ಕೆಲವು ಅಭ್ಯಾಸಗಳು ಬಿಟ್ಟುಬಿಡಲು ಹಲವು ವರ್ಷಗಳೇ ಬೇಕಾಗುತ್ತದೆ ಎಂಬುದಕ್ಕೆ ಬಿಜೆಪಿ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಉದಾಹರಣೆಯಾಗಿದ್ದಾರೆ. ಮಧ್ಯಪ್ರದೇಶದಲ್ಲಿ ಉಪಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ಪರವಾಗಿ ಮತಯಾಚಿಸಿ, ಮುಜುಗರಕ್ಕೀಡಾಗಿದ್ದಾರೆ. ಈ ಘಟನೆ ಸಿಂಧಿಯಾ ಇನ್ನೂ ಕಾಂಗ್ರೆಸ್ ಗುಂಗಿನಲ್ಲೇ ಇದ್ದಾರಾ ಎಂಬ ವದಂತಿಗೆ ಕಾರಣವಾಗಿದ್ದಾರೆ.
ಸಾರ್ವಜನಿಕ ಸಮಾವೇಶದಲ್ಲಿ ಗ್ವಾಲಿಯರ್‌ನ ದಾಬ್ರ ನಗರದ ಬಿಜೆಪಿ ಅಭ್ಯರ್ಥಿ ಇಮ್ರಾತಿ ದೇವಿ ಪರವಾಗಿ ಮತ ಯಾಚಿಸಲು ಹೋಗಿ ಬಾಯಿತಪ್ಪಿನಿಂದ ಕಾಂಗ್ರೆಸ್‌ಗೆ ಮತ ನೀಡುವಂತೆ ಕೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
‘ದಾಬ್ರದ ಉತ್ಸಾಹಭರಿತ ನನ್ನ ಜನರೇ, ನೀವು ‘ಕೈ’ ಗುರುತಿಗೆ ಮತ ಹಾಕುವಿರಿ ಎಂಬುದನ್ನು ನನಗೂ ಮತ್ತು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಅವರಿಗೆ ಮನವರಿಕೆ ಮಾಡಲು ನಿಮ್ಮ ಕೈಯನ್ನು ಎತ್ತಿ ಮುಷ್ಟಿ ಮಾಡಿ’ ಎಂದು ಹೇಳಿದ್ದಾರೆ. ತಕ್ಷಣವೇ ಎಚ್ಚೆತ್ತುಕೊಂಡ ಅವರು, ಬಿಜೆಪಿಯ ‘ಕಮಲ’ ಚಿಹ್ನೆಗೆ ಮತ ಚಲಾಯಿಸುವಂತೆ ಕೇಳಿದ್ದಾರೆ.
ತಕ್ಷಣ ತಮ್ಮ ಮಾತನ್ನು ಬದಲಾಯಿಸಿಕೊಂಡರೂ ಸಹ ಜನಸಂದಣಿ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ಪಕ್ಕದಲ್ಲಿ ನಿಂತಿದ್ದ ಬಿಜೆಪಿ ಅಭ್ಯರ್ಥಿ ಇಮ್ರಾತಿ ದೇವಿಯೂ ನಸುನಗುತ್ತಿರುವುದನ್ನು ಕಾಣಿಸುತ್ತಿತ್ತು.
ಇದನ್ನೂ ಓದಿ: ಸ್ಟಾರ್ ಪ್ರಚಾರಕರ ಪಟ್ಟಿಯಿಂದ ಕೊನೆಕ್ಷಣದಲ್ಲಿ ಕಮಲ್ ನಾಥ್ ಹೆಸರು ಕೈಬಿಟ್ಟ ಚುನಾವಣಾ ಆಯೋಗ!
