Homeಅಂಕಣಗಳುಅಭಯೋತ್ಪಾದಕ ಮಸೂತಿ, ದರ್ಗಾ ಮತ್ತು ಮೌಲ್ವಿಗಳು

ಅಭಯೋತ್ಪಾದಕ ಮಸೂತಿ, ದರ್ಗಾ ಮತ್ತು ಮೌಲ್ವಿಗಳು

ಎಲ್ಲಾ ಸಂಗತಿಗಳು ಭಯೋತ್ಪಾದನೆಗೆ ಸಂಬಂಧಿಸಿವೆ ಎಂದು ಕತೆಕಟ್ಟಿ ಜನರಲ್ಲಿ ಭಯವನ್ನು ಉತ್ಪಾದಿಸುವ ಮೂಲಭೂತವಾದಿಗಳೂ ಇದ್ದಾರೆ

- Advertisement -
- Advertisement -

| ಅರುಣ್ ಜೋಳದಕೂಡ್ಲಿಗಿ |

ಈಚೆಗೆ ಕೊಟ್ಟೂರಿನಲ್ಲಿ ನನ್ನ ಹೈಸ್ಕೂಲ್ ಮಿತ್ರನೊಬ್ಬ ಮಾತನಾಡುತ್ತಾ `ಗೆಳೆಯಾ ನಿನಗೆ ಗೊತ್ತಿಲ್ಲ ಈ ಮಸೂತಿ, ದರ್ಗಾ, ಮೌಲ್ವಿಗಳೆಲ್ಲಾ ಭಯೋತ್ಪಾದಕ ಚಟುವಟಿಕೆಯಲ್ಲಿ ತೊಡಗಿದ್ದಾರೆ’ ಎಂದ. ನಾನು ಅದು ಹೇಗೆ ಹೇಳ್ತೀಯ, ಬಾ ಕೊಟ್ಟೂರಲ್ಲಿರುವ ಎಲ್ಲಾ ಮಸೂತಿಗಳನ್ನು ಒಮ್ಮೆ ಸುತ್ತಾಕಿಕೊಂಡು ಬರೋಣ, ನಿನ್ನ ಮಾತಿಗೆ ಸಾಕ್ಷಿ ತೋರಿಸು ಅಂದೆ. ಆತ ತಡವರಿಸುತ್ತ `ಹಂಗಲ್ಲ ಕೆಲವು ಮಸೀತಿಗಳು ಹಂಗೆ ಇದಾವೆ ಅಂದ’ ಆಗ ನಾನು ಮತ್ತೆ `ಸರಿ ನೀನು ಹೇಳೋವಂತ ಮಸೀತಿಗಳನ್ನಾದರೂ ತೋರಿಸು’ ಅಂದೆ. ಕೊನೆಗೆ ಆತ ಮತ್ತಷ್ಟು ಗಲಿಬಿಲಿಗೊಂಡು `ನನಗೆ ಪಕ್ಕ ಗೊತ್ತಿಲ್ಲ, ಆದ್ರ ನಾನು ಹೇಳೋ ಮಾತಂತು ಸತ್ಯ’ ಅಂದ. ನಾನು `ಅರೆ ನಿನ್ನ ಮಾತಿಗೆ ಒಂದಾದ್ರೂ ಸಾಕ್ಷಿ ತೋರಿಸೋಕೆ ರೆಡಿ ಇಲ್ಲ, ಆದ್ರೆ `ನಾನೇಳೋ ಮಾತು ಮಾತ್ರ ಸತ್ಯ’ ಅಂದ್ರೆ ಹೇಗೆ ಅಂದೆ. ಗೆಳೆಯ ಸ್ವಲ್ಪ ವಿಚಲಿತನಾದಂತೆ `ಇಲ್ಲ ಇಲ್ಲ ನಮ್ಮ ಭಾಗದ ಮುಸ್ಲಿಮರು ಒಳ್ಳೇರಿದಾರ, ಆದರೆ ಬೇರೆ ಕಡೆ ಮುಸ್ಲೀಮರು ಹಾಗಲ್ಲ’ ಎಂದ. ನಾನು ಮತ್ತೆ `ಅಲ್ಲಪ್ಪ ಬೇರೆ ಭಾಗದವರು ಇದೇ ಮಾತು ಹೇಳ್ತಾರೆ ಅಂತಿಟ್ಕೋ, ಹಾಗಾದ್ರೆ ಯಾವ ಭಾಗದ ಮುಸ್ಲೀಮರು ಒಳ್ಳೇರಲ್ಲ ಹೇಳು’ ಅಂದೆ. ಆತ ತಡವರಿಸುತ್ತಾ ಮಾತು ಬದಲಿಸಿ ಬೇರೆ ಖಾಸಗಿ ಸಂಗತಿಗಳಿಗೆ ತಿರುಗಿದ.
