Homeಮುಖಪುಟ‘ನಾಳೆ ಕಾಂಡೋಂ ಕೂಡಾ ಕೇಳುತ್ತೀರಿ’: ಸ್ಯಾನಿಟರಿ ಪ್ಯಾಡ್‌ ಬಗ್ಗೆ ಪ್ರಶ್ನೆ ಕೇಳಿದ ವಿದ್ಯಾರ್ಥಿನಿಯನ್ನು ಅವಮಾನಿಸಿದ ಐಎಎಸ್‌...

‘ನಾಳೆ ಕಾಂಡೋಂ ಕೂಡಾ ಕೇಳುತ್ತೀರಿ’: ಸ್ಯಾನಿಟರಿ ಪ್ಯಾಡ್‌ ಬಗ್ಗೆ ಪ್ರಶ್ನೆ ಕೇಳಿದ ವಿದ್ಯಾರ್ಥಿನಿಯನ್ನು ಅವಮಾನಿಸಿದ ಐಎಎಸ್‌ ಅಧಿಕಾರಿ

- Advertisement -
- Advertisement -

ಮಂಗಳವಾರ ಪಾಟ್ನಾದಲ್ಲಿ ನಡೆದ ಯುನಿಸೆಫ್ ಮತ್ತು ರಾಜ್ಯ ಸರ್ಕಾರವು ಜಂಟಿಯಾಗಿ ಆಯೋಜಿಸಿದ ‘ಸಶಕ್ತ್ ಬೇಟಿ, ಸಮ್ರದ್ದ್ ಬಿಹಾರ’ ಎಂಬ ಕಾರ್ಯಗಾರದಲ್ಲಿ ವಿದ್ಯಾರ್ಥಿನಿಯರು ಕೇಳಿದ ಪ್ರಶ್ನೆಗೆ ಬಿಹಾರದ ಮಹಿಳಾ ಅಭಿವೃದ್ಧಿ ನಿಗಮ (ಡಬ್ಲ್ಯುಡಿಸಿ) ವ್ಯವಸ್ಥಾಪಕ ನಿರ್ದೇಶಕಿ ಹರ್ಜೋತ್‌ ಕೌರ್ ಬಾಮ್ಹ್ರಾ ಉದ್ಧಟತನದಿಂದ ಉತ್ತರಿಸಿದ್ದು ವ್ಯಾಪಕ ಟೀಕೆಗೆ ಗುರಿಯಾಗಿದೆ.

ಸರ್ಕಾರ ಸ್ಯಾನಿಟರಿ ಪ್ಯಾಡ್ ಯಾಕೆ ನೀಡುತ್ತಿಲ್ಲ ಎಂದು ವಿದ್ಯಾರ್ಥಿನಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಹಿರಿಯ ಐಎಎಸ್ ಅಧಿಕಾರಿ ಹರ್ಜೋತ್‌ ಕೌರ್, “ಇವತ್ತು ನೀವು ಸ್ಯಾನಿಟರಿ ಪ್ಯಾಡ್‌ ಕೇಳುತ್ತೀರಿ, ನಾಳೆ ಜೀನ್ಸ್ ಕೇಳುತ್ತಾರೆ, ಆನಂತರ ಉತ್ತಮ ಬೂಟುಗಳು ಮತ್ತು ಅಂತಿಮವಾಗಿ ಕುಟುಂಬ ಯೋಜನೆಗಾಗಿ ನಿರೋಧ್‌‌ಗಳನ್ನು ಕೂಡಾ ಕೇಳುತ್ತೀರಿ” ಎಂದು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ರಾಜಕಾರಣಿಗಳು ಮತಗಳನ್ನು ಕೇಳುತ್ತಾರೆ, ಹೀಗಿರುವಾಗ ಕೆಲವು ಸೌಲಭ್ಯಗಳನ್ನು ನೀಡುವುದು ಸರ್ಕಾರದ ಕರ್ತವ್ಯವಾಗಿದೆ ಎಂದು ವಿದ್ಯಾರ್ಥಿನಿ ವಾದಿಸಿದಾಗ,“ಮತವನ್ನು ಹಾಕಬೇಡಿ, ಪಾಕಿಸ್ತಾನ ಮಾಡಿ ಈ ದೇಶವನ್ನು. ಹಣ ಅಥವಾ ಸೌಕರ್ಯಗಳಿಗಾಗಿ ನೀವು ಮತ ​​ಚಲಾಯಿಸುತ್ತೀರಾ?” ಎಂದು ಐಎಎಸ್ ಅಧಿಕಾರಿ ಹೇಳಿದ್ದಾರೆ.

