Homeಅಂಕಣಗಳುಈ ಐದು ವರ್ಷದಲ್ಲಿ ಇವರೆಲ್ಲಾ ಎಲ್ಲಿದ್ದರು ಅಂತ!

ಈ ಐದು ವರ್ಷದಲ್ಲಿ ಇವರೆಲ್ಲಾ ಎಲ್ಲಿದ್ದರು ಅಂತ!

- Advertisement -
- Advertisement -

ಸದನದಲ್ಲಿ ಕುಮಾರಣ್ಣನ ಕೂಗಾಟ ನೋಡಿದ ಕರ್ನಾಟಕದ ಜನ ಲೊಚಗರಿದು ಈ ಮಟ್ಟಕ್ಕೆ ಇಳಿಯಿತೇ ಕರ್ನಾಟಕದ ಸಂಸ್ಕೃತಿಯ ಪ್ರತೀಕವಾದ ವಿಧಾನಸೌಧದ ವಾಗ್ವಾದ ಎಂದು ಉದ್ಘಾರ ತೆಗೆದಿದ್ದಾರಲ್ಲಾ. ಕುಮಾರಣ್ಣ ಕೆರಳಿರವುದಕ್ಕೆ ಹಲವಾರು ಕಾರಣಗಳಿವೆ. ಮುಖ್ಯವಾಗಿ ಅವರ ಪರಮವೈರಿ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾದದು. ಎರಡನೆಯದು ತಮ್ಮ ಅಭಿಮಾನಿಗಳಂತಿದ್ದ ನಾಲ್ಕು ಜನ ಹಿಂಬಾಲಕರು ಈಗ ಸಿದ್ದು ಜೊತೆ ಇರುವುದಲ್ಲದೆ, ಅದರಲ್ಲೊಬ್ಬರು ಕೃಷಿಮಂತ್ರಿಯಾಗಿರುವುದು. ಸಾಮಾನ್ಯ ವ್ಯಕ್ತಿಯಾದ ಕುಮಾರಣ್ಣನಿಗೆ ಇಂತಹ ಅನಾಹುತಗಳನ್ನು ಸಹಿಸಲು ಸಾಧ್ಯವೇ? ಹಾಗಾಗಿ ಆ ಕೃಷಿಮಂತ್ರಿಯ ಕ್ಷೇತ್ರಕ್ಕೆ ಹೋಗಿ ಆತ್ಮಹತ್ಯೆಗೆ ಯತ್ನಿಸಿದ ಸಾರಿಗೆ ನೌಕರನ ಸಮಸ್ಯೆಯನ್ನು ಕೈಗೆತ್ತಿಕೊಂಡು ಏನಾದರೂ ಮಾಡಿ ಚಲುವರಾಯಸ್ವಾಮಿ ರಾಜೀನಾಮೆ ಕೊಡಿಸಲು ಯತ್ನಿಸಿದರು. ಆದರೇನು ಇಡೀ ಸದನವೇ ಕುಮಾರಣ್ಣನ ಎದುರು ತಿರುಗಿಬಿದ್ದಾಗ ವಿಧಾನಸಭೆಯ ಗಲಭೆ ಕಲಾಸಿಪಾಳ್ಯದ ಗಲಭೆ ರೂಪ ಪಡೆದುಕೊಂಡಾಗ, ಇನ್ನೂ ಕೆರಳಿದ ಕುಮಾರಣ್ಣ ವಿಧಾನಸೌಧ ನಿಮ್ಮಪ್ಪನದ್ದಲ್ಲ ಎಂದು ಅಬ್ಬರಿಸಿದರಂತಲ್ಲಾ, ಥೂತ್ತೇರಿ.

