Homeದಲಿತ್ ಫೈಲ್ಸ್ಉತ್ತರಾಖಂಡ ದಲಿತ ಮಹಿಳೆ ಬಿಸಿಯೂಟ ತಯಾರಿಸುವ ಕೆಲಸಕ್ಕೆ ಮರುನೇಮಕ

ಉತ್ತರಾಖಂಡ ದಲಿತ ಮಹಿಳೆ ಬಿಸಿಯೂಟ ತಯಾರಿಸುವ ಕೆಲಸಕ್ಕೆ ಮರುನೇಮಕ

ದಲಿತ ಮಹಿಳೆ ಎಂಬ ಕಾರಣಕ್ಕೆ ಅವರನ್ನು ಕೆಲಸದಿಂದ ವಜಾಗೊಳಿಸಿದ್ದು, ದೇಶದಾದ್ಯಂತ ತೀವ್ರ ಆಕ್ರೊಶ ಉಂಟು ಮಾಡಿತ್ತು

- Advertisement -
- Advertisement -
Caste didn't lead to sacking' — Uttarakhand Dalit midday meal cook likely  to get job back

ದಲಿತ ಮಹಿಳೆ ಎಂಬ ಕಾರಣಕ್ಕೆ ಕೆಲಸ ಕಳೆದುಕೊಂಡ ಉತ್ತರಾಖಂಡದ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ತಯಾರಿಸುತ್ತಿದ್ದ ಸುನಿತಾ ದೇವಿ ಅವರನ್ನು ಮತ್ತೇ ಕೆಲಸಕ್ಕೆ ನೇಮಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ. ಅವರು ಈ ಶಾಲೆಯಲ್ಲಿ ಏಳು ದಿನಗಳು ಸೇವೆ ಸಲ್ಲಿಸಿದ್ದರು. ಈ ವೇಳೆ ಶಾಲೆಯ ಮೇಲ್ಜಾತಿ ವಿದ್ಯಾರ್ಥಿಗಳು ಅವರು ತಯಾರಿಸಿದ್ದ ಮಧ್ಯಾಹ್ನದ ಬಿಸಿಯೂಟವನ್ನು ದಲಿತ ಮಹಿಳೆ ಎಂಬ ಕಾರಣಕ್ಕೆ ನಿರಾಕರಿಸಿದ್ದರು. ಇದರ ನಂತರ ಅವರನ್ನು ಕೆಲಸದಿಂದ ವಜಾ ಮಾಡಲಾಗಿತ್ತು.

ಮೇಲ್ಜಾತಿ ಮಕ್ಕಳು ದಲಿತ ಮಹಿಳೆ ಸುನಿತಾ ದೇವಿ ತಯಾರಿಸಿದ್ದ ಊಟವನ್ನು ನಿರಾಕರಿಸಿದ ಕಾರಣಕ್ಕೆ ಅವರನ್ನು ‘ಬೋಜನ್‌ ಮಾತಾ’ ಹುದ್ದೆಯಿಂದ ತೆಗೆದುಹಾಕಲಾತ್ತು. ಅವರ ನೇಮಕಾತಿಯನ್ನು ವಿರೋಧಿಸಿ ಮೇಲ್ಜಾತಿಗೆ ಸೇರಿದ ಪೋಷಕರ ವಿಭಾಗವೊಂದು ಅವರ ಜಾತಿಯನ್ನು ಉಲ್ಲೇಖಿಸಿ ಪ್ರತಿಭಟನೆ ಕೂಡಾ ನಡೆಸಿತ್ತು.

ಇದನ್ನೂ ಓದಿ:‘ಪ್ರತಿಭಟನೆ’: ಮೇಲ್ಜಾತಿ ಮಹಿಳೆ ತಯಾರಿಸಿದ ಊಟ ನಿರಾಕರಿಸಿದ ದಲಿತ ವಿದ್ಯಾರ್ಥಿಗಳು

ಸುನೀತಾ ದೇವಿ ಅವರು ಎಸ್‌ಸಿ/ಎಸ್‌ಟಿ ಕಾಯ್ದೆ ಮತ್ತು ಐಪಿಸಿ ಸೆಕ್ಷನ್ 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ದೂರು ದಾಖಲಿಸಿದ್ದಾರೆ. ಇದಾದ ನಂತರ, ಜಿಲ್ಲಾಡಳಿತವು ಶುಕ್ರವಾರ ಅವರನ್ನು ಮರುಸೇರ್ಪಡೆಗೊಳಿಸುವುದಾಗಿ ಘೋಷಿಸಿದೆ.

