಪ್ರಸ್ತಾಪಿಸಿದಾಗ, ಅದರ ಅಧ್ಯಕ್ಷ ರವಿಕಾಂತ್ ಅವರು ಹಾಪುರ್‌ನ ಮೂಲಭೂತ ಶಿಕ್ಷಾ ಅಧಿಕಾರಿಯೊಂದಿಗೆ ಘಟನೆಯ ಬಗ್ಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: ‘ನೀನು ಕೂಲಿ ಕೆಲಸ ಮಾಡಬೇಕು, ಶಾಲೆಯಲ್ಲಿ ಅಡುಗೆಯನ್ನಲ್ಲ’: 6 ತಿಂಗಳಾದರೂ ದಲಿತ ಮಹಿಳೆಗೆ ನಿಲ್ಲದ ಕಿರುಕುಳ
“ಇಬ್ಬರು ಬಾಲಕಿಯರು ಪರಿಶಿಷ್ಟ ಜಾತಿಗೆ ಸೇರಿದವರಾಗಿರುವುದರಿಂದ ಶಿಕ್ಷಕರು ಅವರನ್ನು ಉದ್ದೇಶಪೂರ್ವವಾಗಿ ಹೀಗೆ ನಡೆಸಿಕೊಂಡಿದ್ದಾರೆ. ಅವರ ತಂದೆ ನನ್ನನ್ನು ಸಂಪರ್ಕಿಸಿದಾಗ, ನಾನು ಶಿಕ್ಷಣ ಇಲಾಖೆಯೊಂದಿಗೆ ವಿಷಯವನ್ನು ಪ್ರಸ್ತಾಪಿಸಿ, ಶಿಕ್ಷಕರನ್ನು ಅಮಾನತುಗೊಳಿಸುವಂತೆ ವಿನಂತಿಸಿದೆ” ಎಂದು ರವಿಕಾಂತ್ ಹೇಳಿದ್ದಾರೆ.
ವಿದ್ಯಾರ್ಥಿನಿಯರ ಮೇಲೆ ತಾರತಮ್ಯದ ನಡೆದಿದೆ ಎಂಬ ಆರೋಪವನ್ನು ಶಿಕ್ಷಕರೊಬ್ಬರು ನಿರಾಕರಿಸಿದ್ದು, ಪೋಷಕರು ಆರೋಪಿಸಿದಂತೆ ಹುಡುಗಿಯರನ್ನು ಥಳಿಸಲಿಲ್ಲ ಅಥವಾ ಬಲವಂತ ಮಾಡಲಿಲ್ಲ ಎಂದು ಹೇಳಿದ್ದಾರೆ.
“ವಿದ್ಯಾರ್ಥಿಗಳು ಸಂಪೂರ್ಣ ಶಾಲಾ ಸಮವಸ್ತ್ರವನ್ನು ಧರಿಸಿ ಶಾಲೆಗೆ ಬರಲು ಸೂಚಿಸಲಾಗಿತ್ತು. ಜುಲೈ 11 ರಂದು ವಿದ್ಯಾರ್ಥಿಗಳ ಛಾಯಾಚಿತ್ರಗಳನ್ನು ಕ್ಲಿಕ್ಕಿಸುತ್ತಿದ್ದಾಗ, ಸಮವಸ್ತ್ರದಲ್ಲಿ ಬರದ ಕೆಲವು ವಿದ್ಯಾರ್ಥಿಗಳು ತಮ್ಮ ಸಹವರ್ತಿ ವಿದ್ಯಾರ್ಥಿಗಳಿಗೆ ಛಾಯಾಚಿತ್ರಕ್ಕಾಗಿ ಸಮವಸ್ತ್ರವನ್ನು ಕೊಡುವಂತೆ ಕೇಳಿದರು. ವಾಸ್ತವವಾಗಿ, ಈ ರೀತಿ ನಡೆದಿರುವುದು ಕೂಡಾ ನನಗೆ ತಿಳಿದಿರಲಿಲ್ಲ. ಜುಲೈ 12 ರಂದು ಇಬ್ಬರು ಹುಡುಗಿಯರ ಪೋಷಕರು ಶಾಲೆಗೆ ಬಂದು ನಮ್ಮನ್ನು ಪ್ರಶ್ನಿಸಲು ಪ್ರಾರಂಭಿಸಿದಾಗ ಈ ಬಗ್ಗೆ ನನಗೆ ತಿಳಿದು ಬಂತು” ಎಂದು ಶಿಕ್ಷಕಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಮಾತು ಮರೆತ ಭಾರತ; ಚುಂಡೂರು ಫೈಲ್ಸ್: ಅಟ್ರಾಸಿಟಿ ಕಾಯ್ದೆಯ ಹೊಸ್ತಿಲಲ್ಲಿ ದಲಿತರ ನರಮೇಧ
ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಶಿಕ್ಷಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಘಟನೆಯ ನಂತರ ಶಿಕ್ಷರನ್ನು ಅಮಾನತು ಮಾಡಿದರೂ ಅವರು ಶಾಲೆಗೆ ಬರುತ್ತಿದ್ದಾರೆ ಎಂದು ಪೋಷಕರು ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಶಿಕ್ಷಕರೊಬ್ಬರು, ಶಿಕ್ಷಕಿಯಾಗಿ ಅವರನ್ನು ಜವಾಬ್ದಾರಿಯಿಂದ ಅಮಾನತುಗೊಳಿಸಿದ್ದರೂ, ಶಾಲೆಯ ಕೀಲಿಗಳ ಉಸ್ತುವಾರಿ ವಹಿಸಿದ್ದರಿಂದ ಶಾಲೆಗೆ ಬರುವಂತೆ ಹೇಳಲಾಗಿದೆ ಎಂದು ಹೇಳಿದ್ದಾರೆ.


