Homeಮುಖಪುಟನಾವು ನಂಬರ್ ಒನ್... ಯಾವುದರಲ್ಲಿ - ದೇಶ ಮಾರುವುದರಲ್ಲಿ?

ನಾವು ನಂಬರ್ ಒನ್… ಯಾವುದರಲ್ಲಿ – ದೇಶ ಮಾರುವುದರಲ್ಲಿ?

- Advertisement -
- Advertisement -

ನಮ್ಮ ಹುಬ್ಬಳ್ಳಿ ಹುಡುಗರಿಗೆ ರೋಮಾಂಚನ ಆಗೋವಂಥ ಸುದ್ದಿಯೊಂದು ಕಂಪ್ಯೂಟರ್ ಕ್ಲೌಡು ಎಂಬೋ ನೀಲ ಗಗನದೊಳಗ ಓಡಾಡತಾ ಐತಿ.

ಅದು ಏನಪಾ ಅಂದ್ರ ಪ್ರಧಾನಿ ನರೇಂದ್ರ ಮೋದಿ ಅವರು ಹುಬ್ಬಳ್ಳಿ ಹುಡುಗ ಪ್ರಹ್ಲಾದ ಜೋಶಿ ಅವರಿಗೆ ಅಭಿನಂದನೆ ಹೇಳಿದ ವಿಡಿಯೋ.

ನನ್ಯ ಸಚಿವ ಸಂಪುಟದ ಸದಸ್ಯರಾದ ಪ್ರಹ್ಲಾದಜೀ ಅವರು ಈ ಲಾಕ್‍ಡೌನ್ ಸಮಯವನ್ನು ಸದುಪಯೋಗಪಡಿಸಿಕೊಂಡು, ಕಲ್ಲಿದ್ದಲು ತಯಾರಿ ಕ್ಷೇತ್ರದಲ್ಲಿ ಭಾರತ ಮಹತ್ವಪೂರ್ಣ ಹೆಜ್ಜೆಗಳನ್ನು ಇಡಲು ಅನುಕೂಲ ಮಾಡಿಕೊಟ್ಟಿದ್ದಾರೆ. ಈ ಲಾಕ್‍ಡೌನ್‍ನಲ್ಲಿ ಕಲ್ಲಿದ್ದಲಿಗೆ ಸಂಬಂಧಪಟ್ಟ ಎಲ್ಲ ಕಾನೂನುಗಳನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿ ನಮಗೆ ಹೊಸ ದಾರಿ ತೋರಿಸಿದ್ದಾರೆ. ಸಚಿವರು ಹಾಗೂ ಅವರ ಸಿಬ್ಬಂದಿಗೆ ನಾವು ಏನು ಅಂತಹ ದೊಡ್ಡ ಕೆಲಸ ಮಾಡಿಲ್ಲ ಅಂತ ಅನ್ನಿಸಬಹುದು, ಆದರೆ ನಾನು ಹೇಳುತ್ತೇನೆ. ನೀವು ಮಾಡಿದ್ದು ಅತ್ಯಂತ ಮಹತ್ವಪೂರ್ಣ ಕೆಲಸ. ನಾನು ನಿಮ್ಮನ್ನು ಅಭಿನಂದಿಸುತ್ತೇನೆ, ಅಂತ ಎರಡು ಸರತೆ ಚಪ್ಪಾಳೆ ಬಾರಿಸಿದ್ದಾರೆ.

ಇದನ್ನು ಕಲ್ಲಿದ್ದಲು ಸಚಿವರ ಹಿಂಬಾಲಕರು, ವಿರೋಧಿಗಳು ಎಲ್ಲರೂ ಸೇರಿ ಸಾವಿರಾರು ಸಲ ಹಂಚಿಕೊಂಡಾರ. ಇನ್ನ ನಮ್ಮ ಜೋಶಿ ಸಾಹೇಬರಿಗೆ ಟಿಕೆಟ್ ತಪ್ಪಿಸೋರು ಯಾರೂ ಇಲ್ಲಾ, ಅವರ ಕುರ್ಚಿ ಕಾಯಂ, ಇನ್ನೂ ಸ್ವಲ್ಪ ದಿವಸ ಆದರ ಅವರು ಪ್ರಧಾನಿ ಆಗಬಹುದು, ಉಪ ರಾಷ್ಟ್ರಪತಿ – ರಾಷ್ಟ್ರಪತಿನೂ ಆಗೋ ಛಾನ್ಸ್ ಅದ ಅಂತ ಹೇಳಿ ಅವರ ಬೆಂಬಲಿಗರು ಹೇಳಿಕೊಂಡು ಕುಣದಾಡಲಿಕ್ಕೆ ಹತ್ತಿದಾರು.

