Homeಮುಖಪುಟಕಾಂಗ್ರೆಸ್‌ನಲ್ಲಿ ನಾಯಕತ್ವ ಬಿಕ್ಕಟ್ಟಿಲ್ಲ, ಸೋನಿಯಾ- ರಾಹುಲ್‌ಗೆ ಬೆಂಬಲವಿದೆ: ಸಲ್ಮಾನ್ ಖುರ್ಷಿದ್

ಕಾಂಗ್ರೆಸ್‌ನಲ್ಲಿ ನಾಯಕತ್ವ ಬಿಕ್ಕಟ್ಟಿಲ್ಲ, ಸೋನಿಯಾ- ರಾಹುಲ್‌ಗೆ ಬೆಂಬಲವಿದೆ: ಸಲ್ಮಾನ್ ಖುರ್ಷಿದ್

ತಮ್ಮ ವಿಚಾರಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಲು ಕಾಂಗ್ರೆಸ್‌ನಲ್ಲಿ ಸಾಕಷ್ಟು ವೇದಿಕೆಗಳಿವೆ. ಕಾಂಗ್ರೆಸ್ ನಾಯಕತ್ವವು ನನ್ನ ಮಾತುಗಳನ್ನು ಕೇಳುತ್ತದೆ, ನನಗೆ ಅವಕಾಶ ನೀಡಲಾಗಿದೆ.

- Advertisement -
- Advertisement -

ಬಿಹಾರ ಚುನಾವಣೆ ಮತ್ತು ವಿಧಾನಸಭೆ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಕಳಪೆ ಪ್ರದರ್ಶನದ ಬಗ್ಗೆ ಪಕ್ಷದ ಕೆಲವು ರಾಜ್ಯಗಳ ನಾಯಕರ ಟೀಕೆಗಳನ್ನು ರಾಹುಲ್ ಗಾಂಧಿ ಮತ್ತು ಅಧ್ಯಕ್ಷೆ ಸೋನಿಯಾ ಗಾಂಧಿ ಎದುರಿಸಿದ್ದರು. ಈಗ ಪಕ್ಷದ ಹಿರಿಯ ನಾಯಕ ಸಲ್ಮಾನ್ ಖುರ್ಷಿದ್, ಪಕ್ಷದಲ್ಲಿ ಯಾವುದೇ ನಾಯಕತ್ವ ಬಿಕ್ಕಟ್ಟು ಇಲ್ಲ. ಯಾರೂ ಸೋನಿಯಾ ಗಾಂಧಿ ಮತ್ತು ರಾಹುಲ್ ಅವರಿಗೆ ಕುರುಡುತನದಿಂದ ಬೆಂಬಲಿಸುತ್ತಿಲ್ಲ ಎಂದು ಹೇಳಿದ್ದಾರೆ.

ತಮ್ಮ ವಿಚಾರಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಲು ಕಾಂಗ್ರೆಸ್‌ನಲ್ಲಿ ಸಾಕಷ್ಟು ವೇದಿಕೆಗಳಿವೆ. “ಕಾಂಗ್ರೆಸ್ ನಾಯಕತ್ವವು ನನ್ನ ಮಾತುಗಳನ್ನು ಕೇಳುತ್ತದೆ, ನನಗೆ ಅವಕಾಶ ನೀಡಲಾಗಿದೆ, ಮಾಧ್ಯಮಗಳಲ್ಲಿ ಟೀಕಿಸುವವರಿಗೂ ಅವಕಾಶ ನೀಡಲಾಗುತ್ತದೆ. ಆದರೆ ನಾಯಕತ್ವ ತಮ್ಮ ಮಾತುಗಳನ್ನು ಕೇಳುತ್ತಿಲ್ಲ ಎಂಬ ವಿಚಾರಗಳು ಎಲ್ಲಿಂದ ಬರುತ್ತವೆ ಎಂಬುದು ಗೊತ್ತಿಲ್ಲ” ಎಂದು ಖುರ್ಷಿದ್ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಇತ್ತೀಚೆಗೆ, ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್, ಜನರು ಇನ್ನು ಮುಂದೆ ಪಕ್ಷವನ್ನು “ಪರಿಣಾಮಕಾರಿ ಪರ್ಯಾಯ” ವಾಗಿ ನೋಡುತ್ತಿಲ್ಲ. ಈ ಕುರಿತು ಪಕ್ಷದ ನಾಯಕತ್ವವು ಈ ಸಮಸ್ಯೆಯನ್ನು ಬಗೆಹರಿಸುತ್ತಿಲ್ಲ ಎಂದು ಸಾರ್ವಜನಿಕವಾಗಿ ಹೇಳಿದರು. “ಕಾಂಗ್ರೆಸ್‌ಗೆ ಅದು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಉತ್ತರಗಳು ಸಹ ತಿಳಿದಿದೆ, ಆದರೆ ಅವುಗಳನ್ನು ಗುರುತಿಸಲು ನಾಯಕತ್ವ ಸಿದ್ಧವಿಲ್ಲ” ಎಂದು ಹೇಳಿದರು. ಇದನ್ನೇ ಸಂಸದರಾದ ವಿವೇಕ್ ತಂಖಾ ಮತ್ತು ಕಾರ್ತಿ ಚಿದಂಬರಂ ಕೂಡ ಪುನರುಚ್ಚರಿಸಿದ್ದರು.

