Homeಕರ್ನಾಟಕಜಿಂದಾಲ್‍ಗೆ ಭೂಮಿ: ಎಚ್.ಕೆ. ಪಾಟೀಲ, ರಾಘವೇಂದ್ರ ಕುಷ್ಟಗಿ ಏನು ಹೇಳ್ತಾರೆ?

ಜಿಂದಾಲ್‍ಗೆ ಭೂಮಿ: ಎಚ್.ಕೆ. ಪಾಟೀಲ, ರಾಘವೇಂದ್ರ ಕುಷ್ಟಗಿ ಏನು ಹೇಳ್ತಾರೆ?

ಕಾನೂನು ಇಲಾಖೆ ಈ ಭೂಮಿ ಪರಭಾರೆಗೆ ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದರೂ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಪ್ರಸ್ತಾಪವನ್ನು ರಾಜ್ಯ ಸಚಿವ ಸಂಪುಟ ಒಪ್ಪಿಕೊಂಡಿದೆ.

- Advertisement -
- Advertisement -

| ನಾನುಗೌರಿ ಡೆಸ್ಕ್ |

ಜಿಂದಾಲ್ ಸ್ಟೀಲ್ ಕಂಪನಿಗೆ 3600 ಎಕರೆ ಭೂಮಿ ಹಸ್ತಾಂತರಿಸುವುದನ್ನು ಹಲವರು ಮೊದಲಿಂದಲೂ ವಿರೋಧಿಸುತ್ತ ಬಂದಿದ್ದಾರೆ. ಆಡಳಿತ ಪಕ್ಷದ ಶಾಸಕ, ಮಾಜಿ ಸಚಿವ ಎಚ್‍ಕೆ ಪಾಟೀಲ ಮತ್ತು ಜನಸಂಗ್ರಾಮದ ಮುಖ್ಯಸ್ಥ ರಾಘವೇಂದ್ರ ಕುಷ್ಟಗಿ ನಾನುಗೌರಿ.ಕಾಂ ನೊಡನೆ ಮಾತಾಡಿ, ಇದರ ಹಿಂದಿನ ಹುನ್ನಾರಗಳನ್ನು ತೆರೆದಿಟ್ಟಿದ್ದಾರೆ…

ಕಾನೂನು ಇಲಾಖೆ ಈ ಭೂಮಿ ಪರಭಾರೆಗೆ ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದರೂ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಪ್ರಸ್ತಾಪವನ್ನು ರಾಜ್ಯ ಸಚಿವ ಸಂಪುಟ ಒಪ್ಪಿಕೊಂಡಿದೆ. ಈ ಪ್ರಸ್ತಾಪದಲ್ಲೇ ಇದ್ದ ಕಾನೂನು ಇಲಾಖೆಯ ವ್ಯತಿರಿಕ್ತ ಅಭಿಪ್ರಾಯವನ್ನು ಉದಾಹರಿಸಿ ಕೆಲವು ಸಂಪುಟ ಸದಸ್ಯರು ವಿರೋಧ ಮಾಡಿದರೂ ರಾಜ್ಯ ಸರ್ಕಾರ ಜಿಂದಾಲ್ ಪರ ನಿಲುವು ಕೈಗೊಂಡಿರುವುದರ ಹಿಂದೆ ಸಾಕಷ್ಟು ‘ವ್ಯವಹಾರ’ ನಡೆದಿರಬಹುದು ಎಂಬ ಸಂಶಯ ಜನರನ್ನು ಕಾಡುತ್ತಿದೆ.