“ಸುನೀತಾ ಅವರನ್ನು ಈ ಹಿಂದೆ ಸರಿಯಾದ ಕಾರ್ಯವಿಧಾನದ ಅಡಿಯಲ್ಲಿ ನೇಮಿಸಲಾಗಿಲ್ಲ, ಆದರೆ ಈಗ ಅದು ಸರಿಯಾಗಿದೆ. ಜನವರಿ 16 ರಿಂದ ಶಾಲೆಯು ಪುನರಾರಂಭವಾದಾಗ ಅವರು ಸೇವೆಗೆ ಮರಳುತ್ತಾರೆ” ಎಂದು ಚಂಪಾವತ್ ಮುಖ್ಯ ಶಿಕ್ಷಣ ಅಧಿಕಾರಿ (ಸಿಇಒ) ಆರ್‌ಸಿ ಪುರೋಹಿತ್ ಹೇಳಿದ್ದಾರೆ.

ಶಾಲೆಯ ಮುಖ್ಯೋಪಾಧ್ಯಾಯ ಪ್ರೇಮ್ ಸಿಂಗ್ ಅವರ ಪ್ರಕಾರ, “ಸೇವೆಯಲ್ಲಿ ಇದ್ದ ಇಬ್ಬರು ಅಡುಗೆಯವರಲ್ಲಿ ಒಬ್ಬರ ಸ್ಥಾನ ಖಾಲಿಗಿತ್ತು. ಹೀಗಾಗಿ ಶಾಲಾ ವ್ಯವಸ್ಥಾಪಕ ಸಮಿತಿಯು ಆ ಸ್ಥಾನಕ್ಕೆ ನೇಮಕಾತಿ ಮಾಡುವ ಬಗ್ಗೆ ಪ್ರಕಟಣೆ ನೀಡಿತ್ತು. ನಿಯಮಗಳ ಪ್ರಕಾರ ಹುದ್ದೆಗೆ ಅಭ್ಯರ್ಥಿಯ ನೇಮಕಾತಿಯೂ ಸಾಮಾನ್ಯೇತರ ವರ್ಗ ಮತ್ತು ಬಡತನ ರೇಖೆಗಿಂತ ಕೆಳಗಿರುವವರಾಗಬೇಕು.

ಇದನ್ನೂ ಓದಿ:ದಲಿತ ಮಹಿಳೆ ತಯಾರಿಸಿದ ಊಟ ತಿನ್ನದ ಸವರ್ಣೀಯ ಮಕ್ಕಳು; ‘ಭೋಜನ್‌ ಮಾತಾ’ ಕೆಲಸದಿಂದ ಮಹಿಳೆ ವಜಾ

ತಾನು ಶಾಲೆಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ ಹತ್ತು ವರ್ಷಗಳಲ್ಲಿ ಇಲ್ಲಿ ದಲಿತ ಅಡುಗೆಯವರು ಇರಲಿಲ್ಲ ಎಂದು ಪ್ರೇಮ್‌ ಸಿಂಗ್ ಹೇಳಿದ್ದಾರೆ. ನಾಲ್ಕು ಸದಸ್ಯರ ಸಮಿತಿಯು ಎಲ್ಲಾ ಅವಶ್ಯಕತೆಗಳನ್ನು ಪೂರೈಸಿ, ನಂತರ ಅರ್ಜಿದಾರರಲ್ಲಿ ಸುನೀತಾ ದೇವಿ ಅವರನ್ನು ಆಯ್ಕೆ ಮಾಡಿದೆ. ಆದರೆ ಪಿಟಿಎ ಅಧ್ಯಕ್ಷ ನರೇಂದ್ರ ಜೋಶಿ ನೇಮಕಾತಿಗೆ ಸಹಿ ಹಾಕಲು ನಿರಾಕರಿಸಿದ್ದರು ಮತ್ತು ಕೆಲವು ಪೋಷಕರು ಅವರನ್ನು ಬೆಂಬಲಿಸಿದ್ದರು. ನಿಯಮದ ಪ್ರಕಾರ, ಹುದ್ದೆಗೆ ದಲಿತರನ್ನು ಆಯ್ಕೆ ಮಾಡದಿದ್ದರೆ, ಎಲ್ಲಾ ಇತರ ಅರ್ಜಿದಾರರಿಂದ NOC ಪಡೆಯಬೇಕಾಗಿದೆ.

