Homeಅಂತರಾಷ್ಟ್ರೀಯಶ್ರೀಲಂಕಾ: ನೂತನ ಅಧ್ಯಕ್ಷರಾಗಿ ರಾನಿಲ್‌ ವಿಕ್ರಮಸಿಂಘೆ ಆಯ್ಕೆ

ಶ್ರೀಲಂಕಾ: ನೂತನ ಅಧ್ಯಕ್ಷರಾಗಿ ರಾನಿಲ್‌ ವಿಕ್ರಮಸಿಂಘೆ ಆಯ್ಕೆ

- Advertisement -
- Advertisement -

ಭಾರೀ ಆರ್ಥಿಕ ಬಿಕ್ಕಟ್ಟಿನ ಮಧ್ಯೆ ರಾನಿಲ್ ವಿಕ್ರಮಸಿಂಘೆ ಅವರು ಬುಧವಾರ ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಗೋಟಾಬಯ ರಾಜಪಕ್ಸೆ ಅವರು ರಾಜೀನಾಮೆ ನೀಡಿದ ನಂತರ ವಿಕ್ರಮಸಿಂಘೆ ಅವರು ಹಂಗಾಮಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು.

ಆರು ಬಾರಿ ಪ್ರಧಾನಿಯಾಗಿರುವ ವಿಕ್ರಮಸಿಂಘೆ ಅವರು 225 ಸದಸ್ಯರ ಸಂಸತ್ತಿನ ಅತಿದೊಡ್ಡ ಬಣವಾದ ರಾಜಪಕ್ಸೆಗಳ ಎಸ್‌ಎಲ್‌ಪಿಪಿಯಿಂದ ಬೆಂಬಲಿತರಾಗಿರುವುದರಿಂದ ಅವರನ್ನು ಮುಂಚೂಣಿಯಲ್ಲಿ ಪರಿಗಣಿಸಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಆದರೆ ಅವರನ್ನು ಪ್ರತಿಭಟನಾಕಾರರು ತಿರಸ್ಕಾರ ಮಾಡುತ್ತಿದ್ದು, ಅವರು ರಾಜಪಕ್ಸೆ ಕುಟುಂಬದ ಮಿತ್ರರಾಗಿರುವುದರಿಂದ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದರು. ವಿಕ್ರಮಸಿಂಘೆ ಅವರು ಪ್ರತಿಭಟನೆಗೆ ಕಡಿವಾಣ ಹಾಕಲಿದ್ದಾರೆ ಎಂದು ನಂಬಲಾಗಿದೆ.

ಇದನ್ನೂ ಓದಿ: ಇಂಧನ ಮತ್ತು ನಗದು ಬಿಕ್ಕಟ್ಟು: ಶಾಲೆಗಳಿಗೆ ರಜೆ ಘೋಷಿಸಿದ ಶ್ರೀಲಂಕಾ

ಈ ಹಿಂದೆ ಹಂಗಾಮಿ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಅವರು ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ವಿಸ್ತರಿಸಿದ್ದರು. ತುರ್ತು ಪರಿಸ್ಥಿತಿಯೂ ಪೊಲೀಸ್ ಮತ್ತು ಭದ್ರತಾ ಪಡೆಗಳಿಗೆ ವ್ಯಾಪಕ ಅಧಿಕಾರವನ್ನು ನೀಡುತ್ತದೆ. ಕಳೆದ ಬಾರಿ ಪ್ರತಿಭಟನಾಕಾರರು ಅಧ್ಯಕ್ಷರ ಅಧಿಕೃತ ನಿವಾಸಕ್ಕೆ ನುಗ್ಗಿದ ನಂತರ ಹಂಗಾಮಿ ಅಧ್ಯಕ್ಷರಾದ ಅವರು ಇದನ್ನು ಜಾರಿಗೆ ತಂದಿದ್ದರು.