ಇದನ್ನೂ ಓದಿ: ಕೋವಿಡ್ ಸಾವಿನ ಸಂಖ್ಯೆಯ ಚರ್ಚೆ ಮಾಡಿದ್ರೆ ಮತ್ತೆ ಅವ್ರು ಹುಟ್ಟಿ ಬರುತ್ತಾರ?: ಹರಿಯಾಣ ಸಿಎಂ ಉದ್ಧಟತನ

ಡಬ್ಲ್ಯುಡಿಸಿ ರಾಜ್ಯ ಸರ್ಕಾರದ ಸಾಮಾಜಿಕ ಕಲ್ಯಾಣ ವಿಭಾಗದ ಅಡಿಯಲ್ಲಿ ಬರುತ್ತದೆ ಮತ್ತು ಮಹಿಳೆಯರಿಗಾಗಿ ಕಲ್ಯಾಣ ಯೋಜನೆಗಳನ್ನು ಜಾರಿಗೆ ತರುವ ನೋಡಲ್ ಏಜೆನ್ಸಿಯಾಗಿದೆ.

ಕಾರ್ಯಾಗಾರ ನಡೆಯುತ್ತಿದ್ದ ಸಮಯದಲ್ಲಿ ವಿದ್ಯಾರ್ಥಿನಿ,“ಸರ್ಕಾರವು ನಮಗೆ ಸಮವಸ್ತ್ರ ಮತ್ತು ವಿದ್ಯಾರ್ಥಿವೇತನವನ್ನು ನೀಡುವುದು ಸೇರಿದಂತೆ ಅನೇಕ ಕೆಲಸಗಳನ್ನು ಮಾಡುತ್ತಿದೆ. ಹೀಗಿರುವಾಗ, ಕೇವಲ 20-30ರೂ. ಗಳ ಸ್ಯಾನಿಟರಿ ಪ್ಯಾಡ್‌ಗಳನ್ನು ಏಕೆ ನೀಡಲು ಸಾಧ್ಯವಿಲ್ಲ” ಎಂದು ಕೇಳುತ್ತಾರೆ.

ವಿದ್ಯಾರ್ಥಿನಿಯ ಪ್ರಶ್ನೆಗೆ ಸಭಿಕರು ಚಪ್ಪಾಳೆ ತಟ್ಟುವ ಮೂಲಕ ಪ್ರಶ್ನೆಯನ್ನು ಮೆಚ್ಚುತ್ತಿದ್ದಂತೆ ಉತ್ತರಿಸಿದ ಹರ್ಜೋತ್‌ ಕೌರ್, “ಇಂತಹ ಬೇಡಿಕೆಗಳಿಗೆ ಅಂತ್ಯವಿಲ್ಲ ಎಂದು ಈ ಚಪ್ಪಾಳೆ ತಿಳಿದಿರಬೇಕು. ಸರ್ಕಾರವು ಸ್ಯಾನಿಟರ್‌ ಪ್ಯಾಡ್‌ಗಳನ್ನು ನೀಡುತ್ತದೆಯೇ ಎಂಬುದು ಪ್ರಶ್ನೆ. ನಾಳೆ ಜೀನ್ಸ್ ಕೇಳುತ್ತಾರೆ, ನಾಡಿದ್ದು ಶೂಗಳಿಗೆ ಬೇಡಿಕೆ ಇಡುತ್ತಾರೆ ಮತ್ತು ಅಂತಿಮವಾಗಿ ಕುಟುಂಬ ಯೋಜನೆಗೆ ಉಚಿತ ನಿರೋಧ್‌ಗಳಿಗೆ ಬೇಡಿಕೆ ಬರಬಹುದು” ಎಂದು ಹೇಳುತ್ತಾರೆ.