ಆಡಳಿತ ಪಕ್ಷದ ಶಾಸಕ ಮತ್ತು ಮಾಜಿ ಸಚಿವ ಎಚ್.ಕೆ ಪಾಟೀಲರು ಕಳೆದ 4-5 ದಿನದಿಂದ ಜಿಂದಾಲ್‍ಗೆ ಭೂಮಿ ನೀಡುತ್ತಿರುವುದು ಕಾನೂನು ವಿರೋಧ ಮತ್ತು ಅಕ್ರಮ ಎಂದು ಹೇಳುತ್ತಲೇ ಬಂದಿದ್ದಾರೆ. ಎಚ್.ಕೆ ಪಾಟೀಲರು ನಮ್ಮ ಪೋರ್ಟಲ್‍ನೊಂದಿಗೆ ಹಂಚಿಕೊಂಡ ಮಾಹಿತಿಯಿಲ್ಲಿದೆ:

‘ಜಿಂದಾಲ್‍ಗೆ ಭೂಮಿ ಕೊಡುವುದರ ಹಿಂದೆ ಸಂಶಯಾತ್ಮಕ ಕೈವಾಡವಿದೆ. ಯಾಕೆ ಕೊಡಬಾರದು ಎನ್ನುವುದಕ್ಕೆ ಈ ಮೂರು ಕಾರಣಗಳು ಸಾಕು: 1) ಅತ್ಯಂತ ಕಡಿಮೆ ಬೆಲೆಗೆ ಭೂಮಿಯನ್ನು ನೀಡುವ ಮೂಲಕ ರಾಜ್ಯ ಬೊಕ್ಕಸಕ್ಕೆ ನಷ್ಟ ಉಂಟು ಮಾಡುತ್ತಿರುವುದು.

2) ಜಿಂದಾಲ್ ಸರ್ಕಾರದ ವಿವಿಧ ಇಲಾಖೆಗಳಿಗೆ ಸಾಕಷ್ಟು ಮೊತ್ತದ ಬಾಕಿ ಉಳಿಸಿಕೊಂಡಿದೆ. ರಾಜ್ಯ ಸರ್ಕಾರದ ಮೈಸೂರು ಮಿನರಲ್ಸ್ ಲಿಮಿಟೆಡ್ (ಎಂಎಂಎಲ್)ಗೆ 2 ಸಾವಿರ ಕೋಟಿಗೂ ಹಣವನ್ನು ಜಿಂದಾಲ್ ಪಾವತಿಸದೇ ಉಳಿಸಿಕೊಂಡಿದೆ. ನಮ್ಮ ಸರ್ಕಾರಿ ಸಂಸ್ಥೆಗೇ ಬಾಕಿ ಉಳಿಸಿಕೊಂಡ ಸಂಸ್ಥೆಗೆ ತರಾತುರಿಯಲ್ಲಿ ಅಗ್ಗದ ದರದಲ್ಲಿ ಭೂಮಿ ನೀಡಿದ್ದು ಅನೈತಿಕ ಮತ್ತು ಕಾನೂನು ವಿರೋಧಿ ತೀರ್ಮಾನ.

3) ಜಿಂದಾಲ್ ಮೇಲೆ ಅಕ್ರಮವಾಗಿ ಅದಿರು ಮಾರಿದ ಆರೋಪಗಳಿವೆ. ನ್ಯಾ. ಸಂತೋಷ ಹೆಗಡೆಯವರ ವರದಿಯಲ್ಲೂ ಇದು ಉಲ್ಲೇಖವಾಗಿದೆ. ಮೇಲಾಗಿ ಸುಪ್ರೀಂ ಕೋರ್ಟಿನಲ್ಲಿ ಜಿಂದಾಲ್ ಮೇಲೆ ಕೇಸೂ ಇದೆ. ನಮ್ಮ ರಾಜ್ಯದ ಸಾಮಾಜಿಕ ಹೋರಾಟಗಾರ ಎಸ್. ಆರ್ ಹಿರೇಮಠರು ಸುಪ್ರಿಂಕೋರ್ಟಿನಲ್ಲಿ ಜಿಂದಾಲ್ ವಿರುದ್ಧ ಕೇಸು ಹಾಕಿದ್ದಾರೆ. ಹೀಗಾಗಿ ಕಾನೂನು ಇಲಾಖೆಯು ಜಿಂದಾಲ್‍ಗೆ ಭೂಮಿ ಕೊಡಬಾರದು ಎಂಬ ವ್ಯತಿರಿಕ್ತ ಅಭಿಪ್ರಾಯ ವ್ಯಕ್ತಪಡಿಸಿತ್ತು. ಜಿಂದಾಲ್ ಮೇಲೆ ಅಂತಹ ಯಾವ ಅಪೀಲೂ ಇಲ್ಲ ಎಂದು ರಾಜ್ಯದ ಅಡ್ವೋಕೇಟ್ ಜನರಲ್ ಕೂಡ ಸಂಪುಟಕ್ಕೆ ಸುಳ್ಳು ಮಾಹಿತಿ ನೀಡಿದ್ದಾರೆ.