ನಾನು ಗೆಳೆಯನಿಗೆ ಮತ್ತೆ ಅದೆ ವಿಷಯ ಕೆದಕಿ `ಈಗ ಟೈಮಿದ್ರೆ ನೀನು ನನ್ನ ಜತೆ ಬಾ, ಇದೇ ಕೊಟ್ಟೂರ ಮಸೀದಿಯೊಂದರ ಹತ್ತಿರ ಕೂರೋಣ. ಹೆದರಿದ ಮಕ್ಕಳಿಗೆ ತಾಯತ ಕಟ್ಟಿಸಲಿಕ್ಕೋ, ಸಕ್ಕರೆ ಓದಿಸಲಿಕ್ಕೋ ಒಬ್ರು ಇಬ್ರಾದ್ರೂ ಬಂದೇ ಬರ್ತಾರೆ. ನೀನು ಹೇಳಿದ ಮಸೀದಿ ದರ್ಗಾಗಳೇ ಜನರಲ್ಲಿ ಹೇಗೆ ಭಯವನ್ನು ನಿವಾರಿಸುವ ನಂಬಿಕೆ ಹುಟ್ಟಿಸುತ್ತವೆಯೆಂದು ನೋಡೋಣ. ಇದನ್ನು ಇನ್ನಷ್ಟು ಖಚಿತಪಡಿಸಿಕೊಳ್ಳಲು ಮಸೂತಿಗೆ ಬಂದ ಜನರ ಬಳಿ ಮಾತಾಡೋಣ. ನೀನು ನನ್ನ ಜತೆ ಬರುವುದಾದರೆ ನನ್ನ ಮಾತಿಗೆ ಇಂತಹ ಸಾವಿರಾರು ದರ್ಗಾ ಮಸೂತಿಗಳನ್ನು ಸಾಕ್ಷಿಯಾಗಿ ತೋರಿಸಲು ಸಿದ್ಧನಿದ್ದೇನೆ’ ಎಂದೆ. ಗೆಳೆಯ `ಹೌದು ನೀನು ಹೇಳೋದ್ರಲ್ಲಿ ನಿಜವಿದೆ. ನನ್ನ ಮಗಳಿಗೂ ನಮ್ಮವ್ವ ನಮ್ಮೂರ ಮುಜಾವರನ ಬಳಿ ತಾಯಿತ ಕಟ್ಟಿಸಿದ್ಲು’ ಎಂದು ದಿಢೀರ್ ನನ್ನ ದಾರಿಗೆ ಬಂದು ನಿಂತ. ಗೆಳೆಯನ ಈ ಗೊಂದಲದ ಸ್ಥಿತಿ ನೋಡಿ ಏನು ಹೇಳುವುದೋ ತಿಳಿಯದಾಯಿತು. ಆದರೆ ಹಲವರು ಇಂತಹ ಗೊಂದಲದಲ್ಲಿದ್ದಾರೆ ಎನ್ನುವುದಕ್ಕೆ ಈತ ಸಂಕೇತದಂತಿದ್ದ.
