Homeಅಂತರಾಷ್ಟ್ರೀಯಟರ್ಕಿ ಭೂಕಂಪ: ಮೃತರ ಸಂಖ್ಯೆ 60ಕ್ಕೆ ಏರಿಕೆ, 900ಕ್ಕೂ ಹೆಚ್ಚು ಗಾಯಾಳುಗಳು

ಟರ್ಕಿ ಭೂಕಂಪ: ಮೃತರ ಸಂಖ್ಯೆ 60ಕ್ಕೆ ಏರಿಕೆ, 900ಕ್ಕೂ ಹೆಚ್ಚು ಗಾಯಾಳುಗಳು

- Advertisement -
- Advertisement -

ಟರ್ಕಿಯ ಕರಾವಳಿ ಮತ್ತು ಗ್ರೀಕ್ ದ್ವೀಪದ ಮಧ್ಯಭಾಗ ಏಜಿಯನ್ ಸಮುದ್ರದಲ್ಲಿ ಶುಕ್ರವಾರ ಸಂಭವಿಸಿದ ಪ್ರಬಲ ಭೂಕಂಪನದಲ್ಲಿ ಮೃತರ ಸಂಖ್ಯೆ ಸುಮಾರು 60ಕ್ಕೆ ಏರಿಕೆಯಾಗಿದೆ. ಸುಮಾರು 900ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಭೂಕಂಪನದಿಂದ ಪಶ್ಚಿಮ ಟರ್ಕಿಯಲ್ಲಿ ಕಟ್ಟಡ ಕುಸಿದು ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ 70 ವರ್ಷದ ವೃದ್ಧರನ್ನು 34 ಗಂಟೆಗಳ ನಂತರ ರಕ್ಷಣಾ ಕಾರ್ಯಕರ್ತರು ಹೊರತೆಗೆದಿದ್ದಾರೆ. ಟರ್ಕಿಯ ಮೂರನೇ ಅತಿದೊಡ್ಡ ನಗರವಾದ ಇಜ್ಮಿರ್‌ನಲ್ಲಿ ಕುಸಿದಿರುವ ಮತ್ತು ಹಾನಿಗೊಳಗಾಗಿರುವ ಒಂಬತ್ತು ಕಟ್ಟಡಗಳಲ್ಲಿ ರಕ್ಷಣಾ ತಂಡ ಕಾರ್ಯಾಚರಣೆ ನಡೆಸುತ್ತಿದೆ. ಈ ವೇಳೆ ಒಬ್ಬ ವೃದ್ಧರನ್ನು ರಕ್ಷಣೆ ಮಾಡಲಾಗಿದೆ.

ಆದರೆ, ಬದುಕುಳಿದವರಿಗಿಂತ ಭಾನುವಾರ ಹೆಚ್ಚಿನ ಮೃತ ದೇಹಗಳನ್ನು ಕಂಡುಬರುತ್ತಿವೆ ಎಂದು ಟರ್ಕಿಯ ವಿಪತ್ತು ಮತ್ತು ತುರ್ತುಸ್ಥಿತಿ ನಿರ್ವಹಣಾ ಪ್ರೆಸಿಡೆನ್ಸಿ ತಿಳಿಸಿದೆ. ಇಜ್ಮಿರ್‌ನ ಸೆಫೆರಿಹಿಸರ್‌ನಲ್ಲಿ ಸಂಭವಿಸಿದ ಸಣ್ಣ ಸುನಾಮಿಯಲ್ಲಿ, ಗ್ರೀಕ್‌ ದ್ವೀಪದಲ್ಲಿ ಒಬ್ಬ ವೃದ್ಧೆ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.

ಏಜಿಯನ್ ಈಶಾನ್ಯ ಭಾಗದ ಸಮೋಸ್‌ನಲ್ಲಿ ಶುಕ್ರವಾರ ಮಧ್ಯಾಹ್ನ 6.9 ತೀವ್ರತೆಯ ಭೂಕಂಪ ಸಂಭವಿಸಿತ್ತು. ಇದರ ಕೇಂದ್ರಬಿಂದು 16.ಕಿ.ಮೀ ಆಳದಲ್ಲಿ ಪತ್ತೆಯಾಗಿತ್ತು. ಸಮೋಸ್‌ನಲ್ಲಿ ಶುಕ್ರವಾರ ಇಬ್ಬರು ಯುವಕರು ಬಲಿಯಾಗಿದ್ದು, ಕನಿಷ್ಠ 19 ಮಂದಿ ಗಾಯಗೊಂಡಿದ್ದಾರೆ.

ಭಾನುವಾರ ಅವಶೇಷಗಳಡಿಯಿಂದ ಹೊರತೆಗೆಯಲಾಗಿರುವ 70 ವರ್ಷದ ವೃದ್ಧ ಅಹ್ಮೆತ್ ಸಿಟಿಮ್‌ “ನಾನು ಎಂದಿಗೂ ಭರವಸೆ ಕಳೆದುಕೊಂಡಿಲ್ಲ” ಎಂದಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಟರ್ಕಿಯ ಆರೋಗ್ಯ ಸಚಿವ ಫಹ್ರೆಟಿನ್ ಕೋಕಾ ಟ್ವೀಟ್ ಮಾಡಿದ್ದಾರೆ.

ಭೂಕಂಪದಿಂದ ಕೆಟ್ಟದಾಗಿ ಹಾನಿಗೊಳಗಿರುವ 26 ಕಟ್ಟಡಗಳನ್ನು ನೆಲಸಮ ಮಾಡಲಾಗುವುದು ಎಂದು ಟರ್ಕಿಯ ಉಪಾಧ್ಯಕ್ಷ ಫುವಾಟ್ ಒಕ್ಟೇ ಹೇಳಿದ್ದಾರೆ. ಅವಶೇಷಗಳ ಅಡಿ ಸಿಲುಕಿದವರಿಗಾಗಿ ಶೋಧಕಾರ್ಯ ಮುಂದುವರೆಯುತ್ತಿದೆ.


ಇದನ್ನೂ ಓದಿ: ಪಾಕಿಸ್ತಾನ: ಮದರಸಾದಲ್ಲಿ ಬಾಂಬ್ ಸ್ಫೋಟ, ಮಕ್ಕಳು ಸೇರಿ 7 ಮಂದಿ ಸಾವು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...