ಪ್ರಧಾನಿಯವರು ತಮ್ಮ ಎಂದಿನ ರೂಢಿಯಂತೆ, ಬರೀ ಒಳ್ಳೆ ಸುದ್ದಿ ಹೇಳುವ, ಹುರಿದುಂಬಿಸುವ, ಧನಾತ್ಮಕ ವಿಷಯವನ್ನೇ ತಿಳಿಸುವ ತಮ್ಮ ಇಮೇಜಿಗೆ ತಕ್ಕುದಾಗಿ ಯಾವ ಸಣ್ಣ ಮಾಹಿತಿಯನ್ನೂ ಕೊಡದಂತೆ, ಇದು ಒಳ್ಳೆಯದು ಅಂತ ಅಪ್ಪಣೆ ಕೊಟ್ಟಿದ್ದಾರೆ. ಅವರು ಯಾವ ಅಧ್ಯಯನ ಮಾಡಿದರು, ಅವರ ಯಾವ ನಡೆಗಳು ಭಾರತದ ಭವಿಷ್ಯವನ್ನು ನಿರ್ಧರಿಸುತ್ತವೆ, ಅದರಿಂದ ಈ ದೇಶದ ಜನರಿಗೆ ಯಾವ ರೀತಿಯಲ್ಲಿ ಅನುಕೂಲ ಆಗುತ್ತದೆ ಅಂತ ಅವರು ತಿಳಿಸಿ ಹೇಳಲಿಲ್ಲ.

ಬರೀ ಒಳ್ಳೆ ಮಾತಾಡುವ ವ್ಯಕ್ತಿತ್ವ ವಿಕಸನ ತರಬೇತಿ ಶಿಬಿರದ ಕೋಚ್ ಗೋಡ್ಬೋಲೆ (ಸವಿ ಮಾತಾಡುವ) ಅವರಂತೆ `ನಾ ಬ್ರೂಯಾತ ಅಪ್ರಿಯಂ ಸತ್ಯಂ’ ಅಂತ ಕೆಲವು ವಿಷಯ ಹೇಳದೇ ಬಿಟ್ಟರು, ನಾವು `ಇದಮಿತ್ಥಂ’ ಅಂತ ನಂಬಿಬಿಟ್ಟಿವಿ.

ಹಂಗಾರ ನಮ್ಮ ಸಚಿವರು ಮಾಡಿದ್ದಾದರೂ ಏನು ?

ಅದನ್ನು ಕಂಡುಹಿಡಿಯುವುದು ಅಷ್ಟೇನೂ ಕಷ್ಟವಿಲ್ಲ. ಈ ಅಭಿನಂದನೆ ನೀಡಿದ ಸಭೆಯಲ್ಲಿಯೇ ಅವರು ಒಂದು ಘೋಷಣೆ ಮಾಡಿದರು. ಭಾರತ ವಿಶ್ವದ ಎರಡನೇ ಅತಿ ದೊಡ್ಡ ಕಲ್ಲಿದ್ದಲು ಉತ್ಪಾದಕ ರಾಷ್ಟ್ರ. ನಾವು ಎರಡನೇ ಸ್ಥಾನದಲ್ಲಿ ಯಾಕೆ ಇರಬೇಕು? ಮೊದಲನೇ ಸ್ಥಾನದಲ್ಲಿ ಯಾಕ ಇರಬಾರದು? ಅಂತ ಪ್ರಶ್ನೆ ಕೇಳಿದರು.

ಜೋಶಿಜಿ ಅವರು ಆ ಮೊದಲನೇ ಸ್ಥಾನದ ದಾರಿ ತೋರಿಸಿಕೊಟ್ಟರು.

ಜೂನ್ ತಿಂಗಳ ಲಾಕ್‍ಡೌನ್‍ದಾಗ, ಲೋಕಸಭೆ- ರಾಜ್ಯಸಭೆ ಎರಡೂ ನಡೆಯದಾಗ, ರಾಜ್ಯಗಗಳ ವಿಧಾನ ಸಭೆ -ವಿಧಾನ ಪರಿಷತ್ತು ಬಂದ್ ಆದಾಗ, ಕೇಂದ್ರ ಸರಕಾರ ಈ ದೇಶದ 41 ಕಡೆಗಳಲ್ಲಿ ಭೂ ಗರ್ಭದಾಗ ಇರೋ ಕಲ್ಲಿದ್ದಲು ಗಣಿಗಳನ್ನು ಖಾಸಗಿಕರಣ ಮಾಡೋ ನಿರ್ಧಾರ ತೊಗೋಂಡಿತು. ಅದಕ್ಕ ಬೇಕಾದ ಪರಿಸರ ಇಲಾಖೆ, ಅರಣ್ಯ ಇಲಾಖೆ ಹಾಗೂ ವನ್ಯಜೀವಿ ಇಲಾಖೆ ಸಮ್ಮತಿಯನ್ನು ಗಡಿಬಿಡಿಯಿಂದ ತೊಗೊಂಡು ಇನ್ನೂ ಗಡಿಬಿಡಿಯಿಂದ ಘೋಷಿಸಿತು.