ನನ್ನ ಈ ವಿರೋಧದದ ಮಾದರಿಯಲ್ಲೇ ಬಿ.ಕೆ. ಹರಿಪ್ರಸಾದ್ ಮತ್ತು ಎಚ್ ವಿಶ್ವನಾಥ್ ಕೂಡ ವಿರೋಧ ಮಾಡಿದ್ದಾರೆ. ಸಂಪುಟ ಸಭೆಯಲ್ಲೂ ಕೆಲವರು ವಿರೋಧಿಸಿದ್ದಾರೆ , ಇಷ್ಟಿದ್ದೂ ಜಿಂದಾಲ್‍ಗೆ ಖನಿಜಯುಕ್ತ ಭೂಮಿ ನೀಡಿದ್ದು ಅಕ್ಷಮ್ಯ. ಸರ್ಕಾರ ತನ್ನ ನಿಲುವು ಬದಲಿಕೊಳ್ಳಲೇಬೇಕು…..

ರಾಘವೇಂದ್ರ ಕುಷ್ಟಗಿ:

“ಇದರ ಹಿಂದ್ ದೊಡ್ಡ ಲಾಬೀನ ಅದಾರಿ. ಕುಮಾರಸ್ವಾಮಿ, ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಕೈವಾಡ ಇದೇರಿ. ಡಿ.ಕೆ. ಶಿವಕುಮಾರಗಂತೂ ಇದು ‘ಲಾಭದ’ ವಹಿವಾಟು ಅಷ್ಟೇ. 80ರದಶಕದಲ್ಲಿ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ವಿಜಯನಗರ ಸ್ಟೀಲ್ ಕಂಪನಿಗೆ 17 ಸಾವಿರ ಎಕರೆ ಭೂಮಿ ನೀಡಿದ್ದರು. ಕಾಲಾಂತರದಲ್ಲಿ ಇದು ಲಾಭಯುತವಾಗದಂತೆ ಖಾಸಗಿ ಕಂಪನಿಗಳು ನೋಡಿಕೊಂಡವು. ಮುಂದೆ ಈ ಸರ್ಕಾರಿ ಸ್ವಾಮ್ಯದ ಉದ್ಯಮ ಜಿಂದಾಲ್ ಮಡಿಲಿಗೆ ಬಿತ್ತರಿ. ವಿಜಯನಗರ ಅಟೀಲ್ ಸಂಸ್ಥೆಯ 17 ಸಾವಿರ ಎಕರೆ ಜೊತೆಗೆ ಉಕ್ಕು ಉತ್ಪಾದನೆ ಮಾಡುವ ಲೈಸೆನ್ಸೂ ಜಿಂದಾಲ್‍ಗೆ ಸಿಕ್ಕಿತು.

