ಟ್ವಿಟ್ಟರ್‌ನಲ್ಲಿ “ಬಾಯ್ಕಾಟ್ ನೆಟ್‌ಫ್ಲಿಕ್ಸ್” ಟ್ರೆಂಡಿಂಗ್ ಆಗುತ್ತಿದ್ದು, ‘ಎ ಸೂಟಬಲ್ ಬಾಯ್’ ಎನ್ನುವ ವೆಬ್ ಸೀರೀಸ್‌ನ ದೃಶ್ಯವೊಂದರಲ್ಲಿ ದೇವಸ್ಥಾನದ ಆವರಣದಲ್ಲಿ ಯುವಕ-ಯುವತಿ ಚುಂಬಿಸುತ್ತಿರುವ ವೀಡಿಯೋವನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಳ್ಳುತ್ತಿದ್ದಾರೆ.
ಈ ಚುಂಬನ ದೃಶ್ಯ ದೇವಸ್ಥಾನದಲ್ಲಿ ನಡೆಯುವಂತೆ ತೋರಿಸಿರುವುದಕ್ಕೆ ಸಿಡಿದೆದ್ದ ‘ಭಕ್ತರು’ ಈಗ ನೆಟ್‌ಫ್ಲಿಕ್ಸ್ ಅನ್ನೇ ನಿಷೇಧಿಸಬೇಕು ಎಂದು ಆಗ್ರಹಿಸಿದ್ದು, ಈ ವೆಬ್ ಸೀರೀಸ್‌ನಲ್ಲಿ ಮುಸ್ಲಿಂ ಯುವಕ ಹಿಂದೂ ಯುವತಿಗೆ ಚುಂಬಿಸುತ್ತಿರುವುದರಿಂದ ಇದು ‘ಲವ್ ಜಿಹಾದ್’ ಎನ್ನುವ ಆರೋಪವನ್ನೂ ಮಾಡುತ್ತಿದ್ದಾರೆ.
Netflix is "explicitly" a Hindu hαting OTT platform#BoycottNetflix pic.twitter.com/TApuxjSySU#BoycottNetflix
— Dk JAKHAR_(किसान पुत्र) (@JakharDILIP_DJ) November 22, 2020
ಇಂದು ಟ್ವಿಟ್ಟರ್ ಟ್ರೆಂಡಿಂಗ್‌ನಲ್ಲಿ ಮೊದಲ ಸ್ಥಾನದಲ್ಲಿರುವ #BoycottNetflix ಎನ್ನುವ ಹ್ಯಾಶ್‌ಟ್ಯಾಗ್ ಅನ್ನು ಬಳಸಿ ಸುಮಾರು 84 ಸಾವಿರಕ್ಕೂ ಹೆಚ್ಚು ಬಳಕೆದಾರರು ಟ್ವೀಟ್ ಮಾಡಿದ್ದಾರೆ. ಈ ವಿಷಯವನ್ನಿಟ್ಟುಕೊಂಡು ಪರ-ವಿರೋಧದ ಚರ್ಚೆಯನ್ನೂ ಮಾಡುತ್ತಿದ್ದಾರೆ.
ಇದನ್ನೂ ಓದಿ: ಮುತ್ತಯ್ಯ ಮುರುಳೀಧರನ್ ಪಾತ್ರದಲ್ಲಿ ವಿಜಯ್ ಸೇತುಪತಿ: ‘800’ ಚಿತ್ರ ಬಾಯ್ಕಾಟ್ ಎಂದ ತಮಿಳಿಗರು!
ದೇವಸ್ಥಾನದಲ್ಲಿ ಚುಂಬಿಸುವಂತಹ ಅಶ್ಲೀಲ ದೃಶ್ಯವನ್ನು ಈ ವೆಬ್ ಸೀರೀಸ್‌ನಲ್ಲಿಟ್ಟಿರುವುದು ಭಾರತದ ಸಂಸ್ಕೃತಿಗೆ ಧಕ್ಕೆಯುಂಟುಮಾಡಿದೆ. ಅದೂ ಅಲ್ಲದೇ ಇದು ಲವ್ ಜಿಹಾದ್ ಅನ್ನು ಬೆಂಬಲಿಸುತ್ತದೆ ಎಂದು ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ಜೊತೆಯಲ್ಲಿಯೇ ಇನ್ನೂ ಅನೇಕರು ಈ ವೆಬ್ ಸೀರೀಸ್ ಅನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದು, ‘ದೇವಾಲಯಗಳಲ್ಲಿನ ಶಿಲ್ಪಗಳಲ್ಲಿಯೇ ಸಂಭೋಗದ ದೃಶ್ಯಗಳನ್ನು ಕೆತ್ತಿರುತ್ತಾರೆ. ಹಾಗಾಗದರೆ ಆ ದೇವಸ್ಥಾನಗಳನ್ನೂ ನಿಷೇಧಿಸಬೇಕು’ ಎಂದು ತಿರುಗೇಟು ನೀಡುತ್ತಿದ್ದಾರೆ.