ಕೊನೆಗೆ ಸುನಿತಾ ಅವರ ಹೆಸರನ್ನು ಬ್ಲಾಕ್ ಎಜುಕೇಶನ್ ಆಫ್ ಆಫೀಸರ್‌ಗೆ ಅನುಮೋದನೆಗಾಗಿ ಕಳುಹಿಸಲಾಗಿತ್ತು. ಎನ್‌ಒಸಿಗಾಗಿ ಕಾಯಲಾಗಿದ್ದರೂ, ತಕ್ಷಣ ಅಡುಗೆಯವರ ಅಗತ್ಯವಿದ್ದ ಕಾರಣ ಸುನೀತಾ ಅವರನ್ನು ನೇಮಿಸಲಾಯಿತು. ಹೀಗಾಗಿ, ಸುನಿತಾ ಅವರು ಡಿಸೆಂಬರ್ 13 ರಂದು ಸೇವೆಗೆ ಸೇರಿದ್ದರು, ಆದರೆ ಎರಡು-ಮೂರು ದಿನಗಳ ನಂತರ, ಹಲವಾರು ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಮಧ್ಯಾಹ್ನದ ಊಟವನ್ನು ಬಹಿಷ್ಕರಿಸಲು ಪ್ರಾರಂಭಿಸಿದರು. ಸಮಸ್ಯೆ ಮುಂದುವರಿದ ಕಾರಣ, ಡಿಸೆಂಬರ್ 20 ರಿಂದ ಸೇವೆಯನ್ನು ಕೊನೆಗೊಳಿಸುವಂತೆ ಸುನೀತಾ ಅವರನ್ನು ಕೇಳಲಾಯಿತು ಎಂದು ಪ್ರೇಮ್‌ ಸಿಂಗ್ ಹೇಳಿದ್ದಾರೆ.

ಇದೇ ವೇಳೆ ಪಿಟಿಎ ಅಧ್ಯಕ್ಷ ನರೇಂದ್ರ ಜೋಶಿ ಮಾತನಾಡಿ, “ಈ ಪ್ರದೇಶದಲ್ಲಿ ಮೂರನೇ ಎರಡರಷ್ಟು ಬ್ರಾಹ್ಮಣರಿದ್ದಾರೆ. ಮತ್ತೋರ್ವ ಅಭ್ಯರ್ಥಿ ಪುಷ್ಪಾ ಭಟ್ ಅವರನ್ನು ಪಾಲಕರು ಒಪ್ಪಿಗೆ ಸೂಚಿಸಿದರೂ ಪ್ರಾಂಶುಪಾಲರು ಸುನೀತಾ ಅವರನ್ನು ನೇಮಿಸಿದರು. ಪುಷ್ಪಾ ಅವರು ಬಿಪಿಎಲ್ ಮತ್ತು ಒಂಟಿ ಮಹಿಳೆಯಾಗಿರುವುದರಿಂದ ಈ ಹುದ್ದೆಗೆ ಹೆಚ್ಚಿನ ಹಕ್ಕು ಹೊಂದಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ:ಕೆ.ಆರ್ ಪೇಟೆ: ದಲಿತರ ಮೇಲೆ ದೌರ್ಜನ್ಯ – ದೂರು ನೀಡಿದ್ದಕ್ಕೆ ಅಂಗಡಿ ಮುಚ್ಚಿ ಸವರ್ಣೀಯರಿಂದ ಸಾಮಾಜಿಕ ಬಹಿಷ್ಕಾರ

ಈ ನಡುವೆ ಪ್ರತಿಭಟನಾಕಾರರ ಒತ್ತಡಕ್ಕೆ ಜಿಲ್ಲಾಡಳಿತ ಮಣಿದಿದೆ ಎಂದು ಸುನೀತಾ ದೇವಿ ಆರೋಪಿಸಿದ್ದರು. ಅವರು ಶಾಲೆಯಲ್ಲಿ ಸೇವೆ ನೀಡಬಾರದು ಎಂದು ಪ್ರತಿಪಾದಿಸಿ ಪಾಲಕರು ಸೇರಿದಂತೆ ಸ್ಥಳೀಯರು ಶಾಲೆಯ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದರು. ಸುನಿತಾ ಅವರು ತಮ್ಮ ಮಕ್ಕಳಿಗೆ ಅಡುಗೆ ಮಾಡುವುದು ತಮಗೆ ಅಗೌರವ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ ಎಂದು ಸುನಿತಾ ಆರೋಪಿಸಿದ್ದಾರೆ. ಹಲವಾರು ಮೇಲ್ಜಾತಿಯ ಮಕ್ಕಳು ಮಧ್ಯಾಹ್ನದ ಊಟವನ್ನು ಬಹಿಷ್ಕರಿಸಿ, ಇತರರು ಬಹಿಷ್ಕರಿಸುವಂತೆ ಮಾಡಿದ್ದರು ಎಂದು ಸುನಿತಾ ಹೇಳಿದ್ದಾರೆ.