2010-11 ರ ಸುಮಾರು ಕೆಐಎಡಿಬಿ ತಾನೇ ಮುಂದೆ ನಿಂತು ರೈತರಿಂದ ಮತ್ತೆ 3 ಸಾವಿರ ಎಕರೆ ಭೂಮಿ ಖರೀದಿಸಿ ಇದೇ ಜಿಂದಾಲ್‍ಗೆ ಧಾರೆ ಎರೆಯಿತು. ಇದರ ಹಿಂದೆ ಎಲ್ಲ ಪಾರ್ಟಿಗಳ ದೊಡ್ಡ ಕುಳಗಳಿಗೆ ಸಾಕಷ್ಟು ಕಿಕ್‍ಬ್ಯಾಕ್ ಸಿಕ್ಕೇ ಸಿಕ್ಕಿರ್ತದ… ಈ 3 ಸಾವಿರ ಎಕರೆ ಪರಭಾರೆ ವಿರುದ್ಧ ಇಲ್ಲಿನ ಸ್ಥಳಿಯ ಬಸವಾರಾಜ್ ಅನ್ನೋರು ಸುಪ್ರಿಂಗೆ ಹೋಗ್ಯಾರ.

ಇದೆಲ್ಲಕ್ಕಿಂತ ಗಾಬರಿ ಎಂದರೆ ಜಿಂದಾಲ್‍ನವರು ತಮಗಿದ್ದ ಅಧಿಕೃತ ಭೂಮಿ ಪಕ್ಕದ ಗೋಮಾಳ, ಕೆರೆಕಟ್ಟೆ ಮತ್ತು ಅರಣ್ಯ ಭೂಮಿಯನ್ನು ಅತಿಕ್ರಮ ಮಾಡಿಕೊಂಡಾರ, ಇದರ ವಿರುದ್ಧಾನೂ ಯಾರಾದರೂ ಸುಪ್ರಿಂಗೆ ಹೋಗಬೇಕು.

ಇಲ್ಲಿನ ಜನರಿಗೆ ಉದ್ಯೋಗವನ್ನೂ ಕೊಡದ, ಸರ್ಕಾರಕ್ಕೆ ರಾಯಲ್ಟಿ ರೂಪದಲ್ಲಿ ಜುಜುಬಿ ಫೀಸು ಕಟ್ಟುವ ಇಂತಹ ಜನದ್ರೋಹಿ ಕಂಪನಿಗೆ ಈಗ 3600 ಎಕರೆ ಭೂಮಿ ನೀಡ್ತಾ ಇರೋದರ ಹಿಂದೆ ದೊಡ್ಡ ಕಿಕ್‍ಬ್ಯಾಕ್ ವ್ಯವಹಾರ ಅದಾರಿ….”

ಕಾನೂನು ಇಲಾಖೆ ಜಿಂದಾಲ್‍ಗೆ ಕೊಡುತ್ತಿರುವ ಭೂಮಿ ಖನಿಜ ಸಂಪತ್ತಿನ ಭೂಮಿ ಎಂದು ಕಾನೂನು ಇಲಾಖೆ ಹೇಳಿದರೆ ವಾಣಿಜ್ಯ ಇಲಾಖೆ, ‘ಇಲ್ಲಿ ಖನಿಜ ಸಂಪತ್ತಿಲ್ಲ, ಸಮಗ್ರ ಉಕ್ಕಿನ ಕಾಖಾನೆಯನ್ನು ಜಿಂದಾಲ್ ಸ್ಥಾಪಿಸಿದೆ’ ಎಂದು ನಿರ್ಲಜತನದಿಂದ ವಾಣಿಜ್ಯ ಇಲಾಖೆ ವಾದಿಸಿದೆ!

ಸ್ಥಳಿಯರ ನೆರವಿನಿಂದ ಒಂದು ದೊಡ್ಡ ಆಂದೋಲನ ರೂಪಿಸಿ ಈ ಭೂಮಿ ಪರಭಾರೆಯನ್ನು ಸರ್ಕಾರ ಹಿಂದಕ್ಕೆ ಪಡೆಯುವಂತೆ ಪ್ರಗತಿಪರರು ಮುಂದೆ ಬರಬೇಕಿದೆ.