ಇದನ್ನೂ ಓದಿ: ಬಿಹಾರದ ಹಂಗಾಮಿ ಸ್ಪೀಕರ್‌ ಆಗಿ ಜಿತನ್ ರಾಮ್ ಮಾಂಜಿ ಪ್ರಮಾಣ ವಚನ- ಯಾರಿವರು ?

“ಚುನಾವಣೆಗಳ ನಂತರ ವಿಶ್ಲೇಷಣೆ ಮಾಡಲಾಗುತ್ತದೆ, ವಿಶ್ಲೇಷಣೆಯ ಬಗ್ಗೆ ಯಾವುದೇ ಜಗಳವಿಲ್ಲ. ಎಲ್ಲರೂ ಒಟ್ಟಾಗಿ ಈ ಕುರಿತು, ನಾವು ಹೇಗೆ ಸುಧಾರಿಸಬಹುದು, ಎಲ್ಲಿ ತಪ್ಪಾಗಿರಬಹುದು ಎಂಬ ಬಗ್ಗೆ ಚರ್ಚೆ ಮಾಡಬಜಹುದು ಇದನ್ನು ಸಾರ್ವಜನಿಕವಾಗಿ ಹೇಳುವ ಅಗತ್ಯವಿಲ್ಲ” ಎಂದು ಅಸಹನೆ ವ್ಯಕ್ತಪಡಿಸಿದ್ದಾರೆ.

ಪಕ್ಷಕ್ಕೆ ಒಬ್ಬ ಅಧಿಕೃತ ಅಧ್ಯಕ್ಷರನ್ನು ಮಾಡಬೇಕಲ್ಲವೆ ಎಂಬುದಕ್ಕೆ, “ಬಹುಜನ ಸಮಾಜವಾದಿ ಪಕ್ಷದಲ್ಲಿ ಅಧ್ಯಕ್ಷರು ಇಲ್ಲ, ಎಡಪಂಥೀಯ ಪಕ್ಷಗಳಲ್ಲಿ ಅಧ್ಯಕ್ಷರು ಇಲ್ಲ, ಪ್ರಧಾನ ಕಾರ್ಯದರ್ಶಿಗಳು ಮಾತ್ರ ಇದೆ. ಪ್ರತಿ ಪಕ್ಷವೂ ಒಂದೇ ಮಾದರಿಯನ್ನು ಅನುಸರಿಸಲು ಸಾಧ್ಯವಿಲ್ಲ”ಎಂದು ಸಲ್ಮಾನ್ ಖುರ್ಷಿದ್ ತಿಳಿಸಿದ್ದಾರೆ.

ಇನ್ನು, ಕಾಂಗ್ರೆಸ್‌ನಲ್ಲಿ ಎಲ್ಲರೂ ತಮ್ಮ ನಾಯಕರಾಗಿ ರಾಹುಲ್ ಗಾಂಧಿಯವರನ್ನು ಬೆಂಬಲಿಸುತ್ತಾರೆಯೇ ಎಂಬ ಪ್ರಶ್ನೆಗೆ, ಖುರ್ಷಿದ್, “ಯಾರಿಗಾದರೂ ಇದು ಸ್ಪಷ್ಟವಾಗಿದೆ ಎಂದು ನಾನು ಭಾವಿಸುತ್ತೇನೆ,  ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಜೀ ಮತ್ತು ರಾಹುಲ್ ಗಾಂಧಿಯನ್ನು ಎಲ್ಲರೂ ಸಂಪೂರ್ಣವಾಗಿ ಬೆಂಬಲಿಸುತ್ತಾರೆ” ಎಂದಿದ್ದಾರೆ.


ಇದನ್ನೂ ಓದಿ: ಬಿಹಾರ ಮಹಾಘಟಬಂಧನ್‌ನಲ್ಲಿ ಬಿರುಕು: ಚುನಾವಣೆಯ ಸಮಯದಲ್ಲಿ ರಾಹುಲ್ ಪಿಕ್‌ನಿಕ್‌ನಲ್ಲಿದ್ದರು ಎಂದ RJD ನಾಯಕ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೋವಿಶೀಲ್ಡ್‌ ಲಸಿಕೆ ಅಡ್ಡ ಪರಿಣಾಮ: ನೀವು ಭಯಪಡಬೇಕೆ? ವೈದ್ಯರು ಹೇಳುವುದೇನು?

0
ಕೋವಿಡ್ -19 ವಿರುದ್ಧದ 'ಕೋವಿಶೀಲ್ಡ್‌' ಲಸಿಕೆಯು ರಕ್ತ ಹೆಪ್ಪುಗಟ್ಟುವಿಕೆಗೆ ಸಂಬಂಧಿಸಿದ ಅಪರೂಪದ ಅಡ್ಡ ಪರಿಣಾಮದ ಸಾಮರ್ಥ್ಯವನ್ನು ಹೊಂದಿದೆ ಎಂದು ಬ್ರಿಟಿಷ್ ಫಾರ್ಮಾ ದೈತ್ಯ ‘ಅಸ್ಟ್ರಾಜೆನೆಕಾ’  ನ್ಯಾಯಾಲಯದಲ್ಲಿ ಮೊದಲ ಬಾರಿಗೆ ಒಪ್ಪಿಕೊಂಡಿದೆ. TTS ಅಥವಾ...