Homeಅಂಕಣಗಳುಇಬ್ರಾಹಿಂ ಏನು ಅಂತ ನಮಗೆ ಚನ್ನಾಗಿ ಗೊತ್ತು; ನಮ್ಮ ತಂದೆಯವರಿಗೆ ಇನ್ನೂ ಗೊತ್ತು..

ಇಬ್ರಾಹಿಂ ಏನು ಅಂತ ನಮಗೆ ಚನ್ನಾಗಿ ಗೊತ್ತು; ನಮ್ಮ ತಂದೆಯವರಿಗೆ ಇನ್ನೂ ಗೊತ್ತು..

- Advertisement -
- Advertisement -

ಕಾಂಗೈಗಳನ್ನು ಟೀಕಿಸುವ ಸಾಮಗ್ರಿಯನ್ನು ಖಾಲಿ ಮಾಡಿಕೊಂಡ ಈ ಬಿಜೆಪಿಗಳು ನಿಮ್ಮದು ರಾವಣನ ಪಕ್ಷ ನಮ್ಮದು ರಾಮನ ಪಕ್ಷ ಎಂದುಬಿಟ್ಟಿವೆಯಲ್ಲಾ. ಇದಕ್ಕೆ ತಕ್ಕ ಉತ್ತರ ಕೊಡಲು ತಡಕಾಡುತ್ತಿರುವ ಕಾಂಗೈಗಳು ಹಾಗೇ ಸ್ವಲ್ಪ ಯೋಚಿಸಿದ್ದರೆ ರಾವಣ ಎಂತವನು ಎಂಬುದು ಅರಿವಾಗುತ್ತಿತ್ತು. ರಾವಣನ ಹತ್ತು ತಲೆ ಅವನ ಶಕ್ತಿ ಸಾಮರ್ಥ್ಯದ ಸಂಕೇತ. ಆತ ಅಪ್ಪಟ ಶಿವಭಕ್ತ, ಸಂಗೀತಗಾರ, ಮಹಾವೈಣಿಕ, ನೃತ್ಯಪಟು, ಅಜೇಯ, ಒಳ್ಳೆ ಆಡಳಿತಗಾರ, ಕುಬೇರರನ್ನು ಸೋಲಿಸಿ ಪುಷ್ಪಕ ವಿಮಾನ ಪಡೆದವನು. ಭುಜಂಗ ಸ್ತೋತ್ರ ರಚಿಸಿದ ಕರ್ತೃ. ಜ್ವಲಿಸುವ ಅಗ್ನಿಯಂತಿದ್ದ ರಾಜಲಕ್ಷಣದಿಂದ ಶೋಭಿತನಾದ ಆತ ಈ ಪ್ರಪಂಚಕ್ಕೆ ಮೊದಲು ಮೀಸಲಾತಿ ತಂದವನು. ಲಂಕೆಯನ್ನು ರಕ್ಷಿಸಲು ಲಂಕಿಣಿ, ದಂಡಕಾರಣ್ಯ ರಕ್ಷಿಸಲು ತಾಟಕಿ, ಲಂಕೆ ಹೆಬ್ಬಾಗಿಲು ಕಾಯಲು ಸಿಂಹಿಣಿ, ಅಶೋಕವನ ನೋಡಿಕೊಳ್ಳಲು ತ್ರಿಜಟಿಯನ್ನು ನೇಮಿಸಿದ್ದ. ಹೆಣ್ಣನ್ನು ಮೋಸ ಮಾಡಿ ಕೊಂದವನಲ್ಲ. ಮರದ ಮರೆಯಲ್ಲಿ ನಿಂತು ಯುದ್ಧ ಮಾಡಿದವನಲ್ಲ. ಯಾರದೋ ಮಾತಿಗೆ ಮಡದಿಯನ್ನೇ ಕಾಡಿಗಟ್ಟಿದವನಲ್ಲ. ಹೆಂಡತಿ ಬಗ್ಗೆ ಸಂಶಯಗೊಂಡು ಬೆಂಕಿ ಮುಟ್ಟಲು ಹೇಳಿದವನಲ್ಲ ರಾವಣ. ಹೀಗೆ ರಾವಣನ ಗುಣಗಳನ್ನು ಪಟ್ಟಿಮಾಡಿ ಬಿಜೆಪಿಗೆ ಕಾಂಗೈಗಳು ಸವಾಲೆಸೆಯುವ ಬದಲು ಗೊಂದಲಕ್ಕೆ ಬಿದ್ದಿವೆಯಲ್ಲಾ. ಈ ಗೊಂದಲಕ್ಕೆ ಕಾರಣ ಬಿಜೆಪಿಗಳು ನಿಮ್ಮನ್ನು ರಾವಣ ಪಕ್ಷ ಎಂದ ಕೂಡಲೇ ನಮ್ಮಲ್ಲಿ ರಾವಣ ಸಿದ್ದರಾಮಯ್ಯನೊ ಅಥವಾ ಡಿ.ಕೆ ಶಿವಕುಮಾರನೊ ಎಂದು ಯೋಚಿಸುತ್ತ ಕುಳಿತಿವೆಯಂತಲ್ಲಾ ಥೂತ್ತೇರಿ.