ಇದನ್ನು ಓದಿರಿ: ಕಾರ್ಮಿಕ ವಿರೋಧಿ ಜಿಂದಾಲ್ ಕಂಪನಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತ್ರಿಪುರಾದಲ್ಲಿ ಕೋಮು ಹಿಂಸಾಚಾರ : ಮಸೀದಿ, ಮನೆಗಳಿಗೆ ಹಾನಿ ; ನಿಷೇಧಾಜ್ಞೆ ಜಾರಿ

ಸ್ಥಳೀಯ ದೇವಾಲಯೊಂದಕ್ಕೆ ಚಂದಾ ಸಂಗ್ರಹಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕನಿಷ್ಠ ಐದರಿಂದ ಆರು ಜನರು ಗಾಯಗೊಂಡು ಮನೆಗಳು, ಮರದ ಅಂಗಡಿ ಮತ್ತು ಮಸೀದಿಗೆ ಹಾನಿಯಾದ ನಂತರ, ಜನವರಿ 10ರ...

ಭದ್ರತಾ ಕಾರಣ ನೀಡಿ ಸ್ಮಾರ್ಟ್‌ಫೋನ್ ತಯಾರಕರು ಮೂಲ ಕೋಡ್ ನೀಡುವಂತೆ ಒತ್ತಾಯಿಸಲು ಕೇಂದ್ರದ ಪ್ರಸ್ತಾಪ

ನವದೆಹಲಿ: ಸ್ಮಾರ್ಟ್‌ಫೋನ್ ತಯಾರಕರು ಸರ್ಕಾರದೊಂದಿಗೆ ಮೂಲ ಕೋಡ್ ಹಂಚಿಕೊಳ್ಳುವುದು ಮತ್ತು ಭದ್ರತಾ ಕ್ರಮಗಳ ಭಾಗವಾಗಿ ಹಲವಾರು ಸಾಫ್ಟ್‌ವೇರ್ ಬದಲಾವಣೆಗಳನ್ನು ಮಾಡುವುದು ಕಡ್ಡಾಯಗೊಳಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ, ಇದು ಆಪಲ್ ಮತ್ತು...

ದಾಳಿ ನಡೆಸಿದರೆ ನಮ್ಮ ನೇರ ಗುರಿಯಾಗುತ್ತೀರಿ : ಅಮೆರಿಕ, ಇಸ್ರೇಲ್‌ಗೆ ಎಚ್ಚರಿಕೆ ನೀಡಿದ ಇರಾನ್

ಇರಾನ್‌ನಲ್ಲಿ ನಡೆಯುತ್ತಿರುವ ಆಡಳಿತ ವಿರೋಧಿ ದಂಗೆಯಲ್ಲಿ ಸಾವುಗಳು ಹೆಚ್ಚಾದರೆ ಅಮೆರಿಕ ಮಧ್ಯಪ್ರವೇಶಿಸಲಿದೆ ಎಂದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇರಾನ್‌ ತಿರುಗೇಟು ನೀಡಿದೆ. ಇರಾನ್‌ನ ಸಂಸತ್ತಿನ ಅಧ್ಯಕ್ಷ ಮೊಹಮ್ಮದ್ ಬಾಗರ್ ಖಲೀಬಾಫ್ "ಅಮೆರಿಕ ಇರಾನ್ ಮೇಲೆ...

ಕೇಂದ್ರ ಸರ್ಕಾರದ ಎಚ್ಜರಿಕೆ ನಂತರ 3,500 ಪೋಸ್ಟ್‌ಗಳ ನಿರ್ಬಂಧ, 600 ಖಾತೆಗಳನ್ನು ಅಳಿಸಿದ ಎಕ್ಸ್ ಪ್ಲಾಟ್ ಫಾರ್ಮ್

