HomeಮುಖಪುಟRSS, ವಿಎಚ್‌ಪಿ, ತಾಲಿಬಾನ್ ಒಂದೇ ಮನಸ್ಥಿತಿಯವು: ಸಾಹಿತಿ ಜಾವೇದ್ ಅಖ್ತರ್

RSS, ವಿಎಚ್‌ಪಿ, ತಾಲಿಬಾನ್ ಒಂದೇ ಮನಸ್ಥಿತಿಯವು: ಸಾಹಿತಿ ಜಾವೇದ್ ಅಖ್ತರ್

- Advertisement -
- Advertisement -

ಭಾರತದಲ್ಲಿರುವ ವಿಶ್ವ ಹಿಂದೂ ಪರಿಷತ್ (VHP), ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS), ಬಜರಂಗದಳ ಹಾಗೂ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿರುವ ತಾಲಿಬಾನಿಗಳು ಒಂದೇ ಎಂದು ಹಿರಿಯ ಸಾಹಿತಿ ಜಾವೇದ್ ಅಖ್ತರ್ ಹೇಳಿದ್ದು, ವಿವಾದಕ್ಕೆ ಕಾರಣವಾಗಿದೆ.

“ಈ ಸಂಘಟನೆಗಳನ್ನು ವಸ್ತುನಿಷ್ಠವಾಗಿ ವೀಕ್ಷಿಸಿದಾಗ ಹೆಸರುಗಳು ಮತ್ತು ಮುಖಛಾಯೆ ಬದಲಾಗಿವೆ. ಆದರೆ ವಿಶ್ವದಾದ್ಯಂತ ಅವರೆಲ್ಲರೂ ಸಮಾನ ಮನಸ್ಥಿತಿಯನ್ನು ಹೊಂದಿದ್ದಾರೆ” ಎಂದು ಬಾಲಿವುಡ್‌ ಹಿರಿಯ ಬರಹಗಾರ ಜಾವೇದ್ ಅಖ್ತರ್ ಹೇಳಿದ್ದಾರೆ. ಇದು ಬಿಜೆಪಿಗರ ಆಕ್ರೋಶಕ್ಕೆ ಕಾರಣವಾಗಿದೆ.

ತಾಲಿಬಾನಿಗಳಂತೆ ಬಲಪಂಥೀಯ ಸಂಘಟನೆಗಳು ಕೂಡಾ ಯಾವುದೇ ಕಾನೂನು ತಮ್ಮ ಧಾರ್ಮಿಕ ನಂಬಿಕೆಗಿಂತ ಮಿಗಿಲಾಗಿಲ್ಲ ಎಂದು ಭಾವಿಸುತ್ತವೆ ಎಂದು ಜಾವೇದ್ ಅಖ್ತರ್ ಹೇಳಿದ್ದರು.

ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿರುವ ತಾಲಿಬಾನಿಗಳು ಇಸ್ಲಾಮಿಕ್ ರಾಷ್ಟ್ರವನ್ನು ಬಯಸುವಂತೆ, ಭಾರತೀಯ ಬಲಪಂಥೀಯರು ಹಿಂದೂ ರಾಷ್ಟ್ರವನ್ನು ಬಯಸುತ್ತಾರೆ. ಅವರೆಲ್ಲರೂ ಸಮಾನ ಮನಸ್ಥಿತಿಯನ್ನು ಹೊಂದಿದ್ದಾರೆ. ನಿಸ್ಸಂಶಯವಾಗಿಯೂ ಅವರ ವರ್ತನೆಯು ಹೇಯವಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಲಸಿಕೆ ಹೆಸರಲ್ಲಿ ಖಾಸಗಿ ಆಸ್ಪತ್ರೆಗಳ ಪಾಲಾಗುತ್ತಿರುವ ಕಟ್ಟಡ ಕಾರ್ಮಿಕರ ನಿಧಿ – AICCTU ಆಕ್ರೋಶ