ಕಳೆದ ವರ್ಷ ನಮ್ಮೂರಲ್ಲಿ ನಡೆದ ಒಂದು ಘಟನೆ. ಆ ರಾತ್ರಿ ನನ್ನ ಮಗ ವಿಪರೀತ ಅಳುವುದಕ್ಕೆ ಶುರು ಮಾಡಿದ, ನಾವು ಮಗನನ್ನು ಸಂತೈಸಲು ಪ್ರಯತ್ನಿಸುತ್ತಿದ್ದೆವು. ನನ್ನವ್ವ ಮೊಮ್ಮಗ ಹೆದರಿಕೊಂಡಂತಿದೆ ಎಂದರಿತು ನಮ್ಮೂರ ಅಲಾವಿ ದೇವರಿಗೆ ಬೆಲ್ಲದ ತೂಕದ ಹರಕೆ ಹೊತ್ತಳು. ಕಾಕತಾಳೀಯವೆಂಬಂತೆ ಮಗನ ಅಳು ನಿಂತಿತು. ಅವ್ವನ ಮುಖದಲ್ಲಿ ಸಂತಸ ಮೂಡಿ `ನೋಡು ದೇವ್ರಿಲ್ಲ ದೇವ್ರಿಲ್ಲ ಅಂತ ನೀನು ಮೊಂಡುವಾದ ಮಾಡ್ತಿ, ಅಲಾವಿ ದೇವ್ರು ಹುಸೇನಪ್ಪ ಹ್ಯಂಗ ಮಗೂನ ಹೆದ್ರಿಕಿನ ಹೋಗಿಸ್ತು’ ಎಂದು ನನ್ನನ್ನು ದುರುಗುಟ್ಟಿ ನೋಡಿದಳು. ನಾನೀಗ ಏನಾದರೂ ಮಾತನಾಡಿದರೆ, ಮನಸ್ಸಿಗೆ ನೋವಾಗುವುದೆಂದು ಭಾವಿಸಿ ಮೌನ ವಹಿಸಿದೆ. ಮಗ ಅಳುವುದನ್ನು ನಿಲ್ಲಿಸಿ ನಿದ್ದೆಗೆ ಜಾರಿದ್ದಕ್ಕೆ ನಿರಾಳವಾದೆವು. ಇದರ ತಾರ್ಕಿಕತೆಯ ಬಗ್ಗೆ ವಿಚಾರ ಮಾಡದೆ ನನ್ನವ್ವನ ನಂಬಿಕೆಯಲ್ಲಿ ಮಸೂತಿ, ಅಲಾವಿ ದೇವ್ರು ಭಯನಿವಾರಕ ಶಕ್ತಿಗಳಾಗಿ ಉಳಿದದ್ದು ನನ್ನ ಮನದಲ್ಲಿ ಉಳಿಯಿತು.
ಮೇಲಿನ ಎರಡೂ ಸಂಗತಿಗಳೂ ಒಂದಕ್ಕೊಂದು ವಿರುದ್ಧವಾಗಿವೆ. ಒಂದೆಡೆ ಭಾರತದಾದ್ಯಂತ ಗ್ರಾಮೀಣ ಭಾಗದಲ್ಲಿ ಮಸೂತಿ, ದರ್ಗಾ, ಮೌಲ್ವಿ ಎಂದರೆ ಭಯನಿವಾರಕ ಸ್ಥಳಗಳೆಂದು ಭಾವಿಸಿದ ದೊಡ್ಡ ಜನವರ್ಗವಿದೆ. ಮತ್ತೊಂದೆಡೆ ಭಯವನ್ನು ಉತ್ಪಾದಿಸುವ ನೆರೆಯ ಮುಸ್ಲಿಂ ದೇಶಗಳನ್ನು ಆಧರಿಸಿ ಇಡಿಯಾಗಿ ಮುಸ್ಲಿಮರ ಎಲ್ಲಾ ಸಂಗತಿಗಳು ಭಯೋತ್ಪಾದನೆಗೆ ಸಂಬಂಧಿಸಿವೆ ಎಂದು ಕತೆಕಟ್ಟಿ ಜನರಲ್ಲಿ ಭಯವನ್ನು ಉತ್ಪಾದಿಸುವ ಮೂಲಭೂತವಾದಿಗಳೂ ಇದ್ದಾರೆ. ಈ ಎರಡೂ ನೆಲೆಗಳ ಆಚೆ ವಾಸ್ತವ ಸಂಕೀರ್ಣವಾಗಿದೆ. ಬಹುಸಂಖ್ಯಾತ ಧರ್ಮಿಯರು ಅಹಮ್ಮಿನಿಂದ ಹುಟ್ಟಿಸುವ ಭಯದ ಕಾರಣಕ್ಕೆ ಮುಸ್ಲೀಮರಲ್ಲಿ ಅನಿವಾರ್ಯ ಆತಂಕದಿಂದ ಸ್ವರಕ್ಷಣೆಯ ಸಂಘಟಿತ ಚಟುವಟಿಕೆಗಳು ಕೆಲವೆಡೆ ನಡೆದಿರಬಹುದು. ಅದನ್ನು ಅಲ್ಲಗಳೆಯಲಾಗದು. ಆದರೆ ಬಹುಪಾಲು ಮಸೂತಿ, ದರ್ಗಾ, ಮೌಲ್ವಿಗಳು ಅಭಯೋತ್ಪಾದಕ ಅಥವಾ ಭಯಮುಕ್ತಗೊಳಿಸುವ ಚಟುವಟಿಕೆಗಳಲ್ಲಿ ಸಕ್ರಿಯವಾಗಿವೆ ಎನ್ನುವುದು ವಾಸ್ತವ. ಹೀಗೆ ಭಯಮುಕ್ತ ಕೇಂದ್ರಗಳಾಗಿರುವ ಮಸೂತಿ ಮತ್ತು ದರ್ಗಾಗಳು ಬಹುಪಾಲು ಸೂಫಿ ಸಂತರವು ಎನ್ನುವುದನ್ನೂ ಗಮನಿಸಬೇಕಿದೆ. ಹಾಗಾಗಿಯೇ ಸೂಫಿ ಸಂತರ ಬಗ್ಗೆ `ರೋಗನಿವಾರಕ’ ಪವಾಡ ಕತೆಗಳು ಹೆಚ್ಚಿವೆ.