ಮಹಿಳೆಯರನ್ನು ಗುರಿಯಾಗಿಸಿಕೊಂಡು AI- ರಚಿತವಾದ ಅಶ್ಲೀಲ ವಿಡಿಯೋಗಳ ವಿಷಯವನ್ನು ಕೇಂದ್ರವು ಗಮನಕ್ಕೆ ತಂದ ಕಠಿಣ ಕಾನೂನು ಜಾರಿಗೊಳಿಸುವಿಕೆಗೆ ಪ್ರತಿಜ್ಞೆ ಮಾಡಿದ ನಂತರ X 3,500 ಪೋಸ್ಟ್‌ಗಳು ಮತ್ತು 600 ಖಾತೆಗಳನ್ನು ಅಳಿಸಿಹಾಕಿದೆ.   ಅಶ್ಲೀಲ ವಿಷಯಗಳ...

ಮಾನವ ತಲೆಬುರುಡೆ, ಹುಲಿಚರ್ಮದಂತಹ ಕಸ್ಟಮೈಸ್ ಚರ್ಮ ಸೇರಿದಂತೆ ಹಲವು ಅನುಮಾನಾಸ್ಪದ ವಸ್ತುಗಳ ಮಾರಾಟ: ಮಾಂತ್ರಿಕನ ಬಂಧನ

ಬೆಂಗಳೂರು ವಲಯ ಘಟಕದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಉತ್ತರ ಬೆಂಗಳೂರಿನ ಭೂಪ್ಸಂದ್ರದ 39 ವರ್ಷದ ವ್ಯಕ್ತಿಯನ್ನು ವನ್ಯಜೀವಿ (ರಕ್ಷಣಾ) ಕಾಯ್ದೆ, 1972 ರ ಅಡಿಯಲ್ಲಿ ಬಂಧಿಸಿದೆ. "ಜನವರಿ 9 ರಂದು ನಡೆದ ಕಾರ್ಯಾಚರಣೆಯಲ್ಲಿ...

ದಲಿತ ಮಹಿಳೆಯನ್ನು ಕೊಂದು ಮಗಳ ಅಪಹರಣ : ಆರೋಪಿಯ ಬಂಧನ

ಉತ್ತರ ಪ್ರದೇಶದ ಮೀರತ್‌ನಲ್ಲಿ ದಲಿತ ಮಹಿಳೆಯನ್ನು ಕೊಂದು, ಆಕೆಯ ಮಗಳನ್ನು ಅಪಹರಿಸಿದ ಆರೋಪಿಯನ್ನು ಪೊಲೀಸರು ಶನಿವಾರ (ಜ.10) ಬಂಧಿಸಿದ್ದಾರೆ. ಬಂಧಿತನನ್ನು 22 ವರ್ಷದ ಪರಾಸ್ ಸೋಮ್ (ಪರಾಸ್ ಠಾಕೂರ್) ಎಂದು ಗುರುತಿಸಲಾಗಿದೆ. ರಜಪೂತ ಸಮುದಾಯದ...

‘ಮುಂಬೈ ಮಹಾರಾಷ್ಟ್ರ ನಗರವಲ್ಲ’: ಅಣ್ಣಾಮಲೈ ಹೇಳಿಕೆಗೆ ಶಿವಸೇನೆಯಿಂದ ತೀವ್ರ ಆಕ್ರೋಶ

ಮುಂಬೈ: ಐಪಿಎಸ್ ಅಧಿಕಾರಿಯಿಂದ ರಾಜಕಾರಣಿಯಾಗಿ ಬದಲಾದ ಕೆ.ಅಣ್ಣಾಮಲೈ ಅವರು "ಬಾಂಬೆ ಮಹಾರಾಷ್ಟ್ರ ನಗರವಲ್ಲ, ಅಂತರರಾಷ್ಟ್ರೀಯ ನಗರ" ಎಂದು ಹೇಳಿದ್ದು, ಇದು ಮುಂಬೈನಲ್ಲಿ ವಿವಾದ ಸೃಷ್ಟಿಸಿದೆ.  ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)...

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...