Homeಅಂತರಾಷ್ಟ್ರೀಯಟೋಕಿಯೋದಲ್ಲಿ ಹೊತ್ತಿ ಉರಿದ 379 ಜನರಿದ್ದ ವಿಮಾನ

ಟೋಕಿಯೋದಲ್ಲಿ ಹೊತ್ತಿ ಉರಿದ 379 ಜನರಿದ್ದ ವಿಮಾನ

- Advertisement -
- Advertisement -

ಜಪಾನ್‌ನ ಟೋಕಿಯೋದಲ್ಲಿ 379 ಜನರಿದ್ದ ಜಪಾನ್ ಏರ್‌ಲೈನ್ಸ್ ವಿಮಾನವೊಂದು ಕೋಸ್ಟ್ ಗಾರ್ಡ್ ವಿಮಾನಕ್ಕೆ ಡಿಕ್ಕಿ ಹೊಡೆದು ಹೊತ್ತಿ ಉರಿದಿದ್ದು, ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿದೆ.

ಜಪಾನ್ ಏರ್ಲೈನ್ಸ್ ವಿಮಾನ- 516 ವಿಮಾನ ಹೊತ್ತಿ ಉರಿದಿದ್ದು, ಹನೇಡಾ ವಿಮಾನ ನಿಲ್ದಾಣದ ರನ್-ವೇ ನಲ್ಲಿ ಘಟನೆ ನಡೆದಿದೆ. ವಿಮಾನ ಬೆಂಕಿ ಹೊತ್ತಿಕೊಂಡು ಉರಿಯುತ್ತಿರುವ ದೃಶ್ಯಗಳ ವಿಡಿಯೋಗಳು ಹರಿದಾಡುತ್ತಿದೆ. ವಿಮಾನದ ಕಿಟಿಕಿಗಳಿಂದ ಬೆಂಕಿಯ ಜ್ವಾಲೆಗಳು ಹೊರ ಬರುತ್ತಿರುವುದು ಕಾಣಿಸುತ್ತಿರುವ ವೀಡಿಯೋಗಳನ್ನು ಎನ್‌ಎಚ್‌ಕೆ ಚಾನಲ್‌ ಪ್ರಸಾರ ಮಾಡಿದೆ. ವಿಮಾನ ನಿಲ್ದಾಣದಲ್ಲಿ ಅಗ್ನಿಶಾಮಕ ಪಡೆ ಬೆಂಕಿ ನಂದಿಸಲು ಹರಸಾಹಸ ಪಡುತ್ತಿವೆ ಎಂದು ಮಾದ್ಯಮ ವರದಿಗಳು ತಿಳಿಸಿದೆ.

ಹೊಕ್ಕಾಯಿಡೋದ ಶಿನ್-ಚಿತೋಸ್‌ ವಿಮಾನ ನಿಲ್ದಾಣದಿಂದ ಜಪಾನ್ ಏರ್ಲೈನ್ಸ್ ವಿಮಾನ- 516 ಟೊಕಿಯೋಗೆ ಆಗಮಿಸಿತ್ತು. ಈ ವಿಮಾನದಲ್ಲಿ 379 ಪ್ರಯಾಣಿಕರಿದ್ದಾರೆಂದು ಜಪಾನ್‌ ಏರ್‌ಲೈನ್ಸ್‌ ವಕ್ತಾರರು ಹೇಳಿದ್ದಾರೆ.

ಜಪಾನಿನ ಕೋಸ್ಟ್ ಗಾರ್ಡ್ ತನ್ನ ವಿಮಾನವೊಂದು ಪ್ರಯಾಣಿಕ ಜೆಟ್‌ಗೆ ಡಿಕ್ಕಿ ಹೊಡೆದಿರುವ ಸಾಧ್ಯತೆಯ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ಕೋಸ್ಟ್ ಗಾರ್ಡ್ ಏರ್‌ಕ್ರಾಫ್ಟ್‌ನ 6 ಸಿಬ್ಬಂದಿಗಳು ಪತ್ತೆಯಾಗಿಲ್ಲ ಎನ್ನಲಾಗಿದೆ.

ಹನೇಡಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಜಪಾನ್‌ನ ಭಾರಿ ಜನದಟ್ಟಣೆಯ ವಿಮಾನ ನಿಲ್ದಾಣವಾಗಿದೆ. ಹೊಸ ವರ್ಷದ ಪ್ರಯುಕ್ತ ಪ್ರಯಾಣಿಕರ ಸಂಖ್ಯೆಯೂ ಹೆಚ್ಚು ಇತ್ತು ಎಂದು ತಿಳಿಸಿದೆ. ಅಪಘಾತದ ದೃಶ್ಯಗಳು  ವಿಮಾನವು ಸಂಪೂರ್ಣವಾಗಿ ಬೆಂಕಿಯ ಜ್ವಾಲೆಯಲ್ಲಿ ಮುಳುಗಿರುವುದನ್ನು ತೋರಿಸಿದೆ ಮತ್ತು ಜೆಟ್‌ನ ಕಿಟಕಿಗಳಿಂದ ಬೆಂಕಿ ಮತ್ತು ಹೊಗೆ ಹೊರಹೊಮ್ಮುತ್ತಿರುವುದನ್ನು ತೋರಿಸಿದೆ. ಪ್ರಾಣ ಹಾನಿ ಬಗ್ಗೆ ತಕ್ಷಣಕ್ಕೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಇದನ್ನು ಓದಿ: ರೇಪ್‌ ಕೇಸ್‌: ಬಂಧಿತ ಬಿಜೆಪಿ ನಾಯಕರ ಮನೆಗಳನ್ನು ಯಾವಾಗ ಕೆಡವುತ್ತೀರಿ-ಯೋಗಿಗೆ ಮಹುವಾ ಪ್ರಶ್ನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ಕೋರ್ಟ್

0
ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದ ಮಹಿಳೆಯೊಬ್ಬರ ಅಪಹರಣ ಪ್ರತ್ಯೇಕ ಪ್ರಕರಣದಲ್ಲಿ ಶಾಸಕ ಹೆಚ್‌.ಡಿ ರೇವಣ್ಣ ಅವರಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಲು ಬೆಂಗಳೂರಿನ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಿರಾಕರಿಸಿದೆ. ರೇವಣ್ಣ ಸಲ್ಲಿಸಿದ್ದ ನಿರೀಕ್ಷಣಾ...