ಕರ್ನಾಟಕದಾದ್ಯಂತ ಇರುವ ಮೊಹರಂ ಮಸೀತಿಗಳು ಮತ್ತು ಸೂಫಿ ಸಂತರ ದರ್ಗಾಗಳು ಈಗಲೂ ಭಯ ನಿವಾರಕ ಕೇಂದ್ರಗಳಂತೆ ಕೆಲಸ ಮಾಡುತ್ತವೆ. ಬೆಂಗಳೂರಿನ ತವಕ್ಕಲ್ ಮಸ್ತಾನ್ ಸಾಹೇಬನು ಎಳೆಮಕ್ಕಳನ್ನು ರಕ್ಷಿಸುವ ದೈವವಾಗಿದೆ. ನವಲಗುಂದದ ಯಮನೂರಪ್ಪನ ಉರುಸನ್ನು ಜನರು `ಜಡ್ಡಿನ ಜಾತ್ರೆ’ ಎಂದು ಕರೆಯುವ ವಾಡಿಕೆಯಿದೆ. ಕಾಯಿಲೆಗೆ ಬಿದ್ದ ಗಂಡನನ್ನು ಉಳಿಸಿಕೊಂಡು ಭಯ ನಿವಾರಿಸಿಕೊಳ್ಳಲು ಸವಣೂರಿನ ಬ್ರಹ್ಮಚಾರಿ ಸಂತ ಕಮಲ್ ಭಾಷಾನ ದರ್ಗಾದಲ್ಲಿ ಮಹಿಳೆಯರ ರಾಶಿಗಟ್ಟಲೆ ಹರಕೆಯ ಬಳೆಗಳಿವೆ. ದನಗಳಿಗೆ ರೋಗ ಬಂದಾಗ, ಅವು ಕಳೆದು ಹೋದಾಗ ಉಳಿಸುವ ಮತ್ತು ಹುಡುಕಿಕೊಡುವ ಕೆಲಸವನ್ನು ಬೈದೊಡ್ಡಿಯ ಹುಜೂರಸಾಬ, ಕುಸುನೂರಿನ ಗೋಕುರಸಾಬ, ಅಂಬತ್ತಿಯ ಶೇಕಮಾರ ಮುಂತಾದವರಿಗೆ ವಹಿಸಿ ಭಯಮುಕ್ತರಾಗುವುದಿದೆ. ಮೈನರೆದ ಹುಡುಗಿ ನೀರುಹಾಕಿಕೊಂಡ ಮೇಲೆ, ಮದುಮಕ್ಕಳು ಪ್ರಸ್ತಕ್ಕೆ ಮೊದಲು ‘ಓದಿಕೆ’ ಮಾಡಿಸುವುದು, ಮಕ್ಕಳಿಲ್ಲದವರು ಹರಸಿಕೊಳ್ಳುವುದು, ಸರಾಗವಾಗಿ ಹೆರಿಗೆಯಾಗಲೆಂದು ಗಬಿರ್sಣಿಯ ಕೈಗೆ ಗೋರಿ ಮೇಲಿನ ಬಟ್ಟೆತುಂಡು ಕಟ್ಟುವುದು, ಹುಟ್ಟಿದ ಕೂಸನ್ನು ಅಥವಾ ಕರುವನ್ನು ತಂದು ದರ್ಗಾಕ್ಕೆ ‘ಸಣ’ ಮಾಡಿಸುವುದು, ಫಸಲಿನ ಮೊದಲ ಕಟಾವನ್ನು ತಂದೊಪ್ಪಿಸುವುದು-ಇವೇ ಮುಂತಾದ ಫಲವಂತಿಕೆಗೆ ಸಂಬಂದಿsಸಿದ ಆಚರಣೆಗಳು ದರ್ಗಾ ಸಂಸ್ಕøತಿಯ ಭಾಗವಾಗಿ ಬೆಳೆದುಬಿಟ್ಟಿವೆ. ರಹಮತ್ ತರೀಕೆರೆಯವರು `ಕರ್ನಾಟಕದ ಸೂಫಿಗಳು’ ಕೃತಿಯಲ್ಲಿ ಇಂತಹ ದರ್ಗಾ ಮಸೂತಿಗಳ ಬಗೆಗೆ ವಿಶ್ಲೇಷಿಸಿದ್ದಾರೆ.