ಕಾಂಗೈ ಮತ್ತು ಬಿಜೆಪಿಗಳ ಕತೆ ಹೀಗಿದ್ದರೆ ಇನ್ನ ಯಾತ್ರೆ ಆರಂಭಿಸಿದ ದಿನದಿಂದಲೂ ಹಲವಾರು ಅಡ್ಡಿ ಆತಂಕಗಳನ್ನು ಎದುರಿಸುತ್ತಿರುವ ನಮ್ಮ ಕುಮಾರಣ್ಣನನ್ನು ಮಾತನಾಡಿಸಿ ಬಹಳ ದಿನಗಳಾದವು. ಪಂಚರತ್ನ ಯಾತ್ರೆ ಸ್ಥಗಿತಗೊಳಿಸಿ ಸುಧಾರಿಸಿಕೊಳ್ಳುತ್ತಿರುವ ಈ ಸಮಯದಲ್ಲಿ ಮಾತಿಗೆ ಸಿಕ್ಕಬಹುದೆಂದು ಪೋನ್ ಮಾಡಲಾಗಿ ಪೋನ್ ರಿಂಗಾಯ್ತು, ರಿಂಗ್ ಟೋನು “ಮುರುಳಿಯ ಮರೆಸಿ ನಗುತಿಹೆ ಸರಸಿ..” ಹಲೋ ಯಾರು?

“ನಾನು ಸಾರ್, ಯಾಹೂ.”

“ಏನ್ರಿ ಯಾಹೂ ಇತ್ತೀಚೆಗೆ ಪೋನ್ ಮಾಡದನ್ನು ಬಿಟ್ರಿ. ಭೇಟಿಯಾಗದನ್ನು ಬಿಟ್‌ರಲ್ರಿ.”

“ಅಂಗೇನು ಯಿಲ್ಲ ಸಾರ್, ನೀವು ಬಿಜಿಲಿದ್ರಿ. ಅದಕ್ಕಿಂತ್ಲೂ, ಎಷ್ಟೋ ದಿನ ನಾವು ಮುನಿಸಿಕೊಂಡಿದ್ರೂ ಸಹ ಪುನಹ ನಿಮ್ಮತ್ರ ಬರಬೇಕಾಗತ್ತೆ, ಜಿ.ಟಿ ದೇವೇಗೌಡರ ತರ.”