ಈ ನಡುವೆ ಸುನಿತಾ ಅವರನ್ನು ವಜಾಗೊಳಿಸಿದ್ದರಿಂದ ಮೇಲ್ಜಾತಿಯ ಮಹಿಳೆ ಬಿಸಿಯೂಟ ತಯಾರಿಸಲು ಶಾಲೆಗೆ ನೇಮಕಗೊಂಡಿದ್ದರು. ಆದರೆ ಶಾಲೆಯ ದಲಿತ ಮಕ್ಕಳು ಅವರು ತಯಾರಿಸಿದ ಊಟವನ್ನು ಸೇವಿಸದೆ ಪ್ರತಿಭಟಿಸಿದ್ದರು.

ಸುನಿತಾ ಅವರ ದೂರಿನಂತೆ 30 ಮಂದಿಯನ್ನು ಹೆಸರಿಸಿ ಪ್ರಕರಣ ದಾಖಲಿಸಲಾಗಿದ್ದು, ಇದುವರೆಗೆ ಯಾರನ್ನೂ ಬಂಧಿಸಿಲ್ಲ.

ಇದನ್ನೂ ಓದಿ:ಉತ್ತರಾಖಂಡ: ಶಾಲೆಯಲ್ಲಿ ದಲಿತ ಮಹಿಳೆ ಅಡಿಗೆ ಮಾಡಿದ ಕಾರಣಕ್ಕೆ ಊಟ ನಿರಾಕರಿಸಿದ ಸವರ್ಣಿಯ ಮಕ್ಕಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇರಾಕ್‌ನಲ್ಲಿ ಅಪಹರಣಕ್ಕೊಳಗಾಗಿದ್ದ ಅಮೆರಿಕದ ಪತ್ರಕರ್ತೆ ಬಿಡುಗಡೆ

ಇರಾಕಿನ ರಾಜಧಾನಿ ಬಾಗ್ದಾದ್‌ನಲ್ಲಿ ಒಂದು ವಾರದ ಹಿಂದೆ ಅಪಹರಿಸಲ್ಪಟ್ಟಿದ್ದ ಅಮೆರಿಕದ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ತಿಳಿಸಿದ್ದಾರೆ. ಮಾರ್ಚ್ 31ರಂದು ಶೆಲ್ಲಿ...

ಅಸ್ಸಾಂನ ನಾಗಾಂವ್‌ನಲ್ಲಿ ದರೋಡೆ ಶಂಕೆಯ ಮೇಲೆ ಗುಂಪು ದಾಳಿ: ಮೂವರು ಮುಸ್ಲಿಂ ಪುರುಷರು ಸಾವು

ದರೋಡೆಯಲ್ಲಿ ಭಾಗಿಯಾಗಿದ್ದಾರೆಂದು ಶಂಕಿಸಿ ಅಸ್ಸಾಂನ ನಾಗಾಂವ್ ಜಿಲ್ಲೆಯಲ್ಲಿ ಸೋಮವಾರ ಮುಂಜಾನೆ ನಡೆದ ಗುಂಪು ದಾಳಿಯಲ್ಲಿ ಮೂವರು ಮುಸ್ಲಿಂ ಪುರುಷರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ಸೈಫುಲ್ಲಾ, ಅಜೀಬುರ್ ಅಲಿಯಾಸ್ ಖೈರುಲ್ ಮತ್ತು ಇನಾಮುಲ್...