*****

ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಕುಮಾರಣ್ಣನನ್ನು ನಾವು ಸಾಮಾನ್ಯರೆಂದು ಕರೆದುದಕ್ಕೆ ಸ್ಪಷ್ಟನೆ ಕೊಡಬೇಡವೇ! ಮುಖ್ಯವಾಗಿ ಕುಮಾರಣ್ಣ ದೇವೇಗೌಡರ ನಾಲ್ವರು ಮಕ್ಕಳಲ್ಲೊಬ್ಬರು. ವಿದ್ವತ್ತಿನಲ್ಲಿ ಸಾಮಾನ್ಯ ವ್ಯಕ್ತಿ. ಆಡುವ ಮಾತಿನ ಮತ್ತು ಭಾಷಣ ಬಳಕೆ ವಿಷಯದಲ್ಲಿ ಸಾಮಾನ್ಯರಲ್ಲಿ ಸಾಮಾನ್ಯ. ಏಕೆಂದರೆ ಅವರ ಮಾತು ಭಾಷಣ ಇತ್ಯಾದಿಗಳಲ್ಲಿ ಕೇವಲ ನಲವತ್ತೈದು ಪದಗಳೇ ಸುತ್ತುತ್ತವೆ. ಈ ಸಾಮಾನ್ಯತನ ಸಮಸ್ಯೆ ಅಲ್ಲವಾದರೂ, ಅವರ ಸುತ್ತ ಸಾಮಾನ್ಯವಾಗಿರುತ್ತಿದ್ದ ಗೆಳೆಯರು ಇವತ್ತು ಯಾರೂ ಅವರ ಬಳಿ ಇಲ್ಲ. ಎಲ್ಲಾ ಹೊರಟುಹೋಗುತ್ತಿದ್ದಾರೆ. ಇಂತಹ ಹತಾಶೆಯ ಸಮಯದಲ್ಲಿ, ತಮ್ಮ ವೈರಿಗಳೆಂದುಕೊಂಡವರು ಈಗ ಅಧಿಕಾರದ ಕುರ್ಚಿ ಮೇಲೆ ಕುಳಿತುಕೊಂಡಿರುವುದು ಸಹಿಸಲಸಾಧ್ಯ ಸಂಗತಿಯಾಗಿಹೋಗಿದೆ. ಇಂತಹ ಸಮಯದಲ್ಲಿ ಕುಮಾರಣ್ಣ ಕೆರಳಿ ಕೆಂಡವಾಗುವುದರ ಬದಲು ಸನ್ನಿವೇಶ ನಿಭಾಯಿಸುವ ಚಾಣಾಕ್ಷತೆ ತೋರಬೇಕಾಗಿದೆಯಲ್ಲಾ, ಥೂತ್ತೇರಿ.

*****

ಕೆಂಗಲ್ ಹನುಮಂತಯ್ಯನವರ ಕಾಲದಲ್ಲಿ ಕಟ್ಟಿಸಿದ ವಿಧಾನಸೌಧಕ್ಕೆ ಮೆರಗು ಬರಬೇಕಾದರೆ ಅಲ್ಲಿ ಸಾರ್ವಜನಿಕವಾಗಿ ಶಾಸಕರು ಆಡುವ ಎಲ್ಲ ಮಾತನ್ನೂ ಕೇಳುವಂತಿರಬೇಕು ಮತ್ತು ಅದು ತಿಳಿವಳಿಕೆಯಿಂದ ಕೂಡಿರಬೇಕು. ಅಲ್ಲಿ ನಡೆದ ಚರ್ಚೆಯ ಇತಿಹಾಸ ನೋಡಿದರೆ ಮಾನ್ಯ ದೇವೇಗೌಡರು ಅರಸು ಎದುರು ಸಮರ್ಥವಾಗಿ ವಿರೋಧಪಕ್ಷದ ಕೆಲಸ ನಿರ್ವಹಿಸಿದ ದಾಖಲೆ ಸಿಗುತ್ತದೆ. ಅವರೆಂದೂ ಹಗುರ ಭಾಷೆ ಬಳಸಿದವರಲ್ಲ. ಕುಮಾರಣ್ಣ ಹಳೆಯ ದಾಖಲೆಗಳನ್ನ ವಿಧಾನಸೌಧದ ಲೈಬ್ರರಿಯಲ್ಲಿ ಹುಡುಕಿ ಓದಿದರೆ, ಈ ವಿಧಾನಸೌಧ ನಮ್ಮಪ್ಪುಂದೂ ಅಲ್ಲ, ನಿಮ್ಮಪ್ಪುಂದೂ ಅಲ್ಲ ಎಂಬ ಮಾತು ಹೊರಬರಲಾರದಂತಲ್ಲಾ, ಥೂತ್ತೇರಿ.