ಹರಿಯಾಣ ಬಿಜೆಪಿಯ ಸಾಮಾಜಿಕ ಮಾಧ್ಯಮ ವಿಭಾಗದ ಅರುಣ್ ಯಾದವ್ ಟ್ವೀಟ್ ಮಾಡಿ, “#BoycottNetflix ಅನ್ನು ಟ್ರೆಂಡಿಂಗ್ ಮಾಡಿದ್ದಕ್ಕೆ ಧನ್ಯವಾದಗಳು. ಇದನ್ನು ಜಾಗತಿಕಗೊಳಿಸೋಣ” ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: “ದಿ ಕಪಿಲ್ ಶರ್ಮಾ ಶೋ” ಬಾಯ್ಕಾಟ್: ಸಿಡಿದೆದ್ದ ಅರ್ನಾಬ್ ಅಭಿಮಾನಿಗಳು?
Thank You Everyone For Supporting
Let's Make It Worldwide ?#BoycottNetflix pic.twitter.com/uCWoMshVPJ
— Arun Yadav (@beingarun28) November 22, 2020
ಇದನ್ನೂ ಓದಿ: ಮನುಸ್ಮೃತಿ ಸುಟ್ಟಿದ್ದು ಏಕೆಂದು ವಿವರಿಸಿದ ಅಮಿತಾಬ್ ಬಚ್ಚನ್ ವಿರುದ್ಧ FIR!
ತಾರಾನಾಥ್ ಪೂಜಾರಿ ಎಂಬುವವರು ಕೆಲವು ವೆಬ್‌ಸೀರೀಸ್‌ಗಳ ಪೋಸ್ಟರ್‌ಗಳನ್ನು ಟ್ವೀಟ್ ಮಾಡಿ, “ಇವುಗಳ ಮುಖ್ಯ ಅಜೆಂಡಾ ಹಿಂದೂಗಳು ಮತ್ತು ಹಿಂದೂ ದೇವತೆಗಳನ್ನು ಅವಮಾನಿಸುವುದೇ ಆಗಿದೆ. ಅಪರಾದಿಗಳನ್ನು ಶಿಕ್ಷಿಸಬೇಕು” ಎಂದು ಬರೆದುಕೊಂಡಿದ್ದಾರೆ.
#BoycottNetflix
These web series only the agenda defame hindus & hindu Gods?
Culprits should punished…… pic.twitter.com/EYIlqFjKgd— TARANATH POOJARY (@taranathpoojary) November 22, 2020
ಇದನ್ನೂ ಓದಿ: ಮತ್ತೊಂದು ಧೋಕ್‍ಲಾಂ ಆಗಲಿದೆಯೇ ಲಡಾಖ್‍ನ ಗಾಲ್ವನ್ ಕಣಿವೆ?
ಶಿವಾನಿ ಪಾಂಡೆ ಎನ್ನುವವರು ಟ್ವೀಟ್ ಮಾಡಿ, “ಇಂತಹ ನಾಚಿಕೆಯ ದೃಶ್ಯವನ್ನು ತೋರಿಸಲು ನೆಟ್‌ಫ್ಲಿಕ್ಸ್‌ಗೆ ಎಷ್ಟು ಧೈರ್ಯ? ದೇವಸ್ಥಾನಗಳು ಇದಕ್ಕಾಗಿಯೇ ಇದೆಯೇನು? ನಾಚಿಕೆಗೇಡು! ಈ ದೃಶ್ಯವನ್ನು ಈ ಕೂಡಲೇ ಡಿಲೀಟ್ ಮಾಡಿ” ಎಂದು ಬರೆದುಕೊಂಡಿದ್ದಾರೆ.
How dare @NetflixIndia showed this disgraceful act?? Is this for what temples are there?? Shameful!! ??. Delete this scene immediately. #BoycottNetflix #Netflix pic.twitter.com/2pGfnFu2cj
— $hìv@nì P@ndèy? (@shivanipandayy) November 22, 2020
ಇದನ್ನೂ ಓದಿ: ಪ್ಯಾಲಿಸ್ಟೀನಿಯಲ್ಲಿ ನಡೆಯುತ್ತಿರುವುದೇನು? ನಿಮಗಿದು ತಿಳಿದಿರಬೇಕಾದ ವಿಷಯ
ಇನ್ನು ಈ ಅಭಿಯಾನವನ್ನು ವಿರೋಧಿಸಿ ಸಾವಿರಾರು ಜನ ಟ್ವೀಟ್ ಮಾಡಿದ್ದಾರೆ.