“ದೇವೇಗೌಡ್ರು ಮುನಿಸಿಕೊಂಡಿದ್ದಕ್ಕೆ ಹಲವಾರು ಕಾರಣಗಳು ಇವೆ. ಅವನ್ನೆಲ್ಲ ಮಾತನಾಡತಕ್ಕಂತ ತೀರ್ಮಾನ ತಗೊಳತಕ್ಕಂತ ಸಮಯ ಇದಲ್ಲ. ನಮ್ಮ ಮೈಸೂರು ಭಾಗದಲ್ಲಿ ಅವರು ದಳಕ್ಕೆ ಒಂದು ಶಕ್ತಿಯಾಗಿರತಕ್ಕಂತದ್ದು, ಈಗಾಗ್ಲೆ ತೀರ್ಮಾನ ಆಗಿರತಕ್ಕಂತ ವಿಚಾರ ಆದ್ದರಿಂದ ನಮ್ಮ ತಂದೆಯವರು, ಮಾಜಿ ಪ್ರಧಾನಿಗಳಾದ ಮಾನ್ಯ ದೇವೇಗೌಡ್ರು ಕರದ ಕೂಡಲೆ ಬಂದು ಅಳತೆ ಗೌರವ ತೋರಿರತಕ್ಕಂತ ವಿಷಯ ಏನಿದೆ ಅದ್ಯಲ್ಲ ಮುಗದು ಈಗ ಅವರು ದಳದ ಸಂಘಟನೆಲಿ ಸಕ್ರಿಯವಾಗಿರತಕ್ಕಂತದ್ದು ನೀವೆ ನೋಡಿದ್ದಿರಿ.”

“ಆದ್ರು ಜಿ.ಟಿ ದೇವೇಗೌಡ್ರ ನಂಬಿದ್ದೋರು ಐದು ಜನ ಕಾಂಗ್ರಸ್ಸಿಗೋದರಲ್ಲ ಸಾರ್?”

“ಅವುರ ಬಗ್ಗೆ ಹೆಚ್ಚಿಗೆ ಮಾತಾಡತಕ್ಕಂತ ವಿಷಯಕ್ಕೆ ಹೋಗಲ್ಲ. ಅಲ್ಲಿ ನಾಲ್ಕೆ ಜನ ಸಾಕು ಅನತಕ್ಕಂತ ತೀರ್ಮಾನವ ಅವರೇ ತಗಂಡು ಈಗಾಗ್ಲೆ ಒಬ್ಬ ವಾಪಸು ಪುನಹ ನಮ್ಮ ಪಾರ್ಟಿಗೆ ಬಂದವುರೆ, ನಾನು ಯಾವತ್ತು ಕೂಡ ನಮ್ಮ ಪಾರ್ಟಿ ಬಿಟ್ಟು ಹೋಗುವರ ಬಗ್ಗೆಯಾಗಲಿ ಬರತಕ್ಕಂತ ವ್ಯಕ್ತಿಗಳ ಬಗೆಯಾಗ್ಲಿ ಕಾಳಜಿ ವಹಿಸದೆ ಇರತಕ್ಕತಂದ್ದು ಮೊದಲಿನಿಂದಲೂ ನಾವು ರೂಢಿಸಿಕೊಂಡು ಬಂದಂತ ತೀರ್ಮಾನಗಳೇನಿವೆ ಅವನ್ನ ಪಾಲನೆ ಮಾಡತಕ್ಕಂತದ್ದು ನಮ್ಮ ಜವಾಬ್ದಾರಿ.”

“ಮತ್ತೆ ಜಿ.ಟಿ ದೇವೇಗೌಡ್ರನ್ನ ಕಾಡಿ ಬೇಡಿ ಕರಕೊಂಡ್ರಲ್ಲ ಸಾರ್?”

“ಅದು ನಮ್ಮ ರಾಷ್ಟ್ರೀಯ ಅಧ್ಯಕ್ಷರ ತೀರ್ಮಾನ. ಅವುರು ತೆಗೆದುಕೊಳ್ಳತಕ್ಕಂತ ತೀರ್ಮಾನ ಏನಿದೆ ಅವುನ್ನ ಗೌರವಿಸತಕ್ಕಂತದ್ದು ನಮ್ಮ ಕರ್ತವ್ಯ”

“ಇನ್ನೊಂದು ಗಂಭೀರ ವಿಷಯ ಸಾರ್, ನೀವು ಇಬ್ರಾಹಿಂ ಮುಖ್ಯಮಂತ್ರಿಯಾಗದರಲ್ಲಿ ತಪ್ಪೇನಿದೆ ಅವುರೇನು ಅಸ್ಪೃಶ್ಯರೆ ಅಂದುಬಿಟ್ಟಿದ್ದಿರಿ. ಈ ಮಾತಿಗೆ ಈಗಾಗ್ಲೆ ಕಂಪ್ಲೇಟು ಆಗಿದೆ, ಯಾಕಂಗದ್ರಿ ಸಾರ್?”