ಸಾಹಿತಿ ಜಾವೇದ್ ಅಖ್ತರ್ ಅವರ ಹೇಳಿಕೆಗೆ ಆಡಳಿತರೂಢ ಬಿಜೆಪಿ ಮತ್ತು ಸಂಘ ಪರಿವಾರದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಬಿಜೆಪಿ ಶಾಸಕ ರಾಮ್ ಕದಂ. “ಸಂಘಪರಿವಾರದೊಂದಿಗೆ ಸಂಪರ್ಕವಿರುವವರೇ ದೇಶವನ್ನು ಆಳುತ್ತಿದ್ದಾರೆ. ಒಂದು ವೇಳೆ ತಾಲಿಬಾನ್‌ ಸಿದ್ಧಾಂತ ಇಲ್ಲಿ ಅಸ್ತಿತ್ವದಲ್ಲಿರುತ್ತಿದ್ದರೆ ಅವರಿಗೆ ಅಂತಹಾ ಹೇಳಿಕೆಗಳು ನೀಡಲು ಸಾಧ್ಯವೇ? ಈ ಪ್ರಶ್ನೆಗಿರುವ ಉತ್ತರವೇ ಅವರ ಟೀಕೆಗಳು ಎಷ್ಟು ಪೊಳ್ಳಾಗಿದೆ ಎನ್ನುವುದನ್ನು ತೋರಿಸುತ್ತದೆ. ಅವರು ಸಂಘದ ಸದಸ್ಯರಿಗೆ ಕೈಮುಗಿದು ಕ್ಷಮೆಯಾಚಿಸುವವರೆಗೂ, ಅವರ ಯಾವುದೇ ಚಲನಚಿತ್ರವನ್ನು ಭಾರತ ಮಾತೆಯ ಭೂಮಿಯಲ್ಲಿ ಪ್ರದರ್ಶಿಸಲು ನಾವು ಅನುಮತಿಸುವುದಿಲ್ಲ” ಎಂದು ಬೆದರಿಕೆ ಹಾಕಿದ್ದಾರೆ.


ಇದನ್ನೂ ಓದಿ: ’ಸಬಿಯಾ’ ಹೆಣ್ಣಲ್ಲವೇ?: ಅತ್ಯಾಚಾರ, ಕೊಲೆಗೆ ಮೌನ ತಾಳಿದ ಸಮಾಜಕ್ಕೆ ಪ್ರಜ್ಞಾವಂತರ ಪ್ರಶ್ನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಅಜಾವೇದ್ ಅಖ್ತರ್ ಅವರು ಹೇಳಿರುವ ಮಾತು ೧೦೦ಕ್ಕೆ ೧೦೦% ಪ್ರತಿಶತ ಸತ್ಯವಾಗಿದೆ. ಇಲ್ಲಿ ಜಾವೇದ್ ಆಕ್ತರ್ ಅವರು ಸಂಘ ಪರಿವಾರದ ಸದಸ್ಯರಿಗೆ ಕೈಮುಗಿದು ಕ್ಷಮೆ ಕೇಳಬೇಕೆಂದಿರುವ third class ರಾಮ್ ಕದಂ ಎಂಬ ನರಪಿಳ್ಳೆ ಯಾರು? ಇವರೇನು ದೇಶಭಕ್ತಿಯ ಪ್ರಮಾಣ ಪತ್ರ ಕೊಡುವವರೇ?

  2. ಜಾವೇದ್ ಅಕ್ತರ್ ಸರಿಯಾಗಿಯೇ ಹೇಳಿದ್ದಾರೆ. ಅವರು ಕ್ಷಮೆ ಕೇಳುವ ಅಗತ್ಯ ಇಲ್ಲ. ತಾಲಿಬಾನಿಗಳ ಕೈಯಲ್ಲಿ ಬಂದೂಕಿದ್ದರೆ, ಚೆಡ್ಡಿಗಳ ಕೈಯಲ್ಲಿ ಲಾಟಿ ಇದೆ, ಇದೊಂದೆ ವ್ಯತ್ಯಾಸ.
    ಈಗ ತಾಲಿಬಾನ್ ಅದಿಕಾರದ ಚುಕ್ಕಾಣಿಯನ್ನು ಹಿಡಿದಿದ್ದಾರೆ. ಆದರೆ ಚೆಡ್ಡಿಗಳು ಯಾವತ್ತಿಗೂ ಪ್ರತ್ಯಕ್ಷವಾಗಿ ಅಧಿಕಾರವನ್ನು ವಹಿಸಿಕೊಳ್ಳುದಿಲ್ಲ. ಏಕೆಂದರೆ ಅವರು ಎಂದಿಗೂ, ಯಾವುದೇ ಜವಾಬ್ದಾರಿಯನ್ನು ಹೊರುವುದಿಲ್ಲ.

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ ವೀಕ್ಷಿಸುತ್ತಾ ಬೀದಿಯಲ್ಲಿ ತಿರುಗಾಡುವ ಯುವಕರ ಖಾತೆಗಳಿಗೆ ಹಣ...

0
"ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ಗಳನ್ನು ಬಳಸಿಕೊಂಡು ಬೀದಿಗಳಲ್ಲಿ ತಿರುಗುತ್ತಿರುವ ನಮ್ಮ ಯುವಕರ ಬ್ಯಾಂಕ್ ಖಾತೆಗಳಿಗೆ ವಾರ್ಷಿಕ ಒಂದು ಲಕ್ಷ ರೂಪಾಯಿ ಮತ್ತು ತಿಂಗಳಿಗೆ 8,500 ರೂಪಾಯಿಗಳನ್ನು ಜಮಾ ಮಾಡಲಾಗುತ್ತದೆ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ"...