ಇವುಗಳಲ್ಲಿ ಶೇಕಡಾ 80 ರಷ್ಟು ಆದಿವಾಸಿಗಳು ಇರೋ ಪ್ರದೇಶಗಳು. ಆದರೆ ಅಲ್ಲಿನ ಜನರನ್ನ ಕೇಳಲಿಲ್ಲ. ಅವರ ಗ್ರಾಮಸಭೆ, ಗ್ರಾಮ ಅರಣ್ಯ ಸಮಿತಿ ಸಭೆ ನಡೆಸಲಿಲ್ಲ. ಸುಪ್ರೀಂ ಕೋರ್ಟ್‍ನ ಹಲವಾರು ಆದೇಶಗಳನ್ನು ಅಡವಿಯ ಕುಳಿರ್ ಗಾಳಿಗೆ ತೂರಿ ಬಿಟ್ಟು, ಟೆಂಡರ್ ಕರೆಯಲು ಸಜ್ಜಾದರು.

ಕಳೆದ ನೇಹರೂವಿನ್ ದಶಕಗಳಲ್ಲಿ, ಸುಮಾರು ಆರು ಕೋಟಿ ಆದಿವಾಸಿಗಳನ್ನು ಒಕ್ಕಲು ಎಬ್ಬಿಸಲಾಗಿದೆ. ಅವರಲ್ಲಿ ಸುಮಾರು 25 ಶೇಕಡಾ ಜನರಿಗೆ ಪರಿಹಾರ ಸಿಕ್ಕರೂ ಅವರ ಪುನರ್ವಸತಿ ಸರಿಯಾಗಿ ಆಗಿಲ್ಲ. ಅಲ್ಲಿನ ಜಲಮೂಲ, ವನ್ಯ ಜೀವಿ, ಹಕ್ಕಿ, ಇತರ ಪರಿಸರ ಕಲುಷಿತ ಆದ ನಂತರ ಅರಣ್ಯ ಪ್ರದೇಶದ ಯೋಜನೆಗಳಿಗೆ ಒಪ್ಪಿಗೆ ಕೊಡೋ ವೇಗ ಕಮ್ಮಿ ಆಯಿತು.

ಆಗಿನ ಸರ್ಕಾರಗಳು ತಮ್ಮ ಯಂತ್ರಾತ್ಮಕ್ಕೆ ಅಂಜದೇ ಇದ್ದರೂ ಜನರಿಗೆ, ಮಾಧ್ಯಮಗಳಿಗೆ, ನ್ಯಾಯಾಲಯಕ್ಕೆ, ಹೆದರುತ್ತಿದ್ದರು.

ಇವು ಯಾವುದಕ್ಕೂ ಹೆದರದೇ ಇರೋದು ಅಂದ್ರ ಅದು ಯಾ ಪರಿ ಧೈರ್ಯ ಇರಬೇಕು ನಮ್ಮ ಸಚಿವರಿಗೆ ಇರಬೇಕು? ನೀವೇ ನೋಡ್ರಿ.