“ನಾನಂಗಂದಿರದು ಕಂಪ್ಲೇಟು ದಾಖಲಾಗಿರದನ್ನ ಗಮನಿಸಿದ್ದಿನಿ. ನಾನು ಹೇಳಿರತಕ್ಕಂತ ಮಾತೇನಿದೆ ಅದು ಕಾಂಗ್ರೆಸಿನವರಾಡೊ ಮಾತು; ಈ ದೇಶದಲ್ಲಿ ಅಸ್ಪೃಶ್ಯರು ಅವರೆ, ಅವುರು ಇನ್ನ ಇದ್ದಾರೆ ಅನ್ನದಾದ್ರೆ ಇಷ್ಟು ವರ್ಷ ದೇಶ ಆಳಿದ ಕಾಂಗ್ರೆಸಿನವರು ಅವರು ಇಲ್ದಂಗೆ ಮಾಡಬೇಕಾಗಿತ್ತು. ಅದು ಆಡಳಿತ ನ್ಯಡಸತಕ್ಕಂತ ಅವುರ ಜವಬ್ದಾರಿ ಆಗಿತ್ತು. ಅಸ್ಪೃಶ್ಯತೆ ಪದ ಹಿಡಕಂಡು ನಮ್ಮನ್ನ ಕೆಣಕತಕ್ಕಂತ ಸಾಹಸವ ಈ ಕಾಂಗ್ರೆಸ್ಸಿನವರು ಮಾಡ್ತ ಅವುರೆ. ಅವುರಿಗೆ ನಾನು ಈ ಮುಖಾಂತರ ಎಚ್ಚರಿಕೆ ಕೋಡ್ತಿನಿ.”

“ಪ್ರಶ್ನೆ ಕೇಳಿದ್ದು ಪತ್ರಿಕೆಯವರಲ್ಲವ ಸಾರ್?”

“ಇರಬಹುದು ಅವುರ್‍ಯಾರು ಎಂಬತಕ್ಕಂತ ಮಾಹಿತಿ ನಮ್ಮತ್ರ ಇದೆ. ನಾವು ಯಾವತ್ತೂ ಅಸ್ಪೃಶ್ಯರ ಬಗ್ಗೆ ಕೀಳಾಗಿ ನಡಕೊಂಡಿಲ್ಲ, ತಪ್ಪಾಗಿ ನ್ಯಡಕೊಂಡಿಲ್ಲ. ಅವರ ಭುಜದ ಮೇಲೆ ಕೈಹಾಕಿ ಮಾತನಾಡಿಸಿದ್ದೀನಿ. ರಾಮಕೃಷ್ಣ ಹೆಗಡೆ ಕಾಲದಲ್ಲಿ ಜಿಲ್ಲಾ ಪಂಚಾಯ್ತಿ ಚುನಾವಣೆ ಆದಾಗ ನಮ್ಮ ತಂದೆಯವರು ಒಬ್ಬ ದಲಿತರನ್ನು ಹಾಸನ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರನ್ನಾಗಿ ಮಾಡಿದ್ರು. ಇದೇ ಕಾಂಗ್ರೆಸ್ಸಿಗರು ಮಾಡಿದ್ರಾ? ಅವುರಿಗೆ ಪವರ್ ಬಂದಾಗ ಪರಮೇಶ್ವರನ್ನ ಮಾಡಿದ್ರ? ಅದ್ಕೂ ಹಿಂದೆ ರಂಗನಾಥ ಬಸವಲಿಂಗಪ್ಪ ಇದ್ರಲ್ಲ ಮಾಡಿದ್ರಾ, ಖರ್ಗೆಯವರನ್ನ ಮಾಡಿದ್ರಾ?”

“ಖರ್ಗೆಯವರನ್ನ ಮಾಡದಂಗೆ ದೇವೇಗೌಡ್ರು ತಡೆಹಾಕಿದ್ರಲ್ಲ ಸಾರ್?”

“ದೇವೇಗೌಡ್ರು ಅಂತ ಕ್ಯಲಸ ಯಾವಾಗ್ಲು ಮಾಡಿಲ್ಲ.”