ಜನರು ದೆವ್ವ ಬಂದಿದೆ ಎಂದು ನಂಬುವ `ಗಾಳಿ’ ಬಿಡಿಸುವ ದರ್ಗಾಗಳಾದ ಲಕ್ಷ್ಮೇಶ್ವರದ ದೂದಪೀರಾ, ಕರೋಶಿಯ ಶಾನೂರುಬಾಬಾ, ಬಿಜಾಪುರದ ಅಬ್ದುಲ್ ರಜಾಕ್ ಖಾದ್ರಿ, ಮುರುಗಾಮಲೈನ ಅಮ್ಮಾಜಾನ್ ಬಾವಾಜಾನ್ ಹಾಗೂ ಎಳ್ಳಾರತಿಯ ಶೇಕ್ ಶಾವಲಿ ಮುಂತಾದವುಗಳನ್ನು ನೋಡಬಹುದು. ಇವೂ ಕೂಡ ದೆವ್ವವೆಂಬ ಭಯವನ್ನು ಸಮುದಾಯದ ಮನಸ್ಸಿನಿಂದ ಹೋಗಲಾಡಿಸಿ ಭಯಮುಕ್ತಗೊಳಿಸುವ ಕೆಲಸವೇ ಆಗಿದೆ. ಹೀಗೆ ಮೂಢನಂಬಿಕೆಯ ಕಾರಣಕ್ಕೋ, ಅರಿವಿನ ಕೊರತೆಯ ಕಾರಣಕ್ಕೋ, ಅಸಹಾಯಕತೆಯ ಕಾರಣಕ್ಕೋ ಜನರನ್ನು ಆವರಿಸಿರುವ ಹಲವು ಬಗೆಯ `ಭಯ’ಗಳನ್ನು ಹೋಗಲಾಡಿಸಿ `ಅಭಯೋತ್ಪಾದಕ’ ಕೇಂದ್ರಗಳಾದ ಮಸೂತಿ, ದರ್ಗಾ, ಮುಜಾವರ ಮುಂತಾದ ಸಂಗತಿಗಳನ್ನು ಭಯೋತ್ಪಾದಕ ಚಟುವಟಿಕೆಗಳ ಜತೆ ಹೆಣೆಯುವು ಎಷ್ಟು ಅಮಾನವೀಯ ಎನ್ನುವುದನ್ನು ಅರಿಯಬೇಕಿದೆ. ಜನಸಾಮಾನ್ಯರಿಗೆ ಅವರದೇ ಆದ `ಜನತೆಯ ಧರ್ಮವಿದೆ’ ಆ ಜನತೆಯ ಧರ್ಮದಲ್ಲಿ ಹಿಂದು ಮುಸ್ಲಿಂ ಜೈನ ಬೌದ್ಧ ಮತಗಳೆಲ್ಲಾ ಬೆರೆತು ಹೊಸ ಆಕಾರವನ್ನು ಪಡೆಯುತ್ತವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ನಿಜ ಅರುಣ್… ಜನತೆಯ ಧರ್ಮವೇ ಬೇರೆ.. ಅದಕ್ಕೆ ಮುಕ್ತ ಪ್ರಜ್ಞೆ ಇದೆ… ಹೀಗಾಗಿ ದೂರದಲ್ಲಿ ನಿಂತು ಕನ್ನಡಕಗಳನ್ನು ಹಾಕಿ ನೋಡುವವರ ಗರ ಬಿಡಿಸಲಾಗದು…. ಹತ್ತಿರ ಹೋಗಿ ಸಣ ಮಾಡಿದರೆ ಸಾಕು… ಈಗಲೂ ಎಷ್ಟೋ ಮಠಗಳು ಅಂತ್ರ ತಾಯಿತ ಕಟ್ಟುತ್ತಿವೆ… ಬೂದಿ ಹಚ್ಚಿ ದೆವ್ವ ಬಿಡಿಸುತ್ತಿವೆ….

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...