ಇದನ್ನೂ ಓದಿ: ನಾರಾಯಣ ಗುರುಗಳ ಪಠ್ಯಕ್ಕೆ ಕತ್ತರಿ: ‘ನನಗೆ ಅದು ನೆನಪಾಗುತ್ತಿಲ್ಲ’ ಎಂದ ಪಠ್ಯ ಪುಸ್ತಕ ಸಮಿತಿ ಸದಸ್ಯ ಡಾ. ಅನಂತಕೃಷ್ಣ…

ಸರ್ಕಾರದಿಂದಲೇ ಎಲ್ಲವನ್ನೂ ಒತ್ತಾಯಿಸಬಾರದು ಎಂದು ಐಎಎಸ್ ಅಧಿಕಾರಿ ಹೇಳುತ್ತಾರೆ.“ಸರ್ಕಾರದೊಂದಿಗೆ ಎಲ್ಲವನ್ನೂ ಕೇಳುವ ಅಗತ್ಯ ಏನಿದೆ. ನಿಮಗೆ ಬೇಕಾಗಿದ್ದು ನೀವು ಸಂಪಾದನೆ ಮಾಡಿದೆ. ಸರ್ಕಾರದ ಅನೇಕ ಯೋಜನೆಗಳು ಇವೆ. ಆದರೆ ಸರ್ಕಾರವೆ ಎಲ್ಲವನ್ನೂ ನೀಡಬೇಕು, 20-30 ರೂ. ನೀಡಲು ಸಾಧ್ಯವಿಲ್ಲವೆ ಎಂಬ ಈ ಚಿಂತನೆ ತಪ್ಪಾಗಿದೆ. ಸರ್ಕಾರ ತುಂಬಾ ವಸ್ತಗಳನ್ನು ನೀಡುತ್ತಿದೆ” ಎಂದು ಅವರು ಹೇಳುತ್ತಾರೆ.

 

ಇದನ್ನೂ ಓದಿ: ಮಾತು ಮರೆತ ಭಾರತ; ಸ್ವತಂತ್ರ ಪೂರ್ವ ಭಾರತದ ಕೆಲವು ದಲಿತ್ ಫೈಲ್ಸ್

ಅಧಿಕಾರಿಯ ಉದ್ಧಟತನವನ್ನು ಬಿಹಾರ ಶಿಕ್ಷಕರ ಅರ್ಹತಾ ಪರೀಕ್ಷೆ ಸಂಘದ ಅಧ್ಯಕ್ಷ ಅಮಿತ್ ವಿಕ್ರಮ್ ಖಂಡಿಸಿದ್ದಾರೆ. “ಡಬ್ಲ್ಯುಡಿಸಿ ನಿರ್ದೇಶಕಿ ಹುಡುಗಿಯ ಪ್ರಶ್ನೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಲಿಲ್ಲ. ಅವರು ಬಹುಶಃ ಶಾಲೆಗಳಲ್ಲಿ ಸ್ಯಾನಿಟರಿ ಪ್ಯಾಡ್‌ಗಳ ಲಭ್ಯತೆಯನ್ನು ಕೇಳುತ್ತಿದ್ದರು. 6 ರಿಂದ 12 ನೇ ತರಗತಿಯವರೆಗಿನ ಪ್ರತಿ ವಿದ್ಯಾರ್ಥಿನಿಯರಿಗೆ ಸರ್ಕಾರವು 300 ರೂಗಳನ್ನು ನೀಡಿದ್ದರೂ, ಅವರಲ್ಲಿ ಹೆಚ್ಚಿನವರು ಸ್ಯಾನಿಟರಿ ಪ್ಯಾಡ್‌ಗಳನ್ನು ಶಾಲೆಗಳಿಗೆ ಕೊಂಡೊಯ್ಯುವುದಿಲ್ಲ. ಐಎಎಸ್ ಅಧಿಕಾರಿ ವಿಭಿನ್ನವಾಗಿ ಉತ್ತರಿಸಬೇಕಾಗಿತ್ತು, ಆದರೆ ಅವರು ಪ್ರಶ್ನೆ ಕೇಳಿದ ವಿದ್ಯಾರ್ಥಿಯನ್ನು ಅವಮಾನಿಸಿದರು” ಎಂದು ಅವರು ಹೇಳಿದ್ದಾರೆ.

“ಬಾಲಕಿಯೊಂದಿಗೆ ಅಧಿಕಾರಿ ಮಾತನಾಡಿದ ರೀತಿಯು ಕಾರ್ಯಾಗಾರದ ಉದ್ದೇಶವನ್ನೇ ಬುಡಮೇಲು ಮಾಡಿದೆ. ಅವರ ಮಾತುಗಳು ಬೇಜವಾಬ್ದಾರಿಯುತವಾಗಿತ್ತು ಮತ್ತು ಅಸೂಕ್ಷ್ಮವಾಗಿತ್ತು. ಉತ್ತರದಲ್ಲಿ ಪಾಕಿಸ್ತಾನದ ಉಲ್ಲೇಖವನ್ನು ಮಾಡುವ ಅಗತ್ಯವಿರಲಿಲ್ಲ” ಎಂದು ರಾಜಕೀಯ ನಾಯಕರೊಬ್ಬರು ಹೇಳಿದ್ದಾರೆ.