ವಿಕ್ರಮಸಿಂಘೆ ಅವರ ಪ್ರಮುಖ ಎದುರಾಳಿ ಎಸ್‌ಎಲ್‌ಪಿಪಿ ಭಿನ್ನಮತೀಯ ಮತ್ತು ಮಾಜಿ ಶಿಕ್ಷಣ ಸಚಿವ ಡಲ್ಲಾಸ್ ಅಲಹಪ್ಪೆರುಮ ಅವರು ವಿರೋಧ ಪಕ್ಷ ಬೆಂಬಲಿತ ಅಭ್ಯರ್ಥಿಯಾಗಿದ್ದರು. ಮೂರನೇ ಅಭ್ಯರ್ಥಿಯಾಗಿ ಎಡಪಂಥೀಯ ಪೀಪಲ್ಸ್ ಲಿಬರೇಷನ್ ಫ್ರಂಟ್‌ನ ನಾಯಕ ಅನುರ ಡಿಸ್ಸಾನಾಯಕ್ ಆಯ್ಕೆಯಾಗಿದ್ದರು.

ವಿಕ್ರಮಸಿಂಘೆ ಪರವಾಗಿ ಒಟ್ಟು 134 ಮತಗಳು ಚಲಾವಣೆಯಾಗಿದ್ದು, ಒಟ್ಟು 223 ಸಂಸದರು ಮತ ಚಲಾಯಿಸಿದ್ದರು. 4 ಮತಗಳು ಅಸಿಂಧುವಾಗಿದ್ದವು.

ಇದನ್ನೂ ಓದಿ: ಶ್ರೀಲಂಕಾ ಬಿಕ್ಕಟ್ಟು: ಪ್ರಧಾನಿ ಮನೆಗೆ ಬೆಂಕಿ, ಬುಧವಾರ ಅಧ್ಯಕ್ಷ ರಾಜೀನಾಮೆ

ಭೀಕರ ಆರ್ಥಿಕ ಹಿನ್ನಡೆಯಿಂದ ಭಾರಿ ಪ್ರತಿಭಟನೆಯಿಂದಾಗಿ ಶ್ರೀಲಂಕಾದ ಮಹಿಂದಾ ರಾಜಪಕ್ಸೆ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ, ವಿಕ್ರಮಸಿಂಘೆ ಅವರು ಪ್ರಧಾನಿಯಾಗಿ ಅಧಿಕಾರ ವಹಿಸಿದ್ದರು. ಆದರೆ ಕೆಲವೇ ದಿನಗಳಲ್ಲಿ ಅವರು ರಾಜೀನಾಮೆ ನೀಡಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮ್ಯಾನೇಜ್‌ಮೆಂಟ್‌ ಸರ್ಕಾರ| ಆಡಿಯೊ ನನ್ನದೇ, ರಾಜೀನಾಮೆ ಕೇಳಿದರೆ ಕೊಡುವೆ- ಮಾಧುಸ್ವಾಮಿ

0
ರಾಜ್ಯದ ಕಾನೂನು ಸಚಿವ ಮಾಧುಸ್ವಾಮಿ ಅವರ ಆಡಿಯೊವೊಂದು ಸೋರಿಕೆಯಾಗಿರುವ ಪರಿಣಾಮ ಬಿಜೆಪಿ ಸರ್ಕಾರ ತೀವ್ರ ಮುಜುಗರಕ್ಕೊಳಗಾಗಿದ್ದು ಸರ್ಕಾರದೊಳಗೆ ಆಕ್ರೋಶ ಭುಗಿಲೆದ್ದಿದೆ. ಬಿಜೆಪಿ ನಾಯಕರು ಮಾಧುಸ್ವಾಮಿ ಹೇಳಿಕೆಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸುತ್ತಿದ್ದು, ಮಾಧುಸ್ವಾಮಿಯವರೂ ಪ್ರಕರಣಕ್ಕೆ ಸಂಬಂಧಿಸಿದಂತೆ...