*****

ವಿಧಾನಸೌಧದ ಒಳಗೆ ಒಂಥರದ ಗಲಭೆ ನಡೆದಿದ್ದರೆ ಹೊರಗಿನ ಗಲಭೆ ತುಂಬ ಅವ್ಯಕ್ತವಾಗಿದೆಯಂತಲ್ಲಾ. ಮುಖ್ಯವಾಗಿ ಹೊಸ ಸರಕಾರ ನೇಮಿಸಲಿರುವ ಅಕಾಡೆಮಿಗಳು, ನಿಗಮ ಮಂಡಲಿಗಳ ಕುರ್ಚಿಯ ಮೇಲೆ ಕೂರುವ ಸಂಚು ನಡೆಸಿರುವ ಜನ, ಅದರಲ್ಲೂ ಸಾಹಿತ್ಯ, ನಾಟಕ, ಪತ್ರಿಕಾ ಅಕಾಡೆಮಿಗಳನ್ನು ಕುರಿತು ಯೋಚಿಸಿರುವ ಜನರಲ್ಲಿ ಇದು ಕಾಣುತ್ತಿದೆಯಂತಲ್ಲ. ಮಂತ್ರಿ ಶಾಸಕರಿಗೆ ಮುತ್ತಿಕೊಂಡಿರುವುದಲ್ಲದೆ ಪ್ರಭಾವಿಗಳು ಮುಖ್ಯಮಂತ್ರಿ ಕಣ್ಣಿಗೆ ಬೀಳಲು ಹರಸಾಹಸ ಪಡುತ್ತಿರುವುದನ್ನು ನೋಡಿದರೆ ಸಾಮಾನ್ಯರಿಗೆ ಕನಿಕರವಾಗುತ್ತಿದೆಯಂತಲ್ಲಾ. ಏಕೆಂದರೆ ಈ ಮೇಧಾವಿಗಳು ಬಿಜೆಪಿ ಸರಕಾರದಲ್ಲಿ ಇದ್ದಾರೊ ಇಲ್ಲವೊ ಎಂಬಂತೆ ಅವಿತುಕೊಂಡಿದ್ದರು. ಬಿಜೆಪಿಗಳು ನೇರವಾಗಿ ಮುಸ್ಲಿಂ ಸಂಸ್ಕೃತಿ ಮೇಲೆ ದಾಳಿ ಮಾಡಿದಾಗ ಪಠ್ಯಪುಸ್ತಕವನ್ನು ತಿದ್ದಿದಾಗ ಮನೆಯೊಳಗಿದ್ದವರು, ಯಾವತ್ತು ಕಾಂಗ್ರೆಸ್ ಅಧಿಕಾರ ಹಿಡಿಯಿತೊ ಆ ಕೂಡಲೇ ವಿಧಾನಸೌಧದ ಕಾರಿಡಾರಿನಲ್ಲಿ ಸುತ್ತುತ್ತಿರುವುದಲ್ಲದೆ ಬಿಜೆಪಿ ಕಾಲದ ಅನಾಹುತಗಳನ್ನು ದನಿ ಎತ್ತರಿಸಿ ಚರ್ಚಿಸುತ್ತಿದ್ದಾರಲ್ಲಾ, ಥೂತ್ತೇರಿ.

*****

ಸರಕಾರ ಈಗ ಮಾಡಬೇಕಾದದ್ದು ಇಷ್ಟೆ. ಈ ಅಕಾಡೆಮಿ ನಿಗಮಮಂಡಲಿಗಳ ನೇಮಕ ನಿಧಾನವಾಗಿ ಆಗಲಿ ಎಂದು ನಿರ್ಧರಿಸುವುದು; ಇವುಗಳಿಗೆ ನೇಮಕ ತಡವಾಗುವುದರಿಂದ ಯಾವ ಅನಾಹುತಗಳೇನೂ ಸಂಭವಿಸುವುದಿಲ್ಲ. ಆ ಸಮಯದಲ್ಲಿ ಕೋಮುವಾದಿ ಸರಕಾರ ಸೃಷ್ಟಿಸಿದ ಸಮಸ್ಯೆಗಳು ಮತ್ತು ದುರಂತಗಳ ವಿರದ್ಧ ಬರೆದವರು, ಪ್ರತಿಭಟಿಸಿದವರು, ಜಾಥ ತೆಗೆದವರು ಇತ್ಯಾದಿ ಜನಗಳ ಇತಿಹಾಸ ತೆಗೆದರೆ ಯೋಗ್ಯರು ಸಿಗಬಹುದು. ಈ ಹಿಂದಿನ ಸಿದ್ದರಾಮಯ್ಯನವರ ಸರಕಾರದಲ್ಲಿ ಸ್ಥಾನಮಾನ ಪಡೆದ ಕಾರಣಕ್ಕಾಗಿಯಾದರು ಕೋಮುವಾದ ಮತ್ತು ದ್ವೇಷದ ವಾತಾವರಣದ ವಿರುದ್ಧ ಹೋರಾಡದೆ, ಹೊಟ್ಟೆತುಂಬ ಕುಡಿದುಕೊಂಡು ಕಾಲಹಾಕಿದವರು ಈಗಲೂ ವಿಧಾನಸೌಧದ ಕಾರಿಡಾರಿನಲ್ಲಿ ಹೊಸವೇಶದೊಂದಿಗೆ ಪ್ರತ್ಯಕ್ಷವಾಗಿವೆಯಲ್ಲಾ, ಥೂತ್ತೇರಿ.


ಇದನ್ನೂ ಓದಿ: ಮೋದಿಗೂ ಅರ್ಜುನನಿಗೂ ಯಾವ ಸಂಬಂಧ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...