ಈ 41 ಗಣಿಗಳು, ಐದು ರಾಜ್ಯಗಳ ಹಸಿರು ಪಟ್ಟಿಗಳಲ್ಲಿ ಬರತಾವು. ಅಲ್ಲಿ ಅರಣ್ಯ ಅಭಿವೃದ್ಧಿ ಚಟುವಟಿಕೆ ಬಿಟ್ಟು ಬೇರೆ ಏನೂ ಮಾಡಬಾರದು ಅಂತ ಒಂದು ತೀರ್ಪು ಐತಿ. ಸರ್ಕಾರವಾಗಲಿ, ಖಾಸಗಿ ಕಂಪನಿ ಆಗಲಿ, ಯಾವ ಕೆಲಸ ಮಾಡಿದರೂ ಕೂಡ, ಆದಿವಾಸಿಗಳ ಭಾಗೀದಾರಿಕೆಯಲ್ಲಿಯೇ ಮಾಡಬೇಕು ಅಂತ ಒಂದು ತೀರ್ಪು ಐತಿ. ಪರಿಸರ ಅಂದ್ರ ಬರೇ ಮಣ್ಣು, ನೀರು ಅಲ್ಲ, ಅಲ್ಲಿನ ಜನರ ಹಿತರಕ್ಷಣೆಯೂ ಆದರಾಗ ಸೇರೇತಿ ಅಂತ ಮತ್ತೊಂದು ತೀರ್ಪು ಐತಿ. ಅರಣ್ಯ, ಸಹಜ ಬೆಳೆ ಅಥವಾ ಬಹು ಬೆಳೆ ಜಮೀನನ್ನು ಭೂ ಸ್ವಾಧೀನ ಕಾಯಿದೆಯೊಳಗೆ ಸರಕಾರ ತೊಗೊಳಿಕ್ಕೆ ಬರೋದಿಲ್ಲ ಅಂತ ಇನ್ನೊಂದು ಐತಿ.

ಇವು ಯಾವುವೂ ಕೇಂದ್ರದ ಕಲ್ಲಿದ್ದಲು ಹಾಗೂ ಸಂಸದೀಯ ಖಾತೆ ಸಚಿವರಿಗೆ ನೆನಪು ಬರಲಿಲ್ಲ. ಬಂದರೂ ಸಹಿತ ತಮ್ಮ ಅಗಾಧ ಮರೆವಿನ ಶಕ್ತಿಯಿಂದ ಅದನ್ನು ಅವರು ಗೆದ್ದಿರಬಹುದು.

ಪರಿಶಿಷ್ಟ ಪಂಗಡಗಳ ರಕ್ಷಣೆಗಾಗಿ ಇರೋ ಸಂವಿಧಾನದ ಏಳನೇ ಭಾಗದ ಕಲಂಗಳಾಗಲಿ, ಪೆಸಾ ಕಾಯಿದೆಯಾಗಲಿ, ಸುಪ್ರೀಂ ಕೋರ್ಟಿನ ಸಮಾತಾ ತೀರ್ಪು, ಆದಿವಾಸಿ ಸಲಹಾ ಸಮಿತಿ ರಚನೆ, ಅಥವಾ ನೆಲದ ಒಡೆಯನೇ ನೆಲದಾಳದ ಅದಿರಿನ ಒಡೆಯ ಎನ್ನುವ 2013ರ ತೀರ್ಪು ಆಗಲಿ, ಅವರಿಗೆ ಮುಖ್ಯ ಅನ್ನಿಸಲಿಲ್ಲ.

ಇಷ್ಟು ದಿನ ಅರಣ್ಯ ಅಧಿಕಾರಿಗಳು ಯಾವುದು ಯಾವುದೋ ತೀರ್ಪಿನ ಹೆಸರು ಹೇಳಿ ಅಡವಿಯಲ್ಲಿ ಅಡುಗೆ ಮನೆಗೆ ಬೇಕಾದ ಕಟ್ಟಿಗೆ ತರಲು ಹೋಗುತ್ತಿದ್ದವರನ್ನು ಜೈಲಿಗೆ ಹಾಕುತ್ತಿದ್ದರು. ಅಂತಾದ್ದರಲ್ಲಿ ಇಷ್ಟು ಧಾಡಸಿತನದಿಂದ, ಪರಿಸರಕ್ಕೆ ಆಗಬಹುದಾದ ಹಾನಿಯನ್ನು ಕಲ್ಲು ಮನಸಿನಿಂದ ಸಹಿಸಿಕೊಂಡು ರಾಷ್ಟ್ರದ ಆರ್ಥಿಕತೆಗೆ ಕುಮ್ಮಕ್ಕು ಕೊಡೋ ದೃಷ್ಟಿಯಿಂದ ಕಲ್ಲಿದ್ದಲು ಗಣಿಗಾರಿಕೆಗೆ ಅನುವು ಮಾಡಿಕೊಡೋದು ಅಂದರೆ ಸುಮ್ಮನೇ ಏನು?

ಅದಕ್ಕೇ ಅವರು ಅವರನ್ನ ಅಭಿನಂದಿಸಿದ್ದು.


ಇದನ್ನು ಓದಿ: ದಲಿತ ಚಿಂತಕರನ್ನು ಮುಗಿಸಲು ಎಲ್ಗರ್ ಪರಿಷತ್ ಪ್ರಕರಣ ವರ್ಗಾವಣೆ: ಬಾಂಬೆ ಹೈಕೋರ್ಟ್‌‌ನಲ್ಲಿ ಅರ್ಜಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...