ಬಿಹಾರ ಸಮಾಜ ಕಲ್ಯಾಣ ಸಚಿವ ಮದನ್ ಸಹಾನಿ ಪ್ರತಿಕ್ರಿಯಿಸಿ,“ನಮ್ಮ ಇಲಾಖೆಯು ಹುಡುಗಿಯರು ಮತ್ತು ಮಹಿಳೆಯರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತದೆ. ಅಧಿಕಾರಿ ಹುಡುಗಿಯರನ್ನು ನಿರುತ್ಸಾಹಗೊಳಿಸಬಾರದಿತ್ತು. ಕಾರ್ಯಾಗಾರವು ಅವರನ್ನು ಪ್ರೋತ್ಸಾಹಿಸಲು ಉದ್ದೇಶಿಸಲಾಗಿತ್ತು. ನಮ್ಮ ಇಲಾಖೆಯ ಕಾರ್ಯದರ್ಶಿ ಗುರುವಾರ ನಿರ್ದೇಶಕಿ ಜೊತೆ ಮಾತನಾಡಲಿದ್ದಾರೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಶೋಷಿತರ ವಲಸೆ ಮತ್ತು ಪ್ರಭುತ್ವ; ಮರದೊಳಗಣ ಬೆಂಕಿ

ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲೂ ಆಕ್ರೋಶ ವ್ಯಕ್ತವಾಗಿದೆ. ಕವಿ ಶಂಕರ್‌ ಎನ್‌. ಕೆಂಚನೂರು ಅವರು, “ಐಎಎಸ್ ಅಧಿಕಾರಿಯೊಬ್ಬರು ಪ್ರೈಮರಿ ಸ್ಕೂಲ್ ಹೆಣ್ಣು ಮಕ್ಕಳ ಎದುರು ಆಡಿದ ಮಾತು ಖಂಡನೀಯ. ಅದು ಅಲ್ಲದೆ ಆಕೆ ಕೂಡಾ ಒಬ್ಬ ಮಹಿಳೆಯಾಗಿದ್ದು, ಜೊತೆಗೆ ಬಿಹಾರದ ಸಶಕ್ತ ಬೇಟಿ, ಸದೃಢ ಬಿಹಾರ ಕಾರ್ಯಕ್ರಮದ ಮುಖ್ಯ ಅಧಿಕಾರಿ. ಕೇವಲ ರಾಜಕಾರಣಿಗಳಷ್ಟೇ ಅಲ್ಲ ಈ ದೇಶದ ಅಧಿಕಾರಶಾಹಿ ಕೂಡ ಜಡವಾಗಿ ಹೋಗಿದೆ. ಇವರ ಸಂವೇದನೆಗಳು ಸತ್ತು ಹೋಗಿವೆ. ರಾಜಕಾರಣಿಗಳಿಗಾದರೂ ಜನರ ಹಂಗಿದೆ. ಆದರೆ ಈ ಬ್ಯುರೊಕ್ರಸಿಗೆ ಯಾರ ಹಂಗೂ ಇಲ್ಲ. ಇವು ಬ್ರಿಟಿಷರ ಕಾಲದಿಂದಲೂ ಅರೊಗೆನ್ಸಿಯನ್ನೇ ಉಸಿರಾಡುತ್ತಾ ಬದುಕಿವೆ. ಈಗಲೂ ನಮ್ಮ ಬ್ಯುರೊಕ್ರಸಿ ಕೆಲಸ ಮಾಡೋದು ಬ್ರಿಟಿಷ್ ಆಡಳಿತದ ಅಧಿಕಾರಿಗಳ ಮನಸ್ಥಿತಿಯಲ್ಲಿಯೇ ಹೊರತು ಪ್ರಜಾಪ್ರಭುತ್ವದ ಆಡಳಿತ ರೀತಿಯಲ್ಲಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಆ ವಿದ್ಯಾರ್ಥಿನಿ ಕೇಳಿರುವುದರಿಂದ ತಪ್ಪೇನಿಲ್ಲ ಆದರೆ ಅಧಿಕಾರಿಣಿ ಅರ್ಥಮಾಡಿ ಕೊಳ್ಳಬೇಕಿತ್ತು ಇಂತಹ ಹರಕೆ ಉತ್ತರಗಳಿಂದ ಸರಕಾರಕ್ಕೆ ಮುಜುಗರ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...