ಟ್ರೋಲ್ ಮಾಫಿಯಾ ಎನ್ನುವ ಖಾತೆಯಿಂದ, “ದೇವಸ್ಥಾನದೊಳಗೆ ನಡೆದ ಆಸೀಫಾ ಎನ್ನುವ ಬಾಲಕಿಯ ಮೇಲಿನ ಅತ್ಯಾಚಾರವನ್ನು ಸಮರ್ಥಿಸಿಕೊಂಡವರೇ ಇಂದು ದೇವಸ್ಥಾನದಲ್ಲಿನ ಒಂದು ಮುತ್ತಿನ ದೃಶ್ಯಕ್ಕಾಗಿ ನೆಟ್‌ಫ್ಲಿಕ್ಸ್ ಅನ್ನು ಬಾಯ್ಕಾಟ್ ಮಾಡಿ ಎನ್ನುತ್ತಿದ್ದಾರೆ” ಎಂದು ಬರೆಯಲಾಗಿದೆ.
Those who supported the Rapists when asifa Raped in the temple
Wants to #BoycottNetflix Now, for a kissing scene pic.twitter.com/V84mafAjQ3
— Troll Mafia (@offl_trollmafia) November 22, 2020
ಇದನ್ನೂ ಓದಿ: ಉತ್ತರ ಪ್ರದೇಶ: ಬಾಲಕಿಗೆ ಕಿರುಕುಳ ನೀಡಿ, ಟೆರೇಸ್‌ನಿಂದ ದೂಡಿದ ದುರ್ಷ್ಕಮಿಗಳು
ಮತ್ತೊಬ್ಬ ಟ್ವಿಟ್ಟರ್ ಬಳಕೆದಾರರು, “ಭಕ್ತರು ದೇವಸ್ಥಾನದೊಳಗಿನ ಮುತ್ತಿನ ದೃಶ್ಯಕ್ಕಾಗಿ #BoycottNetflix ಎಂದು ಟ್ರೆಂಡಿಂಗ್ ಮಾಡುತ್ತಿದ್ದಾರೆ. ಆದರೆ ದೇವಸ್ಥಾನದೊಳಗೆ ಇಂತಹವುಗಳಿದ್ದರೆ ಅವರಿಗೆ ತೊಂದರೆಯಿಲ್ಲ” ಎಂದು ಭಾರತೀಯ ದೇವಸ್ಥಾನದಲ್ಲಿರುವ ಸಂಭೊಗ ಶಿಲ್ಪವೊಂದನ್ನು ಹಂಚಿಕೊಂಡಿದ್ದಾರೆ.
#Hypocrisy_Level ?
Bhakt's Trending Boycott Netflix For Showing Kissing Inside A Temple.
But They Are Okey With This Inside A Temple. #BoycottNetflix pic.twitter.com/ufLkPOoVba— Rofl Kamra 2.0 (@Rofl_Kamra) November 22, 2020
ಹೀಗೆ ಸಾವಿರಾರು ಜನರು ಈ ಹ್ಯಾಶ್‌ಟ್ಯಾಗ್ ಬಳಸಿ ಟ್ವೀಟ್ ಮಾಡಿದ್ದಾರೆ.
ಇತ್ತೀಚೆಗೆ ಬಾಯ್ಕಾಟ್ ಎನ್ನುವುದು ಮನೆಮಾತಾಗಿಬಿಟ್ಟಿದೆ. ತಮಗೆ ಮತ್ತು ತಮ್ಮ ಸಿದ್ದಾಂತಕ್ಕೆ ಹೊಂದದ ಯಾವುದನ್ನೇ ಆದರೂ ಅದನ್ನು ಬಾಯ್ಕಾಟ್ ಎಂದು ಟ್ರೆಂಡಿಂಗ್ ಮಾಡಿಬಿಡುತ್ತಾರೆ. ಆದರೆ ಕೆಲವು ಸಂದರ್ಭಗಳಲ್ಲಿ ಇಂತಹ ಕ್ರಮಗಳಿಂದ ಅವು ಬ್ಯಾನ್ ಆಗುವ ಬದಲು ಸಾಕಷ್ಟು ಪ್ರಚಾರ ಪೆಡೆಯುವುದರೊಟ್ಟಿಗೆ, ಸೂಪರ್-ಡೂಪರ್ ಹಿಟ್ ಆಗಿಬಿಡುತ್ತವೆ.
ಇದನ್ನೂ ಓದಿ: ನಾವು ಜಾತ್ಯಾತೀತರು, ಜಾತ್ಯಾತೀತರಾಗೇ ಇರುತ್ತೇವೆ- ತನಿಷ್ಕ್ ಜಾಹೀರಾತು ನಿರ್ದೇಶಕಿ