ಏ.10ರಂದು ಇಸ್ಲಾಮಾಬಾದ್‌ನಲ್ಲಿ ಅಮೆರಿಕ-ಇರಾನ್ ಶಾಂತಿ ಮಾತುಕತೆ : 10 ಷರತ್ತುಗಳನ್ನು ಮುಂದಿಟ್ಟ ಇರಾನ್

ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಇಸ್ಲಾಮಾಬಾದ್‌ನಲ್ಲಿ ಶಾಂತಿ ಮಾತುಕತೆ ಆಯೋಜಿಸಲಾಗಿದೆ. ಅಮೆರಿಕ ಮತ್ತು ಇರಾನ್ ನಿಯೋಗಗಳ ನಡುವಿನ ಈ ಮಹತ್ವದ ಮಾತುಕತೆಯು 2026ರ ಏಪ್ರಿಲ್ 10ರಂದು (ಶುಕ್ರವಾರ) ಇಸ್ಲಾಮಾಬಾದ್‌ನಲ್ಲಿ ನಡೆಯಲಿದೆ ಎಂದು ಪಾಕಿಸ್ತಾನದ...

ಕದನ ವಿರಾಮ | ಟ್ರಂಪ್ ನಿರ್ಧಾರಕ್ಕೆ ಇಸ್ರೇಲ್ ಬೆಂಬಲ; ಲೆಬನಾನ್‌ಗೆ ಅನ್ವಯಿಸುವುದಿಲ್ಲ ಎಂದ ನೆತನ್ಯಾಹು!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿರುವ ಎರಡು ವಾರಗಳ ಕದನ ವಿರಾಮಕ್ಕೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಬೆಂಬಲ ಸೂಚಿಸಿದ್ದಾರೆ. ಆದರೆ, ಈ ಕದನ ವಿರಾಮವು ಕೇವಲ ಇರಾನ್‌ಗೆ ಮಾತ್ರ ಸೀಮಿತವಾಗಿದ್ದು, ಲೆಬನಾನ್‌ಗೆ ಅನ್ವಯಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇರಾನ್ ತಕ್ಷಣವೇ ಹಾರ್ಮುಝ್...

ಹಾರ್ಮುಝ್ ಜಲಸಂಧಿಯ ಮೂಲಕ ಎರಡು ವಾರಗಳ ಸುರಕ್ಷಿತ ಸಂಚಾರಕ್ಕೆ ಅವಕಾಶ : ಇರಾನ್ ಭರವಸೆ

ಅಮೆರಿಕ ಮತ್ತು ಇರಾನ್ ನಡುವೆ ಏರ್ಪಟ್ಟಿರುವ ಎರಡು ವಾರಗಳ ತಾತ್ಕಾಲಿಕ ಕದನ ವಿರಾಮದ ಹಿನ್ನೆಲೆ, ಹಾರ್ಮುಝ್ ಜಲಸಂಧಿ  ಮೂಲಕ ಹಡಗುಗಳ ಸುರಕ್ಷಿತ ಸಂಚಾರಕ್ಕೆ ಅವಕಾಶ ನೀಡುವುದಾಗಿ ಇರಾನ್ ಭರವಸೆ ನೀಡಿದೆ. ವಿಶ್ವದ ಒಟ್ಟು ಪೆಟ್ರೋಲಿಯಂ ರಫ್ತಿನ...

ಇರಾನ್ ಮೇಲಿನ ದಾಳಿ ಸ್ಥಗಿತ : ಎರಡು ವಾರಗಳ ಕದನ ವಿರಾಮ ಘೋಷಿಸಿದ ಟ್ರಂಪ್

ಇರಾನ್ ಮೇಲೆ ನಡೆಸುತ್ತಿರುವ ಬಾಂಬ್ ದಾಳಿ ಹಾಗೂ ಮಿಲಿಟರಿ ಕಾರ್ಯಾಚರಣೆಯನ್ನು ಎರಡು ವಾರಗಳ ಕಾಲ ಸ್ಥಗಿತಗೊಳಿಸುವ ಕದನ ವಿರಾಮಕ್ಕೆ ಒಪ್ಪಿಕೊಂಡಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ (ಭಾರತೀಯ ಕಾಲಮಾನ ಏ.8) ಹೇಳಿದ್ದಾರೆ. ಪಾಕಿಸ್ತಾನ...