“ನಮ್ಮ ಕಣ್ಣೆದುರೆ ಮಾಡಿದ್ರಲ್ಲ ಸಾರ್. ಆಗ ಸಮ್ಮಿಶ್ರ ಸರಕಾರ ಮಾಡುವಾಗ ಸೋನಿಯಾ ಗಾಂಧಿ ಮುಖ್ಯಮಂತ್ರಿ ಪದವಿನೆ ತಗೊಳಿ ಅಂದ್ರು. ಆಗ ಗೌಡ್ರು ಬೇಡ ಬೇಡ ನಮಗೆ ಉಪಮುಖ್ಯಮಂತ್ರಿ ಸಾಕು ಅಂದ್ರು. ಯಾಕೆ ಅಂತ ಪತ್ತೆಹಚ್ಚಿದಾಗ, ಮುಂದೆ ಧರ್ಮಸಿಂಗ್‌ಗೆ ಕೊಟ್ಟ ಬೆಂಬಲ ವಾಪಸ್ ತಗಂಡಾಗ ಯಾರೂ ಪ್ರತಿಭಟಿಸಲಿಲ್ಲ; ಅದೇ ಖರ್ಗೆ ಮುಖ್ಯಮಂತ್ರಿಯಾಗಿದ್ದು ಬೆಂಬಲ ಹಿಂತಗಂಡ್ರೆ ಇಡೀ ಕರ್ನಾಟಕದ ದಲಿತರು ಪ್ರತಿಭಟಿಸತಿದ್ರು. ಇದು ಗೊತ್ತಾಗಿ ದೇವೇಗೌಡ್ರು ಧರ್ಮಸಿಂಗ್‌ಗೆ ಸಪೋರ್ಟ್ ಮಾಡಿ ವಾಪಸ್ ತಗೊ ಅಂತ ನಿಮಗೇಳೀದ್ರಂತೆ, ಪಾಪ ಗೌಡ್ರು ಪ್ಲಾನು ನಿಮಗೂ ಗೊತ್ತಾಗಲಿಲ್ಲ ಅಲವಾ ಸಾರ್?”

“ಇದ್ಯಲ್ಲ ಕಟ್ಟುಕತೆ ಕಂಡ್ರಿ, ಇದೇ ಡಿ.ಕೆ ಶಿವಕುಮಾರ ನಮ್ಮ ಪಾರ್ಟಿ ಜನನ ಯಳಿಯಕ್ಕೆ ನೋಡಿದಾಗ, ನಾನೇ ಪಾರ್ಟಿ ಉಳಿಸಿಗಳಕ್ಕೆ ಅಂಗೆ ಮಾಡಿದ್ದೆ.”

“ಈಗ್ಲು ಉಸಾರಾಗಿರಿ ಸಾರ್. ಇಬ್ರಾಹಿಂ ನಿಮ್ಮ ಬಗುಲಲ್ಲೇ ಅವುರೆ. ಆತ ಕಾಂಗ್ರೆಸ್‌ನಲ್ಲಿದ್ದು ಯಡಿಯೂರಪ್ಪನಿಗೆ ಮುವ್ವತ್ತು ಸಾವುರ ಓಟಾಕ್ಸಿದನಂತೆ. ಅವುರೆ ಅಂಗಂದವುರೆ. ನಿಮ್ಮ ಕ್ಷೇತ್ರದ ಮುಸ್ಲಿಮರು ಯಂಗವ್ರೆ ನೋಡಿಕಳಿ.”

“ಇಬ್ರಾಹಿಂ ಏನು ಅಂತ ನಮಗೆ ಚನ್ನಾಗಿ ಗೊತ್ತು. ನಮ್ಮ ತಂದೆಯವರಿಗೆ ಇನ್ನು ಗೊತ್ತು.”

“ಥೂತ್ತೇರಿ”


ಇದನ್ನೂ ಓದಿ: ಉಗ್ರರನ್ನೇ ಬಿಡದ ಮೋದಿ ರೌಡಿಗಳನ್ನು ಬಿಟ್ಟಾರಾ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...