ಜ್ಯೋತಿರಾದಿತ್ಯ ಸಿಂಧಿಯಾ ಅವರ ಹೇಳಿಕೆಯ ವಿಡಿಯೋವನ್ನು ಕಾಂಗ್ರೆಸ್ ಕೂಡ ಟ್ವೀಟ್ ಮಾಡಿದ್ದು, ’ಮಾನ್ಯ ಸಿಂಧಿಯಾ ಜಿ, ಮಧ್ಯಪ್ರದೇಶದ ಜನರು ಖಂಡಿತ ಕಾಂಗ್ರೆಸ್ ಗುರುತಿಗೆ ಮತ ಹಾಕಿ ಬೆಂಬಲಿಸುತ್ತಾರೆ’ ಅಂತ ಟಾಂಗ್ ಕೊಟ್ಟಿದೆ.
सिंधिया जी,
मध्यप्रदेश की जनता विश्वास दिलाती है कि तीन तारीख़ को हाथ के पंजे वाला बटन ही दबेगा। pic.twitter.com/dGJWGxdXad— MP Congress (@INCMP) October 31, 2020
’ಇಂತ ತಪ್ಪು ಯಾವುದೇ ವ್ಯಕ್ತಿಯಿಂದಲೂ ಆಗಬಹುದು. ಅವರು ತಕ್ಷಣ ತಮ್ಮ ತಪ್ಪನ್ನು ಸರಿಪಡಿಸಿಕೊಂಡಿದ್ದಾರೆ. ಅವರು ಬಿಜೆಪಿ ನಾಯಕ ಎಂಬುದು ಎಲ್ಲರಿಗೂ ತಿಳಿದಿದೆ’ ಎಂದು ರಾಜ್ಯ ಬಿಜೆಪಿ ವಕ್ತಾರ ಪಂಕಜ್ ಚತುರ್ವೇದಿ ಹೇಳಿದ್ದಾರೆ.
ಬಿಜೆಪಿ ಅಭ್ಯರ್ಥಿ ಇಮಾರ್ತಿ ದೇವಿ ಕುರಿತು ಕಮಲನಾಥ್ ಅವರು ಬಹಿರಂಗ ಸಭೆಯಲ್ಲೆ ‘ಐಟಂ’ ಎಂಬ ಪದ ಬಳಸಿ ವ್ಯಂಗ್ಯವಾಡಿದ್ದರು ಈ ಬಗ್ಗೆ ಬಿಜೆಪಿಯಲ್ಲಿ ಆಕ್ರೋಶ ಭುಗಿಲ್ಲೆದ್ದಿತು. ನಂತರ ಪರ ವಿರೋಧ ಟೀಕಾಸ್ತ್ರಾ ಪ್ರಯೋಗಿಸಲಾಗಿತ್ತು.
2002ರಲ್ಲಿ ಕಾಂಗ್ರೆಸ್ ಸೇರಿದ್ದ ಸಿಂಧಿಯಾ ಅವರು ಹದಿನೆಂಟು ವರ್ಷಗಳ ನಂತರ ಈ ವರ್ಷದ ಮಾರ್ಚ್ ತಿಂಗಳಲ್ಲಿ ಬಿಜೆಪಿಗೆ ಸೇರಿದ್ದಾರೆ.
ಕಮಲನಾಥ್ ಸರ್ಕಾರವನ್ನು ಬೀಳಿಸುವಲ್ಲಿ ಪ್ರಮುಖಪಾತ್ರ ವಹಿಸಿದ್ದ ಜೋತಿರಾಧಿತ್ಯ ಸಿಂಧಿಯಾಗೆ ನಿಷ್ಠೆಯಿಂದಿದ್ದ ಇಮಾರ್ತಿ ದೇವಿ ಮತ್ತು ಇತರ 21 ಶಾಸಕರು ಕಾಂಗ್ರೆಸ್ ಮತ್ತು ರಾಜ್ಯ ವಿಧಾನಸಭೆಗೆ ರಾಜೀನಾಮೆ ನೀಡಿ ಈ ವರ್ಷದ ಮಾರ್ಚ್‌ನಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದರು.