‘ಸಂಯಮ ಮುಗಿದಿದೆ’: ಟ್ರಂಪ್ ಬೆದರಿಕೆಗೆ ಜಗ್ಗದ ಇರಾನ್; ಪ್ರದೇಶವನ್ನು ಮೀರಿ ಪ್ರತಿಕ್ರಿಯೆ ನೀಡುವುದಾಗಿ ಎಚ್ಚರಿಕೆ ನೀಡಿದ ಐಆರ್‌ಜಿಸಿ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನಿಗೆ ನೀಡಿದ್ದ ಗಡುವು ಕೆಲವೇ ಗಂಟೆಗಳು ಬಾಕಿ ಇರುವಾಗ, ಟ್ರಂಪ್ ಬೆದರಿಕೆಯನ್ನು ಧಿಕ್ಕರಿಸಿದ ಇರಾನ್ "ಸಂಯಮ ಮುಗಿದಿದೆ" ಎಂದು ಹೇಳಿದೆ ಮತ್ತು ಅದು ಈಗ ಈ ಪ್ರದೇಶದಲ್ಲಿನ...

ಒಡಿಶಾ| ಬಾಕ್ಸೈಟ್ ಗಣಿಗೆ ರಸ್ತೆ ನಿರ್ಮಾಣ; ಬುಡಕಟ್ಟು ಜನಾಂಗ – ಪೊಲೀಸರ ನಡುವೆ ಘರ್ಷಣೆ

ಒಡಿಶಾದ ರಾಯಗಡ ಜಿಲ್ಲೆಯಲ್ಲಿ ಸಿಜಿಮಾಲಿ ಬಾಕ್ಸೈಟ್ ಗಣಿಗೆ ರಸ್ತೆ ನಿರ್ಮಾಣದ ಬಗ್ಗೆ ಮಂಗಳವಾರ (ಏಪ್ರಿಲ್ 7) ಸ್ಥಳೀಯ ಬುಡಕಟ್ಟು ಜನಾಂಗದವರೊಂದಿಗಿನ ಘರ್ಷಣೆಯಲ್ಲಿ 40 ಭದ್ರತಾ ಸಿಬ್ಬಂದಿ ಸೇರಿದಂತೆ ಸುಮಾರು 50 ಜನರು ಗಾಯಗೊಂಡಿದ್ದಾರೆ. ಜಿಲ್ಲೆಯ...

ಮಹಿಳೆಯರ ಶಬರಿಮಲೆ ಪ್ರವೇಶಕ್ಕೆ ಅನುಮತಿಸಿದ್ದ ತೀರ್ಪು ತಪ್ಪು : 9 ನ್ಯಾಯಾಧೀಶರ ಸುಪ್ರೀಂ ಕೋರ್ಟ್‌ ಪೀಠದ ಮುಂದೆ ಕೇಂದ್ರ ಸರ್ಕಾರ ಹೇಳಿಕೆ-ವರದಿ

ಶಬರಿಮಲೆ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, ಎಲ್ಲಾ ವಯಸ್ಸಿನ ಮಹಿಳೆಯರಿಗೆ ಶಬರಿಮಲೆ ದೇವಸ್ಥಾನ ಪ್ರವೇಶಿಸಲು ಅನುಮತಿ ನೀಡಿದ 2018ರ ತೀರ್ಪು ತಪ್ಪಾಗಿದೆ ಮತ್ತು ಅದನ್ನು ತಪ್ಪು ಕಾನೂನು ಎಂದು ಘೋಷಿಸಲು ಅರ್ಹವಾಗಿದೆ ಎಂಬುವುದಾಗಿ ಕೇಂದ್ರ...

ಕೇರಳದಲ್ಲಿ ಬಿಜೆಪಿ ಅಭ್ಯರ್ಥಿಯಿಂದ ‘ಲವ್ ಜಿಹಾದ್’ ಹೇಳಿಕೆ; ಜಿಲ್ಲಾಧಿಕಾರಿಯಿಂದ ವರದಿ ಕೇಳಿದ ಚುನಾವಣಾ ಆಯೋಗ

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಎಡ ಪ್ರಜಾಸತ್ತಾತ್ಮಕ ರಂಗ ಅಥವಾ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗದ ಗೆಲುವು ರಾಜ್ಯದಲ್ಲಿ "ಲವ್ ಜಿಹಾದ್" ಘಟನೆಗಳಿಗೆ ಕಾರಣವಾಗುತ್ತದೆ ಎಂದು ಬಿಜೆಪಿ ಅಭ್ಯರ್ಥಿ ಪಿ ಕೆ ಕೃಷ್ಣದಾಸ್ ನೀಡಿದ ಹೇಳಿಕೆಯ...